ಗಣೇಶ ಚತುರ್ಥಿ ದಿನ ಈ ನಿಯಮ ಪಾಲಿಸಿದರೆ ವರ್ಷಪೂರ್ತಿ ಗುರುಬಲ ಈ ತಪ್ಪುಗಳನ್ನು ಅರಿಯದೆ ಮಾಡಬೇಡಿ!

Written by Anand raj

Published on:

ಈ ಬಾರಿ ವಿನಾಯಕ ಚತುರ್ಥಿ ಸೆಪ್ಟೆಂಬರ್ 18 ಕ್ಕೆ ಬಂದಿದೆಯಾ ಅಥವಾ 19ಕ್ಕೆ ಬಂದಿದೆಯಾ ಎನ್ನುವ ಗೊಂದಲ ಎಲ್ಲರಿಗೂ ಇದ್ದೆ ಇರುತ್ತದೆ. ಇದಕ್ಕೆ ಕಾರಣ ಏನು ಎಂದರೆ ಸೆಪ್ಟೆಂಬರ್ 18ನೇ ತಾರೀಕು ಸೋಮವಾರ ಮಧ್ಯಾಹ್ನ 12:41 ನಿಮಿಷಕ್ಕೆ ಚೌತಿ ತಿಥಿ ಆರಂಭವಾಗುತ್ತಿದೆ. ಸೆಪ್ಟೆಂಬರ್ 19ನೇ ತಾರೀಕು ಮಂಗಳವಾರ ಬೆಳಗಿನ ಸಮಯದಲ್ಲಿ ಕೂಡ ಚೌತಿ ತಿಥಿ 1:43 ನಿಮಿಷದವರೆಗೂ ಇರುತ್ತದೆ. ಆದ್ದರಿಂದ ಸೆಪ್ಟೆಂಬರ್ 19ನೇ ತಾರೀಕು ಹಬ್ಬವನ್ನು ಆಚರಿಸಬೇಕಾ ಎಂಬ ಗೊಂದಲ ಎಲ್ಲರಲ್ಲೂ ಇದೆ.

ಸೆಪ್ಟೆಂಬರ್ 18ನೇ ತಾರೀಕು ಸೋಮವಾರ ದಿನವೇ ವಿನಾಯಕ ಚೌತಿ ಅಥವಾ ಗಣೇಶ ಚತುರ್ಥಿಯನ್ನು ಆಚರಿಸಬೇಕು. ಇನ್ನು ಗಣೇಶನ ಹಬ್ಬದಲ್ಲಿ ಚೌತಿ ತಿಥಿಯು ಮಧ್ಯಾಹ್ನನದ ಸಮಯದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ. ಯಾವಗ ಮಧ್ಯಾಹ್ನ ಚೌತಿ ತಿಥಿ ಇರುತ್ತದೆಯೋ ಅವಾಗ ಗಣೇಶನ ಹಬ್ಬವನ್ನು ಆಚರಿಸಿರಿ ಎಂದು ನಿರ್ಣಯ ಸಿಂಧೂವಿನಲ್ಲಿ ವಿಶೇಷವಾಗಿ ತಿಳಿಸಿದ್ದಾರೆ. ಹಾಗೆಯೇ ಪ್ರಾಮಾಣಿಕ ಗ್ರಂಥಗಳು ಹಾಗು ಪುರಾಣಗಳು ವಿನಾಯಕ ಚೌತಿಗೆ ಚಂದ್ರೋದಯ ಎನ್ನುವುದು ಬಹಳ ಮುಖ್ಯ. ಅಂದರೆ ಆ ದಿನ ರಾತ್ರಿ ಚಂದ್ರನು ಆ ದಿನ ರಾತ್ರಿ ಇರಬೇಕು. ಚಂದ್ರೋದಯ ಇರುವ ದಿನವೇ ಚೌತಿ ತಿಥಿ ದಿನವೇ ಹಬ್ಬವನ್ನು ಮಾಡಿಕೊಳ್ಳಬೇಕು ಎಂದು ಶಾಸ್ತ್ರಗಳು ಪುರಾಣಗಳು ಹೇಳುತ್ತವೆ.

ಸೆಪ್ಟೆಂಬರ್ 18ನೇ ತಾರೀಕು ರಾತ್ರಿ ಸಮಯದಲ್ಲಿ ಚೌತಿ ತಿಥಿ ಇದೆ. ಆದ್ದರಿಂದ ಈ ಬಾರಿ ಸೋಮವಾರ ದಿನವೇ ಗಣೇಶನ ಹಬ್ಬವನ್ನು ಆಚರಿಸಬೇಕು.

ಯಾವ ಸಮಯದಲ್ಲಿ ಗಣೇಶನ ಪೂಜೆಯನ್ನು ಮಾಡಬೇಕು
ಸೋಮವಾರ ಇಡೀ ದಿನ ನೀವು ಪೂಜೆಯನ್ನು ಮಾಡಿಕೊಂಡರು ಸಹ ನಡೆಯುತ್ತದೆ. ಅದರಲ್ಲೂ ಮಧ್ಯಾಹ್ನ 12:41 ನಿಮಿಷದ ನಂತರ ನೀವು ವಿಶೇಷವಾಗಿ ಗಣೇಶನ ಪೂಜೆಯನ್ನು ಮಾಡಿಕೊಳ್ಳಬಹುದು. ಸೋಮವಾರ ಚೌತಿ ಬಂದಿರುವ ಕಾರಣ ಬಿಳಿ ವಸ್ತ್ರ ಧರಿಸಿ ಗಣೇಶನಿಗೆ ಪೂಜೆಯನ್ನು ಮಾಡಬೇಕು. ಹೀಗೆ ಮಾಡಿದರೆ ಚಂದ್ರನಿಗೆ ಅದಿಷ್ಟನಾ ದೇವತೆಯಾಗಿರುವ ಲಕ್ಷ್ಮಿ ದೇವಿ ಅನುಗ್ರಹದಿಂದ ವಿಶೇಷವಾದ ಧನ ಲಾಭ ಅನ್ನೋದು ಇಡೀ ವರ್ಷ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸ್ತ್ರೀಯರು ಆಗಿರಬಹುದು ಅಥವಾ ಪುರುಷರು ಆಗಿರಬಹುದು ತಪ್ಪದೆ ಸೋಮವಾರದ ದಿನ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಗಣೇಶನಿಗೆ ಪೂಜೆಯನ್ನು ಮಾಡಿಕೊಳ್ಳಬೇಕು.

ಇನ್ನು ಗಣೇಶನಿಗೆ ಕೆಂಪು ಬಣ್ಣದ ಪುಷ್ಪಗಳು ಎಂದರೆ ತುಂಬಾ ಇಷ್ಟ. ಅದರೆ ಗಣೇಶ ಚತುರ್ಥಿ ಸೋಮವಾರದ ದಿನ ಬಂದಿರುವುದರಿಂದ ಕೆಂಪು ಬಣ್ಣದ ಪುಷ್ಪಗಳ ಜೊತೆಗೆ ಬಿಳಿ ಬಣ್ಣದ ಪುಷ್ಪಗಳನ್ನು ಗಣೇಶನ ಪೂಜೆಗೆ ಬಳಸಿಕೊಳ್ಳಬೇಕು. ಹೀಗೆ ಮಾಡಿದರೆ ಗಣೇಶನ ಕೃಪೆ ಸಾದ ಕಾಲ ನಿಮ್ಮ ಜೊತೆ ಇರುತ್ತದೆ.

ಇನ್ನು ಗಣೇಶನಿಗೆ ಗರಿಕೆಯನ್ನು ಕಟ್ಟಿನ ರೂಪದಲ್ಲಿ ಗಣೇಶನಿಗೆ ಅರ್ಪಿಸಬೇಕು.

ಗರಿಕೆ ಗಂಟನ್ನು ಗಣೇಶನ ಪಾದದ ಮುಂದೆ ಇಟ್ಟು ನಮಸ್ಕಾರವನ್ನು ಮಾಡಿಕೊಳ್ಳಬೇಕು. ಆತನ ಮುಂದೆ ನಿಮ್ನ ಸಂಕಲ್ಪಗಳನ್ನು ಕೇಳಿಕೊಳ್ಳಬೇಕು.

ಇನ್ನು ಸೋಮವಾರ ಬಂದಿರುವುದರಿಂದ ಬಿಳಿ ಬಣ್ಣದ ನೈವೇದ್ಯವನ್ನು ಗಣೇಶನಿಗೆ ಅರ್ಪಿಸಿದರೆ ತುಂಬಾ ಒಳ್ಳೆಯದು. ಹಾಲು ಮತ್ತು ತುಪ್ಪ ಬೆರೆಸಿ ಮಾಡಿದ ನೈವೈದ್ಯವನ್ನು ಗಣೇಶನಿಗೆ ಅರ್ಪಿಸಬಹುದು.ವಿನಾಯಕ ಚೌತಿ ದಿನ ಈ ಎರಡು ಮಂತ್ರವನ್ನು ಪಟಿಸಿದರೆ ವರ್ಷ ಪೂರ್ತಿಯಾಗಿ ಗಣೇಶನ ಅನುಗ್ರಹ ಸದಾಕಾಲ ನಿಮ್ಮ ಜೊತೆ ಇರುತ್ತದೆ.ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸು ನಿಮಗೆ ಸಿಗುತ್ತದೆ. “ಗಂ ಶ್ರೀಪ್ರಸದಾಯ ನಮಃ “ಎನ್ನುವ ಮಂತ್ರವನ್ನು 108 ಅಥವಾ 21 ಬಾರಿ ಜಪ ಮಾಡಬೇಕು ಹಾಗು “ವಕ್ರತುಂಡಯಯೂಂ ” ಈ ಒಂದು ಮಂತ್ರವನ್ನು 108 ಅಥವಾ 21 ಬಾರಿ ಹೇಳಿಕೊಂಡರೆ ಇವರಿಗೆ ಯಾವುದೇ ರೀತಿಯಾದ ಕೆಲಸ ಕಾರ್ಯದಲ್ಲಿ ಆತಂಕಗಳು ಬರುವುದಿಲ್ಲ. ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಏಳಿಗೆ ಅನ್ನೋದನ್ನು ಗಣೇಶ ರೂಪಿಸಿಕೊಡುತ್ತಾನೇ.

Related Post

Leave a Comment