ಆಭರಣ ಧರಿಸುವುದಕ್ಕೆ ಒಳ್ಳೆಯ ದಿನ ಯಾವುದು?

Written by Anand raj

Published on:

ನೂತನ ಆಭರಣ ಧರಿಸುವುದಕ್ಕೆ ಯಾವ ದಿನ ಒಳ್ಳೆಯದು ಮತ್ತು ಧಾರಣೆ ಮಾಡಿದರೆ ಏನು ಫಲ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

  • ಭಾನುವಾರ -ರೋಗ ಭಯ
  • ಸೋಮವಾರ – ಶಾಂತಿ ನೆಮ್ಮದಿ
  • ಮಂಗಳವಾರ -ಗೃಹದಲ್ಲಿ ಕಲಹ, ರೋಗ ಭಾದೆ
  • ಬುಧವಾರ -ಐಶ್ವರ್ಯ ಪ್ರಾಪ್ತಿ
  • ಗುರುವಾರ -ದೇವತಾ ಕಾರ್ಯ ನಡೆದು ಗುರು ಮತ್ತು ದೇವತಾ ಆಶೀರ್ವಾದ ಸಿಗುತ್ತದೆ
  • ಶುಕ್ರವಾರ -ಶುಭ ಕಾರ್ಯಗಳು ಪ್ರಾಪ್ತಿ ಲಕ್ಷ್ಮಿ ದೇವಿ ಅನುಗ್ರಹ ಆಗುತ್ತದೆ
  • ಶನಿವಾರ -ಕಷ್ಟ ಜಾಸ್ತಿ ಅಪಹರಣ ಆಗಬಹುದು ಅಡಮನ ಇಡುವ ಪ್ರಸಂಗಳು ಬಂದು ಬಿಡುತ್ತವೆ.

ಆಭರಣವನ್ನು ಶುಕ್ಲ ಪಕ್ಷದಲ್ಲಿ ಖರೀದಿಸುವುದು ಅಥವಾ ಧರಿಸುವುದು ಶುಭ ಎಂದು ಹೇಳಲಾಗಿದೆ.
ಸೋಮವಾರ, ಬುಧವಾರ, ಗುರುವಾರ ಶುಕ್ರವಾರ ಶುಭ

ಆಭರಗಳು ಮತ್ತು ಅವುಗಳ ಬಗ್ಗೆ ಕೆಲವು ವಿಶೇಷಗಳು

-ಯಾವುದೇ ಆಭರಣಗಳನ್ನು ಮನೆಗೆ ತಂದರೆ ನೆಲದ ಮೇಲೆ ಇಡಬಾರದು. ಇದರಿಂದ ಯೋಗವು ಭಂಗವಾಗುತ್ತದೆ.

-ಆಭರಣಗಳನ್ನು ಹೊಸದಾಗಿ ಮಾಡಿಸಿದರೆ ಮಾಡಿಸಿದರೆ ಅಥವಾ ಖರೀದಿಸಿದರೆ ಅದನ್ನು ಬೆಳ್ಳಿಯ ತಟ್ಟೆಯಲ್ಲಿ ಇಟ್ಟು ಅರಿಶಿನ ಕುಂಕುಮ ಹೂವುಗಳಿಂದ ಪೂಜಿಸಿ. ನಂತರ ನಮಸ್ಕಾರಿಸಿ. ಇದರಿಂದ ಶ್ರೇಯಸ್ಸು ಕೀರ್ತಿಯೂ ಲಭಿಸುತ್ತದೆ.

-ದೇವರ ಉಂಗುರವನ್ನು ಧರಿಸುವಾಗ ಉಂಗುರದಲ್ಲಿನ ದೇವರ ತಲೆ ಭಾಗವು ಮೇಲೆ ಬರಬೇಕು. ಯಾವುದೇ ಕಾರಣಕ್ಕೂ ತಲೆ ಭಾಗ ಕೆಳಗೆ ಹಾಕಬಾರದು.

-ಮನುಷ್ಯರು ಹಾಕಿಕೊಂಡ ನಂತರ ದೇವರಿಗೆ ಒಡವೆಗಳನ್ನು ಹಾಕಬಾರದು.-ಬೇರೆಯವರ ಆಭರಣ ಧಾರಣೆ ಮಾಡಬಾರದು.
-ದಾರಿಯಲ್ಲಿ ಸಿಕ್ಕ ಆಭರಣಗಳನ್ನು ದೇವರಿಗೆ ಅರ್ಪಿಸಬಾರದು.
-ಅಡಮಾನ ಇಟ್ಟ ಯಾವುದೇ ಒಡವೆಗಳನ್ನು ದೇವರಿಗೆ ಅರ್ಪಿಸಬಾರದು.

Related Post

Leave a Comment