ಡಾಕ್ಟರ್ ಹೇಳುತ್ತಾರೆ ನೀವು ಒಂದು ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು. ಹಾಗಿದ್ದಾಗ ಮಾತ್ರ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಸಲಹೆ ಕೊಡುತ್ತಾರೆ. ಆದರೆ ಯಾವ ಮಗ್ಗಲಿನಲ್ಲಿ ಮಲಗಿಕೊಳ್ಳಬೇಕು ಎಂದು ನೀವು ಕೇಳುವುದಿಲ್ಲ ಅವರೂ ಹೇಳುವುದಿಲ್ಲ. ನಾವು ಮಲಗಿದಾಗ ನಾಲ್ಕು ತರಹ ಮಲಗಿ ನಿದ್ರಿಸಬಹುದು. ಅಂಗಾತವಾಗಿ, ಬೋರಲಾಗಿ, ಎಡಗಡೆ ಮತ್ತು ಬಲಗಡೆ ತಿರುಗಿ ಮಲಗಿ ನಿದ್ರೆ ಮಾಡಬಹುದು.
ಒಂದೊಂದು ಕಡೆ ತಿರುಗಿ ಮಲಗಿ ನಿದ್ರಿಸುವುದರಿಂದ ಒಂದೊಂದು ತರಹದ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ನಮ್ಮ ಹಿರಿಯರು ಅನುಸರಿಸಿ ಕೊಂಡು ಬಂದಿರುವ ಪದ್ಧತಿ ಸಹಿತ ವೈಜ್ಞಾನಿಕ ಪುರಾವೆ ಇರುವ ಮಲಗುವ ಭಂಗಿ ಎಂದರೆ ಅದು ಎಡಗಡೆಗೆ ತಿರುಗಿ ಮಲಗುವುದು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರುವರೆಗೂ ಕೂಡ ಯಾರು ಬೇಕಾದರೂ ಇದನ್ನು ಅನುಸರಿಸಬಹುದು. ಬನ್ನಿ ಹಾಗಾದ್ರೆ ಎಡಗಡೆ ತಿರುಗಿಕೊಂಡು ಮಲಗಿ ನಿದ್ರಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.
ಒಳ್ಳೆಯ ಜೀರ್ಣಶಕ್ತಿ ಸಿಗುತ್ತದೆ–ನಾವು ಊಟ ಮಾಡಿದ ತಕ್ಷಣ ಮಲಗಿಕೊಳ್ಳಬಾರದು ನಿಜ. ಆನಂತರ ಮಲಗಿಕೊಂಡರೂ ಸಹ ಬಲಗಡೆ ತಿರುಗಿ ಮಲಗ ಬಾರದು ಎಂದು ಹೇಳುತ್ತಾರೆ.
ಅಂದರೆ ನಾವು ಎಡಗಡೆ ತಿರುಗಿಕೊಂಡು ಮಲಗಿದರೆ ನಾವು ಸೇವಿಸಿದ ಆಹಾರ ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಕ್ರಿಯೆಗೆ ಸಾಕಷ್ಟು ಸಹಕಾರ ಕೊಡುತ್ತದೆ ಮತ್ತು ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎಂದು ಹೇಳಲಾಗುತ್ತದೆ. ವೈಜ್ಞಾನಿ ಕವಾಗಿ ಸಹ ಇದು ಸಾಬೀತಾಗಿದೆ.
ಹೃದಯಕ್ಕೆ ಒಳ್ಳೆಯದು–ಯಾರನ್ನೇ ಆದರೂ ನಿಮ್ಮ ಹೃದಯ ಯಾವ ಕಡೆ ಇದೆ ಎಂದು ಕೇಳಿದರೆ ಎಡಗಡೆ ಎಂದು ಹೇಳುತ್ತಾರೆ. ನಾವು ಹೃದಯದ ವಿಚಾರದಲ್ಲಿ ಜಾಗೃತಿ ತೆಗೆದುಕೊಂಡಷ್ಟು ನಮಗೆ ಒಳ್ಳೆಯದು.
ಎಡಗಡೆ ತಿರುಗಿ ಮಲಗುವುದರಿಂದ ನಮ್ಮ ಹೃದಯದ ಕಾರ್ಯ ಚಟು ವಟಿಕೆ ಉತ್ತಮ ಗೊಳ್ಳುತ್ತದೆ. ರಕ್ತದ ಒತ್ತಡ ಕಡಿಮೆಯಾ ಗುತ್ತದೆ. ಹೃದ ಯದ ಮೇಲಿನ ಒತ್ತಡವು ಸಹ ಕಡಿಮೆ ಆಗುತ್ತದೆ. ಮೊದಲಿಗಿಂತ ಚೆನ್ನಾಗಿ ನಮ್ಮ ಹೃದಯ ರಕ್ತವನ್ನು ಪಂಪ್ ಮಾಡುತ್ತದೆ.
ಗೊರಕೆ ಹೊಡೆಯುವುದು ತಪ್ಪುತ್ತದೆ
ಅಕ್ಕ ಪಕ್ಕ ಯಾರಾದರೂ ಗೊರಕೆ ಹೊಡೆಯುವವರು ಇದ್ದು ಬಿಟ್ಟರೆ, ಅಲ್ಲಿಗೆ ಕಥೆ ಮುಗಿಯಿತು. ರಾತ್ರಿ ಪೂರ್ತಿ ಜಾಗರಣೆ ಇರಬೇಕಾಗುತ್ತದೆ.
ಒಂದು ವೇಳೆ ನಿಮಗೂ ಇಂತಹ ಅನುಭವ ಉಂಟಾಗಿದ್ದರೆ, ಗೊರಕೆ ಹೊಡೆಯುವವರನ್ನು ಹೇಗಾದರೂ ಮಾಡಿ ಎಡಗಡೆಗೆ ತಿರುಗಿಸಿ ಮಲಗಿಸಿ.
ಆಮೇಲೆ ನೋಡಿ ಚಮತ್ಕಾರ! ಗೊರಕೆ ಶಬ್ದವೇ ಬರುವುದಿಲ್ಲ. ಅವರೂ ನೆಮ್ಮದಿಯಾಗಿ ನಿದ್ರಿಸುತ್ತಾರೆ, ನಿಮಗೂ ಕೂಡ ಅಷ್ಟೇ ಚೆನ್ನಾಗಿ ನಿದ್ರೆ ಬರುತ್ತದೆ.
ದುಗ್ಧರಸ ಗ್ರಂಥಿಗಳಿಗೆ ಉತ್ತಮ
ನಮ್ಮ ದೇಹದಲ್ಲಿ ದುಗ್ದರಸ ಗ್ರಂಥಿಗಳು ತಮ್ಮದೇ ಆದ ಕಾರ್ಯವನ್ನು ನಿರ್ವಹಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಉಪಯೋಗವಿದೆ.
ಆದರೆ ಯಾವಾಗ ಇವುಗಳ ಕಾರ್ಯ ಚಟುವಟಿಕೆ ಕುಗ್ಗುತ್ತದೆ ಆ ಸಂದ ರ್ಭದಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳು ಶುರುವಾ ಗುತ್ತವೆ. ಎಡಗಡೆಗೆ ತಿರುಗಿ ಮಲಗುವುದರಿಂದ ದುಗ್ದರಸ ಗ್ರಂಥಿಗಳು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಬೇಡದ ತ್ಯಾಜ್ಯಗಳನ್ನು ಸುಲಭವಾಗಿ ಹೊರಹಾಕಲು ಸಹಾಯ ವಾಗುತ್ತದೆ.
ನೋವು ನಿವಾರಣೆ ಸಾಧ್ಯ
ಕೆಲವರಿಗೆ ರಾತ್ರಿ ಹೊತ್ತು ಹೀಗಂದರೆ ಹಾಗೆ ಮಲಗಿ ಕುತ್ತಿಗೆ ನೋವು ಮತ್ತು ಬೆನ್ನು ನೋವು ವಿಪರೀತವಾಗಿ ಕಾಡುತ್ತಿರುತ್ತದೆ. ಅವರಿಗೆ ಇದೇ ರೀತಿ ಮಲಗಿ ಅಭ್ಯಾಸ ಆಗುವುದರಿಂದ ನೋವು ಕೂಡ ಹೋಗಿರು ವುದಿಲ್ಲ.
ಆದರೆ ಯಾವುದೇ ಔಷಧಿ ಇಲ್ಲದೆ ಹೀಗೆ ಬಂದ ಕುತ್ತಿಗೆ ನೋವು ಮತ್ತು ಬೆನ್ನು ನೋವನ್ನು ಸುಲಭವಾಗಿ ನಿವಾರಿಸಿಕೊಳ್ಳ ಬಹುದು. ಒಂದು ವಾರದ ತನಕ ಎಡಗಡೆಗೆ ತಿರುಗಿ ಮಲಗುವ ಅಭ್ಯಾಸ ನಿಮ್ಮದಾದರೆ ಸಾಕು. ನೋವು ಕ್ರಮೇಣವಾಗಿ ಮಾಯವಾಗುತ್ತದೆ.
ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ
ನಗರ ಪ್ರದೇಶಗಳಲ್ಲಿ ವಾಸ ಮಾಡುವವರು ಮತ್ತು ಧೂಮಪಾನ ಅಭ್ಯಾಸ ಇರುವವರಿಗೆ ಉಸಿರಾಟದ ತೊಂದರೆ ಯಾವುದೇ ಸಮಯದಲ್ಲಿ ಎದುರಾಗಬಹುದು. ಜೊತೆಗೆ ಉಬ್ಬಸ ಕೂಡ ಬರಬಹುದು.
ಆದರೆ ನಮ್ಮ ಶ್ವಾಸಕೋಶದ ಈ ಸಮಸ್ಯೆಯನ್ನು ನಾವು ರಾತ್ರಿಯಲ್ಲಿ ಎಡಗಡೆಗೆ ತಿರುಗಿ ಮಲಗಿ ಸರಿಪಡಿಸಿಕೊಳ್ಳ ಬಹುದು.
ಕೇವಲ ಒಂದೆರಡು ದಿನಕ್ಕೆ ಇದು ಸರಿಹೋಗುವುದಿಲ್ಲ. ನಿರಂತರವಾದ ಅಭ್ಯಾಸ ನಿಮ್ಮದಾದರೆ ನಿಮ್ಮ ಬಲಭಾಗದ ಶ್ವಾಸಕೋಶ ಸಂಪೂರ್ಣವಾಗಿ ಉಬ್ಬಿಕೊಂಡು ಉಸಿರು ತೆಗೆದುಕೊಳ್ಳುವುದು ಮತ್ತು ಬಿಡುವುದು ಮಾಡುವು ದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಕಿಡ್ನಿಗಳ ಕಾರ್ಯ ಚಟುವಟಿಕೆ ಉತ್ತಮಗೊಳ್ಳುತ್ತದೆ
ನಮ್ಮ ದೇಹದಲ್ಲಿ ಕಿಡ್ನಿಗಳು ಎಂಬ ಅಂಗಾಂಗಗಳು ಇಲ್ಲದಿದ್ದರೆ ಬಹಳ ಕಷ್ಟವಾಗುತ್ತಿತ್ತು. ಏಕೆಂದರೆ ಬೇಡದ ತ್ಯಾಜ್ಯಗಳು ಮತ್ತು ವಿಷಕಾರಿ ಅಂಶಗಳು ದೇಹದಲ್ಲಿ ಹಾಗೆ ಉಳಿದು ಬಿಡುತ್ತಿದ್ದವು.
ಆದರೆ ಕಿಡ್ನಿಗಳು ಇವುಗಳನ್ನು ಹೊರ ಹಾಕುತ್ತವೆ. ಎಡಗಡೆಗೆ ತಿರುಗಿ ಮಲಗುವುದರಿಂದ ನಮ್ಮ ಕಿಡ್ನಿಗಳಿಗೆ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ ಮತ್ತು ಕಿಡ್ನಿಗಳು ತಮ್ಮ ಕಾರ್ಯ ಚಟು ವಟಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ವಾಗುತ್ತದೆ.
ಗರ್ಭಿಣಿಯರಿಗೆ ಒಳ್ಳೆಯದು
ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಎಡಗಡೆ ತಿರುಗಿ ಮಲಗಿ ಕೊಳ್ಳುವಂತೆ ಸ್ತ್ರೀರೋಗ ತಜ್ಞರು ಸೂಚಿಸಿರುತ್ತಾರೆ. ಏಕೆಂದರೆ ಭ್ರೂಣದ ಭಾಗಕ್ಕೆ ಮತ್ತು ಗರ್ಭಕೋಶಕ್ಕೆ ಉತ್ತಮವಾದ ರಕ್ತ ಸಂಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ. ಗರ್ಭಿಣಿ ಮಹಿಳೆಯರು ಇದನ್ನು ಅನುಸರಿಸಿ ಗರ್ಭಪಾತವಾಗುವ ಸಾಧ್ಯತೆಯಿಂದ ತಪ್ಪಿಸಿಕೊಳ್ಳುವುದು.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಬಹುದು
ಊಟ ಮಾಡಿದ ನಂತರದಲ್ಲಿ ನಾವು ಬಲಗಡೆಗೆ ತಿರುಗಿಕೊಂಡು ಮಲಗಿದರೆ ನಾವು ಉತ್ತಮವಾದ ಆಹಾರವನ್ನು ಸೇವಿಸಿದರೂ ಕೂಡ ಅದು ಗ್ಯಾಸ್ಟಿಕ್ ಉಂಟುಮಾಡುತ್ತದೆ ಎಂಬ ಮಾತಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ಊಟ ಆದ ನಂತರದಲ್ಲಿ ನಾವು ಎಡಗಡೆಗೆ ತಿರುಗಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಇದ ರಿಂದ ಹೊಟ್ಟೆಯ ದಿನ ಆಮ್ಲ ಎದೆಯ ಭಾಗಕ್ಕೆ ವಾಪಸ್ ಬರುವ ಸಾಧ್ಯತೆ ತಪ್ಪುತ್ತದೆ.