ಬಾಡಿಗೆ ಮನೆ ಗೃಹ ಪ್ರವೇಶ ಮಾಡುವಾಗ ಪಾಲಿಸಬೇಕಾದ ಮಾಹಿತಿ!

Written by Anand raj

Published on:

ಸಾಮಾನ್ಯವಾಗಿ ಹೊಸ ಮನೆ ಕಟ್ಟಿ ಗೃಹ ಪ್ರವೇಶ ಮಾಡುವವರು ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಅಥವಾ ಮನೆಯ ಮಗನ ಜಾತಕ ತೋರಿಸಿ ಸಮಯ ಮತ್ತು ದಿನವನ್ನು ನಿಗಧಿ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಬಾಡಿಗೆ ಮನೆ ಬದಲಾಯಿಸಬೇಕು ಅಂತ ಅಂದುಕೊಂಡರೆ ಅವರು ಹಾಲು ಕಾಯಿಸಿ ಪೂಜೆ ಮಾಡಿ ಆ ಮನೆಗೆ ಹೋಗುತ್ತಾರೆ. ಸ್ವಂತ ಮನೆ, ಹೊಸ ಮನೆ, ಅಥವಾ ಬಾಡಿಗೆ ಮನೆಗೆ ಹೋಗುವ ಈ ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಬೇಕು.

ಮೊದಲನೇದಾಗಿ ಹೊಸಮನೆ ಕಟ್ಟಿರುವವರು ಮೊದಲು ಹಸುವನ್ನು ಮನೆಯೊಳಗೆ ಪ್ರವೇಶ ಮಾಡಿಸಿ ನಂತರ ಅವರು ಮಂಗಳಕರವಾದ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ ನಂತರ ಹಾಲು ಹುಕ್ಕಿಸುತ್ತಾರೆ. ಇನ್ನೂ ಬಾಡಿಗೆ ಮನೆಗೆ ಹೋಗುವ ಬ್ರಾಹ್ಮೀ ಮುಹೂರ್ತದಲ್ಲಿ ಹಾಲು ಉಕ್ಕಿಸಿದರೆ ಬಹಳ ಶ್ರೇಷ್ಠ.

ನೀವು ನೆಂಟರು, ಸ್ನೇಹಿತರು ಮತ್ತು ಸಂಬಂಧಿಕರನ್ನು ಕರೆಯುವುದಕ್ಕೆ ಮತ್ತು ಅವರಿಗೆ ಉಪಚಾರ ಮಾಡುವುದಕ್ಕೆ ಬೇರೆ ಸಮಯವನ್ನು ನಿಗದಿ ಮಾಡಿಕೊಳ್ಳಿ. ಆದರೆ ಪೂಜೆ ಮಾಡಲು ಮತ್ತು ಹಾಲು ಉಕ್ಕಿಸಲು ಮಾತ್ರ ಬ್ರಾಹ್ಮಿ ಮುಹೂರ್ತವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಒಂದು ಸಮಯದಲ್ಲಿ ಮನೆಯ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರನ್ನು ಮಾತ್ರ ಕರೆದು ಪೂಜೆ ಮಾಡಿ ಗೃಹಪ್ರವೇಶ ಮಾಡಿ.

ಇನ್ನೂ ಗೃಹಪ್ರವೇಶ ಮಾಡಲು ಸೂಕ್ತವಾದ ವಾರ ಯಾವುದು ಎಂಬುದನ್ನು ನೋಡುವುದಾದರೆ. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಭಾನುವಾರ ಈ ವಾರಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗ್ಗೆ 4:30 ಯಿಂದ 5:40 ರವರೆಗೆ ಈ ಒಂದು ಸಮಯದಲ್ಲಿ ಹಾಲು ಉಕ್ಕಿಸಿ ಪೂಜೆ ಮಾಡಿದರೆ ತುಂಬಾನೇ ಶ್ರೇಷ್ಠವಾಗಿರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

Related Post

Leave a Comment