ಪವರ್ ಫುಲ್ ಡ್ರೈ ಫ್ರೂಟ್ಸ್ ಗೋಡಂಬಿ!ತೂಕ ಇಳಿಸಲು!ಕ್ಯಾಲ್ಸಿಯಂ!

Written by Anand raj

Published on:

ಇತ್ತೀಚಿನ ಆಹಾರ ಪದ್ಧತಿಯಿಂದ ಆರೋಗ್ಯ ತುಂಬಾನೇ ಕೆಡುತ್ತದೆ. ಅದರಲ್ಲಿ ಪ್ರಮುಖವಾಗಿ ಹೃದಯದ ಕಾಯಿಲೆಯನ್ನು ಅನುಭವಿಸುತ್ತಿರುವ ಜನರು ಹೆಚ್ಚಗುತ್ತಿದ್ದಾರೆ. ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ಕಾಯಿಲೆ ಕೂಡ ಬರುತ್ತದೆ. ಇಂದಿನ ದಿನದಲ್ಲಿ ಸರಿಯಾದ ಆರೋಗ್ಯ ಕ್ರಮವನ್ನು ಅನುಸರಿಸಬೇಕು ಎಂದರೆ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪ್ರತಿದಿನ ಕುಡಿಯುವ ಹಾಲಿಗೆ 2-3 ಗೋಡಂಬಿ ಬೀಜಗಳನ್ನು ರುಬ್ಬಿ ಹಾಲಿನ ಜೊತೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ಅದರಿಂದ ತುಂಬಾನೇ ಆರೋಗ್ಯದ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು.

ಡ್ರೈ ಫ್ರೂಟ್ಸ್ ಬೆಲೆ ತುಂಬಾನೇ ದುಬಾರಿ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಅದರಲ್ಲೂ ಗೋಡಂಬಿ ಕೂಡ ತುಂಬಾನೇ ದುಬಾರಿ. ಆದರೆ ದಿನಕ್ಕೆ ಮಿತವಾಗಿ ಗೋಡಂಬಿ ಹಾಕಿದ ಹಾಲು ಕುಡಿಯುವುದರಿಂದ ಇದರಲ್ಲಿರುವ ಅಧಿಕ ಪ್ರಮಾಣದ ಮೆಗ್ನೀಷಿಯಂ ಮತ್ತು ಸೆಲೆನಿಯಂ ಪಾಸ್ಪರಸ್ ಝೀಕ್ ಇನ್ನಿತರ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.ಆರೋಗ್ಯ ತಜ್ಞರು ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸರಿಯಾದ ಜೀವನಶೈಲಿ ಆಹಾರ ಕ್ರಮ ಅನುಸರಿಸದೆ ಇರುವುದು ಮತ್ತು ದೈಹಿಕ ಚಟುವಟಿಕೆ ಇಲ್ಲದೆ ಇರುವುದು ಪ್ರಮುಖವಾಗಿ ಹೃದಯದ ಕಾಯಿಲೆ ಬರಲು ಕಾರಣವಾಗಿದೆ.

ಹಾಗಾಗಿ ಹೃದಯದ ಸಮಸ್ಯೆಯಿಂದ ದೂರ ಇರಬೇಕು ಎಂದರೆ ಪ್ರತಿನಿತ್ಯ ಹಾಲಿನ ಜೊತೆ ಗೋಡಂಬಿ ಸೇವನೆ ಮಾಡಬೇಕು. ಇದನ್ನು ಪ್ರತಿದಿನ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ನಿಮ್ಮ ಕುಟುಂಬ ವೈದ್ಯರ ಅನುಮತಿ ಪಡೆದುಕೊಂಡು ಈ ವಿಧಾನವನ್ನು ಮುಂದುವರೆಸಬಹುದು.

ಅಷ್ಟೇ ಅಲ್ಲದೆ ಮಧುಮೇಹ ಸಮಸ್ಯೆ ಇದ್ದವರಿಗೂ ಕೂಡ ಈ ಗೋಡಂಬಿ ಹಾಲು ಬಹಳ ಒಳ್ಳೆಯದು. ನಿಯಮಿತವಾಗಿ ಈ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದರ ಜೊತೆಗೆ ಮಧುಮೇಹ ಲಕ್ಷಣಗಳು ಕೂಡ ಕಡಿಮೆಯಾಗುತ್ತದೆ.

ಗೋಡಂಬಿಯನ್ನು ಹಾಲಿನ ಜೊತೆ ಬೆರೆಸಿ ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ಗೋಡಂಬಿ ಮತ್ತು ಹಾಲು ಸೇವನೆ ಮಾಡಿದರೆ ಆರೋಗ್ಯವನ್ನು ಆಚ್ಚು ಕಟ್ಟಾಗಿ ಕಾಪಾಡುತ್ತದೆ.ಇದರಿಂದ ಕಣ್ಣಿನ ಸಮಸ್ಸೆ ಕೂಡ ಬರುವುದಿಲ್ಲ.

Related Post

Leave a Comment