ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನಟಿ ಆರತಿ ಒಬ್ಬರು.ಸರಳ ಸುಂದರ ಹಾಗೂ ತಮ್ಮ ಕಣ್ಣೋಟದ ಅಭಿನಯದ ಮೂಲಕ ಎಲ್ಲರೂ ಮಾರು ಹೋಗುವಂತೆ ಮಾಡುತ್ತಿದ್ದ ನಟಿ ಆರತಿ 1986 ರ ಟೈಗರ್ ಚಿತ್ರದ ನಂತರ ಯಾವ ಚಿತ್ರದಲ್ಲು ನಟಿಸಲಿಲ್ಲ. ಇಂತಹ ಅದ್ಭುತ ಕಲಾವಿದೆ ಚಿತ್ರರಂಗದಿಂದ ದೂರ ಉಳಿದಿದ್ದರೆ.1954 ರಲ್ಲಿ ಜನಿಸಿದ ನಟಿ ಆರತಿ 70-79 ದಶಕದ ಪ್ರಖ್ಯಾತ ಬಹುಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಮಿಂಚಿದ್ದರು.
ಕನ್ನಡದ ಎಲ್ಲಾ ಖ್ಯಾತ ನಟರ ಜೊತೆ ಸರಿ ಸುಮಾರು 125 ಚಿತ್ರಗಳಲ್ಲಿ ನಟಿಸಿರುವ ನಟಿ ಆರತಿ ಅಂದಿನ ಕಾಲದ ಯುವಕರ ಕನಸಿನ ಕನ್ಯೆಯಾಗಿದ್ದರು. ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾಗ ವಿಧಾನಪರಿಷತ್ ಸದಸ್ಯರಾಗಿದ್ದ ಈ ನಟಿ ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಸಕಲ ಅಭಿವೃದ್ಧಿ ಮಾಡಿದರು.ಬ್ಯಾಂಕ್ ನಲ್ಲಿ ಎರಡು ಕೋಟಿ ಡೆಪಾಸಿಟ್ ಇಟ್ಟು ಅದರ ಬಡ್ಡಿಯಿಂದ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೊಡುತ್ತಿದ್ದರು.
40 ಶಾಲೆ ದತ್ತು ಪಡೆದು ಅಷ್ಟು ಶಾಲೆಗಳ ಮಕ್ಕಳ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಿದ್ದರು.ಗಂಡ ಮತ್ತು ಮಕ್ಕಳೊಂದಿಗೆ ಅಮೆರಿಕದಲ್ಲಿದ್ದಾರೆ. ಆದರೆ ಮೀಡಿಯಾದಿಂದ ದೂರ ಉಳಿದಿರುವ ಈ ನಟಿ ತಮ್ಮ ಕೌಟುಂಬಿಕ ವಿಷಯವನ್ನು ಎಲ್ಲೂ ಬಿಟ್ಟುಕೊಡುವುದಿಲ್ಲ.ಬೆಂಗಳೂರಿನ ಜೆಪಿ ನಗರದಲ್ಲಿ ಬೆಳ್ಳಿತೆರೆ ಎಂಬ ಹೆಸರಿನಲ್ಲಿ ಮನೆ ಇದೆ.
ತಮ್ಮ ಉತ್ತುಂಗದ ಸ್ಥಾನದಲ್ಲಿದ್ದಾಗ ಇದೆ ಮನೆಯಲ್ಲಿ ವಾಸವಿದ್ದರು.9600ಸ್ಕ್ವೇರ್ ಫೀಟ್ ಇರುವ ಈ ಮನೆಯಲ್ಲಿ ನಟಿ ಆರತಿ ಸುಮಾರು ವರ್ಷ ವಾಸವಿದ್ದರು.ಗಂಡನ ಜೊತೆ ಅಮೆರಿಕಗೆ ಹೋದಮೇಲೆ ಈ ಮನೆಯನ್ನು ಮಾರಾಟ ಮಾಡಿದ್ರು ಈ ನಟಿ.ಆದರೆ ಈಗಲೂ ಜೆಪಿ ನಗರದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ ನಟಿ ಆರತಿ ಅವರ ಈ ಬೆಳ್ಳಿ ತೆರೆ ಮನೆ.ಎಂತಹ ಪಾತ್ರವಾದರೂ ಸುಲಭವಾಗಿ ಮನೋಭಾವದಿಂದ ಅಭಿನಯ ಎಲ್ಲರಿಗೂ ಇಷ್ಟವಾಗುತ್ತಿತ್ತು.