ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 10 ವಸ್ತುಗಳನ್ನು ಇಡಬಾರದು!

Written by Anand raj

Published on:

ವಾಸ್ತುಶಾಸ್ತ್ರ

ಮನೆ ಕಟ್ಟುವುದರಿಂದ ಹಿಡಿದು ಮನೆಯಲ್ಲಿನ ವಸ್ತುಗಳ ಅಲಂಕಾರದವರೆಗೆ ಈಗ ಎಲ್ಲಾ
ವಾಸ್ತು ಪ್ರಕಾರವೇ ನಡೆಯುತ್ತದೆ.ಚೀನಾ ಮತ್ತು ನಮ್ಮ ದೇಶದಲ್ಲಿ ಈ ವಾಸ್ತು ಶಾಸ್ತ್ರವನ್ನು ಗಟ್ಟಿಯಾಗಿ ನಂಬುತ್ತಾರೆ.ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸುವುದರಿಂದ ಮನೆಯವರಿಗೆಲ್ಲ ನೆಮ್ಮದಿ , ಕೈಯಲ್ಲಿ ಹಣ ನಿಲ್ಲುವುದು,ಆರೋಗ್ಯ ,ಅದೃಷ್ಟ ಕೂಡಿ ಬರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಈ 10 ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಎಂದು ತಿಳಿಸಿದ್ದಾರೆ.ಇನ್ನೂ ಆ 10 ವಸ್ತುಗಳು ಯಾವುವು ಎಂದು ತಿಳಿಯೋಣ..

1 )ಯುದ್ಧಕ್ಕೆ ಸಂಬಂಧಿಸಿದ ಫೋಟೋ ಅಥವಾ ಪೇಂಟಿಂಗ್

ಯುದ್ಧಗಳನ್ನು ಪ್ರತಿಬಿಂಬಿಸುವ ಫೋಟೋ ಅಥವಾ ಪೇಂಟಿಂಗ್ ಗಳನ್ನು ಮನೆಯಲ್ಲಿ ಇಡಕೂಡದು
ಇದರಿಂದ ಮನೆಯಲ್ಲಿ ಜಗಳ ಹೆಚ್ಚಾಗುತ್ತದೆಯಂತೆ.

2 )ನಕಾರಾತ್ಮಕ ಚಿತ್ರಗಳು ಅಂದರೆ ಪ್ರತಿಫಲಗಳನ್ನು ಸೂಚಿಸದ ಚಿತ್ರಗಳು

ಪ್ಲಾಸ್ಟಿಕ್ ಹಣ್ಣುಗಳು ,ಹೂ ಬಿಡದ ಗಿಡಗಳು ,ನೀರಿಲ್ಲದ ನದಿಯಲ್ಲಿ ಹಡಗುಗಳು ,ನಗ್ನ ಚಿತ್ರ,ಇಂದ್ರಜಾಲ ಚಿತ್ರಗಳು ಇತ್ಯಾದಿ ಇಂತಹ ಚಿತ್ರಗಳಿದ್ದರೆ ಆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ ಹಾಗೂ ಮನೆಯಲ್ಲಿ ಹೆಚ್ಚಾಗಿ ನಕಾರಾತ್ಮಕ ಭಾವನೆ ಮೂಡುತ್ತದೆ.

3 )ತಾಜ್ ಮಹಲ್

ಲವ್ ಸಿಂಬಲ್ ಎಂದು ಹೇಳಿಸಿಕೊಳ್ಳುವ ತಾಜ್ ಮಹಲ್ ವಾಸ್ತವಕ್ಕೆ ಅದು ಮಮ್ತಾಜ್ ಸಮಾಧಿ.ಸಮಾಧಿಯ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ವಾಸ್ತು ಪ್ರಕಾರ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುತ್ತದೆ.

4 )ಕ್ರೂರವಾದ ಪ್ರಾಣಿಗಳು ಮತ್ತು ಒಬ್ಬಂಟಿಯ ಪ್ರಾಣಿಗಳು

ಒಂಟಿಯಾಗಿರುವ ಪ್ರಾಣಿಗಳ ಫೋಟೋ ಆಗಲಿ ಅಥವಾ ಕ್ರೂರವಾದ ಪ್ರಾಣಿಗಳ ಫೋಟೋ ಆಗಲಿ ಮನೆಯಲ್ಲಿ ಅದರಲ್ಲೂ ಬೆಡ್ ರೂಮ್ ಕೋಣೆಯಲ್ಲಿ ಇಡಬಾರದು ಯಾಕೆಂದರೆ ಹೀಗೆ ಇದ್ದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರುವುದಿಲ್ಲವಂತೆ ಹಾಗೂ ಕೋಪ ಹೆಚ್ಚಾಗುತ್ತದೆಯಂತೆ.

5 )ಒಡೆದು ಹೋದ ಬೊಂಬೆಗಳು ಮತ್ತು ಹೊಡೆದಿರುವ ಕನ್ನಡಿಗಳು

ಇವುಗಳು ಮನೆಯಲ್ಲಿ ಇರುವುದು ಒಳ್ಳೆಯದಲ್ಲ ಯಾಕೆಂದರೆ ಇದರಿಂದ ನಿಮಗೆ ನಿಮ್ಮ ಸಂಪಾದನೆಯಲ್ಲಿ ನೆಮ್ಮದಿ ದೊರೆಯುವುದಿಲ್ಲ ಹಾಗೂ ಅತೃಪ್ತಿ ಕಾಡುತ್ತದೆ.

.
6 )ಜಲಪಾತಗಳ ಫೋಟೋ

ಜಲಪಾತಗಳು ಇರುವ ಫೋಟೋ ಅಥವಾ ಪೇಂಟಿಂಗ್ ಗಳನ್ನು ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಯಾಕೆಂದರೆ ಇದರಿಂದ ನಿಮ್ಮ ಸಂಪಾದನೆ ,ಸಂತೋಷ,ನೆಮ್ಮದಿ ,ಸುಖ ಶಾಂತಿ ಹೆಚ್ಚುಕಾಲ ಉಳಿಯುವುದಿಲ್ಲ ಎಂಬುದರ ಸೂಚನೆಯಾಗಿದೆ.

7 )ನಟರಾಜನ ವಿಗ್ರಹ

ತಾಂಡವ ಆಡುತ್ತಿರುವ ನಟರಾಜನ ವಿಗ್ರಹ ಇದ್ದರೆ ಇದು ನಮ್ಮ ಸಂತೋಷದ ವಿನಾಶಕ್ಕೆ ಕಾರಣವಾಗುತ್ತದೆಯಂತೆ.

8 )ಮುಳ್ಳಿನ ಗಿಡ

ಇವು ನಮ್ಮ ಮನೆಯಲ್ಲಿ ಇರುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗಿಸಾಲಗಳು ಹೆಚ್ಚಾಗುತ್ತವೆಯಂತೆ.

9 )ಅಳುತ್ತಿರುವ ಮಕ್ಕಳ ಫೋಟೋ

ಮನೆಯಲ್ಲಿ ಗೋಡೆಗಳ ಮೇಲೆ ಮುಖ್ಯವಾಗಿ ಬೆಡ್ ರೂಮಿನಲ್ಲಿ ಅಳುತ್ತಿರುವ ಮಕ್ಕಳ ಫೋಟೋಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಯಾಕೆಂದರೆ ಮುಂದೆ ಹುಟ್ಟುವ ಸಂತಾನಕ್ಕೆ ಇದು ತೊಂದರೆಯನ್ನುಂಟು ಮಾಡುತ್ತದೆ.

10 )ಮಹಾಭಾರತಕ್ಕೆ ಸಂಬಂಧಿಸಿದ ಚಿತ್ರಗಳು

ಕುರುಕ್ಷೇತ್ರ ಯುದ್ಧಕ್ಕೆ ಸಂಬಂಧಿಸಿದ ಚಿತ್ರಗಳನ್ನಾಗಲಿ ಬೊಂಬೆ ಗಳನ್ನಾಗಲಿ ಮನೆಯಲ್ಲಿ ಇರಿಸಬಾರದು
ಇದರಿಂದ ಬಂಧುಗಳ ನಡುವೆ ಗಲಾಟೆಯಾಗಿ ಬೇರೆ ಆಗುವ ಸಂಭವ ಬರುವುದಂತೆ.ಈ ಮೇಲೆ ತಿಳಿಸಿರುವ ಯಾವುದೇ ಫೋಟೋ ಅಥವಾ ಪೇಂಟಿಂಗ್ ಗಳು ನಿಮ್ಮ ಮನೆಯಲ್ಲಿದ್ದರೆ ಇಂದೇ ಹೊರಗಡೆ ಬಿಸಾಕಿಬಿಡಿ.

ಧನ್ಯವಾದಗಳು.

Related Post

Leave a Comment