ಮನೆಯ ಸುತ್ತಮುತ್ತ ಮರಗಳು ಇರುವುದು ಸಕಾರಾತ್ಮಕತೆಯ ಸಂಕೇತ ಆದರೆ ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಯ ಮುಂದೆ ಇರುವ ಕೆಲವು ಮರಗಳು ಸುಖ-ಸಮೃದ್ಧಿಯನ್ನು ನೀಡುತ್ತದೆ.ಆದರೆ ಕೆಲವೊಂದು ಮರಗಳು ತಾನಾಗಿಯೇ ಬೆಳೆದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಮನೆಯ ಬಳಿ ಅಥವಾ ಮನೆಯ ಒಳಗೆ ಅಶ್ವತ್ಥ ಗಿಡ ಇದ್ದರೆ ಕುಟುಂಬದ ಸದಸ್ಯರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ.ದಿನಕ್ಕೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಮನೆಯ ಮೇಲೆ ಇದರ ನೆರಳು ಬಿದ್ದರೂ ಕೂಡ ಅಭಿವೃದ್ಧಿ ಸಾಧ್ಯವಿಲ್ಲ.ವೈವಾಹಿಕ ಜೀವನ ದುಃಖಮಾಯವಾಗಿರುತ್ತದೆ. ಒಂದು ವೇಳೆ ಮನೆಯ ಬಳಿ ಅಶ್ವತ್ಥ ಗಿಡವಿದ್ದರೆ ಅದನ್ನು ಕತ್ತರಿಸಬಾರದು.ಇದು ಹಿರಿಯರಿಗೆ ನಷ್ಟವನ್ನುಂಟು ಮಾಡುತ್ತದೆ.ನೀವು ಎಂತಹ ಉನ್ನತ ಮನೆಯನ್ನು ಕಟ್ಟಿದರು ಸಹ ಆ ಮನೆಯಲ್ಲಿ ನೀವು ಸ್ಥಿರವಾಗಿ ನೆಲೆನಿಂತು ಆರ್ಥಿಕವಾಗಿ ಸದೃಢವಾಗಬೇಕು ಅಂದರೆ ನಿಮ್ಮ ಮನೆಯ ಸುತ್ತಮುತ್ತ ಅಶ್ವತ್ಥ ಮರ ಇರಬಾರದು. ಹಾಗಾಗಿ ಮೊದಲು ಸೈಟ್ ಕೊಂಡುಕೊಳ್ಳುವಾಗಲೆ ಅಶ್ವತ್ಥಮರ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.