ಚಳಿಗಾಲದಲ್ಲಿ ಪಾತ್ರೆಗಳನ್ನು ತೊಳೆಯುವ ಮೊದಲು ಇದನ್ನು ಮಾಡಿ

Written by Anand raj

Published on:

ಚಳಿಗಾಲದಲ್ಲಿ ತಣ್ಣೀರಿಗೆ ಕೈ ಹಾಕೋದೇ ಕಷ್ಟವಾಗಿಬಿಡುತ್ತದೆ. ಇನ್ನೂ ಚಳಿಗೆ ತಣ್ಣೀರಿನಲ್ಲಿ ಪಾತ್ರೆ ತೊಳೆಯುದೆಂದರೆ ಯಾರಿಗೂ ಇಷ್ಟವಾಗೋದಿಲ್ಲ. ಆದರೂ ಕಷ್ಟಪಟ್ಟು ಪಾತ್ರೆ ತೊಳೆಯಲೇ ಬೇಕು. ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ತಣ್ಣೀರಲ್ಲಿ ಕೆಲಸ ಮಾಡೋದೆಂದರೆ ಫ್ರಿಡ್ಜ್‌ನ ನೀರಿಗೆ ಕೈ ಹಾಕಿದ ಅನುಭವವಾಗುತ್ತದೆ. ನಿಮಗೂ ಈ ರೀತಿಯ ಸಮಸ್ಯೆಗಳಿದ್ದರೆ ಈ ಕೆಲವೊಂದು ಟಿಪ್ಸ್ ನಿಮಗೆ ಸಹಕಾರಿಯಾಗಬಲ್ಲದು.

​ಚಳಿಗೆ ಪಾತ್ರೆ ತೊಳೆಯಲು ಟಿಪ್ಸ್​

ದುಡ್ಡಿರುವವರು ಡಿಶ್‌ವಾಶರ್‌ನ್ನು ಖರೀದಿಸುತ್ತಾರೆ ಆದರೆ ಉಳಿದವರು ತಮ್ಮ ಕೈಗಳಿಂದಲೇ ಪಾತ್ರೆ ತೊಳೆಯಬೇಕು. ಅಂತಹ ಪರಿಸ್ಥಿತಿಯಲ್ಲಿ, ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕೆಲವು ಸರಳ ಪರಿಹಾರಗಳನ್ನು ನಾವು ಇಲ್ಲಿ ತಿಳಿಸಿದ್ದೇವೆ. ಪಾತ್ರೆಗಳನ್ನು ತೊಳೆಯುವುದನ್ನು ತಪ್ಪಿಸಲು ನಿಮಗೆ ಸಾಧ್ಯವಾಗದಿದ್ದರೂ, ಚಳಿಗೆ ಇದನ್ನು ಮಾಡುವುದು ನಿಮಗೆ ಸಹಕಾರಿಯಾಬಹುದು.

​ಪಾತ್ರೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ​

ಪಾತ್ರೆಯಿಂದ ಉಳಿದ ಪದಾರ್ಥವನ್ನೆಲ್ಲಾ ಬೇರ್ಪಡಿಸಿ ಬಿಸಿ ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯ ಬಿಡಿ. ಹೀಗೆ ಮಾಡುವುದರಿಂದ ಅದರಲ್ಲಿರುವ ಎಣ್ಣೆ ಮತ್ತು ಮಸಾಲೆಗಳು ಬೇರ್ಪಡುತ್ತವೆ ಮತ್ತು ಕಲೆಯೂ ಮೃದುವಾಗುತ್ತದೆ. ಇದರೊಂದಿಗೆ, ಪಾತ್ರೆಗಳನ್ನು ತೊಳೆಯಲು ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

​ಕೈ ಗ್ಲವ್ಸ್ ಬಳಸಿ​

ತಣ್ಣೀರಿನಿಂದ ಕೈಗಳನ್ನು ರಕ್ಷಿಸಲು ಗ್ಲವ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಗ್ಲವ್ಸ್ ಧರಿಸುವುದರಿಂದ ನೀವು ತಣ್ಣೀರಿನಿಂದ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ನಿಮ್ಮ ಕೈ ಕೂಡಾ ಶುಚಿಯಾಗಿರುತ್ತದೆ.

​ಈ ರೀತಿಯ ತಳ ಹಿಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸಿ​

ಶೀತದ ದಿನಗಳಲ್ಲಿ ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಗಂಟೆಗಳ ಕಾಲ ಸ್ಕ್ರಬ್ ಮಾಡುವ ಅಗತ್ಯವಿಲ್ಲ. ಇದಕ್ಕಾಗಿ, ಸ್ಕ್ರಬ್‌ಗೆ ಉಪ್ಪು ಮತ್ತು ನೀರನ್ನು ಸೇರಿಸಿ ಮತ್ತು ಸುಟ್ಟ ಜಾಗವನ್ನು ಉಜ್ಜಿ.

ನೀವು ಸುಟ್ಟ ಪಾತ್ರೆಯ ಮೇಲೆ ಟಿಶ್ಯೂ ಪೇಪರ್ ಅನ್ನು ಹರಡಬಹುದು ಮತ್ತು ಅಡಿಗೆ ಸೋಡಾ ಮತ್ತು ವಿನೆಗರ್‌ನ್ನು ಹಚ್ಚಬಹುದು. ನಂತರ 15ರಿಂದ 20 ನಿಮಿಷಗಳ ಕಾಲ ಬಿಟ್ಟು ಪಾತ್ರೆಗಳನ್ನು ಸಾಮಾನ್ಯ ರೀತಿಯಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಪಾತ್ರೆಗಳನ್ನು ಕಡಿಮೆ ಸಮಯದಲ್ಲಿ ಬೇಗನೇ ಸ್ವಚ್ಛಗೊಳಿಸಬಹುದು.

Related Post

Leave a Comment