ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತುಂಬಾ ಹಿಂದೇನೆ ಇದೆ ಅಂತ ತುಂಬಾ ಜನ ಹೇಳುತ್ತಾರೆ. ಭಾರತದ ಧರ್ಮ, ಅದ್ಯಾತ್ಮ ವಿಜ್ಞಾನವನ್ನು ಬಿಟ್ಟು ಜಗತ್ತನ್ನು ಕಲ್ಪನೆ ಮಾಡುವುದಕ್ಕೂ ಕೂಡ ಸಾಧ್ಯವಿಲ್ಲ.ಭಾರತದ ಋಷಿಮುನಿಗಳು ಪ್ರಾಚೀನ ಕಾಲದ ವಿಜ್ಞಾನಿಗಳು ಕಂಡುಹಿಡಿದ ಆವಿಷ್ಕಾರಗಳಿಂದಲೇ ಇಂದಿನ ವಿಜ್ಞಾನ ಹಿಂದಿದೆ.
ಪ್ಲಾಸ್ಟಿಕ್ ಸರ್ಜರಿ : ಸುಂದರವಾಗಿ ಕಾಣಬೇಕು ಅನ್ನೋ ಕಾರಣಕ್ಕೆ ಹತ್ತು ಹಲವಾರು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡವರು ತುಂಬಾ ಜನ ಇದ್ದಾರೆ.ಈ ಪ್ಲಾಸ್ಟಿಕ್ ಸರ್ಜರಿಯನ್ನು ಮೊದಲು ಕಂಡು ಹಿಡಿದವರು ಭಾರತದವರು.ಪ್ಲಾಸ್ಟಿಕ್ ಸರ್ಜರಿ ಅನ್ನುವುದು ಭಾರತೀಯರ ಕೊಡುಗೆ. ತುಂಬಾ ಜನರು ಪ್ಲಾಸ್ಟಿಕ್ ಸರ್ಜರಿಯನ್ನು ಆಧುನಿಕ ಕಾಲದ ಆವಿಷ್ಕಾರ ಎಂದು ಅಂದುಕೊಂಡಿದ್ದಾರೆ. ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿತ್ತು. ಭಾರತದ ಮಹಾನ್ ಋಷಿ ಶಿಶೃತ ಪ್ಲಾಸ್ಟಿಕ್ ಸರ್ಜರಿಯ ಜನಕ. 3000 ವರ್ಷಗಳ ಹಿಂದೆ ಚಿಕಿತ್ಸಾ ಕ್ಷೇತ್ರದಲ್ಲಿ ತುಂಬಾನೆ ಹೆಸರು ಮಾಡಿದ್ದ ಋಷಿ ಇವರು.ಇವತ್ತು ಪ್ಲಾಸ್ಟಿಕ್ ಸರ್ಜರಿ ಅಂತ ಕರೆಯುವ ಚಿಕಿತ್ಸೆಯನ್ನು ಆಗಿನ ಕಾಲದಲ್ಲಿ ಶಲ್ಯ ಚಿಕಿತ್ಸೆ ಎಂದು ಕರೆಯಲಾಗುತ್ತಿತ್ತು. ಯುದ್ಧದ ಸಂದರ್ಭದಲ್ಲಿ ಸೈನಿಕರು ಗಾಯಗೊಂಡಾಗ ಮಹಾಋಷಿ ಶಿಶೃತ ಚಿಕಿತ್ಸೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಮಹಾನ್ ಋಷಿಗಳು ಪ್ಲಾಸ್ಟಿಕ್ ಸರ್ಜರಿ ಮಾಡುತ್ತಿದ್ದಾರಂತೆ.ಇನ್ನು ಮುಂದೆ ಯಾರಾದರೂ ಪ್ಲಾಸ್ಟಿಕ್ ಸರ್ಜರಿಯನ್ನು ಕಂಡುಹಿಡಿದವರು ಯಾರೆಂದು ಕೇಳಿದರೆ ಹೆಮ್ಮೆಯಿಂದ ಹೇಳಿ ನಿಮ್ಮ ಭಾರತೀಯ ಶಿಶೃತ ಅಂಥ.
ವಿಮಾನ : ವಿಮಾನ ಕಂಡು ಹಿಡಿದಿದ್ದು ಯಾರೆಂದು ಕೇಳಿದರೆ ಎಲ್ಲರೂ ರೈಟ್ ಬ್ರದರ್ಸ್ ಎಂದು ಹೇಳುತ್ತಾರೆ. ಅದು ಜಗತ್ತು ಒಪ್ಪಿಕೊಂಡಿರುವ ಸತ್ಯ. ಆದರೆ ಅಸಲಿ ಸತ್ಯ ಬೇರೆ ಇದೆ. ಆಧುನಿಕ ವಿಮಾನ ಕಂಡುಹಿಡಿದದ್ದು ರೈಟ್ ಬ್ರದರ್ಸ್ ಅದರೆ ವಿಮಾನವನ್ನು ಕಂಡುಹಿಡಿದಿದ್ದು ರೈಟ್ ಬ್ರದರ್ಸ್ ಅಲ್ಲ. ಸಾವಿರಾರು ವರ್ಷಗಳ ಹಿಂದೆ ಭಾರತದ ಋಷಿ ಭಾರಧ್ವಜ ಎಂಬುವವರು ತಮ್ಮ ವಿಮಾನ ಶಾಸ್ತ್ರದಲ್ಲಿ ವಿಮಾನ ಮಾಡುವ ತಂತ್ರಜ್ಞಾನದ ಬಗ್ಗೆ ವಿವರವಾಗಿ ಬರೆದಿದ್ದರೂ.ಈ ಶಾಸ್ತ್ರದಲ್ಲಿ ಗೋದ ಎನ್ನುವ ವಿಮಾನ ಬಗ್ಗೆ ಉಲ್ಲೇಖ ಮಾಡಲಾಗಿದೆ.ಆ ವಿಮಾನ ಮಾಯವಾಗುವ ಶಕ್ತಿಯನ್ನು ಹೊಂದಿತ್ತು. ಸ್ಕಂದ ಪುರಾಣದಲ್ಲಿ ವಿಮಾನದ ಬಗ್ಗೆ ಉಲ್ಲೇಖ ಇದೆ.ಋಷಿ ಕರ್ಮದ್ ತನ್ನ ಪತ್ನಿಗಾಗಿ ವಿಮಾನವನ್ನು ತಯಾರಿಸಿದ್ದರು.ಈ ವಿಮಾನದಲ್ಲಿ ಎಲ್ಲಿ ಬೇಕಾದರೂ ಹೋಗಬಹುದಿತ್ತು. ರಾಮಾಯಣ ಕಾಲದಲ್ಲಿ ರಾವಣ ಬಳಿ ತುಂಬಾನೇ ವಿಮಾನಗಳಿಂದ್ದವು. ಅದರಲ್ಲಿ ಪುಷ್ಪಕ ವಿಮಾನ ಕೂಡ ಒಂದು. ಇದೇ ಪುಷ್ಪಕ ವಿಮಾನದಲ್ಲಿ ರಾವಣ ಸೀತೆಯನ್ನು ಅಪಹರಣ ಮಾಡಿದ್ದು. ಶ್ರೀಲಂಕಾದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ರಾವಣನ ಬಳಿ 4 ವಿಮಾನಗಳಲ್ಲಿ ಇದ್ದವಂತೆ.ಅದರ ಆವಶೇಷಗಳು ಸಿಕ್ಕಿದೆ. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರ ಬಳಿ ವಿಮಾನ ತಯಾರಿಸುವ ತಂತ್ರಜ್ಞಾನ ಇತ್ತು ಎನ್ನುವುದು ಗೊತ್ತಾಗುತ್ತದೆ.ರೈಟ್ ಬ್ರದರ್ಸ್ ವಿಮಾನ ಕಂಡುಹಿಡಿಯುವ 8 ವರ್ಷ ಮುನ್ನವೇ ಭಾರತದ ವಿಜ್ಞಾನಿಯೊಬ್ಬರು ವಿಮಾನವನ್ನು ತಯಾರಿಸಿದ್ದರು. ಅವರ ಹೆಸರು ಶಿವಾಕರ್ ಬಾಪೂಜಿ ತಾಲ್ಪಡೆ ಅಂಥ. ಜಗತ್ತಿನ ಮೊಟ್ಟಮೊದಲ ಬಾರಿಗೆ ವಿಮಾನವನ್ನು ಕಂಡುಹಿಡಿದಿದ್ದೆ ಇವರು. ಮುಂಬೈನ ಚೌಪಾಟಿ ಬಳಿ ಆ ವಿಮಾನವನ್ನು ಪ್ರಯೋಗ ಮಾಡಿದ್ದರು.ಅದು ಯಶಸ್ವಿಯಾಗಿ ಗಗನಕ್ಕೆ ಹರಿತ್ತು.ಶಿವಾಕರ್ ಬಾಪೂಜಿ ಭಾರಧ್ವಜರ ವಿಮಾನ ಶಾಸ್ತ್ರವನ್ನು ಓದಿ ವಿಮಾನವನ್ನು ತಯಾರಿಸಿದರು.ಆದರೆ ನಮ್ಮ ಇತಿಹಾಸ ಮಾತ್ರ ವಿಮಾನ ಕಂಡು ಹಿಡಿದಿದ್ದು ಯಾರು ಅಂತ ಕೇಳಿದರೆ ರೈಟ್ ಬ್ರದರ್ಸ್ ಹೇಳುತ್ತೆ.ಹಿಸ್ಟರಿ ವಾಸ್ ರಾಂಗ್, ವಿಮಾನ ಕಂಡು ಹಿಡಿದದ್ದು ಶಿವಾಕರ್ ಬಾಪೂಜಿ ತಾಲ್ಪಡೆ .
ಚಕ್ರ: ಇವತ್ತು ವಾಹನಗಳು ಚಲಿಸುತ್ತಿರುವುದು ಚಕ್ರದ ಸಹಾಯದಿಂದ. ಚಕ್ರದ ಅವಿಷ್ಕಾರ ವಿಜ್ಞಾನದ ಮುಖ್ಯ ಅಂಗ. ಯಾಕೆಂದರೆ ಚಕ್ರದ ಆವಿಷ್ಕಾರದ ನಂತರವೇ ಸೈಕಲ್, ಕಾರು, ಬಸ್ಸು,ಲಾರಿ ಬಂದಿದ್ದು. ಇತಿಹಾಸದ ಪ್ರಕಾರ ಚಕ್ರ ಆವಿಷ್ಕಾರವಾಗಿದ್ದು ಇರಾಕ್ ನಲ್ಲಿ. ಆದರೆ ರಾಮಾಯಣ ಮಹಾಭಾರತ ಕಾಲದಿಂದ ನಮ್ಮ ಬಳಿ ರಥಗಳು ಇದ್ದವು. ರಥಗಳಿಗೆ ಚಕ್ರ ಇದ್ದವು. ಚಕ್ರ ಆವಿಷ್ಕಾರವಾಗಿದ್ದು ಎಲ್ಲಿ ಎಂಬುವುದು ಎಲ್ಲರಿಗೂ ಗೊತ್ತಾಗುತ್ತದೆ. ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ ಸಿಂಧೂ ನಾಗರಿಕತೆಯ ಸಂದರ್ಭದಲ್ಲಿ ಕೂಡ ಚಕ್ರ ಇದ್ದವು. ಅದಕ್ಕೆ ಸಾಕ್ಷಿ ಎಂಬಂತೆ ಅವಶೇಷಗಳು ಸಿಕ್ಕಿವೆ.ಈ ಸಾಕ್ಷಿಯೇ ಚಕ್ರ ಆವಿಷ್ಕಾರವಾಗಿದ್ದು ಇರಾಕ್ ನಲ್ಲಿ ಅಲ್ಲ ಭಾರತದಲ್ಲಿ ಎಂಬುದು ತಿಳಿದಿದೆ.
ರೇಡಿಯೋ : ರೇಡಿಯೋ ಕಂಡು ಹಿಡಿದಿದ್ದು ಮಾರ್ಕೊನಿ ಎಂದು ಹೇಳುತ್ತಾರೆ.ನಮಗೆ ಪಾಠ ಪುಸ್ತಕದಲ್ಲಿ ಕಲಿಸಿದ್ದು ಇದನ್ನೇ. ಅದರೆ ಇದು ಶುದ್ಧ ಸುಳ್ಳು. ಬ್ರಿಟಿಷರ ಕಾಲದಲ್ಲಿ ಮಾರ್ಕೋನಿ ಜಗದೀಶ ಚಂದ್ರ ಬೋಸ್ ಅವರ ಒಂದು ಪುಸ್ತಕ ಸಿಗುತ್ತದೆ.ಆ ಪುಸ್ತಕದಲ್ಲಿ ಇದ್ದ ಆಧಾರದಿಂದ ಮಾರ್ಕೋನಿ ರೇಡಿಯೋ ಕಂಡು ಹಿಡಿದಿದ್ದು. ಮಾರ್ಕೊನಿಗೆ ಇದೇ ಆವಿಷ್ಕಾರಕ್ಕೆ ನೋಬೆಲ್ ಪ್ರೈಸ್ ಸಿಕ್ಕಿತ್ತು.ಅದರೆ ರೇಡಿಯೋ ಮೊದಲ ತರಂಗದ ಸಾರ್ವಜನಿಕರ ಪ್ರದರ್ಶನ ಮಾಡಿದ್ದು ಜಗದೀಶ ಚಂದ್ರಬೋಸ್. ಈ ಪ್ರದರ್ಶನ ನಡೆದ 2 ವರ್ಷದ ನಂತರವೆ ಮಾರ್ಕೊನಿ ರೇಡಿಯೋ ಕಂಡು ಹಿಡಿದಿದ್ದು. ಭಾರತದ ಆ ಸಂದರ್ಭದಲ್ಲಿ ಗುಲಾಮ ದೇಶವಾಗಿತ್ತು. ಹೀಗಾಗಿ ಭಾರತೀಯ ವಿಜ್ಞಾನಿ ಸಾಧನೆ ಗೊತ್ತೇ ಆಗಲಿಲ್ಲ. ಈ ಸಾಧನೆಯನ್ನು ಕದ್ದು ರೇಡಿಯೋ ತಯಾರಿಸಿದವರು ಜಗತ್ತಿನಲ್ಲಿ ಪ್ರಸಿದ್ಧವಾದ ಹಾಗೂ ನೋಬೆಲ್ ಪುರಸ್ಕಾರವನ್ನು ಕೂಡ ಪಡೆದುಕೊಂಡ. ಜಗದೀಶ್ ಚಂದ್ರ ಬೋಸ್ ಗೆ ತಾನು ಮಾಡಿದ ಆವಿಷ್ಕಾರದ ಬಗ್ಗೆ ಪೇಟೆಟ್ ಸಾಧ್ಯವಾಗುವುದಿಲ್ಲ.ಅದರೆ ಮಾರ್ಕೊನಿ ಪೇಟೆಟ್ ತೆಗೆದುಕೊಂಡುಬಿಡುತ್ತಾನೆ.ಜಗದೀಶ್ ಚಂದ್ರ ಬೋಸ್ ಆವಿಷ್ಕರಿಸಿದ ರೇಡಿಯೋ ತರಂಗದಿಂದಲೇ ಈ ಜಗತ್ತು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ.ಟಿವಿ, ಮೊಬೈಲ್, ಸೆಟ್ಲೈಟ್ ಇವು ಎಲ್ಲವು ಇದನ್ನೇ ಆವರಿಸಿದೆ.
ವಿದ್ಯುತ್ : ವಿದ್ಯುತ್ ಕಂಡು ಹಿಡಿದಿದ್ದು ಬೆಂಜಾಮೀನ್. ಅದರೆ ಆ ವಿದ್ಯುತ್ತನ್ನು ಹೇಗೆ ಬಳಸಬೇಕು ಅಂತ ಜಗತ್ತಿಗೆ ಹೇಳಿಕೊಟ್ಟಿದ್ದು ಥಾಮಸ್ ಆಲ್ವಾ ಎಡಿಸನ್.ಬಲ್ಬ್ ಕಂಡು ಹಿಡಿಯುವ ಮೂಲಕ ಜಗತ್ತನ್ನು ಬೆಳಗಿದ್ದು ಈ ಥಾಮಸ್ ಆಲ್ವಾ ಎಡಿಸನ್. ಆದರೆ ಬಲ್ಬ್ ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್ ತಮ್ಮ ಪುಸ್ತಕದಲ್ಲಿ ಒಂದು ಕಡೆ ಬರೆಯುತ್ತಾರೆ. ನಾನು ಸಂಸ್ಕೃತ ಶ್ಲೋಕವನ್ನು ಓದುತ್ತ ಮಲಗಿದ್ದೆ. ಹೀಗೆ ಮಲಗಿರಬೇಕಾದರೆ ಶ್ಲೋಕದ ಅರ್ಥವೇನು ಎಂದು ತಿಳಿಯುತ್ತದೆ. ಇದೆ ನನಗೆ ಬಲ್ಬ್ ಕಂಡುಹಿಡಿಯುವುದಕ್ಕೆ ಪ್ರೇರಣೆ ಆಗಿತ್ತು ಅಂಥ. ಮಹರ್ಷಿ ಅಗಸ್ತ್ಯ ದಶರಥನ ರಾಜಗುರು ಆಗಿದ್ದರು. ಇವರು ಸಪ್ತಋಷಿಗಳಲ್ಲಿ ಒಬ್ಬರು.ಋಷಿ ಅಗಸ್ತ್ಯ ಸಮಿತಾ ಎಂಬ ಗ್ರಂಥವನ್ನು ಬರೆದಿದ್ದಾರು. ಈ ಗ್ರಂಥದಲ್ಲಿ ವಿದ್ಯುತ್ ಉತ್ಪಾದನೆಯ ಸೂತ್ರ ಇತ್ತು. ಇದನ್ನೇ ಓದಿ ಥಾಮಸ್ ಅಲ್ವಾ ಎಡಿಸನ್ ಬಲ್ಬ್ ಕಂಡು ಹಿಡಿದಿದ್ದು.ಇದು ಜಗತ್ತಿಗೆ ಭಾರತೀಯರ ಕೊಡುಗೆ. ಭಾರತದ ವಿಜ್ಞಾನವನ್ನು ಬಿಟ್ಟು ಆಧುನಿಕ ವಿಜ್ಞಾನವನ್ನು ಕಲ್ಪಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಆದರೆ ಈ ಕ್ರೆಡಿಟ್ ಮಾತ್ರ ಭಾರತೀಯರಿಗೆ ಸಿಕ್ಕಿಲ್ಲ.