ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ದೃಢಪತ್ರ ಎಂದರೆ ಶಿವನಿಗೆ ಬಹಳ ಪ್ರಿಯವಾದದ್ದು, ಶಿವನಿಗೆ ಯಾವುದೇ ರೀತಿಯ ಆಡಂಬರದ ಪೂಜೆಯ ಅಗತ್ಯತೆ ಇರುವುದಿಲ್ಲ, ಮನಸ್ಸಿನಲ್ಲಿ ಯಾವುದೇ ದುರ್ಗುಣಗಳು ಇಲ್ಲದೆ ನಿಷ್ಕಲ್ಮಶವಾಗಿ ಭಕ್ತಿಯಿಂದ ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಶಿವನು ಪ್ರಸನ್ನನಾಗುತ್ತಾನೆ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತಾನೆ. ಹಾಗಾಗಿ ಶಿವನ ಪೂಜೆಯಲ್ಲಿ ಬಿಲ್ವಪತ್ರೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು ಶಿವನ ಪೂಜೆಯಲ್ಲಿ ಯಾವುದೇ ವಸ್ತುಗಳು ಇಲ್ಲದೆ ಇದ್ದರೂ ಕೂಡ ಕೇವಲ ಬಿಲ್ವಪತ್ರೆಯನ್ನು ಭಕ್ತಿಯಿಂದ ಶಿವನಿಗೆ ಅರ್ಪಿಸಿದರೆ ಸಾಕು ಶಿವನಿಗೆ ಪೂಜೆ ಸಲ್ಲುತ್ತದೆ,
ಆದರೆ ನೀವು ಎಷ್ಟೇ ಆಡಂಬರದ ಪೂಜೆಯನ್ನು ಮಾಡಿ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸದೆ ಹೋದರೆ ಆ ಒಂದು ಪೂಜೆ ಪೂರ್ಣಗೊಳ್ಳುವುದಿಲ್ಲ. ಇನ್ನು ಶಿವನಿಗೆ ಪೂಜೆಯನ್ನು ಸಲ್ಲಿಸುವಾಗ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಬಿಲ್ವಪತ್ರೆಯನ್ನು ಅರ್ಪಿಸಬೇಕು ಶಿವನ ಪೂಜೆಯ ಕೂಡ ಪೂರ್ಣಗೊಳ್ಳುವುದಿಲ್ಲ ಹಾಗಂತ ಬಿಲ್ವಪತ್ರೆಯನ್ನು ದಿನ ಅಥವಾ ಸಮಯವನ್ನು ನೋಡದೆ ಕೀಳಬಾರದು, ಒಂದುವೇಳೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಸಲುವಾಗಿ ನಾವು ತಪ್ಪಾದ ದಿನಗಳಲ್ಲಿ ತಪ್ಪಾದ ರೀತಿಯಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಅದು ದೋಷಕ್ಕೆ ಕಾರಣವಾಗುತ್ತದೆ.
ಪುರಾಣಗಳ ಪ್ರಕಾರ, ದಟ್ಟವಾದ ಕಾಡಿನಂತೆ ಬೆಳೆದಿರುವ ಬಿಲ್ವ ಪತ್ರೆ ಮರಗಳಿರುವ ಸ್ಥಳವು ಕಾಶಿಯಷ್ಟೇ ಪವಿತ್ರವನ್ನು ಹೊಂದಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಆ ಸ್ಥಳದಲ್ಲಿ ಶಿವಲಿಂಗವನ್ನಿಟ್ಟು ಪೂಜಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಮತ್ತು ಆ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ ಎಂದು ಕೂಡ ಹೇಳಲಾಗಿದೆ.ಧರ್ಮಗ್ರಂಥಗಳ ಪ್ರಕಾರ, ಶಿವಲಿಂಗಕ್ಕೆ ಅರ್ಪಿಸಲು ನಿಮ್ಮ ಬಳಿ ಬಿಲ್ವ ಪತ್ರೆಗಳು ಇಲ್ಲದಿದ್ದರೆ ನೀವು ದೇವಾಲಯದಲ್ಲಿ ಅರ್ಪಿಸಿದ ಇತರೆ ಬಿಲ್ವಪತ್ರೆಗಳನ್ನು ಆರಿಸಿ ತಂದು ಅದನ್ನು ನೀರಿನಲ್ಲಿ ತೊಳೆದು ಮತ್ತೊಮ್ಮೆ ಶಿವನಿಗೆ ಅರ್ಪಿಸಬಹುದು. ಬಿಲ್ವ ಪತ್ರೆಯನ್ನು ಸುಮಾರು 6 ತಿಂಗಳವರೆಗೆ ಉಪಯೋಗಿಸಬಹುದು. ಇನ್ನು ಸೋಮವಾರದ ದಿನ ಯಾವುದೇ ಕಾರಣಕ್ಕೂ ಬಿಲ್ವ ಪತ್ರೆ ಎಲೆಯನ್ನು ಕತ್ತರಿಸಬಾರದು.
ಶ್ರಾವಣ ಸೋಮವಾರ ಬರುವ ಹಿಂದಿನ ದಿನವೇ ಬಿಲ್ವ ಪತ್ರೆ ತೆಗೆದುಕೊಂಡು ಬನ್ನಿ. ಇನ್ನು ಪ್ರತಿ ದಿನ ಮಧ್ಯಾಹ್ನ ಸಮಯದಲ್ಲಿ ಬಿಲ್ವ ಪತ್ರೆಯನ್ನು ಕತ್ತರಿಸಬಾರದು. ಒಂದು ವೇಳೆ ಕತ್ತರಿಸಿದರೆ ಪಾಪವು ಅಂಟುತ್ತದೆ.
ಬಿಲ್ವ ಪತ್ರೆ ಮರವನ್ನು ಶ್ರೀ ವೃಕ್ಷ ಎಂದೂ ಕರೆಯುತ್ತಾರೆ. ಈ ಮರವು ಮನೆಯ ಸಮೀಪದಲ್ಲಿ ಇದ್ದರೆ, ಅದು ಸಂಪತ್ತು ಮತ್ತು ಸಮೃದ್ಧಿಯ ಮೊತ್ತವನ್ನು ಹೆಚ್ಚಾಗಿಸುತ್ತದೆ ಎನ್ನುವ ನಂಬಿಕೆಯಿದೆ.ಶಿವನಿಗೆ ಪ್ರಿಯವಾದ ಬಿಲ್ವ ಮರದಲ್ಲಿ ಮಹಾಲಕ್ಷ್ಮಿ ದೇವಿಯೂ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಬಿಲ್ವ ವೃಕ್ಷವನ್ನು ನೆಟ್ಟ ಮನೆಯನ್ನು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ.