ಹೀಗೆ ಮಾಡಿದರೆ ಜನ್ಮದಲ್ಲಿ ಇಲಿಗಳು ನಿಮ್ಮನೆ ಕಡೆ ಬರುವುದಿಲ್ಲ!

Written by Anand raj

Published on:

ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ ನಾನು ಒಬ್ಬ ಸಿಪಾಯಿ ಎಂಬ ಒಬ್ಬ ಗಂಡನ ಸಂತೋಷಕರ ಅನುಭವವನ್ನು ಹಾಡಿನ ಮೂಲಕ ವ್ಯಕ್ತವಾಗುವುದನ್ನು ನಾವೆಲ್ಲಾ ಕೇಳಿದ್ದೇವೆ. ಅದೇ ಇಲಿ ಯೊಂದು ಮನೆಯಲ್ಲಿದ್ದರೆ, ಮನೆಯಲ್ಲಿ ಇದಕ್ಕೆ ಉಲ್ಟಾನೇ ಎಲ್ಲಾ ಆಗುವುದು. ಯಾಕೆಂದರೆ ಸದ್ದಿಲ್ಲದೆ ತನ್ನ ಕೆಲಸ ತಾನು ಮಾಡಿ ಹೆಂಡತಿಗೂ ಗಂಡನಿಗೂ ಜಗಳ ತಂದಿಡುವಲ್ಲಿ ಇಲಿ ಗೆದ್ದು ಬೀಗುತ್ತದೆ.

ಎಲ್ಲರ ಮನೆಯಲ್ಲೂ ಇಲಿಗಳು ಇರುವುದಿಲ್ಲ. ಆದರೆ ಇದ್ದವರ ಮನೆಯಲ್ಲಿ ತೊಂದರೆ ತಪ್ಪಿದ್ದಲ್ಲ. ಅಪ್ಪಿತಪ್ಪಿ ಇಲಿಗಳಿಗೆ ಏನಾದರೂ ನೋಟಿನ ಕಂತೆ ಸಿಕ್ಕರೆ, ಕೈಗೆ ಚೊಂಬೇ!! ಹಾಗಾಗಿ ನೀವು ಮನೆಯಲ್ಲಿ ಜಿರಳೆ ಹಾಗೂ ಪಲ್ಲಿಗಳಿಂದ ಹೇಗೆ ಮುಕ್ತಿ ಪಡೆದುಕೊಳ್ಳುತ್ತೀರಿ, ಅದೇ ರೀತಿ ಇಲಿಗಳ ಕಾಟದಿಂದ ಸಹ ಪಾರಾಗುವುದು ಅನಿವಾರ್ಯವಾಗಿದೆ. ಈ ಲೇಖನದಲ್ಲಿ ಈ ವಿಚಾರಕ್ಕೆ ಅನುಕೂಲ ವಾಗುವಂತೆ ಕೆಲವು ಟಿಪ್ಸ್‌ಗಳನ್ನು ಕೊಡಲಾಗಿದೆ.

ಪೆಪ್ಪರ್ಮಿಂಟ್ ಆಯಿಲ್ ಅಥವಾ ಪುದೀನಾ ಎಣ್ಣೆ

ಸಾಮಾನ್ಯವಾಗಿ ತಿಳಿದವರು ಹೇಳುವ ಪ್ರಕಾರ ಇಲಿಗಳಿಗೆ ಪೆಪ್ಪರ್ಮಿಂಟ್ ಆಯಿಲ್ ವಾಸನೆ ಅಷ್ಟಾಗಿ ಆಗಿಬರುವುದಿಲ್ಲ. ಹೀಗಾಗಿ ನೀವು ಅದನ್ನು ತಂದು ಒಂದು ಹತ್ತಿಯ ಉಂಡೆಗಳನ್ನು ಅದರಲ್ಲಿ ಅದ್ದಿಕೊಂಡು, ಸಾಧಾರಣವಾಗಿ ನೀವು ನಿಮ್ಮ ಮನೆಯಲ್ಲಿ ಇಲಿ ಓಡಾಡುವ ಜಾಗ ಎಲ್ಲಿ ನೋಡಿರುತ್ತೀರಿ, ಅಂತಹ ಜಾಗಗಳಲ್ಲಿ ಇರಿಸಿ.

ಹೀಗೆ ಎರಡು ಮೂರು ದಿನಗಳಿಗೆ ಒಮ್ಮೆ ಮಾಡುವುದರಿಂದ ನಿಮ್ಮ ಮನೆ ಇಲಿಗಳಿಂದ ಮುಕ್ತ ವಾಗುತ್ತದೆ ಮತ್ತು ಮನೆಯಲ್ಲಿನ ದುರ್ವಾಸನೆ ದೂರವಾಗಿ ತಾಜಾ ಸುವಾಸನೆ ಎಲ್ಲಾ ಕಡೆ ಬರಲು ಪ್ರಾರಂಭವಾಗಿ ನಿಮ್ಮ ಮನೆ ನಿಮಗೆ ಇಷ್ಟವಾಗುತ್ತದೆ.

ಈರುಳ್ಳಿ ಅಥವಾ ಉಳ್ಳಾಗಡ್ಡಿ

ಈರುಳ್ಳಿಯ ವಾಸನೆ ಸಹ ಇಲಿಗಳಿಗೆ ಇಷ್ಟವಾಗುವುದಿಲ್ಲ. ಆದರೆ ನೀವು ಇಲಿಗಳನ್ನು ನಿಮ್ಮ ಮನೆ ಯಿಂದ ದೂರ ಮಾಡಲು ತಾಜಾ ಆದ ಈರುಳ್ಳಿಯನ್ನು ಕತ್ತರಿಸಿ ಇಲಿಗಳು ಓಡಾಡುವ ಜಾಗದಲ್ಲಿ ಇರಿಸಿ.ಆದರೆ ನೆನಪಿಡಿ, ನೀವು ಒಂದು ವೇಳೆ ನಿಮ್ಮ ಮನೆಯಲ್ಲಿ ಬೇರೆ ಸಾಕುಪ್ರಾಣಿಗಳನ್ನು ಏನಾದರೂ ಸಾಕಿದ್ದರೆ, ಅವುಗಳಿಗೆ ಕೊಳೆತು ಹೋದ ಈರುಳ್ಳಿ ತುಂಬಾ ಡೇಂಜರ್. ಹೀಗಾಗಿ ಎರಡು ದಿನಕ್ಕೊಮ್ಮೆ ಸಾಧ್ಯವಾದಷ್ಟು ತಾಜಾ ಈರುಳ್ಳಿ ಕತ್ತರಿಸಿ, ಇರಿಸಿ ಇಲಿಗಳನ್ನು ಮನೆಯಿಂದ ದೂರ ಮಾಡಿ.

ಕೋಕೋ ಪೌಡರ್ ಜೊತೆ ಪ್ಲಾಸ್ಟರ್ ಆಫ್ ಪ್ಯಾರಿಸ್

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಕೋಕೋ ಪೌಡರ್ ಮಿಶ್ರಣ ಮಾಡಿ. ಒಂದು ವೇಳೆ ಕೋಕೋ ಪೌಡರ್ ಸಿಗಲಿಲ್ಲ ಎಂದರೆ ನೀವು ಚಾಕ್ಲೆಟ್ ಪೌಡರನ್ನು ಸಹ ಬಳಸಬಹುದು.ಈ ಮಿಶ್ರಣವನ್ನು ಇಲಿಗಳು ಓಡಾಡುವ ಜಾಗದಲ್ಲಿ ಹಾಕಿ. ಇಲಿಗಳು ಇದನ್ನು ತಿಂದ ನಂತರ ತಾವಾಗಿಯೇ ಮನೆಯಿಂದ ಹೊರಗೆ ನೀರು ಕುಡಿಯಲು ಎಂದು ಓಡಿ ಹೋಗುತ್ತವೆ. ನೀರು ಸಿಗದೇ ಹೋದರೆ ಸತ್ತು ಹೋಗುತ್ತವೆ.

ಹಾಟ್ ಪೇಪರ್ ಪ್ಲೇಕ್ಸ್

ನಿಮ್ಮ ಮನೆಯಲ್ಲಿ ಅತ್ಯಂತ ಕಾರವಾದ ಒಣಮೆಣಸಿನಕಾಯಿ ಇದ್ದರೆ ಅದನ್ನು ಸಹ ಇಲಿಗಳನ್ನು ಓಡಿಸುವ ಪ್ರಯೋಗದಲ್ಲಿ ಬಳಸಿಕೊಳ್ಳಬಹುದು.ಒಂದಷ್ಟು ಹೆಚ್ಚು ಘಾಟು ಇರುವ ಒಣ ಮೆಣಸಿಕಾಯಿ ತೆಗೆದುಕೊಂಡು ಅವುಗಳನ್ನು ಪುಡಿ ಮಾಡಿ ಅಥವಾ ಮುರಿದು ಇಲಿಗಳು ಓಡಾಡುವ ಜಾಗದಲ್ಲಿ ಹಾಕಿ. ಮೆಣಸಿನಕಾಯಿಯ ಗಾಢವಾದ ವಾಸನೆಗೆ ಇಲಿಗಳು ದೂರವಾಗುತ್ತವೆ.

ಲವಂಗ ಅಥವ ಲವಂಗದ ಎಣ್ಣೆ

ಲವಂಗ ಒಂದು ಮಸಾಲೆ ಪದಾರ್ಥ. ಅದು ಸಹ ಒಂದು ರೀತಿಯ ಗಾಢವಾದ ವಾಸನೆ ಬೀರುತ್ತದೆ. ಹತ್ತ ರಿಂದ ಹನ್ನೆರಡು ಲವಂಗಗಳನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಇಲಿಗಳು ಓಡಾಡುವ ಜಾಗದಲ್ಲಿ ಹಾಕಿ. ಲವಂಗಗಳ ವಾಸನೆಯಿಂದ ಮತ್ತೆ ಇಲಿಗಳು ಆ ಜಾಗದಲ್ಲಿ ಬರುವುದಿಲ್ಲ.

ಬೆಳ್ಳುಳ್ಳಿ ಪ್ರಯೋಗ

ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಮಿಶ್ರಣ ಮಾಡಿ ಹಾಕಿ. ನೀವು ಬೇಕೆಂದರೆ ಬೆಳ್ಳುಳ್ಳಿ ಚೂರುಗಳನ್ನು ನಿಮ್ಮ ಮನೆಯಲ್ಲಿ ಇಲಿಗಳು ಓಡಾಡುವ ಜಾಗದಲ್ಲಿ ಹಾಕಬಹುದು.ಬೆಳ್ಳುಳ್ಳಿಯ ಗಾಢವಾದ ವಾಸನೆ ಸಹ ಇಲಿಗಳಿಗೆ ಇಷ್ಟವಾಗುವುದಿಲ್ಲ. ಸುಲಭವಾಗಿ ಇದರಿಂದ ನಿಮ್ಮ ಮನೆಯಲ್ಲಿ ಇಲಿಗಳು ದೂರವಾಗುತ್ತವೆ.

ಅಮ್ಮೋನಿಯ

ಇಲಿಗಳು ತುಂಬಾ ಗಾಢವಾದ ವಾಸನೆಯನ್ನು ಸಹಜವಾಗಿ ಇಷ್ಟಪಡುವುದಿಲ್ಲ. ಹೀಗಾಗಿ ಅಮೋನಿಯಾ ವಾಸನೆ ಕೂಡ ಇಲಿಗಳಿಗೆ ಆಗುವುದಿಲ್ಲ.ನೀವು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಅಮ್ಮೋನಿಯ ಹಾಕಿ ಇಲಿಗಳು ಓಡಾಡುವ ಜಾಗ ದಲ್ಲಿ ಇರಿಸಿ. ಇದರಿಂದ ಸುಲಭವಾಗಿ ಇಲಿಗಳು ದೂರವಾಗುತ್ತವೆ.

Related Post

Leave a Comment