ಮುಖದಲ್ಲಿ ಎಷ್ಟೇ ಕಪ್ಪು ಕಲೆಗಳು ಇದ್ದರು ಇದನ್ನು ಹಚ್ಚಿ ಸಾಕು Get rid of Pigmentation naturally

ಪಿಗ್ಮಿಟೇಷನ್ ಅಂದ್ರೆ ಬಂಗು ಇತ್ತೀಚಿನ ದಿನಗಳಲ್ಲಿ ಹೆಣ್ಣಮಕ್ಕಳಿಗೂ ಮತ್ತು ಗಂಡುಮಕ್ಕಳಿಗೂ ಕೂಡ ಕಂಡು ಬರುತ್ತಿದೆ.ಬಂಗು ಅಂದ್ರೆ ನಮ್ಮ ಚರ್ಮದ ಬಣ್ಣಕಿಂತ ಕಪ್ಪು ಕಲೆಯು ಮೂಗಿನ ಮೇಲೆ, ಹಣೆಯ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ.ಇದಕ್ಕಾಗಿ ಮಾರ್ಕೆಟ್ಗಳಲ್ಲಿ ವಿವಿಧ ರೀತಿಯ ಕ್ರೀಮ್ ಗಳು ಲಭ್ಯ ಇದೆ.ಆದರೆ ಅದು ಕೆಲವರಿಗೆ ವರ್ಕ್ ಆಗತ್ತೆ ಮತ್ತು ಕೆಲವರಿಗೆ ವರ್ಕ್ ಆಗುವುದಿಲ್ಲ.ಬಂಗು ಹೇಗೆ ಬರುತ್ತೆ ಅಂದರೆ ಮೊದಲು ಮೊಡವೆಗಳಾಗಿ ಅದು ಕಲೆಯಾಗುತ್ತವೆ. ಆ ಕಲೆಗಳಿಂದ ನಮಗೆ ಬಂಗು ಬರುವ ಸಾಧ್ಯತೆ ಇದೆ.

ಇನ್ನೂ ಕೆಲವರು ಹೆಚ್ಚಾಗಿ ಬಿಸಿನಲ್ಲಿ ಕೆಲಸ ಮಾಡೋದ್ರಿಂದ ಬಂಗು ಬರುತ್ತದೆ.ಬಂಗು ಅನ್ನೋದು ಇತ್ತೀಚಿನ ದಿನದಲ್ಲಿ ಗಂಡುಮಕ್ಕಳಿಗೆ ಜಾಸ್ತಿ ಕಂಡು ಬರುತ್ತಿದ್ದೆ. ಯಾಕೇಂದರೆ ಅವರು ಸ್ಕಿನ್ ಮೇಲೆ ಹೆಚ್ಚಾಗಿ ಕೇರ್ ಮಾಡುವುದಿಲ್ಲ.ಅದರಿಂದ ನೀವು ಸನ್ ಸ್ಕ್ರೀನ್ ಬಳಸುವುದು ಒಳ್ಳೆಯದು. ಚಳಿಗಾಲದಲ್ಲಿ ಆಗಿರಬಹುದು , ಬಿಸಿಲಿನಲ್ಲಿ ಆಗಿರಬಹುದು SPF50 ಸನ್ ಸ್ಕ್ರೀನ್ ನ ಉಪಯೋಗಿಸಿಕೊಳ್ಳಿ ನಿಮ್ಮ ಸ್ಕಿನ್ ಗೆ ಸೂಟ್ ಆಗುವಂತಹದು.ಕೆಲವರಿಗೆ ಡೆಲಿವರಿ ಸಮಯದಲ್ಲಿ ಈ ಪಿಗ್ಮಿಟೇಷನ್ ಮಹಿಳೆಯರಿಗೆ ಬರುತ್ತದೆ.

ಆ ಸಮಯದಲ್ಲಿ ಸ್ವಲ್ಪ ಕೇರ್ ತಗೊಂಡ್ರೆ ಶಾಶ್ವತವಾಗಿ ಹೋಗುತ್ತದೆ.ಬಂಗು ಹೋಗುವುದಕ್ಕೆ ನಾವು ನಿಮಗೆ ಮನೆಮದ್ದು ಹೇಗೆ ಉಪಯೋಗಿಸಬೇಕು ಎಂದು ತಿಳಿಸುತ್ತೇವೆ.ಒಂದು ಚಮಚ ಆಲೂಗಡ್ಡೆ ರಸ, ಒಂದು ಚಮಚ ಹಸಿ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡ್ಕೋಬೇಕು. ನಂತರ ಮುಖವನ್ನು ನಿಟ್ ಆಗಿ ತೊಳೆದುಕೊಂಡು ಕಾಟನ್ ಇಂದ ಈ ರಸವನ್ನು ಮುಖಕ್ಕೆ ಹಚ್ಚಿ 5ನಿಮಿಷ ಹಾಗೆ ಬಿಡಬೇಕು.ನಂತರ ಮುಖವನ್ನು ಕೋಲ್ಡ್ ವಾಟರ್ ಲಿ ವಾಶ್ ಮಾಡಿ.

ಒಂದು ಚಮಚ ಅಕ್ಕಿ ಇಟ್ಟು,ಒಂದು ಚಮಚ ಆಲೂಗಡ್ಡೆ ರಸ, ಅರ್ಧ ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಸ್ಕ್ರಾಬ್ ಆಗೊತರ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ ನಂತರ 5 ನಿಮಿಷ ಬಿಟ್ಟು ಒಂದು ಬೌಲ್ ಲಿ ನೀರು ತಗೊಂಡು ನಿದಾನವಾಗಿ ರಬ್ ಮಾಡಿ. ಇದರಿಂದ ಸ್ಕಿನ್ ತುಂಬಾ ಸಾಫ್ಟ್ ಆಗುತ್ತದೆ,ಡೆಡ್ ಸ್ಕಿನ್ ಸೆಲ್ಸ್ ನ ರಿಮೋವ್ ಮಾಡುತ್ತದೆ.

ತುರಿದ ಹಸಿ ಆಲೂಗಡ್ಡೆಯನ್ನು ತೆಗೆದುಕೊಳ್ಳಿ ಅದಕ್ಕೆ ಕಸ್ತೂರಿ ಅರಿಶಿನವನ್ನು ಒಂದು ಚಿಟಿಕೆ ಅಷ್ಟು ಹಾಕಿ ಹಾಗೆ ಒಂದು ಚಮಚ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ 10 ನಿಮಿಷ ಒಣಗಿದ ನಂತರ ತಣ್ಣೀರಲ್ಲಿ ಮುಖವನ್ನು ವಾಶ್ ಮಾಡಿಕೊಳ್ಳಿ.ಕೊನೆಯದಾಗಿ ಸೆರಮ್ ಬಳಸುವುದರಿಂದ ಪಿಗ್ಮಿಟೇಷನ್ ಬೇಗನೆ ಕಡಿಮೆ ಆಗುತ್ತದೆ.ಇದರಿಂದ ಸ್ಕಿನ್ ತುಂಬಾನೇ ಗ್ಲೋ ಆಗಿ ಕಾಣಿಸುತ್ತದೆ.ಮನೆಮಾದ್ದನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ಬಂಗು ಕಡಿಮೆ ಆಗುತ್ತದೆ.

Leave A Reply

Your email address will not be published.