ಹಿರಿಯರ ಫೋಟೋ ಈ ದಿಕ್ಕಿನಲ್ಲಿದ್ದರೆ ಮೇಲಿಂದ ಮೇಲೆ ಕಷ್ಟಗಳು ಎದುರಾಗುವುದು!

Written by Anand raj

Published on:

ನಾವು ಮನೆಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುಗಳನ್ನು ಕೂಡ ಎಲ್ಲಿ ಜಾಗ ಇರುತ್ತದೆ ಎಲ್ಲಿ ಚೆನ್ನಾಗಿ ಕಾಣುತ್ತದೆ ಅಲ್ಲಿ ಇಡುತ್ತೇವೆ ವಾಸ್ತುಶಾಸ್ತ್ರದ ಪ್ರಕಾರವಾಗಿ ಇಡುವುದಿಲ್ಲ ಹಾಗಾಗಿ ಅವುಗಳಿಂದ ಅನೇಕ ರೀತಿಯ ಸಮಸ್ಯೆಗಳು ಕೂಡ ನಮಗೆ ಎದುರಾಗುತ್ತವೆ ನಕಾರಾತ್ಮಕ ಪ್ರಭಾವವನ್ನು ಆ ವಸ್ತುಗಳು ಬೀರುತ್ತವೆ ಹಾಗಾಗಿ ನಾವು ಉಪಯೋಗಿಸುವ ಪ್ರತಿಯೊಂದು ವಸ್ತುಗಳನ್ನು ಕೂಡ ವಾಸ್ತು ಪ್ರಕಾರವಾಗಿ ಮನೆಯಲ್ಲಿ ಇಟ್ಟುಕೊಳ್ಳುವುದು ಬಹಳಷ್ಟು ಒಳ್ಳೆಯದು ಇದರಲ್ಲಿ ವ್ಯಕ್ತಿ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರುವ ಗಡಿಯಾರ ಹಾಗೂ ಫೋಟೋಗಳನ್ನು ಸರಿಯಾದ ದಿಕ್ಕಿನಲ್ಲಿ ವಾಸ್ತು ಪ್ರಕಾರವಾಗಿ ಇರುವುದು ಬಹಳಷ್ಟು ಉತ್ತಮ ನಾವು ಗೊತ್ತು ಗೊತ್ತಿಲ್ಲದೆ ಅವುಗಳನ್ನು ಎಲ್ಲೆಂದರಲ್ಲಿ ಇಡುತ್ತೇವೆ ಇದರಿಂದ ಅನೇಕ ರೀತಿಯ ಸಮಸ್ಯೆಗಳು ಕೂಡ ಮನೆಯಲ್ಲಿ ಎದುರಾಗುತ್ತವೆ ಇದಕ್ಕೆ ಕಾರಣ ಏನು ಎಂದು ಕೂಡ ನಾವು ತಿಳಿದುಕೊಳ್ಳುವುದಿಲ್ಲ ಹಾಗಾಗಿ ಗೆಳೆಯರೇ ಗಡಿಯಾರ ಹಾಗೂ ಫೋಟೋವನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಸಮಸ್ಯೆಗಳು ಎದುರಾಗುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ.

ಕೆಲವೊಬ್ಬರು ಗಡಿಯಾರವನ್ನು ಮನೆಯ ಮುಖ್ಯದ್ವಾರದ ಬಾಗಿಲಿನ ಬಳಿ ಹಾಕಿರುತ್ತಾರೆ ಗಡಿಯಾರ ಕಾಲ ಸ್ವರೂಪ ಪರಮಾತ್ಮ ಆಗಿರುವುದರಿಂದ ಅದರ ಕೆಳಗಡೆ ನಡೆಯುವುದರಿಂದ ಮನೆಯ ಯಜಮಾನ ಮತ್ತು ಯಜಮಾನಿಗೆ ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ ಹಾಗೂ ಮನೆಯಲ್ಲಿ ಅನೇಕ ಕಲಹಗಳು ಉಂಟಾಗುತ್ತವೆ ನೆಮ್ಮದಿ ಇರುವುದಿಲ್ಲ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ ಹಾಗಾಗಿ ಸಮಯ ಸೂಚಿಸುವ ಗಡಿಯಾರವನ್ನು ಮನೆಯ ಮುಖ್ಯ ದ್ವಾರದ ಮೇಲೆ ಹಾಕಬಾರದು ಹಾಗೂ ಗಡಿಯಾರವನ್ನು ಮನೆಯ ಒಳಗಡೆಯೇ ಹಾಕುವುದು ಬಹಳಷ್ಟು ಒಳ್ಳೆಯದು ಹಾಗೂ ವಾಸ್ತು ಪ್ರಕಾರವಾಗಿ ಮನೆಯಲ್ಲಿ ನಿಂತುಹೋದ ಗಡಿಯಾರ ಹಾಗೂ ಒಡೆದುಹೋದ ಗಡಿಯಾರವನ್ನು ಎಂದಿಗೂ ಹಾಕಬಾರದು. ವ್ಯಕ್ತಿ ಜೀವಂತವಾಗಿರುವಾಗ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಇಡಬಾರದು ದಕ್ಷಿಣ ದಿಕ್ಕು ಯಮ ದಿಕ್ಕು ಆಗಿರುವುದರಿಂದ ಬದುಕಿರುವ ವ್ಯಕ್ತಿಯ ಫೋಟೋವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಹಾಕಬಾರದು ಆತನ ಆಯಸ್ಸು ಕಡಿಮೆಯಾಗುತ್ತದೆ ಹಾಗಾಗಿ ಮರಣ

ಹೊಂದಿದ ಪಿತೃಗಳು ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಹಾಕಬಹುದು. ಶಿವನಿಗೆ ಹುಟ್ಟು-ಸಾವು ಇಲ್ಲದೇ ಇರುವುದರಿಂದ ಶಿವನ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಪೂಜಿಸುವುದು ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಮನೆಯ ಮುಖ್ಯದ್ವಾರದ ಮೇಲೆ ಒಣಗಿದ ಹೂವನ್ನು ಎಂದಿಗೂ ಇಡಬಾರದು ಇದರಿಂದಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮಗೆ ದೊರೆಯುವುದಿಲ್ಲ ಎಷ್ಟೇ ಹಣ ಬಂದರೂ ಕೂಡ ವಿನಾಕಾರಣ ಖರ್ಚಾಗುತ್ತದೆ ಹಾಗಾಗಿ ಹೂ ಒಣಗಿ ಹೋಗಿದ್ದರೆ ಸಿಂಹ ದಾರದಿಂದ ಬೇಗನೆ ತೆಗೆಯಬೇಕು. ಗೆಳೆಯರೇ ಈ ರೀತಿಯಾಗಿ ಗಡಿಯಾರ ಹಾಗೂ ಫೋಟೋ ಹಾಕುವಾಗ ಕೆಲವೊಂದು ತಪ್ಪುಗಳನ್ನು ಮಾಡದೇ ವಾಸ್ತು ಪ್ರಕಾರವಾಗಿ ಮನೆಯಲ್ಲಿ ಗಡಿಯಾರ ಹಾಗೂ ಫೋಟೋವನ್ನು ಹಾಕುವುದರಿಂದ ಬಹಳಷ್ಟು ಒಳ್ಳೆಯದು ಉತ್ತಮ ಫಲಿತಾಂಶ ದೊರೆಯುತ್ತದೆ ಸಕಾರಾತ್ಮಕ ವಾತಾವರಣ ಇರುತ್ತದೆ ಮನೆಯಲ್ಲಿ ಸಿರಿ ಸಂಪತ್ತು ಐಶ್ವರ್ಯ ಆರೋಗ್ಯ ಎಲ್ಲವೂ ಲಭಿಸುತ್ತದೆ ಸರಿಯಾದ ಸಮಯಕ್ಕೆ ನಿಮ್ಮ ಕೆಲಸ ಕಾರ್ಯಗಳು ನೆರವೇರುತ್ತವೆ.

Related Post

Leave a Comment