ಮೊಟ್ಟೆ ಸಿಪ್ಪೆ ಮನೆಯ ದೊಡ್ಡ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತೆ!

ಮೊಟ್ಟೆಗಳು  ಪ್ರಪಂಚದಾದ್ಯಂತ ಜನಪ್ರಿಯ ಆಹಾರವಾಗಿದೆ. ಮೊಟ್ಟೆಗಳು ಅಗ್ಗವಾಗಿದ್ದು ಇವು ಪ್ರೋಟೀನ್‌ನ ಉತ್ತಮ-ಗುಣಮಟ್ಟದ ಮೂಲವಾಗಿದೆ. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ನೀವು ಬೇಯಿಸಿದ ಮೊಟ್ಟೆಗಳು, ಮೊಟ್ಟೆ ಕರಿ, ಆಮ್ಲೆಟ್ ಹೀಗೆ ಬೇರೆ ಬೇರೆ ರೀತಿಯಾಗಿ ಸೇವಿಸಬಹುದು. ಮೊಟ್ಟೆ ಒಳಭಾಗವನ್ನು ಜನ ಎಷ್ಟು ಇಷ್ಟಪಟ್ಟು ಸೇವಿಸುತ್ತಾರೋ ಅದೇ ರೀತಿ ಅದರ ಹೊರಗಿನ ಚಿಪ್ಪನ್ನು ಅಷ್ಟೇ ಪ್ರಮಾಣದಲ್ಲಿ ಬಿಸಾಡುತ್ತಾರೆ. ಮೊಟ್ಟೆ ಖಾದ್ಯ ತಯಾರಿಸಿ ಅದರ ಚಿಪ್ಪನ್ನು ಮುರಿದು ಇಲ್ಲವೇ ನುಜ್ಜುಗುಜ್ಜುಗೊಳಿಸಿ ಕಸದ ಡಬ್ಬಿಗೆ ಹಾಕಿ ಬಿಡುತ್ತಾರೆ. ಹೀಗೆ ಅಲ್ಲಿ ಇಲ್ಲಿ ಬಿಸಾಡುವ ಮೊದಲು ಮೊಟ್ಟೆ ಚಿಪ್ಪುಗಳನ್ನು ಒಣಗಿಸಿ ಅದರಿಂದ ಅನೇಕ ಪ್ರಯೋಜನ ಪಡೆಯಬಹುದು. ಹೀಗೆ ಮೊಟ್ಟೆ ಶೆಲ್‌ಗಳನ್ನು ಒಣಗಿಸಲು ಹೊಸ ಟ್ರೇಗಳನ್ನು ವಿನ್ಯಾಸಗೊಳಿಸಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕ್ರಮ ವಿಲಕ್ಷಣವಾಗಿ ಅನಿಸುತ್ತಿಯಾದರೂ ನಾವು ಇದನ್ನೇ ಮಾಡುತ್ತೇವೆ. ಮೊಟ್ಟೆ ಚಿಪ್ಪುಗಳನ್ನು ಬಿಸಾಡದೇ ಸಂಗ್ರಹಿಸಲು ಮೊಟ್ಟೆಯ ಟ್ರೇಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಹಿಂದೆ, ಸಸ್ಯಗಳಿಗೆ ಅತ್ಯುತ್ತಮ ಗೊಬ್ಬರವನ್ನು ತಯಾರಿಸಲು ಮೊಟ್ಟೆಯ ಚಿಪ್ಪುಗಳನ್ನು ಒಣಗಿಸಲು ಇಂಥ ಟ್ರೇಗಳನ್ನು ಬಳಸಲಾಗುತ್ತಿತ್ತು.

ಯುಕೆಯಲ್ಲಿನ ಆಹಾರ ತಜ್ಞರ ಪ್ರಕಾರ, ಮೊಟ್ಟೆಯ ಚಿಪ್ಪುಗಳನ್ನು ಒಣಗಿಸಲು ಮೊಟ್ಟೆಯ ಟ್ರೇಗಳನ್ನು ಬಳಸುವುದು ಉತ್ತಮ. ಟ್ರೇಗಳು ಮೊಟ್ಟೆಗಳನ್ನು ಒಣಗಿಸುವ ಪ್ರಕ್ರಿಯೆಗೆ ಸುರಕ್ಷಿತ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳು ಮೊಟ್ಟೆ ಶೆಲ್‌ನ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಟ್ರೇಗಳು ಕಾಗದದಿಂದ ಮಾಡಲ್ಪಟ್ಟಿದೆ. ಇದು ಮೊಟ್ಟೆಯ ಚಿಪ್ಪುಗಳನ್ನು ತ್ವರಿತವಾಗಿ ಒಣಗಿಸಲು ಕಾರಣವಾಗುತ್ತದೆ.

ಅನೇಕ ಜನರು ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದರು. ಹಲವು ಜನ ಕಾಮೆಂಟ್ ಮಾಡಿ ಫನ್ನಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಅಭ್ಯಾಸವು ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ಒಬ್ಬ ನೆಟ್ಟಿಗರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.

ಮೊಟ್ಟೆ ಚಿಪ್ಪಿನ ಉಪಯೋಗ–ಮನೆಯಲ್ಲಿ ಬೆಳೆಸುವ ಗಿಡಗಳಿಗೆ ಮಣ್ಣಿನ ಸಂಯೋಜಕವಾಗಿ, ಇವು ಖನಿಜಗಳನ್ನು ಸೇರಿಸುತ್ತವೆ ಮತ್ತು ಮಣ್ಣನ್ನು ಸಡಿಲವಾಗಿಸಿ ಮತ್ತು ಗಾಳಿಯಲ್ಲಿಡಲು ಸಹಾಯ ಮಾಡುತ್ತವೆ.ಮೊಟ್ಟೆಯ ಚಿಪ್ಪುಗಳು ಸುಮಾರು ಶೇ. 95 ರಷ್ಟು ಕ್ಯಾಲ್ಸಿಯಂನಿಂದ ಕೂಡಿದ್ದು, ಗುಲಾಬಿಗಳಿಗೆ ಬೇಕಾದ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಲಿದೆ.ಕೈ ತೋಟದಲ್ಲಿ ಕೀಟಗಳನ್ನು ದೂರ ಓಡಿಸಲು ಇದು ತುಂಬಾ ಉಪಯೋಗಿ. ಗೊಂಡೆಹುಳುಗಳು, ಬಸವನ ಹುಳ ಮತ್ತು ಕೆಲ ಅಪಾಯಕಾರಿ ಕೀಟಗಳನ್ನು ಓಡಿಸಲು ಮೊಟ್ಟೆ ಚಿಪ್ಪು ಸಹಕಾರಿಯಾಗಿದೆ.

ಮೊಟ್ಟೆಯ ಚಿಪ್ಪಿಗೆ ಬಣ್ಣಹೊಡೆದು ಮನೆ ಶೃಂಗಾರಕ್ಕೆ ಬಳಸಿಕೊಳ್ಳಬಹುದು.ಮೊಟ್ಟೆಗಳ ಗಾತ್ರ ಸಣ್ಣದಾಗಿರಬಹುದು. ಆದರೆ ಮೊಟ್ಟೆಗಳು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿವೆ ಮತ್ತು ಸಮತೋಲಿತ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದೆ. ಒಂದು ಬೇಯಿಸಿದ ಮೊಟ್ಟೆಯು ವಿಟಮಿನ್‌ಗಳು, ಫೋಲೇಟ್, ಫಾಸ್ಫರಸ್, ಸೆಲೆನಿಯಮ್, ಕ್ಯಾಲ್ಸಿಯಂ, ಜಿಂಕ್‌, ಆರೋಗ್ಯಕರ ಕೊಬ್ಬುಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಸುಮಾರು 77 ಕ್ಯಾಲೋರಿಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ.

ನಿಯಮಿತವಾಗಿ ಮೊಟ್ಟೆಗಳನ್ನು ಸೇವಿಸುವುದರಿಂದ ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ (ಎಚ್‌ಡಿಎಲ್) ಅಥವಾ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೆಚ್ಚಿನ HDL ಮಟ್ಟಗಳು ಹೃದ್ರೋಗ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತಪ್ಪಿಸಲು ಸಹಕಾರಿಯಾಗಿದೆ.

ರೀಡರ್ಸ್ ಡೈಜೆಸ್ಟ್‌ನ ವರದಿಯ ಪ್ರಕಾರ, ರೆಫ್ರಿಜರೇಟರ್‌ನೊಂದಿಗೆ ಬರುವ ಪ್ಲಾಸ್ಟಿಕ್ ಟ್ರೇನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಬಾರದು. ಇದರ ಹಿಂದಿನ ಪ್ರಾಥಮಿಕ ಕಾರಣವೆಂದರೆ ರೆಫ್ರಿಜರೇಟರ್ ಬಾಗಿಲಿನೊಳಗಿನ ತಾಪಮಾನವು ಅತ್ಯಂತ ಅಸಮವಾಗಿದೆ ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ ಅಲ್ಲಿ ಇರಿಸಲಾಗಿರುವ ಯಾವುದಾದರೂ ತಾಪಮಾನ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ.

Leave A Reply

Your email address will not be published.