ಸಕ್ಕರೆ ಕಾಯಿಲೆಯನ್ನು ದೂರ ಮಾಡಲು 10 ಗಿಡ ಮೂಲಿಕೆಗಳು!

Written by Anand raj

Published on:

ಮಧುಮೇಹದಲ್ಲಿ ಟೈಪ್ ಒಂದು ಹಾಗೂ ಟೈಪ್ ಎರಡು ಮಧುಮೇಹ ಎಂಬ ಎರಡು ವಿಧಗಳಿವೆ.ಈ ಎರಡು ವಿಧದಲ್ಲಿ ಶೇಕಡ 90ರಷ್ಟು ಜನರು ಟೈಪ್ ಎರಡು ಮಧುಮೇಹ ಹೆಚ್ಚಿನವರಲ್ಲಿ ಕಂಡು ಬರುತ್ತದೆ.ಟೈಪ್ ಎರಡು ಮಧುಮೇಹಿಗಳಲ್ಲಿ ದೇಹಕ್ಕೆ ಅಗತ್ಯವಿರುವ ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದಿಲ್ಲ.ಇನ್ನು ಟೈಪ್ ಒಂದು ಮದುಮೇಹಿಗಳಲ್ಲಿ ದೇಹವು ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದೇ ಇಲ್ಲ ಇಂತವರು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ.

ಟೈಪ್ ಎರಡು ಮಧುಮೇಹಿಗಳು ಮಾತ್ರೆ ಜೊತೆಗೆ ಆಹಾರ ಕ್ರಮದಲ್ಲಿ ಸ್ವಲ್ಪ ಕಟ್ಟು ನಿಟ್ಟಿನ ಪಥ್ಯವನ್ನು ಪಾಲಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವುದು ದೊಡ್ಡ ವಿಷಯವಲ್ಲ.ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗದಂತೆ ತಡೆಯುವಲ್ಲಿ ಕೆಲವೊಂದು ಗಿಡಮೂಲಿಕೆಗಳು ಕೂಡ ತುಂಬಾ ಸಹಕಾರಿಯಾಗಿವೆ.ಅಂತಹ ಗಿಡಮೂಲಿಕೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ!

1 )ಹಾಗಲ ಕಾಯಿ

ಹಾಗಲಕಾಯಿ ಜ್ಯೂಸ್ ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗುತ್ತದೆ.ನೆನಪಿಡಿ ಹಾಗಂತ ತುಂಬಾ ಕುಡಿಯುವುದು ಕೂಡ ಒಳ್ಳೆಯದಲ್ಲ ,ಜಠರ ಕರುಳಿನ ತೊಂದರೆ ಉಂಟಾಗುತ್ತದೆ.ದಿನಕ್ಕೆ 50 ರಿಂದ 100 ಎಂಎಲ್ ಅಂದರೆ 5 ರಿಂದ 6 ಚಮಚ ಅಷ್ಟೇ ಇದರ ಜ್ಯುಸ್ ತೆಗೆದುಕೊಳ್ಳಬಹುದು.

2 ಅರಿಶಿನ

ಅರಿಶಿನ ಕೊಂಬು ಇದ್ದರೆ ಅದನ್ನು ಸ್ವಲ್ಪ ತಿನ್ನುವುದರಿಂದ ಕೂಡ ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿ ಇಡಬಹುದು.ಅರಿಶಿನ ಪುಡಿ ಆದರೆ ಅರ್ಧ ಚಮಚ ಅರಿಶಿನ ಪುಡಿಯನ್ನು ದಿನದಲ್ಲಿ 2 ಬಾರಿ ನೀರಿನಲ್ಲಿ ಅಥವಾ ಹಾಲಿನಲ್ಲಿ ಕಲಸಿ ಕುಡಿಯಬಹುದು.

3 )ಮೆಂತ್ಯೆ

ಮೆಂತ್ಯೆ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಇನ್ಸುಲಿನ್ ಉತ್ಪತ್ತಿ ಹೆಚ್ಚುವಂತೆ ಮಾಡುತ್ತದೆ.ಇದರಲ್ಲಿ ಅಮೈನೋ ಆಮ್ಲ ಇರುವುದರಿಂದ ಮೆಂತ್ಯೆ ಕಾಳು ಇನ್ಸುಲಿನ್ ಸೆನ್ಸಿಟಿವ್ ಹೆಚ್ಚು ಮಾಡುತ್ತದೆ.ಯಾರು 25 ಗ್ರಾಂ ಮೆಂತ್ಯೆ ಕಾಳು ಪ್ರತಿದಿನ ತಿನ್ನುತ್ತಾರೋ ಅವರ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇರುತ್ತದೆ. ಊಟದ ಬಳಿಕ ಕೂಡ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಎಂದು ಅಧ್ಯಯನಗಳು ಕೂಡ ಹೇಳಿವೆ.ಸೂಚನೆ : ಹಾಗಂತ ಮೆಂತ್ಯೆಯನ್ನು ತುಂಬಾ ಪ್ರಮಾಣದಲ್ಲಿ ತಿನ್ನುವುದನ್ನು ಮಾಡಬೇಡಿ.ಇದರಿಂದ ಹೊಟ್ಟೆ ಹಾಳಾಗುವುದು ತಲೆ ಸುತ್ತು ಮತ್ತು ಹೊಟ್ಟೆ ಉಬ್ಬರದ ಜೊತೆಗೆ ತಲೆನೋವು ಮುಂತಾದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂದರೆ ದಿನದಲ್ಲಿ 10 ಗ್ರಾಂ ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎದ್ದ ತಕ್ಷಣ ಉಪಹಾರದ ಜೊತೆ ತಿನ್ನಬೇಕು.

4 )ಮಧುನಾಶಿನಿ

ಇದು ಕುರುಚಲು ಕಾಡಿನಲ್ಲಿ ಕಂಡು ಬರುತ್ತದೆ.ಕಾಲು ಚಮಚ ಮಧುನಾಶಿನಿ , ಕಾಲು ಚಮಚ ಅಶ್ವಗಂಧ , ಸ್ವಲ್ಪ ಶತಾವರಿ ರಸ ಮತ್ತು ಮಂಜಿಷ್ಟ ರಸವನ್ನು ಹಾಕಿ ಮಿಶ್ರಣ ಮಾಡಿಕೊಂಡು ನಂತರ ಸೇವನೆ ಮಾಡಬೇಕು.ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ ಹೀಗೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

5 )ಜಿನ್ಸೆಂಗ್

ಇದು ಚೈನೀಸ್ ಗಿಡಮೂಲಿಕೆ ಯಾಗಿದೆ.ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.ಇದು ಮಧುಮೇಹವನ್ನು ಶೇಖಡ 15 ರಿಂದ 20 ರಷ್ಟು ನಿಯಂತ್ರಣದಲ್ಲಿ ಇಡುತ್ತದೆ.3 ಗ್ರಾಂ ಜಿನ್ಸೆಂಗ್ ಒಣಗಿಸಿ ಪುಡಿ ಮಾಡಿ ಅದನ್ನು ಊಟಕ್ಕೆ 2 ಗಂಟೆಯ ಮುಂಚೆ ಕುಡಿಯಬೇಕು.ಹೀಗೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣ ದಲ್ಲಿ ಇಡಬಹುದು.

6 )ಹೊನ್ನೆ ಮರ

ಮಧುಮೇಹಿಗಳು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದನ್ನು ತಡೆಗಟ್ಟಲು ಹಾಗೂ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಹೊನ್ನೆ ಮರ ಸಹಕಾರಿಯಾಗಿದೆ.ಈ ಮರದಿಂದ ಮಾಡಿದ ಲೋಟದಲ್ಲಿ ನೀರು ತುಂಬಿ ರಾತ್ರಿ ಇಟ್ಟು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬೇಕು. ಇದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗುವ ತೊಂದರೆ ತಪ್ಪುತ್ತದೆ.

7 )ಬಿಲ್ವ ಪತ್ರೆ

ಬಿಲ್ವಪತ್ರೆ ಯಲ್ಲೂ ಕೂಡ ಮಧುಮೇಹವನ್ನು ನಿಯಂತ್ರಿಸುವ ಗುಣವಿದೆ. ಪ್ರತಿದಿನ 500 ಮಿಲಿ ಗ್ರಾಂ ಬಿಲ್ವೆಯನ್ನು ತೆಗೆದುಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.ಇದು ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ನಿಮ್ಮ ದೇಹಕ್ಕೆ ಒಳ್ಳೆಯದು ಎಂದು ತಿಳಿದುಕೊಳ್ಳಲು ತಜ್ಞ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

8 )ಸಪ್ತರಂಗಿ

ಈ ಬಳ್ಳಿ ಕೂಡ ಮಧುಮೇಹ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಇದರ ಎಲೆಗಳ ರಸ ಹಿಂಡಿ ವಾರಕ್ಕೆ ಎರಡು ಬಾರಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಇದರ ಟೀಯನ್ನು ಆಹಾರದ ಜೊತೆ 6 ವಾರಗಳು ತೆಗೆದುಕೊಂಡರೆ ಮಧುಮೇಹ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತದೆ.

9 )ಜಾಮೂನು ಎಲೆ

ಜಾಮೂನು ಗಿಡದ ಎಲೆ ಕೂಡ ಮಧುಮೇಹವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ.ಇದು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದನ್ನು ತಡೆಗಟ್ಟುತ್ತದೆ.ಇದು ಕೂಡ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಸೇವನೆ ಮಾಡಿ.

10 )ಕಹಿಬೇವಿನ ಎಲೆ

ಕಹಿ ಬೇವಿನ ಎಲೆ ಕೂಡ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿ.ಇದನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ನಿಮ್ಮ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ.ಆದ್ದರಿಂದ ಇದರ ಕುರಿತು ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

ಇನ್ನು ಕೊನೆಯದಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೆಲವೊಂದು ಸಲಹೆಗಳು

  • ಯಾವುದೇ ಸಿಹಿ ಪದಾರ್ಥಗಳನ್ನು ಸೇವನೆ ಮಾಡಬೇಡಿ.
  • ಹಣ್ಣುಗಳನ್ನು ಮಿತಿಯಾಗಿ ಸೇವನೆ ಮಾಡಿ.
  • ನಾರಿನ ಪದಾರ್ಥಗಳು ಆಹಾರದಲ್ಲಿ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ.
  • ವ್ಯಾಯಾಮವನ್ನು ಮಾಡಬೇಕು.
  • ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ವೈದ್ಯರಿಗೆ ಕರೆ ಮಾಡಿ ಸಲಹೆಯನ್ನು ತಪ್ಪದೆ ಪಡೆದುಕೊಳ್ಳಿ.

ಧನ್ಯವಾದಗಳು.

Related Post

Leave a Comment