ಈ ಪೂಜೆಗೆ ಧಾನ್ಯ ಕಳಸ ಪೂಜೆ ಎಂದು ಕರೆಯುತ್ತಾರೆ. ಅಂದರೆ ಕಳಸವನ್ನು ಸ್ಥಾಪನೆ ಮಾಡಿಕೊಂಡು ಅಮ್ಮನವರ ಪೂಜೆಯನ್ನು ಮಾಡುತ್ತಿರುತ್ತೇವೆ. ಹಾಗಾಗಿ ಅಷ್ಟೇ ಪ್ರಾಮುಖ್ಯತೆಯನ್ನು ಈ ಪೂಜೆಗೆ ಕೊಡಬೇಕಾಗಿರುವುದರಿಂದ ಇದನ್ನು ಧಾನ್ಯ ಕಳಸ ಪೂಜೆ ಮಾಡಬೇಕಾಗುತ್ತದೆ. ಇದಕ್ಕಾಗಿ ಬೇಕಾಗಿರುವ ವಸ್ತು ಎಂದರೆ ಪುಟ್ಟದಾದ ಬೌಲ್ ತೆಗೆದುಕೊಂಡು ಅದಕ್ಕೆ ಗೋಧಿ, ಭತ್ತ ಹೀಗೆ 1,3,5 ರಿತು ಧಾನ್ಯಗಳನ್ನು ಹಾಕಬಹುದು.
ಇನ್ನು ಭಾನುವಾರ ಪೂಜೆ ಮಾಡುತ್ತಿದ್ದಿರಿ ಎಂದರೆ ಶನಿವಾರನೇ ಇದರ ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಧಾನ್ಯವನ್ನು ನೀರಿನಲ್ಲಿ ಹಾಕಿ ನೆನಸಬೇಕು. ನಂತರ ಮಣ್ಣಿನ ದೀಪ ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಸುತ್ತ ಹಚ್ಚಬೇಕು ಹಾಗು ಕುಂಕುಮವನ್ನು ಹಚ್ಚಬೇಕು ಮತ್ತು ಮಧ್ಯದಲ್ಲಿ ಶ್ರೀಂ ಹಾಗು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.
ನಂತರ ದೀಪದ ಒಳಗೆ ಮುಕ್ಕಾಲು ಭಾಗ ಮಣ್ಣನ್ನು ಹಾಕಬೇಕು. ಇದಕ್ಕೆ ಸ್ವಲ್ಪ ನೀರನ್ನು ಹಾಕಬೇಕು. ಧಾನ್ಯಗಳನ್ನು ಮೊದಲು ನೆನಸಿ ಇಡಬೇಕು. ಮಾರನೇ ದಿನ ಕಳಸವನ್ನು ಸ್ಥಾಪನೆ ಮಾಡುವ ಸಮಯದಲ್ಲಿ ಮೌಲಿ ಧಾರ ಮತ್ತು ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಹೂವು ಮೂಡಿಸಿ ಧಾನ್ಯಗಳನ್ನು ಹಾಕಬೇಕು.
ಇನ್ನು 5 ರೀತಿ ಅಥವಾ 9 ರೀತಿ ಧಾನ್ಯಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಗೋಧಿ ತೆಗೆದುಕೊಂಡಿದ್ದರೆ ಮಣ್ಣಿನ ಒಳಗೆ ಹಾಕಿ ಮೇಲೆ ಮಣ್ಣನ್ನು ಮುಚ್ಚಬೇಕು. ನಂತರ ಸ್ವಲ್ಪ ನೀರು ಚಿಮುಕಿಸಬೇಕು. ಈ ರೀತಿ ಮಾಡಿದರೆ 9 ನೇ ದಿನಕ್ಕೆ ಸ್ವಲ್ಪ ಆದರೂ ಬೆಳೆಯುತ್ತದೆ. ಎಷ್ಟು ಧಾನ್ಯ ಬೆಳೆಯುತ್ತ ಹೋಗುತ್ತಾದೋ ಅಷ್ಟು ಮನೆಯಲ್ಲಿ ಸಂಪತ್ತು ಸುಖ ಸಂತೋಷ ಅಭಿವೃದ್ಧಿ ಆಗುತ್ತದೆ