ನಾಲಿಗೆ ಮೇಲೆ ಮಚ್ಚೆ ಎಷ್ಟು ಅದೃಷ್ಟ!

Written by Anand raj

Published on:

ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ ಕೋಟಿಗೆ ಒಬ್ಬರಿಗೆ ಇರುವುದು ಕೂಡಾ ಅಪರೂಪ ,ಈ ರೀತಿ ಮಚ್ಚೆಗಳನ್ನು ಪಡೆದವರು ಪೂರ್ವ ಜನ್ಮದ ಸುಕೃತವೆಂದು  ಹೇಳಲಾಗುತ್ತದೆ .ಅಥವಾ ಕೆಲವರು ತಮ್ಮ ಹಿಂದಿನ ಜನ್ಮದಲ್ಲಿ ಮಹಾನ್ ಪುಣ್ಯಾತ್ಮರಾಗಿದ್ದವರು ಮುಂದಿನ ಜನ್ಮದಲ್ಲಿ ಅವರ ನಾಲಿಗೆಯಲ್ಲಿ ಮಚ್ಚೆಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಮತ್ತು ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಹೇಳುವುದೇನೆಂದರೆ ಇವರು ಕೆಲವು ನಿಯಮಗಳನ್ನು ಪಾಲಿಸಬೇಕು.ಈ ವಿಷಯ ಅವರಿಗೆ ಗೊತ್ತಿಲ್ಲದ ಕಾರಣ ಅವರು ನಿಯಮಗಳನ್ನು ಅನುಸರಿಸುವುದಿಲ್ಲ. ನಿಯಮಗಳನ್ನು ಪಾಲಿಸಿ ಸರಿಯಾದ ದಾರಿಯಲ್ಲಿ ನಡೆದರೆ ಅವರಿಗೂ ಹಾಗೂ ಸುತ್ತಮುತ್ತಲಿನ ಜನರಿಗೂ ಅನುಕೂಲವಾಗುತ್ತದೆ.

ಅವರು ಏನನ್ನಾದರೂ ನುಡಿದರೆ ಒಂದು ದಿನ ತಪದ್ದೇ ಜರಗುತ್ತದೆ. ಅವರು ಹೇಳುವ ಪ್ರತಿಯೊಂದು ಮಾತುಗಳು ಕಾರ್ಯರೂಪಕ್ಕೆ ಬರಬೇಕು. ಆದುದರಿಂದ ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ನಾವು ಜಾಗರೂಕರಾಗಿರಬೇಕು ಅಥವಾ ಅವರ ಬಾಯಲ್ಲಿ ಬಾಯಿ ಹಾಕದೇ ಇರುವುದು ಉತ್ತಮ. ಏಕೆಂದರೆ ತಿಳಿದೋ ತಿಳಿಯದೆಯೂ ವಿವೇಚನೆಯಿಲ್ಲದೆ ಏನು ಹೇಳಬೇಕು,ಏನು ಹೇಳಬಾರದು ಎಂದು ತಿಳಿದಿರುವುದಿಲ್ಲ . ಒಳ್ಳೆಯ ನಡತೆಯಿಂದ ವರ್ತಿಸುವವರು ಬಹಳ ಕಡಿಮೆ. ಹಾಗಾಗಿ ಅಂತಹವರಿಂದ ದೂರವಿರುವುದು ಉತ್ತಮ.

ಮತ್ತು ನಾಲಿಗೆಯ ಮೇಲೆ ಮಚ್ಚೆ ಇರುವವರು ದುಷ್ಟರಿಂದ ದೂರವಿರಬೇಕು. ಒಳ್ಳೆಯದನ್ನು ಯೋಚಿಸಿ ಮಾತನಾಡಿದರೆ ಒಳ್ಳೆಯದಾಗುತ್ತದೆ, ಆದರೆ ನಿಮ್ಮ ಮನಸ್ಸಿಗೆ ಬಂದಂತೆ ಮಾತನಾಡಿದರೆ ಕೆಟ್ಟದು ಸಂಭವಿಸುತ್ತದೆ. ಯಾಕೆಂದರೆ ಅವರಿಗೆ ಗೊತ್ತಿಲ್ಲದಿರಬಹುದು.. ನಾಲಿಗೆಯ ಮೇಲೆ ಮಚ್ಚೆಗಳಿವೆ, ಈ ಮಾತುಗಳನ್ನು ಹೇಳಬೇಕೋ ಬೇಡವೋ ಎಂದು . ನಿಮ್ಮ ನಾಲಗೆಯ ಮೇಲೆಯು ಮಚ್ಚೆ ಇದ್ದರೆ ನೀವೂ ಕೂಡ ಮಾತನಾಡುವಾಗ ಹಿಂದೆ ಮುಂದೆ ನೋಡಿ ಮಾತನಾಡಬೇಕು ಎಂದು ಮರೆಯದಿರಿ .

Related Post

Leave a Comment