ತಂಗಳು ಎಂದು ಎಸೆಯದಿರಿ!ಆರೋಗ್ಯ ಲಾಭ ಪಡೆಯಲು ಹೀಗೆ ಬಳಸಿ!ಕಾಯಿಲೆಯಿಂದ ದೂರವಿರಿ!

Written by Anand raj

Published on:

ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ.ಒಂದು ಕಡೆ ಅನ್ನ ಹೆಚ್ಚಾಗಿ ಸೇವಿಸಿದರೆ ಕೆಲವು ಕಡೆ ರಾಗಿ ಮುದ್ದೆ ,ಚಪಾತಿ ಸೇವನೆಯನ್ನು ಮಾಡಲಾಗುತ್ತದೆ ಆದರೆ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯಿಂದ ಏನೆಲ್ಲ ಲಾಭ ನಮ್ಮ ಆರೋಗ್ಯಕ್ಕೆ ಇದೆ ಎಂದು ನಿಮಗೆ ಗೊತ್ತಾ ?ರಾತ್ರಿ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯನ್ನು ಎಸೆಯುವ ಬದಲು ಇಲ್ಲಿ ತಿಳಿಸಿರುವ ರೀತಿಯಲ್ಲಿ ಬೆಳಗ್ಗೆ ತಿಂಡಿಯ ಸಮಯದಲ್ಲಿ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿದರೆ ಅಚ್ಚರಿ ಪಡುತ್ತೀರ.ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ.ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.

ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ಗಂಜಿ ರೀತಿಯಲ್ಲಿ ಸೇವಿಸಿದರೆ ತುಂಬಾನೆ ಒಳ್ಳೆಯದು. ಇವಾಗಲೂ ಹಲವು ಕಡೆ ಬೆಳಗ್ಗೆ ಗಂಜಿ ಸೇವನೆ ಮಾಡುವ ಅಭ್ಯಾಸವಿದೆ ಏಕೆಂದರೆ ಗಂಜಿಯಲ್ಲಿ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ಗಳು ಇದೆ ಆದರೆ ನಾವೆಲ್ಲ ಗಂಜಿಯನ್ನು ಸೇವಿಸುವುದೇ ಇಲ್ಲ ಎಂದೇ ಹೇಳಬಹುದು.ಗಂಜಿಯನ್ನು ತಯಾರಿಸುವುದು ಹೇಗೆ ?ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ.ರಾತ್ರಿ ಉಳಿದಿದ್ದು ಮಡಿಕೆಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ ಅನ್ನ ಮುಳುಗುವವರೆಗೆ ಪಾತ್ರೆಗೆ ನೀರನ್ನು ಹಾಕಿ ಮುಚ್ಚಿಡಿ. ಮಾರನೇ ದಿನ ಆಹಾರದ ಬದಲಿಗೆ ಇದನ್ನು ಸೇವಿಸಿ.ಗಂಜಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಮತ್ತು ಕ್ಯಾಲ್ಷಿಯಂ ಪ್ರಮಾಣ ಹೆಚ್ಚಾಗುತ್ತದೆ.ಇದರಿಂದ ನಮ್ಮ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡ ಸಹಾಯವಾಗುತ್ತದೆ. ಇನ್ನು ಅನ್ನದಿಂದ ತಯಾರಿಸಿದ ಗಂಜಿಯನ್ನು ಸೇವಿಸುವುದರಿಂದ ದೇಹಕ್ಕೆ ಸಿಗುವ ಇತರ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.

ದೇಹದಲ್ಲಿ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಗಂಟು ನೋವು ಚರ್ಮದ ಸುಕ್ಕನ್ನು ತಡೆಯುತ್ತದೆ, ದೇಹವು ಸದೃಢ ಮತ್ತು ಶಕ್ತಿಯುತವಾಗುತ್ತದೆ ,ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ ,ಅಲರ್ಜಿ ಅಲ್ಸರ್ ಗಳನ್ನು ತಡೆಗಟ್ಟುತ್ತದೆ ,ಬೇಗ ಹಸಿವು ಆಗುವುದಿಲ್ಲ ,ಬೊಜ್ಜು ಬೆಳೆಯುವುದಿಲ್ಲ ,ಸಕ್ಕರೆ ಕಾಯಿಲೆ ಎಂಬುದು ಹತ್ತಿರವೂ ಸುಳಿಯುವುದಿಲ್ಲ.ಇಷ್ಟೆಲ್ಲ ಲಾಭ ನಿಮಗೆ ಉಪಾಹಾರ ಸೇವಿಸುವುದರಿಂದಲೂ ಸಿಗುವುದಿಲ್ಲ.ಗಂಜಿ ಎಂಬ ಕೀಳು ಭಾವನೆಯನ್ನು ಬಿಟ್ಟುಬಿಡಿ ಆರೋಗ್ಯ ಕಾಪಾಡಲು ಹಳೆಯ ಕಾಲದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ.

ರಾತ್ರಿ ಉಳಿದ ಮುದ್ದೆಯನ್ನು ಹೀಗೆ ಸೇವಿಸಿ-ಬೆಳಗ್ಗೆ ಹಳ್ಳಿ ಕಡೆ ಈವಾಗಲೂ ರಾಗಿ ಅಂಬಲಿ ಕುಡಿಯುವ ವಾಡಿಕೆಇದೆ.ಇದು ದೇಹಕ್ಕೆ ತುಂಬಾನೇ ತಂಪು ,ಆರೋಗ್ಯಕ್ಕೆ ಅಷ್ಟೆ ಒಳ್ಳೆಯದು.ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದದ್ದು ಅದಕ್ಕೆ ಇರುವ ಘನತೆ ಬೇರೆ ಯಾವ ಧಾನ್ಯಗಳಿಗೂ ಇಲ್ಲ.ಇನ್ನು ರಾಗಿ ಅಂಬಲಿ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ.ಇನ್ನು ರಾತ್ರಿ ಉಳಿದ ರಾಗಿ ಮುದ್ದೆಯಿಂದ ರಾಗಿ ಅಂಬಲಿಯನ್ನು ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಇನ್ನೂ ಹೆಚ್ಚಿನ ಲಾಭ ದೊರೆಯುತ್ತದೆ.ರಾತ್ರಿ ಉಳಿದ ರಾಗಿ ಮುದ್ದೆಯನ್ನು ತೆಳುವಾದ ಮಜ್ಜಿಗೆಯಲ್ಲಿ ನೆನೆಸಿಡಿ,ಬೆಳಗ್ಗೆ ಇದನ್ನು ಚೆನ್ನಾಗಿ ಕಿವಿಚಿ ಈರುಳ್ಳಿ ,ಹಸಿ ಮೆಣಸಿನಕಾಯಿ,ಉಪ್ಪು,ಜೀರಿಗೆ ಸೇರಿಸಿ ಕುಡಿಯಿರಿ.ಇದನ್ನು ಹಳ್ಳಿ ಕಡೆ ಈವಾಗಲೂ ಈ ರೀತಿಯಾಗಿ ರಾಗಿ ಅಂಬಲಿಯನ್ನು ಸೇವನೆ ಮಾಡುವ ವಾಡಿಕೆ ಇದೆ.ಈ ರೀತಿಯಾಗಿ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದರಿಂದ ನಿಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ..

ಮೂಳೆಗಳನ್ನು ಗಟ್ಟಿಯಾಗಿಸುತ್ತದೆ , ಮೂಳೆಗಳನ್ನು ಬಲಪಡಿಸುತ್ತದೆ ,ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಮಕ್ಕಳಿಗೆ ಮತ್ತು ವೃದ್ಧರಿಗೆ ಅವಶ್ಯಕವಾಗಿರುವ ಕೆಲವು ಮುಖ್ಯ ಪೋಷಕಾಂಶಗಳನ್ನು ಇದು ಹೊಂದಿದೆ ,ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ ,ರಕ್ತಹೀನತೆಯನ್ನು ಸರಿಪಡಿಸುತ್ತದೆ , ದೇಹವನ್ನು ತಂಪು ಗೊಳಿಸುತ್ತದೆ ,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ,ಇದರಲ್ಲಿರುವ ಪ್ರೋಟೀನ್ ಹಾಗೂ ವಿಟಮಿನ್ಗಳು ಇರುವುದರಿಂದ ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡುತ್ತದೆ ,ರಾಗಿ ಮುದ್ದೆಯಲ್ಲಿರುವ ಫೈಬರ್ ಮಲಬದ್ಧತೆಯ ಸಮಸ್ಯೆಯನ್ನು ಸರಿಪಡಿಸುತ್ತದೆ ,ದೇಹದ ತೂಕವನ್ನು ಇಳಿಸಲು ಇದು ತುಂಬಾನೇ ಸಹಾಯಕಾರಿ. ಹೀಗೆ ಇನ್ನೂ ಹಲವಾರು ಲಾಭ ನಮ್ಮ ದೇಹಕ್ಕೆ ಈ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಸಿಗುತ್ತದೆ.

ಉಳಿದ ಚಪಾತಿ ಇಂದ ಹೀಗೆ ಮಾಡಿ ಸೇವಿಸಿ-ಉಳಿದ ಚಪಾತಿ ಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.ಹಲವು ಕಡೆ ಚಪಾತಿ ಸೇವಿಸುವ ಅಭ್ಯಾಸವಿದೆ ಆದರೆ ರಾತ್ರಿ ಉಳಿದ ಚಪಾತಿಯನ್ನು ಎಸೆಯಲಾಗುತ್ತದೆ.ಇದರ ಮಹತ್ವ ಏನಾದ್ರೂ ನೀವು ತಿಳಿದರೆ ನೀವು ಯಾವತ್ತೂ ಈ ತಪ್ಪು ಮಾಡುವುದಿಲ್ಲ.ಹಳೆ ಕಾಲದಲ್ಲಿ ಉಳಿದ ಚಪಾತಿಯನ್ನು ಬೆಳಗ್ಗೆ ಬಿಸಿಯಾಗಿ ಆರಿದ ತಣ್ಣನೆ ಹಾಲಿನ ಜೊತೆ ಸೇವನೆ ಮಾಡಲಾಗುತ್ತಿತ್ತು.ಇದರಿಂದ ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾನೇ ಲಾಭ ದೊರೆಯುತ್ತದೆ.ಈ ರೀತಿಯಾಗಿ ರಾತ್ರಿ ಉಳಿದ ಚಪಾತಿಯನ್ನು ಸೇವಿಸುವುದರಿಂದ ಏನು ಲಾಭ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..

ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ ,ಅಧಿಕ ರಕ್ತದ ಒತ್ತಡ ಸಮಸ್ಯೆ ನಿಯಂತ್ರಣವಾಗುತ್ತದೆ ,ಮಲಬದ್ಧತೆ ಹಾಗೂ ಗ್ಯಾಸ್ಟಿಕ್ ಸಮಸ್ಯೆ ಸರಿಹೋಗುತ್ತದೆ ,ನಿಶ್ಶಕ್ತಿ ಕಡಿಮೆಯಾಗುತ್ತದೆ ,ದೇಹದ ತೂಕ ಕಡಿಮೆಯಾಗುತ್ತದೆ .ಉಳಿದ ಚಪಾತಿ ಯಿಂದ ಇಷ್ಟೆಲ್ಲ ಲಾಭ ನಿಮಗೆ ಸಿಗುವಾಗ ಇನ್ನು ಯಾವತ್ತೂ ಉಳಿದ ಚಪಾತಿಯನ್ನು ಎಸೆಯಲು ಹೋಗಬೇಡಿ.ಬೆಳಗ್ಗೆ ಹಾಲಿನ ಜೊತೆ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

Related Post

Leave a Comment