Namratha Gowda:ಸೀರೆಯುಟ್ಟ ನಾಗಿಣಿ ನಮ್ರತಾ ಮೈಮಾಟಕ್ಕೆ ಮನಸೋತ ಜನ!

Written by Anand raj

Published on:

Namratha Gowda: ಕನ್ನಡ ಕಿರುತೆರೆಯಲ್ಲಿ ನಾಗಿಣಿಯಾಗಿ ಮಿಂಚಿದ ನಟಿ ನಮ್ರತಾ ಗೌಡ (Namratha Gowda), ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ಸ್ಪರ್ಧಿಯಾಗಿ ಸಾಕಷ್ಟು ಸದ್ದು, ಸುದ್ದಿಯನ್ನು ಮಾಡಿದರು. ಬಿಗ್ ಬಾಸ್ ನಂತರ ನಟಿ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಮ್ರತಾ ಅವರ ಫ್ಯಾನ್ ಫಾಲೋಯಿಂಗ್ ಕೂಡಾ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ನಮ್ರತಾ ಗೌಡ ಅವರು ತಮ್ಮ ಅಂದವಾದ ಫೋಟೋಗಳು ಮತ್ತು ಡ್ಯಾನ್ಸ್ ವೀಡಿಯೋಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮೋಡಿಯನ್ನು ಮಾಡುತ್ತಲೇ ಇರುತ್ತಾರೆ.

Namratha Gowda
Source:Googel

ತಾನು ಗ್ಲಾಮರ್ ಗೊಂಬೆಯಂತೆ ಮಿಂಚುವುದು ಮಾತ್ರವೇ ಅಲ್ಲದೇ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಲು ಸೈ ಎನ್ನುವಂತೆ ಸೀರೆಯುಟ್ಟ ನಟಿ ಈಗ ಕ್ಯಾಮೆರಾ ಮುಂದೆ ಅಂದವಾದ ಪೋಸ್ ಗಳನ್ನು ನೀಡಿದ್ದು, ಹೊಸ ಫೋಟೋಗಳೀಗ ವೈರಲ್ ಆಗ್ತಿದೆ.

ನಮ್ರತಾ ಅವರು ಅಂದವಾಗಿ ಸೀರೆಯುಟ್ಟು ಮುಡಿಯಲ್ಲಿ ಮಲ್ಲಿಗೆ ಮುಡಿದು, ಸುಂದರವಾದ ನೋಟದೊಂದಿಗೆ ಕಂಡಿದ್ದು, ನಟಿಯ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ನೀಡುತ್ತಾ, ಅಂದವನ್ನು ಹಾಡಿ ಹೊಗಳುತ್ತಿದ್ದಾರೆ.

ಬಿಗ್ ಬಾಸ್ ನಂತರ ನಮ್ರತಾ ಅವರು ಬಿಗ್ ಬಾಸ್ ವಿನ್ನರ್ ಆದಂತಹ ಕಾರ್ತಿಕ್ ಮಹೇಶ್ ಅವರ ಜೊತೆಗೆ ಒಂದು ಆಭರಣ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ವಧು ವರನಂತೆ ಕಾಣಿಸಿಕೊಂಡು ಮಿಂಚಿದ್ದರು, ಆ ಫೋಟೋಗಳ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ನಾಗಿಣಿ 2 ನಂತರ ನಮ್ರತಾ ಗೌಡ ಅವರು ಯಾವುದೇ ಹೊಸ ಸೀರಿಯಲ್ ಗಳಲ್ಲಿ ನಟಿಸಿಲ್ಲ. ಬಿಗ್ ಬಾಸ್ ನಂತರ ನಟಿಯು ಯಾವ ಹೊಸ ಪ್ರಾಜೆಕ್ಟ್ ನಲ್ಲಿ ನಟಿಸಲಿದ್ದಾರೆನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

Related Post

Leave a Comment