ಸೀಬೆ ಹಣ್ಣಿನ ಬಗ್ಗೆ ತಿಳಿಯಲೇಬೇಕಾದ ವಿಷಯ!

Written by Anand raj

Published on:

ಸೀಬೆ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳೇನು ?ಯಾರು ಈ ಹಣ್ಣನ್ನು ಸೇವಿಸಬಾರದು ?
ಹಾಗೂ ಹೇಗೆ ಸೇವಿಸಬಾರದು ?ಎಲ್ಲವನ್ನು ತಿಳಿಯೋಣ ಬನ್ನಿ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೀಬೆ ಹಣ್ಣು ಯಾರಿಗೆ ತಾನೆ ಗೊತ್ತಿಲ್ಲ ಇದು ಕೂಡ ಸೇಬಿನಂತೆಯೇ ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಹಣ್ಣು.ಸೀಬೇಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸೂಪರ್ ಫುಡ್ ಆಗಿದೆ.ಇದರ ಸಿಪ್ಪೆ , ತಿರುಳು , ಬೀಜ ಎಲ್ಲವನ್ನೂ ತಿನ್ನಬಹುದಾಗಿದೆ. ದಿನ ಒಂದು ಸೀಬೆ ಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು.ಇನ್ನು ಇದರ ಎಲೆಗಳ ಅದನ್ನು ಕೂಡ ಹಲವಾರು ಆರೋಗ್ಯ ತೊಂದರೆಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ.ಸೀಬೆ ಹಣ್ಣು ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ದೊರೆಯುವುದರಿಂದ ದಿನನಿತ್ಯದ ಆಹಾರಕ್ರಮದಲ್ಲಿ ಇದನ್ನು ಸೇರಿಸಬಹುದು.

// ಸೀಬೆಕಾಯಿ ಅಥವಾ ಸೀಬೆ ಹಣ್ಣು ಸೇವನೆಯಿಂದ ಮುಖ್ಯವಾಗಿ ದೊರೆಯುವ ಲಾಭಗಳು //

ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಸೀಬೆಕಾಯಿಯನ್ನು ಕೆಲವರು ಸಿಪ್ಪೆ ತೆಗೆದು ತಿನ್ನುತ್ತಾರೆ ಆದರೆ ಇದನ್ನು ಸಿಪ್ಪೆ ಸಹಿತ ತಿಂದರೆ ಹೆಚ್ಚು ಆರೋಗ್ಯಕರ ಅದರಲ್ಲೂ ಮುಖ್ಯವಾಗಿ ಹಲ್ಲಿನ ಆರೋಗ್ಯಕ್ಕೆ ಸೀಬೆ ಕಾಯಿಯನ್ನು ಹಲ್ಲಿನಿಂದ ಕಚ್ಚಿ ತಿಂದರೆ ಒಳ್ಳೆಯದು.ಇದರಿಂದ ದಂತಕ್ಷಯದ ಬಾಧೆ ಕಾಣಿಸುವುದಿಲ್ಲ.ವಸಡುಗಳು ಆರೋಗ್ಯವಾಗಿರುತ್ತವೆ. ಹಲ್ಲುಗಳು ಬಿಳುಪಾಗುತ್ತದೆ.ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು. ಗರ್ಭಿಣಿಯರಿಗೆ ಸೀಬೆ ಹಣ್ಣು ಒಂದು ಉತ್ತಮವಾದ ಆಹಾರವಾಗಿದೆ.ಇದರಲ್ಲಿ ಫಾಲಿಕ್ ಆಸಿಡ್ ಹಾಗೂ ಇತರ ಖನಿಜಾಂಶಗಳು ಇರುವುದರಿಂದಗರ್ಭಿಣಿ ಮಹಿಳೆಯರಿಗೆ ಇದು ಸೂಕ್ತವಾದ ಆಹಾರವಾಗಿದೆ.

ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

ಸೀಬೆ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ನಾರಿನಾಂಶ ಇರುವುದರಿಂದ ಇದು ಜೀರ್ಣ ಕ್ರಿಯೆಗೆ ತುಂಬಾನೇ ಒಳ್ಳೆಯದು ಹಾಗೂ ಬೊಜ್ಜನ್ನು ಇದು ನಿಯಂತ್ರಿಸುತ್ತದೆ. ಇದರಲ್ಲಿ ಕೊಬ್ಬಿನಾಂಶ ಕೇವಲ 0.9 ಇದ್ದು , 84 ಕ್ಯಾಲೊರಿ ಇರೋದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಈ ಹಣ್ಣು ತುಂಬಾನೇ ಸಹಕಾರಿ.

ಇನ್ನು ಈ ಹಣ್ಣಿನಲ್ಲಿ ನಾರಿನಾಂಶ ಹಾಗೂ ಖನಿಜಾಂಶಗಳು ಅಧಿಕವಾಗಿದ್ದು ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುವುದಲ್ಲದೆ ಹೊಟ್ಟೆಯೂ ತುಂಬುತ್ತದೆ ಅದ್ದರಿಂದ ತೂಕ ಕಡಿಮೆಯಾಗಲು ಬಯಸುವವರು ಇದನ್ನು ತಿಂದು ಮೈ ಬೊಜ್ಜು ಕರಗಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಚರ್ಮದ ಕಾಂತಿಗೆ ತುಂಬಾನೇ ಒಳ್ಳೆಯದು. ಸೀಬೆಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಒಂದು ಪ್ರಮುಖ ವಿಟಮಿನ್ ಆಗಿದೆ.ಸೀಬೆ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ತ್ವಚೆಯು ತಾರುಣ್ಯ ಪೂರ್ಣವಾಗಿ ಕಾಣುವಂತೆ ಮಾಡಲು ಸಹಕರಿಸುತ್ತದೆ.

ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ನಿಮ್ಮ ಆಹಾರಕ್ರಮದಲ್ಲಿ ಸೀಬೆ ಹಣ್ಣನ್ನು ಸೇರಿಸಿಕೊಳ್ಳಿ.ಸೀಬೆ ಹಣ್ಣಿನಲ್ಲಿ ಅಧಿಕ ನಾರಿನ ಅಂಶವಿದ್ದು ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು , ಮಂದ ದೃಷ್ಟಿ ಮತ್ತು ಸಂಧಿವಾತವನ್ನು ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿಯಾಗಿದೆ.

ಮಧುಮೇಹಿಗಳಿಗೆ ಉಪಯುಕ್ತ.

ಸೀಬೆಕಾಯಿಯಲ್ಲಿ ಬೀಟಾ ಕ್ಯಾರೊಟಿನ್ , ಪೊಟ್ಯಾಷಿಯಂ ಮತ್ತು ನಾರಿನಾಂಶ ಹೆಚ್ಚಾಗಿದ್ದು ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಇದು ಸಹಕಾರಿಯಾಗಿದೆ.ಕೊಲೆ ಸ್ಟಾರ್ ನಿಯಂತ್ರಿಸುವ ಗುಣವಿರುವುದರಿಂದ ಹೃದಯ ಸ್ವಾಸ್ಥ್ಯವನ್ನು ಕೂಡ ಇದು ಕಾಪಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯಂತ ಪುಷ್ಟಿದಾಯಕ ಆಹಾರ ವಸ್ತುಗಳ ಪೈಕಿ ಸೀಬೆ ಹಣ್ಣು ಸಹ ಒಂದು.
ಸೀಬೆ ಹಣ್ಣಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.
ರೋಗಗಳ ವಿರುದ್ಧ ಸೆಣೆಸಾಡುವ ನಮ್ಮ ಶರೀರದ ಸಾಮರ್ಥ್ಯವನ್ನು ಇದು ಸುಧಾರಿಸುತ್ತದೆ.

ರಕ್ತದ ಒತ್ತಡವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ರಕ್ತದ ಒತ್ತಡವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅತ್ಯಂತ ಶ್ಲಾಘನೀಯ ಗುಣವನ್ನು ಸೀಬೆ ಹಣ್ಣು ಹೊಂದಿದೆ.ಸೀಬೆ ಹಣ್ಣಿನಲ್ಲಿ ಹೇರಳವಾದ ಪೊಟ್ಯಾಷಿಯಂ ಇದೆ.ಇದು ರಕ್ತದ ಒತ್ತಡವನ್ನು ನಿರ್ವಹಿಸಲು ಶರೀರಕ್ಕೆ ಸಹಕರಿಸುತ್ತದೆ ಹಾಗೂ ದೇಹದ ರಕ್ತದ ಒತ್ತಡವನ್ನು ಏರು ಪೇರಾಗಿಸಬಲ್ಲ ಭಾಹ್ಯ ಪ್ರಭಾವಗಳಿಂದ ಕೂಡ ನಮ್ಮ ಶರೀರವನ್ನು ರಕ್ಷಿಸುತ್ತದೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಸೀಬೆಹಣ್ಣಿನಲ್ಲಿ ಸೋಜಿಗವೆನಿಸುವಷ್ಟು ವಿಟಮಿನ್ ಎ ಸಮೃದ್ಧವಾಗಿದೆ.ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.ಇರುಳು ಕುರುಡು ಉಂಟಾಗದಂತೆ ಕಣ್ಣನ್ನು ರಕ್ಷಣೆ ಮಾಡುತ್ತದೆಹಾಗೂ ಕಣ್ಣಿನ ಪೊರೆ ಉಂಟಾಗುವಂತಹ ಕಾಯಿಲೆಯನ್ನು ಇದು ದೂರವಾಗಿಸುತ್ತದೆ.

ಸೀಬೆ ಹನನ್ನು ಯಾರು ಸೇವಿಸಬಾರದು ?

ಸೀಬೆ ಹಣ್ಣು ಗರ್ಭಿಣಿ ಮಹಿಳೆಯರಿಗೆ ತುಂಬಾನೇ ಒಳ್ಳೆಯದು ಆದರೆ ಅತಿಯಾಗಿ ಸೇವನೆ ಮಾಡಬಾರದು. ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರು ಇದನ್ನು ಹೆಚ್ಚು ಸೇವನೆ ಮಾಡಿದರೆ ಇದರಲ್ಲಿರುವ ಅಧಿಕ ಪ್ರಮಾಣದ ಫೈಬರ್ ಇಂದಾಗಿ ಲೂಸ್ ಮೋಷನ್ ಸಮಸ್ಯೆ ಉಂಟಾಗಬಹುದು.

ಯಾವುದೇ ರೀತಿಯ ಸರ್ಜರಿಗಳಾಗಿದ್ದರೆ ಅಂಥವರು 2 ವಾರಗಳ ಕಾಲ ಸೀಬೆ ಹಣ್ಣನ್ನು ತಿನ್ನದಿದ್ದರೆ ಉತ್ತಮ.ಕಫದ ಬಾಧೆ ಇರುವವರು ರಾತ್ರಿ ಸಮಯದಲ್ಲಿ ಇದನ್ನು ಸೇವಿಸಲೇಬೇಡಿ. ಸೀಬೆ ಹಣ್ಣನ್ನು ಹೇಗೆ ಸೇವಿಸಬಾರದು ?

ಸೀಬೆ ಹಣ್ಣನ್ನು ತಿಂದ ತಕ್ಷಣ ನೀರು ಕುಡಿಯಲೇ ಬಾರದು.ಇದರಿಂದ ಕಫದ ಬಾಧೆ ಕಂಡುಬರುತ್ತದೆ.ಸೀಬೆ ಹಣ್ಣನ್ನು ಖಾಲಿ ಹೊಟ್ಟೆಗೆ ಸೇವಿಸಬಾರದು.ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಸೀಬೆ ಹಣ್ಣನ್ನು ಸೇವಿಸಬಾರದು.ದಿನಕ್ಕೆ ಒಂದಕ್ಕಿಂತ ಹೆಚ್ಚು ಸೀಬೆ ಹಣ್ಣನ್ನು ಸೇವಿಸಲೇ ಬೇಡಿ .ಅಧಿಕ ಪ್ರಮಾಣದಲ್ಲಿ ಸೀಬೆ ಹಣ್ಣನ್ನು ಸೇವಿಸುವುದರಿಂದ ಲೂಸ್ ಮೋಷನ್ ಆಗುವ ಸಂಭವವಿರುತ್ತದೆ.ಯಾವುದೇ ಹಣ್ಣನ್ನು ಊಟದ ಒಂದು ಗಂಟೆ ಬಳಿಕ ಸೇವಿಸಬೇಕು.ಅಥವಾ ಊಟಕ್ಕೆ ಒಂದು ಗಂಟೆ ಮೊದಲು ಸೇವಿಸಬೇಕು.ಜಾಸ್ತಿ ಹಣ್ಣಾದ ಸೀಬೆ ಹಣ್ಣನ್ನು ಸೇವಿಸಬೇಡಿ ಯಾಕೆಂದರೆ ಇದರಲ್ಲಿ ಹುಳುಗಳು ಇರಬಹುದು ಇದರಿಂದ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment