ದೇವರಿಗೆ ನೈವೇದ್ಯಕ್ಕೆ ಹಸಿ ಹಾಲು ಅಥವಾ ಕಾಯಿಸಿದ ಹಾಲು ಇಡಬೇಕಾ?

Written by Anand raj

Published on:

ದೇವರಿಗೆ ನೈವೇದ್ಯಕ್ಕೆ ಹಸಿ ಹಾಲು ಹಾಗು ಕಾಯಿಸಿದ ಹಾಲು ಎರಡನ್ನು ಸಹ ಇಡಬಹುದು.

ಮೊದಲಿಗೆ ಕಾಯಿಸಿದ ಹಾಲು ಒಂದು ಲೋಟ ಇಡುತ್ತೀರಿ ಎಂದರೆ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಇಡಬೇಕು. ಇನ್ನು ಹಸಿ ಹಾಲು ನೈವೇದ್ಯಕ್ಕೆ ಇಡುವವರು ಮೊದಲು ಒಂದು ಲೋಟ ಹಸಿ ಹಾಲನ್ನು ದೇವರಿಗೆ ಇಟ್ಟು ಉಳಿದ ಹಾಲನ್ನು ಬಳಸಬಹುದು. ಮೊದಲು ಮನೆಯಲ್ಲಿ ಬಳಸಿ ನಂತರ ದೇವರ ನೈವೇದ್ಯಕ್ಕೆ ಹಾಲನ್ನು ಯಾವುದೇ ಕಾರಣಕ್ಕೂ ಬಳಸಬಾರದು.

ನೈವೇದ್ಯಕ್ಕೆ ಹಾಲನ್ನು ಇಡುವಾಗ ಇದರ ಜೊತೆಗೆ ಒಂದು ಬೋಟ್ಟಲಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಇಡಬೇಕು. ಇನ್ನು ಕಾಯಿಸಿದ ಹಾಲನ್ನು ನೈವೇದ್ಯಕ್ಕೆ ಇಟ್ಟರೆ ಪೂಜೆಯಲ್ಲಿ ಇಟ್ಟು ಮಧ್ಯಾಹ್ನ ತೆಗೆದುಕೊಂಡು ಮನೆಯ ಸದಸ್ಯರು ಸೇವಿಸಬಹುದು.

ಇನ್ನು ಹಸಿ ಹಾಲನ್ನು ನೈವೇದ್ಯಕ್ಕೆ ಇಟ್ಟರೆ ಬೆಳಗ್ಗೆ ಬ್ರಹ್ಮ ಮುಹೂರ್ತ ಸಮಯದಲ್ಲಿ ಪೂಜೆಗೆ ಒಂದು ಲೋಟ ಹಾಲನ್ನು ತೆಗೆದಿದ್ದಾರೆ ಅದನ್ನು 7 ಗಂಟೆಗೆ ತೆಗೆದು ಕಾಫಿ ಅಥವಾ ಟೀ ಗೆ ಬಳಸಬಹುದು. ಇನ್ನು ದೇವರಿಗೆ ಅಭಿಷೇಕ ಮಾಡುವುದಕ್ಕೆ ಕಡ್ಡಾಯವಾಗಿ ಹಸಿ ಹಾಲನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಕಾಯಿಸಿದ ಹಾಲನ್ನು ಬಳಸುವಾಗಿಲ್ಲ.

Related Post

Leave a Comment