ನಿಮ್ಮ ಹೆಸರು “V” ಶುರು ಆದ್ರೇ ತಪ್ಪದೇ ಓದಿ

Written by Anand raj

Updated on:

ಪ್ರತಿಯೊಬ್ಬರ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎಂಬುವುದು ಬಹಳಷ್ಟು ಮುಖ್ಯ.ಯಾಕೆಂದರೆ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಅನ್ನುವುದು ನಿಮ್ಮ ಸ್ವಭಾವ ಮತ್ತು ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ.ಒಬ್ಬ ವ್ಯಕ್ತಿಯ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದು ಆತನ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ.V ಅಕ್ಷರದ ಭವಿಷ್ಯ, ಆರ್ಥಿಕ ಪರಿಸ್ಥಿತಿ ಯಾವ ರೀತಿ ಇರುತ್ತದೆ, ಯಾವ ರೀತಿ ಬದಲಾವಣೆ ಆಗುತ್ತದೆ ಎಂದು ತಿಳಿದುಕೊಳ್ಳಿ.

ಇವರು ಬಹಳಷ್ಟು ಸ್ವತಂತ್ರವಾಗಿ ಇರುವುದಕ್ಕೆ ಇಷ್ಟಪಡುತ್ತಾರೆ. ಸದಾಕಾಲ ತಮ್ಮ ಕೆಲಸ ಆಯ್ತು ಮತ್ತು ಬೇರೆಯವರಿಗೆ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ.ಎಲ್ಲರ ಮಾತನ್ನು ಕೇಳುತ್ತಾರೆ ಆದರೆ ಅವರಿಗೆ ಏನು ಇಷ್ಟವಾಗುತ್ತದೆ ಅದನ್ನೇ ಮಾಡುತ್ತಾರೆ.ಸದಾಕಾಲ ಅವರಿಗೆ ಇಷ್ಟವಾದ ಕೆಲಸವನ್ನು ಮಾಡುತ್ತಾರೆ.ಪ್ರತಿಯೊಬ್ಬ ವ್ಯಕ್ತಿಗಳು ಸಹ ತನ್ನದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಆ ವ್ಯಕ್ತಿತ್ವದ ಮಾತುಗಳನ್ನು ಕೇಳುವ ಮನೋಭಾವ ಇವರಲ್ಲಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗಳಿಗೂ ಸಹ ಬೆಲೆಯನ್ನು ಕೊಡುತ್ತಾರೆ.

ಇವರು ಬಹಳಷ್ಟು ಪ್ರಮಾಣಿಕರು ಮತ್ತು ಸಮಯ ಪ್ರಜ್ಞೆ ಉಳ್ಳವರು. ತಮ್ಮಲ್ಲಿ ಇರುವಂತಹ ಕ್ರಿಯೇಟಿವಿಟಿ ಇಂದ ಎಲ್ಲರನ್ನೂ ಮೆಚ್ಚಿಸುತ್ತಾರೆ.ಇವರ ಮಾತಿಗೆ ಎಷ್ಟೋ ಜನ ಇವರನ್ನು ಇಷ್ಟಪಡುತ್ತಾರೆ.ಇವರು ಯಾವಾಗಲೂ ಖುಷಿ ಖುಷಿಯಿಂದ ಇರುತ್ತಾರೆ ಅದರೆ ಮನಸ್ಸಿನಲ್ಲಿ ಎಲ್ಲಾ ರೀತಿಯ ಆಲೋಚನೆಯನ್ನು ಮಾಡುತ್ತಾರೆ.ಯಾವುದೇ ಒಂದು ತೊಂದರೆ ಆಗಲಿ ಅದನ್ನು ಹೆಚ್ಚಾಗಿ ಪರಿಗಣನೆ ಮಾಡುವುದಿಲ್ಲ.ಬೇರೆಯವರಿಗೆ ನಾನು ತೊಂದರೆಯಲ್ಲಿದ್ದೇನೆ ನನಗೆ ಸಹಾಯ ಮಾಡಿ ಅಂತ ಹೇಳುವ ಮನೋಸ್ಥಿತಿ ಇವರಿಗೆ ಇಲ್ಲ.ಯಾರಿಂದಲೂ ಸಹಾಯವನ್ನು ಪಡೆಯುವುದಕ್ಕೆ ಇಷ್ಟ ಪಡುವುದಿಲ್ಲ.ಈ ವರ್ಷ ಇವರಿಗೆ ವ್ಯಾಸಂಗದಲ್ಲಿ ಬಹಳಷ್ಟು ಉನ್ನತ ಅವಕಾಶ ಇದೆ.ನಿಮ್ಮಲ್ಲಿ ಇರುವಂತಹ ಕ್ರಿಯೇಟಿವಿಟಿ ಇಂದ ಹೊಸ ಪ್ರಯೋಗವನ್ನು ಮಾಡುತ್ತೀರಾ.

ಇನ್ನು ಕೆಲಸದ ವಿಚಾರದಲ್ಲಿ ಬಹಳಷ್ಟು ವಿಶೇಷವಾಗಿ ಆಲೋಚನೆ ಮಾಡಿ ಬಹಳಷ್ಟು ವಿಭಿನ್ನವಾಗಿ ಕೆಲಸಗಳನ್ನು ಮಾಡಿ ನಿಮ್ಮ ಉದ್ಯೋಗಿಗಳಿಂದ ನಿಮ್ಮ ಉನ್ನತ ಮೇಲಧಿಕಾರಿಗಳಿಂದ ಶಭಾಷ್ ಗಿರಿಯನ್ನು ಪಡೆದುಕೊಳ್ಳುತ್ತಿರ.ಎಲ್ಲಾ ಕಡೆಯಿಂದಲೂ ಸಹ ಗೆಲುವು ನಿಮ್ಮದಾಗಿರುತ್ತದೆ.ಅದರಲ್ಲೂ ಉದ್ಯೋಗ ವಿಚಾರದಲ್ಲಿ ಬಹಳಷ್ಟು ಅದೃಷ್ಟವಂತರು. ನೀವು ಅಂದುಕೊಂಡ ಹಾಗೆ ಕೆಲಸ ನಿಮಗೆ ಸಿಗುತ್ತದೆ ಮತ್ತು ಬಹಳ ಉನ್ನತಮಟ್ಟಕ್ಕೆ ಹೋಗುತ್ತೀರಾ. ಹಣದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಲಿದ್ದಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಏರುಪೇರು ಆದರೂ ಸಹ ಕಳೆದ ವರ್ಷಕ್ಕಿಂತ ಈ ವರ್ಷ ಬಹಳಷ್ಟು ಉತ್ತಮ ಆರ್ಥಿಕ ಪರಿಸ್ಥಿತಿ ನಿಮ್ಮದಾಗಲಿದೆ.

ಇನ್ನು ಪ್ರೇಮದ ವಿಚಾರಕ್ಕೆ ಬಂದರೆ ನಿಮ್ಮ ಸಂಗಾತಿಯ ಪೂರ್ಣ ಬೆಂಬಲ ನಿಮಗೆ ದೊರೆಯಲಿದೆ ಜೊತೆಗೆ ನೀವು ನಿಮ್ಮ ಸಂಗಾತಿಯನ್ನು ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರ. ಅವರ ಚಿಕ್ಕಪುಟ್ಟ ಆಸೆಗಳನ್ನು ನೆರವೇರಿಸುತ್ತಿರ. ನಿಮ್ಮ ಪ್ರೇಮ ವಿವಾಹಕ್ಕೆ ಮನೆಯವರು ಒಪ್ಪಿಗೆಯನ್ನು ಸೂಚಿಸುತ್ತಾರೆ.ಈ ವರ್ಷ ನಿಮಗೆ ಕಂಕಣಭಾಗ್ಯ ಕೂಡಿ ಬರಲಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು ಎಲ್ಲಾ ಕಡೆಯಿಂದಲೂ ಸಹ ಮೆಚ್ಚುಗೆಯನ್ನು ಪಡೆಯಲಿದ್ದೀರಿ.ಗುರುಹಿರಿಯರ ಆಶೀರ್ವಾದದಿಂದ ಉತ್ತಮ ನೌಕರಿಯನ್ನು ಪಡೆದು ಬಹಳಷ್ಟು ಸಂತೋಷದ ಜೀವನವನ್ನು ನಡೆಸಲಿದ್ದೀರ.

ಧನ್ಯವಾದಗಳು

Related Post

Leave a Comment