ಪಾತ್ರೆ ತೊಳೆಯುವ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ! ಉಳಿತಾಯ ಆಗುತ್ತೆ…

Written by Anand raj

Published on:

ಪಾತ್ರೆ ತೊಳೆಯುವುದು ನಮಗೆಲ್ಲ ದೊಡ್ಡ ಕೆಲಸ. ಅದರಲ್ಲೂ ಪಾತ್ರೆ ತೊಳೆಯುವ ಸೋಪ್ ತಂದರೆ ಒಂದು ವಾರ ಬರುವುದಿಲ್ಲ. ಮನೆಯಲ್ಲಿ ಮಾಡಿಕೊಳ್ಳುವ ಸಣ್ಣ ಪುಟ್ಟ ಬದಲಾವಣೆಯಿಂದ ಕೊಚ್ಚವಾದರೂ ಹಣದ ಉಳಿತಾಯ ಮಾಡಬಹುದು. ಮೊದಲು ಯಾವುದಾದರು ಪಾತ್ರೆ ತೊಳೆಯುವ ಸೋಪ್ ತೆಗೆದುಕೊಂಡು ಚೆನ್ನಾಗಿ ತುರಿದುಕೊಳ್ಳಿ. ತುರಿದ ನಂತರ ಒಂದು ಡಬ್ಬದಲ್ಲಿ ಹಾಕಬೇಕು. ಪಾತ್ರೆ ತೊಳೆಯುವಾಗ ಎಷ್ಟು ಬೇಕೋ ಅಷ್ಟು ಸೋಪ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ.

ಇದರಿಂದ ಪಾತ್ರೆ ತೊಳೆದರೆ ಪಾತ್ರೆ ಕ್ಲೀನ್ ಆಗುತ್ತದೆ.ಈ ಲಿಕ್ವಿಡ್ ಸ್ವಲ್ಪ ತೆಗೆದುಕೊಂಡರೆ ಸಾಕು ಪಾತ್ರೆ ಬೇಗನೇ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬಹುದು. ಇನ್ನು ಎಣ್ಣೆ ಜಿಡ್ಡು ಇದ್ದರು ಸಹ ಅದು ಕೂಡ ಸುಲಭವಾಗಿ ಹೋಗುತ್ತದೆ. ತಪ್ಪದೆ ಈ ಟಿಪ್ಸ್ ಅನ್ನು ಫಾಲೋ ಮಾಡಿ. ಇದರಿಂದ ದೇವರ ಪೂಜಾ ಸಾಮಗ್ರಿಗಳನ್ನು ಕೂಡ ತೊಳೆಯಬಹುದು.

ಇನ್ನು ತಳ ಇಡಿದ ಪಾತ್ರೆಯನ್ನು ತೊಳೆಯುವುದು ತುಂಬಾ ಕಷ್ಟ. ಇದಕ್ಕೆ ಸ್ವಲ್ಪ ನೀರು ಮತ್ತು ಸೋಪ್ ಪುಡಿಯನ್ನು ಹಾಕಿ ನೀರು ಬಿಸಿ ಆಗುವುದಕ್ಕೆ ಬಿಡಬೇಕು. ನಂತರ ಗ್ಯಾಸ್ ಅನ್ನು ಆಫ್ ಮಾಡಿ ತಣ್ಣಗೆ ಆದಮೇಲೆ ಪಾತ್ರೆಯನ್ನು ಸ್ವಲ್ಪ ಉಜ್ಜಿದರೆ ಸಾಕು ಪಾತ್ರೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.

Related Post

Leave a Comment