ವಾಟ್ಸ್ ಅಪ್ ನಲ್ಲಿ ಈ ತಪ್ಪು ಮಾಡಬೇಡಿ!ಎಚ್ಚರ ನಿಮ್ಮ ಫೋನ್ ಹ್ಯಾಕ್ ಆಗಬಹುದು!

Written by Anand raj

Published on:

ಕಳೆದ 1 ವಾರದಿಂದ ಎಲ್ಲರ ಮೊಬೈಲ್ ವಾಟ್ಸಪ್ ಗಳಲ್ಲಿ 1 ಸಂದೇಶ ಅಥವ ಲಿಂಕ್ ಹರಿದಾಡುತ್ತಿದೆ.ನಿಮ್ಮ ಸ್ನೇಹಿತರು ಕೂಡ ಈ ಲಿಂಕ್ ಅನ್ನು ನಿಮಗೆ ಕಳಿಸಿರಬಹುದು ಮತ್ತು ನಿಮ್ಮ ಗ್ರೂಪ್ ಗಳಿಗೂ ಸಹ ಶೇರ್ ಮಾಡಿರಬಹುದು ಮತ್ತು ಮಾಡುತ್ತಿರಬಹುದು.ಈ ಲಿಂಕ್ ಆದರೂ ಯಾವುದೂ ಹಾಗೂ ಈ ಲಿಂಕ್ ಅನ್ನು ನಾವು ಶೇರ್ ಮಾಡುವುದರಿಂದ ನಮ್ಮ ಮೊಬೈಲ್ ಫೋನ್ ಏನಾಗುತ್ತದೆ ಎಂದು ತಿಳಿಯೋಣ ಬನ್ನಿ .

ಈ ಲಿಂಕ್ ಹೀಗಿದೆ

ಈ ಲಿಂಕ್ ನಲ್ಲಿ 4 ಪ್ರಶ್ನೆಗಳನ್ನು ಕೊಟ್ಟಿರುತ್ತಾರೆ ,ಆ 4 ಪ್ರಶ್ನೆಗಳನ್ನು ಉತ್ತರಿಸಿದರೆ ಫೆಬ್ರವರಿ 14 ರಂದು ಬರುತ್ತಿರುವ ಪ್ರೇಮಿಗಳ ದಿನದಂದು ನಿಮಗೆ ಬಹುಮಾನ ಸಿಗುಗುತ್ತದೆ ಅಂದರೆ ಸ್ಮಾರ್ಟ್ ಫೋನ್ ಗೆಲ್ಲಬಹುದು ಎಂದು ಹೇಳಲಾಗಿದೆ.ಇನ್ನು ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ
ಹಾಗೂ ಇದರ ಬಗ್ಗೆ ನಮ್ಮ ಪೋಲಿಸ್ ಇಲಾಖೆಯು ಎಷ್ಟೇ ಎಚ್ಚರ ವಹಿಸಿ ಎಂದು ಹೇಳಿದರೂ ಜನಸಾಮಾನ್ಯರು ಸೈಬರ್ ಕ್ರೈಮ್ ಗಳ ಬಲೆಗೆ ಬೀಳುವ ಮೂಲಕ ಮೋಸ ಹೋಗುತ್ತಿದ್ದಾರೆ.

ಇನ್ನು ಈಗ ಹರಿದಾಡುತ್ತಿರುವ ಫೆಬ್ರವರಿ 14 ರಂದು ನಿಮಗೆ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ಸಿಗಲಿದೆ ಎನ್ನುವ ಲಿಂಕ್ ನ ಬಗ್ಗೆ ನಾವು ನೋಡುವುದಾದರೆ ಅದು ಸಂಪೂರ್ಣ ಶುದ್ಧ ಸುಳ್ಳಾಗಿದೆ.ಇನ್ನೂ ಈ ರೀತಿಯ ಲಿಂಕ್ ಗಳ ಮೇಲೆ ನಾವು ಕ್ಲಿಕ್ ಮಾಡುವ ಮೂಲಕ ಮತ್ತು ಅಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಕೊಡುವುದರಿಂದ ಜೊತೆಗೆ ಆ ಲಿಂಕ್ ಜೊತೆಗೆ ನೀಡಲಾದ ಅವರ ಅಪ್ಲಿಕೇಶನನ್ನು ನಾವೇನಾದರೂ ಇನ್ ಸ್ಟಾಲ್ ಮಾಡಿಕೊಂಡರೆ ನಮ್ಮ ಮೊಬೈಲ್ ಫೋನ್ ನಲ್ಲಿರುವ ಎಲ್ಲ ಡಾಟಾವನ್ನು ಅವರು ಕದಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಮ್ಮ ಮೊಬೈಲ್ ಫೋನ್ ನಲ್ಲಿ ಇರುವಂತಹ ಫೋಟೋಸ್ , ವೀಡಿಯೋಸ್ , ಕಾಂಟ್ಯಾಕ್ಟ್ಸ್ ಮತ್ತು ಇನ್ನಿತರ ಮುಖ್ಯವಾದ ಡಾಕ್ಯುಮೆಂಟ್ ಗಳು ನಮಗೆ ತಿಳಿಯದ ಹಾಗೆ ಲೀಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಮತ್ತು ಈ 1 ಡಾಟಾವನ್ನು ದುಷ್ಕರ್ಮಿಗಳು ಇಟ್ಟುಕೊಂಡು ನಮಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಸಾಧ್ಯತೆಗಳಿವೆ.ಆದ್ದರಿಂದ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಒಮ್ಮೆ ವಿಚಾರಮಾಡಿ ನೋಡಿ ಈ ಲಿಂಕ್ ಎಷ್ಟು ಸೇಫ್ ಇದೆ ಎಂದು.

ಇನ್ನು ಈ ತರಹದ ಸೈಬರ್ ಕ್ರೈಮ್ ಬಗ್ಗೆ ಎಚ್ಚರ ವಹಿಸಿ ಹಾಗೂ ಯಾವುದೇ ಕಾರಣಕ್ಕೂ ಇಂತಹ ಅನಾಮಿಕ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗದಿರಿ ಮತ್ತು ನಿಮ್ಮವರನ್ನು ಮೋಸ ಹೋಗಲು ಬಿಡಬೇಡಿ.ಇನ್ನು ಈ ತರಹದ ಯಾವುದೇ ಲಿಂಕ್ ಅಥವಾ ಫಾರ್ವರ್ಡ್ ಮೆಸೇಜ್ ಗಳನ್ನು ನೀವು ಶೇರ್ ಮಾಡದಿರಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡದಿರಲು ತಿಳಿಸಿ ಜೊತೆಗೆ ನಿಮ್ಮ ಗ್ರೂಪ್ ಗಳಿಗೂ ಯಾವುದೇ ಕಾರಣಕ್ಕೂ ಶೇರ್ ಮಾಡದಿರಿ.

“ನಾವು ಸುರಕ್ಷಿತವಾಗಿದ್ದರೆ ನಮ್ಮ ಡಾಟಾ ಸುರಕ್ಷಿತವಾಗಿರುತ್ತದೆ”ಈ ಉಪಯುಕ್ತ ಮಾಹಿತಿಯನ್ನು ಆದಷ್ಟು ಎಲ್ಲರಿಗೂ ಶೇರ್ ಮಾಡಿ.

ಧನ್ಯವಾದಗಳು.

Related Post

Leave a Comment