ಯಾವ ರೋಗವು ನಿಮ್ಮ ಹತ್ತಿರ ಸುಳಿಯಲ್ಲ ತಲೆಯಿಂದ ಹಿಡಿದು ಪಾದದ ವರೆಗೆ ಎಲ್ಲಾ ಸಮಸ್ಸೆಗೆ ಇದೆ ಪರಿಹಾರ!

Written by Anand raj

Published on:

ಹೆಚ್ಚಾಗಿ ಎಳ್ಳನ್ನು ಪ್ರತಿದಿನ ಬಳಕೆ ಮಾಡುವುದು ಕಡಿಮೆ. ಕೆಲವರಂತೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮಾತ್ರ ತಿನ್ನುತ್ತಾರೆ. ಆದರೆ ಎಳ್ಳಿನಿಂದ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಸ್ವಲ್ಪ ಎಳ್ಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗಾದ್ರೆ ಎಳ್ಳಿನಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ.

ಎಳ್ಳಿನಲ್ಲಿ ಪ್ರೋಟೀನ್, ಜಿಂಕ್ ಮತ್ತು ಐರನ್ ಹೆಚ್ಚಿದ್ದು ನಿಮ್ಮ ಕೂದಲಿನ ಸಮಸ್ಯೆಗಳಿಗೆ ಮನೆಮದ್ದು ಎನ್ನಬಹುದು. ನೀವು ಎಳ್ಳನ್ನು ಸೇವನೆ ಮಾಡುವುದರಿಂದ ಕೂದಲು ದಪ್ಪವಾಗಿ ಬೆಳೆಯುವುದಲ್ಲದೇ, ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಚರ್ಮದ ಸಮಸ್ಯೆಗಳಿಗೆ ಪರಿಹಾರ ಈ ಎಳ್ಳು. ನಿಮ್ಮ ತ್ವಚೆಯ ಅಂದ ಕಾಪಾಡಿಕೊಳ್ಳಲು ಎಳ್ಳು ಸಹಾಯ ಮಾಡುತ್ತದೆ. ಅದನ್ನು ತಿನ್ನುವುದು ಮಾತ್ರವಲ್ಲದೇ, ಅದರ ಪುಡಿಯಲ್ಲಿ ಹಚ್ಚುವುದರಿಂದ ಕಲೆಗಳು ಮಾಯವಾಗುತ್ತದೆ.

ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಕೊಶಗಳ ಬೆಳವಣಿಗೆ ವಿರುದ್ಧ ಹೋರಾಡಲು ಇದು ಬೆಸ್ಟ್ ಎನ್ನಲಾಗುತ್ತದೆ.

30 ಜನರ ಮೇಲೆ ನಡೆಸಿದ ಒಂದು ಸಣ್ಣ ಅಧ್ಯಯನವು 4 ವಾರಗಳ ಕಾಲ ಪ್ರತಿದಿನ 2.5 ಗ್ರಾಂ ಕಪ್ಪು ಎಳ್ಳು ಸೇವಿಸುವುದರಿಂದ ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಹಿಡಿದಿದೆ.

ಈ ಎಳ್ಳು ಜೀರ್ಣಕ್ರಿಯೆಗೆ ಸಹಕಾರಿ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿದ್ದು, ಜೊತೆ ಫೈಬರ್ ಇರುವುದರಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ ಯಾವುದೇ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಅದಕ್ಕೆ ಸಹ ಇದು ಮನೆಮದ್ದು.

ನಿಮಗೆ ಎಳ್ಳು ತಿನ್ನಲು ಸಾಧ್ಯವಾಗುವುದಿಲ್ಲ ಎಂದರೆ ಅದನ್ನು ಎಳ್ಳಿನ ಉಂಡೆಯನ್ನು ತಿನ್ನುವುದು ಉತ್ತಮ. ಎಳ್ಳು ಮತ್ತು ಬೆಲ್ಲ ಸೇರುವುದರಿಂದ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ.

ಇದರ ಇನ್ನೊಂದು ಬಹುಮುಖ್ಯ ಪ್ರಯೋಜನವೆಂದರೆ ಹಾಲುಣಿಸುವ ತಾಯಂದಿರಿಗೆ ಹಾಲು ಹೆಚ್ಚಾಗಲು ಸಹಾಯ ಮಾಡುತ್ತದೆ. ಬಿ.ವಿಟಮಿನ್ , ಮ್ಯಾಗ್ನಿಶಿಯಂ, ಝಿಂಕ್ ಹೆಚ್ಚಿದ್ದು, ಇದು ತಾಯಂದಿರಿ ಹಾಗೂ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

ಇನ್ನು ಮಧುಮೇಹಿಗಳಿಗೆ ಇದು ಬೆಸ್ಟ್ ಮನೆಮದ್ದು ಎನ್ನಲಾಗುತ್ತದೆ, ಇದರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದು, ಸಾಧ್ಯವಾದರೆ ಪ್ರತಿದಿನ ತಿನ್ನುವುದು ಉತ್ತಮ.

ಇದನ್ನು ತಿನ್ನಲು ಒಂದು ಸುಲಭ ಮಾರ್ಗವಿದೆ. ನೀವು ಸಲಾಡ್ ಪ್ರಿಯರಾಗಿದ್ದರೆ ಸಲಾಡ್ ಮೇಲೆ ಇದನ್ನು ಸೇರಿಸಿ ತಿನ್ನಿ ಸಾಕು.

Related Post

Leave a Comment