ನಿಮ್ಮ ಮನೆಯ ಸೊಸೆಯಲ್ಲಿ ಈ ನಡುವಳಿಕೆ ಧನಸಂಪತ್ತು ತುಂಬಿ ತುಳಕಲಿದೆಯಂತೆ!

Written by Anand raj

Published on:

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮನೆಯ ಸೊಸೆಯಲ್ಲಿ ಈ ನಡವಳಿಕೆ ಇದ್ದರೆ ಧನ ಸಂಪತ್ತು ತುಂಬಿ ತುಳುಕುತ್ತದೆ ಯಾವದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಲಕ್ಷ್ಮಿ ಅಂದರೆ ಮಹಿಳೆ ಮನೆಯ ಸುಖ ಶಾಂತಿಗೆ ಅವಳೇ ಮೂಲಕಾರಣ ಮನೆಯ ಸೌಭಾಗ್ಯ ಹಾಗೂ ದೌರ್ಭಾಗ್ಯ ಅವಳು ಮಾಡುವ ಕೆಲಸವನ್ನು ಅವಲಂಬಿಸಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸೊಸೆ ನಡೆದುಕೊಳ್ಳುವುದರ ಮೇಲೆ ಸುಖ ಶಾಂತಿ ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಸದಾ ಆಕರ್ಷಿಸುತ್ತದೆ.

ಮನೆಯ ಸೊಸೆ ಬೆಳಗ್ಗೆ ಬೇಗನೇ ಎದ್ದು ಕಸಗುಡಿಸಿ ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನಲೆಸುತ್ತದೆ ಮತ್ತು ಮನೆಯ ಸ್ವಚ್ಛತೆ ಸಕಾರಾತ್ಮಕತೆ ಯನ್ನು ಸೂಚಿಸುತ್ತದೆ ಮನೆಯ ಯಾವುದೇ ಸ್ಥಳ ಕೊಳಕು ಆಗಿದ್ದರೆ ಮನೆಯಲ್ಲಿ ದೌರ್ಭಾಗ್ಯ ಮನೆಮಾಡುತ್ತದೆ ಹಾಗಾಗಿ ಮನೆಯ ಸೊಸೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಸ್ವಚ್ಛ ಗೊಳಿಸಿದ ತಕ್ಷಣ ಮಹಿಳೆಯರು ಸ್ನಾನ ಮಾಡಬೇಕು

ಸ್ನಾನ ಮಾಡದೆ ಇರುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಇದರಿಂದ ರೋಗ ಹಾಗೂ ನಕಾರಾತ್ಮಕ ಶಕ್ತಿ ವ್ಯಕ್ತಿಯನ್ನು ಆವರಿಸುತ್ತದೆ. ಹಿಂದೂ ಧರ್ಮ ಹಾಗೂ ವಾಸ್ತುಶಾಸ್ತ್ರ ಎರಡರಲ್ಲಿಯೂ ಸ್ನಾನ ಮಾಡಿದ ನಂತರ ಆಹಾರ ಸಿದ್ಧಪಡಿಸಬೇಕು ಎಂದು ಹೇಳಲಾಗಿದೆ ಹೀಗೆ ಮಾಡುವುದರಿಂದ ಆರೋಗ್ಯವೃದ್ಧಿ ಆಗುವುದರ ಜೊತೆಗೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಇನ್ನು ಆಹಾರ ಸೇವನೆ ಮಾಡುವ ಮೊದಲು ಆಹಾರವನ್ನು ದೇವರಿಗೆ ಅರ್ಪಣೆ ಮಾಡಬೇಕು ನಂತರ ಆಹಾರವನ್ನು ಮನೆಯ ಸದಸ್ಯರು ಸೇವನೆ ಮಾಡಬೇಕು.

ಇನ್ನು ಮನೆಯ ಸೊಸೆ ಸೂರ್ಯಾಸ್ತದ ನಂತರ ತಲೆಯನ್ನು ಬಾಚಿ ಕೊಳ್ಳುವುದು ಅಶುಭ ಮತ್ತು ರಾತ್ರಿ ಮಹಿಳೆಯ ಬಾಚಣಿಗೆ ಹಿಡಿದರೆ ಅದು ಅಶುಭ ಎಂದು ಪರಿಗಣಿಸಲಾಗಿದೆ ಹಾಗಾಗಿ ರಾತ್ರಿ ಸಮಯ ಹೆಂಗಸರು ತಲೆ ಬಾಚಿಕೊಳ್ಳಬೇಡಿ. ಇನ್ನು ಮನೆಯ ಸದಸ್ಯರು ಅದರಲ್ಲಿಯೂ ಹೆಂಗಸರು

ಮನೆಯಲ್ಲಿ ಪದೇಪದೇ ಕೋಪ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಅಶಾಂತಿ ದುರಾದೃಷ್ಟ ಹೆಚ್ಚಾಗುತ್ತದೆ ಆದ್ದರಿಂದ ಮನೆಯಲ್ಲಿ ನಗು ನಗುತಾ ಲವಲವಿಕೆ ಇಂದ ಇರಬೇಕು ಮತ್ತೆ ಹಿರಿಯರಿಗೆ ಗೌರವ ಕೊಡಬೇಕು ಈ ಎಲ್ಲಾ ಒಳ್ಳೆಯ ನಡವಳಿಕೆಗಳು ಮನೆಯ ಸೊಸೆಯಲ್ಲಿ ಇದ್ದರೆ ಸುಖ ಶಾಂತಿ ಸಮೃದ್ಧಿ ಸದಾಕಾಲ ನೆಲೆಸುತ್ತದೆ. 

Related Post

Leave a Comment