ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿರುವ ಬಿಜೆಪಿ ಸಂಸದ ಪಿ.ಸಿ.ಮೋಹನ್ ತಮ್ಮ 4 ನೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಅವರು ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಇತರ ಸಂಸದರಿಗಿಂತ ಪಿ.ಸಿ.ಮೋಹನ್ ತಮ್ಮದೇ ನಿಲುವನ್ನ ಹೊಂದಿ ವಿಭಿನ್ನ ಎನಿಸಿಕೊಂಡಿದ್ದಾರೆ.ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪಿ.ಸಿ.ಮೋಹನ್ ಅವರಿಗೆ ಈ ಬಾರಿ ಯಾವುದೇ ಪ್ರತಿರೋದದ ಧನಿ ಇಲ್ಲ. ಕ್ಷೇತ್ರದ ಜನರಿಗೆ ಕಳೆದ 15 ವರ್ಷದಿಂದ ಪರಿಚಿತರು, ಸದಾ ಲಭ್ಯರು, ಅಲ್ಲದೆ, ಕಾರ್ಯಕರ್ತೆಉ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ವೈಯುಕ್ತಿಕ ಪ್ರಯತ್ನದಿಂದ ತಮ್ಮ ಕ್ಷೇತ್ರ ಬೆಂಗಳೂರಿಗೆ ಕೆಲ ಸೌಲಭ್ಯ ಕಲ್ಪಿಸಿದ್ದು ಜನರ ಮನಸ್ಸಿಗೆ ಹತ್ತಿರವಾಗಿದೆ.
ಇನ್ನೂ ಎಲ್ಲಾ ಜಾತಿ, ಧರ್ಮ, ಭಾಷಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಭಾವಳಿಯನ್ನೂ ಹೊಂದಿದ್ದಾರೆ.
ಅಂದಹಾಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಬೆಂಗಳುರು ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಎದುರು ಕಾಂಗ್ರೆಸ್ ಮನ್ಸೂರು ಆಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದು ಮೇಲ್ನೋಟಕ್ಕೆ ಇದು ನಾಮಕಾವಸ್ಥೆಯ ಪ್ರಯತ್ನ ಎಂಬಂತೆ ಕಾಣುತ್ತಿದೆ.
ಕರ್ನಾಟದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡನೇ ಮತ್ತು ಮೂರನೇ ಹಂತದ ಮತದಾನ ನಡೆಯಲಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರರು 1 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿಯ ಚುನಾವಣೆಯ ಲೆಕ್ಕಾಚಾರಗಳು ಏನಾಗಬಹುದು ಎಂಬ ಕುತೂಹಲ ಇದೆ.