ನಿಮಗೇ ಇದು ಗೊತ್ತೇ?ಹೆಣ್ಣು ಮಕ್ಕಳು ದೇವರ ಮನೆಯಲ್ಲಿ ಗಂಟೆ ಬಾರಿಸಿ ಯಾಕೆ ಪೂಜೆ ಮಾಡಬಾರದು!

Written by Anand raj

Published on:

ಗಂಟನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೋ ಅಥವಾ ಗಂಟೆ ಬಾರಿಸದೆ ಯಾರು ಪೂಜೆ ಮಾಡುತ್ತಾರೋ ಅಂತವರ ಮನೆಯಲ್ಲಿ ಕುರುಡು,ಕಿವುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ.ಗಂಟೆ ಬಾರಿಸದೆ ಪೂಜೆ ಮಾಡಿದ ಸಂದರ್ಭದಲ್ಲಿ ಅದು ಸಾರ್ಥಕ ಆಗುವುದಿಲ್ಲ.ಹಾಗಾಗಿ ಗಂಟನಾದ ಮಾಡಲೇಬೇಕು.

ಗಂಟನಾದವನ್ನು ಯಾವಾಗ ಮಾಡಬೇಕು….?ಭಗವಂತನಿಗ ಸ್ನಾನ ಅಥವಾ ಅಭಿಷೇಕವನ್ನು ಮಾಡುವಾಗ ಗಂಟೆ ಬಾರಿಸಬೇಕು. ಧೂಪ ಮತ್ತು ನೈವೇದ್ಯವನ್ನು ದೇವರಿಗೆ ಅರ್ಪಿಸುವಾಗ ಗಂಟೆ ಬಾರಿಸಬೇಕು. ದೀಪವನ್ನು ಬೆಳಗುವಾಗ ಗಂಟೆ ಬಾರಿಸಬೇಕು. ಬಟ್ಟೆ, ಆಭರಣಗಳನ್ನು ಧರಿಸುವಾಗ ಭಗವಂತನಿಗೆ ಗಂಟೆ ಶಬ್ಧವನ್ನು ಮಾಡಬೇಕು. ಹಾಗೂ ದೇವರಿಗೆ ಆರತಿಯನ್ನು ಬೆಳಗುವಾಗ ಗಂಟೆಯನ್ನು ಬಾರಿಸಬೇಕು.

ಗಂಟೆಯ ಎತ್ತರ 5 ಇಂಚು ಇದ್ದರೆ ಸಾಕು ಮತ್ತು ಗಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ ನಂದಿಶ್ವರ ಮೂರ್ತಿ ಇರುವಂತಹ ಗಂಟೆಯನ್ನು ಬಳಸಿದರೆ ಒಳ್ಳೆಯದು.ಇನ್ನು ಕೆಲವರು ಶಂಖು ಚಕ್ರ ಇರುವ ಗಂಟೆಯನ್ನು ಬಳಸುತ್ತಾರೆ. ಇದು ಕೂಡ ತುಂಬಾ ಒಳ್ಳೆಯದು.

ಬೆಳಗ್ಗೆ ಗಂಡು ಮಕ್ಕಳು ಸಂಜೆ ಹೆಣ್ಣು ಮಕ್ಕಳು ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಧನಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.ಗಂಟೆಯ ಶಬ್ಧ ಓಂ ಕಾರಕ್ಕೆ ಸಮನಾಗಿರುತ್ತದೆ. ಆದ್ದರಿಂದ ನೀವು ಓಂ ಕಾರ ಜಪಿಸಿದಷ್ಟೇ ಫಲ ಸಿಗುತ್ತದೆ ಎಂದು ಹೇಳುತ್ತಾರೆ.

ಪೂಜಾ ಸಮಯದಲ್ಲಿ ಗಂಟೆ ಬಾರಿಸಿದಾಗ ಅದು ದೇವರ ಎದುರು ನಿಂತಿರುವ ವ್ಯಕ್ತಿಯ ಉಪಸ್ಥಿಯನ್ನು ದೇವರಿಗೆ ಖಚಿತ ಪಡಿಸುತ್ತದೆ.ಜೊತೆಗೆ ದೇವರನ್ನು ಎಚ್ಚರಗೊಳಿಸಲು ಕೂಡ ಎಂದು ಹೇಳುತ್ತಾರೆ. ಗಂಟೆ ಬಾರಿಸುವ ಮೂಲಕ ವ್ಯಕ್ತಿಗಳ ಮನಸ್ಸಲ್ಲಿ ಧಾರ್ಮಿಕ ಭಾವಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಸದ್ದು ಪರಿಸವರನ್ನು ಶುದ್ಧ ಮಾಡುತ್ತದೆ.ಘಂಟೆಯ ಕಂಪನದಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಇದರಿಂದ ಸುತ್ತಮುತ್ತಲ ವಾತಾವರಣ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಯನ್ನ ನಾಶಮಾಡುವ ಗುಣ ಘಂಟೆಯಲ್ಲಿದೆ.

ಯಾವ ಸಮಯದಲ್ಲಿ ಗಂಟೆ ಬಾರಿಸಬಾರದು…?ದೇವರಿಗೆ ಅಲಂಕಾರ ಮಾಡುವಾಗ ಗಂಟನಾದವನ್ನು ಮಾಡಬಾರದು ಮತ್ತು ರಾತ್ರಿ ಸಮಯದಲ್ಲಿ ಗಂಟೆ ಬಾರಿಸಬಾರದು. ಇನ್ನು ಸೂತಕದ ಮನೆಯವರು ಗಂಟನಾದವನ್ನು ಮಾಡಬಾರದು. ಏಕೆಂದರೆ ಸೂತಕ ಕಳೆಯುವವರೆಗೂ ಆತ್ಮಗಳು ಕುಟುಂಬಸ್ತರ ಜೊತೆಗೆ ಇರುತ್ತದೆ. ಮನೆಯಲ್ಲಿ ಗಂಟನಾದ ಮಾಡುವುದು, ಕಲಹ ಶಬ್ದ ಮಾಡುವುದು ಮತ್ತು ಪಾತ್ರೆ ಶಬ್ಧ ಮಾಡುವುದು ಇವೆಲ್ಲಾ ಆತ್ಮಕ್ಕೆ ತುಂಬಾ ನೋವು ಆಗುತ್ತದೆ.

ಇನ್ನು ಮಹಿಳೆಯರು ಗಂಟನಾದ ಮಾಡಬಹುದೇ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಸುಮಾರು ವರ್ಷದಿಂದ ನಡೆದು ಬಂದ ಪದ್ಧತಿ ಹಿರಿಯರು ಕೂಡ ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಸುಮಾರು ಮನೆಗಳಲ್ಲಿ ಸ್ತ್ರೀಯಾರು ಗಂಟನಾದ ಮಾಡಬಾರದು. ಸ್ತ್ರೀಯರ ಎಡಗೈ ನರವು ಗರ್ಭಕೋಶಕ್ಕೆ ಸೇರಿರುತ್ತದೆ. ಆದ ಕಾರಣ ಎಡಗೈ ಗಂಟೆನಾದ ಮಾಡಿದರೆ ತೊಂದರೆ ಆಗುತ್ತದೆ ಎಂದು ಹೇಳುತ್ತಾರೆ.

Related Post

Leave a Comment