ಖ್ಯಾತ ನಟನಿಗೆ ಒಬ್ಬ ಮಹಿಳೆ 10 ರೂ ಕೊಟ್ಟರೂ ನಂತರ ಈ ನಟ ಕೊಟ್ಟಿದ್ದು!

ಪ್ರತ್ಯೇಕವಾಗಿ ನೋಡಿದರೂ ಪ್ರಮಾಣಿಸಿ ನೋಡು ಎಂದು ಹೇಳುತ್ತಾರೆ ಯಾಕಂದ್ರೆ ಕಣ್ಣಿಂದ ನೋಡಿ ನಾವು ಅಂದುಕೊಂಡಿದ್ದೆಲ್ಲ ನಿಜ ಆಗದೇ ಇರಬಹುದು.ಈ ಘಟನೆ ಕೂಡ ಹಾಗೆ ಬಹುಶಃ ಸ್ಟೋರಿ ಕೇಳಿದರೆ ಹೀಗು ಆಗಬಹುದಾ ಎಂದೆನಿಸುತ್ತದೆ.ಒಬ್ಬ ಅನಾಮಿಕ ಮಹಿಳೆ ಖ್ಯಾತ ನಟನಿಗೆ 10 ರೂ ಕೊಡುತ್ತಾರೆ , ಯಾಕಾಗಿ ಕೊಡುತ್ತಾರೆ ?ಅಷ್ಟಕ್ಕೂ ನಡೆದ ಘಟನೆ ಏನು ?ತಿಳಿಯೋಣ ಬನ್ನಿ..

ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಜೀವನದ ಹಾದಿಯನ್ನು ಕಂಡುಕೊಂಡು ನಂತರ ನಟರಾಗಿ ಸೂಪರ್ ಸ್ಟಾರ್ ಆಗಿ ಬೆಳೆದವರು ರಜಿನಿಕಾಂತ್. ಜೀವನದಲ್ಲಿ ಬೇಕಾದಷ್ಟು ಹಣ ನೋಡಿರುವ ರಜಿನಿಕಾಂತ್ ಅದರ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ.

ಒಂದು ದಿನ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್ ದೇವಸ್ಥಾನಕ್ಕೆ ಹೋಗೋಣ ಎಂದು ತಮ್ಮ ಸ್ನೇಹಿತರ ಬಳಿ ಹೇಳಿದರು , ಆದರೆ ನೀವು ದೇವಸ್ಥಾನಕ್ಕೆ ಹೋದರೆ ನಿಮ್ಮನ್ನು ನೋಡಲು ತುಂಬಾ ಜನ ಸೇರುತ್ತಾರೆ ಹಾಗಾಗಿ ಕಷ್ಟ ಎಂದರೂ ಸ್ನೇಹಿತರು.

ಆಗ ಒಂದು ಪ್ಲಾನ್ ಮಾಡಿದ ರಜನಿ ಹಳೇ , ಶರ್ಟ್ ಹಳೆ ಪಂಚೆ ಹಾಗೂ ಒಂದು ಟವಲ್ ಹಾಕಿಕೊಂಡು ಯಾರಿಗೂ ಗುರುತು ಸಿಗದಂತೆ ರೆಡಿಯಾಗಿ ದೇವಸ್ಥಾನಕ್ಕೆ ಹೋದರು.

ರಜನೀಕಾಂತ್ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಅವರ ವೇಷ ಭೂಷಣ ನೋಡಿ ಭಿಕ್ಷುಕ ಇರಬಹುದು ಎಂದು ಭಾವಿಸಿದ ಒಬ್ಬ ಮಹಿಳೆ ರಜನಿಕಾಂತ್ ಗೆ 10 ರೂಪಾಯಿ ಭಿಕ್ಷೆ ಕೊಟ್ಟರು , ಆಗ ಏನು ಮಾತನಾಡದ ರಜಿನಿ ವಿನಮ್ರವಾಗಿ ಆ ಮಹಿಳೆ ಕೊಟ್ಟ 10 ರೂಪಾಯಿ ತೆಗೆದುಕೊಂಡು ಮುಂದೆ ಸಾಗಿದರೂ
ಆದರೆ ನಂತರ ಹುಂಡಿಯಲ್ಲಿ ರಜನಿಕಾಂತ್ ಹಾಕುತ್ತಿದ್ದ ಹಣದ ಮೊತ್ತ ನೋಡಿ ಶಾಕ್ ಆದರು ಆ ಮಹಿಳೆ.
ಇದರ ಮಧ್ಯೆ ರಜನಿಕಾಂತ್ ಅವರನ್ನು ಗುರುತುಹಿಡಿದ ಅಲ್ಲಿನ ಜನ ಆ ಮಹಿಳೆಗೆ ಬೈದು ಅವರು ಭಿಕ್ಷುಕರಲ್ಲ ರಜನಿಕಾಂತ್ ಎಂದು ಹೇಳಿದರು.

ರಜನಿಕಾಂತ್ ಕಾರ್ ಹತ್ತುತ್ತಿದ್ದ ಅಲ್ಲಿಗೆ ಓಡಿ ಹೋದ ಆ ಮಹಿಳೆ ಅವರ ಬಳಿ ಕ್ಷಮೆ ಕೇಳಿ ತಿಳಿಯದೆ ತಪ್ಪು ಮಾಡಿದೆ , ನನ್ನ ಹಣ ಬೇಕಾದರೆ ವಾಪಸ್ ಕೊಡಿ ಎಂದು ಕೇಳಿದರುಆದರೆ ರಜನಿ ಮಾತ್ರ ಆಕೆಯನ್ನು ಸಮಾಧಾನ ಮಾಡಿ ಇದರಲ್ಲಿ ನಿಮ್ಮ ತಪ್ಪಿಲ್ಲ ನಾನು ಸೂಪರ್ ಸ್ಟಾರ್ ಅಲ್ಲ ಸಾಮಾನ್ಯ ವ್ಯಕ್ತಿ ಎಂದು ನಿಮ್ಮ ಮೂಲಕ ದೇವರು ನನಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ವಾಪಾಸ್ ಹೋದ ರಜನಿ ಕಾಂತ್ ಮಹಿಳೆ ಕೊಟ್ಟ 10 ರೂಪಾಯಿಯನ್ನು ಸೇರಿಸಿ 10 ಲಕ್ಷ ರೂಪಾಯಿಯನ್ನು ಒಂದು ಅನಾಥಾಶ್ರಮಕ್ಕೆ ಕೊಟ್ಟರೂ ಅಷ್ಟೇ ಅಲ್ಲದೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಅನಾಥಾಶ್ರಮಗಳಿಗೆ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದೇಣಿಗೆಯಾಗಿ ಕೊಟ್ಟರು.

ಆ ಮಹಿಳೆ ತನ್ನನ್ನು ಭಿಕ್ಷುಕ ಎಂದು ಭಾವಿಸಿದರೂ ಕೋಪ ಮಾಡಿಕೊಳ್ಳದೆ ಅದರಲ್ಲಿ ಒಳ್ಳೆಯ ಅರ್ಥ ಹುಡುಕಿದ ರಜನಿಕಾಂತ್ ಅವರು ಒಳ್ಳೆಯ ಭಾವನೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಧನ್ಯವಾದಗಳು.

Leave A Reply

Your email address will not be published.