ವರ್ಷಕ್ಕೊಮ್ಮೆ ಒಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಾಲಯ ಈ ವರ್ಷ ಯಾವಾಗ ಬಾಗಿಲು ತೆಗೆಯುತ್ತದೆ!

ಈ ದೇವಾಲಯವನ್ನು ವರ್ಷದಲ್ಲಿ ವಾರಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ದೇವಾಲಯವು ಭಕ್ತರಿಗೆ ದರ್ಶನಕ್ಕೆ ತೆರೆದಿರುತ್ತದೆ. ಅತ್ಯಂತ ಹೆಚ್ಚು ಗುರುತಿಸಲ್ಪಟ್ಟ ಈ ದೇವಾಲಯಕ್ಕೆ ದೀಪಾವಳಿ ಸಮಯದಲ್ಲಿ ದೂರದೂರುಗಳಿಂದ ಅನೇಕ ಭಕ್ತರು ಬರುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ತಾಯಿ ಹಾಸನಾಂಬೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಈ ಬಾರಿ ನವೆಂಬರ್ 2ನೇ ತಾರೀಕು ಗುರುವಾರ ತೆರೆಯಲಾಗುತ್ತದೆ ಮತ್ತು ನವೆಂಬರ್ 15ನೇ ತಾರೀಕು ಬಾಗಿಲು ಮುಚ್ಚಲಾಗುತ್ತದೆ. ಅದರೆ ಭಕ್ತರಿಗೆ 12 ದಿನ ಮಾತ್ರ ದರ್ಶನ ಸಿಗುತ್ತದೆ. ಮೊದಲನೇ ದಿನ ಮತ್ತು ಕೊನೆಯ ದಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಈ ಅಮ್ಮನವರ ಹತ್ತಿರ ಏನೇ ಕೇಳಿಕೊಂಡರು ಅದು ವರ್ಷದೊಳಗೆ ನಿಮಗೆ ಉತ್ತರ ಸಿಗುತ್ತಾ ಹೋಗುತ್ತದೆ.

ಹಾಸನಾಂಬೆ ದೇವಾಲಯದ ಇತಿಹಾಸ:
ಪ್ರಸಿದ್ಧ ಹಾಸನಾಂಬೆ ದೇವಾಲಯವು ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಹಾಸನದಲ್ಲಿರುವ ದೇವಾಲಯವಾಗಿದೆ. ಈ ದೇವಾಲಯವು 12ನೇ ಶತಮಾನಕ್ಕೂ ಹಳೆಯ ದೇವಾಲಯವೆಂದು ಹೇಳಲಾಗುತ್ತದೆ. ಪಾಳೆಯಗಾರ ಕೃಷ್ಣಪ್ಪನಾಯಕ ಒಮ್ಮೆ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮಾರ್ಗ ಮಧ್ಯೆ ಮೊಲವೊಂದು ಅಡ್ಡ ಬಂದಿತು. ಇದನ್ನು ಕೃಷ್ಣಪ್ಪನಾಯಕ ಅಪಶಕುನವೆಂದು ಭಾವಿಸುತ್ತಾನೆ. ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ-ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದು ಹೇಳುತ್ತಾಳೆ. ಈ ಕಾರಣಕ್ಕಾಗಿ ಹಾಸನಾಂಬೆ ದೇವಾಲಯವನ್ನು ನಿರ್ಮಿಸಲಾಯಿತು.

ಈ ದೇವಾಲಯದಲ್ಲಿ ಆದಿಶಕ್ತಿಯನ್ನೇ ಹಾಸನಾಂಬೆ ಎಂದು ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಈ ದೇವಾಲಯದ ಬಾಗಿಲನ್ನು ತೆರೆದಾಗ ಇಲ್ಲಿ ಎರಡು ದಿನಗಳ ಕಾಲ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಂತರ ಮತ್ತೆ ಈ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ಹಾಸನಾಂಬೆ ದೇವಾಲಯದ ವಿಶೇಷತೆ:
ಈ ದೇವಾಲಯದಲ್ಲಿ ಭಕ್ತರು ತಮ್ಮ ಕೋರಿಕೆಯನ್ನು ಪತ್ರದಲ್ಲಿ ಬರೆದು ಅದನ್ನು ದೇವರಿಗೆ ಅರ್ಜಿಯ ರೂಪದಲ್ಲಿ ಸಲ್ಲಿಸುತ್ತಾರೆ. ಇಲ್ಲಿ ಪತ್ರದ ರೂಪದಲ್ಲಿ ಅರ್ಜಿ ಸಲ್ಲಿಸಿದ ನಂತರ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಈ ದೇವಾಲಯದಲ್ಲಿ ಅನೇಕ ಪವಾಡಗಳು ನಡೆಯುತ್ತವೆ. ದೇವಾಲಯದ ಬಾಗಿಲು ತೆರೆದಾಗ, ಇಲ್ಲಿ ದೀಪಗಳು ಬೆಳಗುತ್ತಿರುತ್ತದೆ. ಅದು ವರ್ಷವಿಡೀ ಬೆಳಗುತ್ತದೆ. ಮುಂದಿನ ವರ್ಷ ದೇವಾಲಯದ ಗರ್ಭ ಗುಡಿಯನ್ನು ತೆರೆದಾಗ ಹಿಂದಿನ ವರ್ಷ ಬೆಳಗಿದ ದೀಪ ಉರಿಯುತ್ತಲೇ ಇರುತ್ತದೆ. ಇದರೊಂದಿಗೆ ದೇವರಿಗೆ ಅರ್ಪಿಸಿರುವ ಹೂವುಗಳೂ ತಾಜಾವಾಗಿಯೇ ದೊರೆಯುತ್ತವೆ.

ಹಾಸನಾಂಬೆ ದೇವಾಲಯದ ಪೌರಾಣಿಕ ಹಿನ್ನೆಲೆ:
ಈ ದೇವಾಲಯದ ಬಗ್ಗೆ ಅಂಧಕಾಸುರನೆಂಬ ರಾಕ್ಷಸನಿದ್ದ ಎಂಬ ಐತಿಹ್ಯವಿದೆ. ಅವನು ಕಠೋರ ತಪಸ್ಸಿನ ನಂತರ ಬ್ರಹ್ಮನಿಂದ ಅದೃಶ್ಯನಾಗುವ ವರವನ್ನು ಪಡೆದುಕೊಂಡಿದ್ದನು. ವರದ ಹೆಮ್ಮೆಯಿಂದ ಅವನು ಬ್ರಹ್ಮಾಂಡಕ್ಕೆ ಚಿತ್ರಹಿಂಸೆಯನ್ನು ನೀಡಲು ಆರಂಭಿಸಿದ್ದನು. ಆ ರಾಕ್ಷಸನನ್ನು ಕೊನೆಗೊಳಿಸಲು, ಶಿವನು ಅವನನ್ನು ಕೊಂದ ತಕ್ಷಣ, ಅವನ ರಕ್ತದ ಪ್ರತಿ ಹನಿಯೂ ರಾಕ್ಷಸನಾಗಿ ಪರಿವರ್ತನೆಗೊಳ್ಳುತ್ತದೆ. ಆಗ ಶಿವನು ತನ್ನ ಶಕ್ತಿಗಳಿಂದ ಯೋಗೇಶ್ವರಿ ದೇವಿಯನ್ನು ಸೃಷ್ಟಿಸಿದನು ಮತ್ತು ದೇವಿಯು ಆ ರಾಕ್ಷಸನನ್ನು ನಾಶಪಡಿಸಿದಳು. ಈ ದೇವಿಯನ್ನೇ ಹಾಸನಾಂಬೆ ಎಂದು ಇಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯದ ಮುಖ್ಯ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಈ ದೇವಾಲಯಕ್ಕೆ ನೀವು ಭೇಟಿ ನೀಡಬೇಕೆಂದು ಬಯಸಿದರೆ, ಬರೋಬ್ಬರಿ ಒಂದು ವರ್ಷಗಳ ಕಾಲ ಕಾಯಬೇಕು. ಈ ದೇವಾಲಯದಲ್ಲಿ ಆದಿಶಕ್ತಿಯನ್ನೇ ಹಾಸನಾಂಬೆ ಎಂದು ಪೂಜಿಸಲಾಗುತ್ತದೆ. ಭಕ್ತರ ಸಂಕಷ್ಟಗಳನ್ನು ದೂರಾಗಿಸುವ, ಇಷ್ಟಾರ್ಥಗಳನ್ನು ಈಡೇರಿಸುವ ಈ ತಾಯಿಯ ದರ್ಶನವನ್ನು ನೀವೂ ಮಾಡಲು ಪ್ರಯತ್ನಿಸಿ.

Leave A Reply

Your email address will not be published.