ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡುವುದಕ್ಕೆ ನಿಮ್ಮ ದಿನಬಳಕೆ ಅರಿಶಿನ ಪುಡಿ ಮಹತ್ವವನ್ನು ಮರೆಯುವಂತಿಲ್ಲ.ಏಕೆಂದರೆ ಅರಿಶಿಣದಲ್ಲಿ ನಿಮ್ಮ ತ್ವಚೆ ಅಂದವನ್ನು ಹೆಚ್ಚು ಮಾಡುವಂತಹ ಮತ್ತು ಚರ್ಮದ ಸಂಬಂಧಿತ ಸಮಸ್ಸೆಯನ್ನು ದೂರಮಾಡುವ ಒಳ್ಳೆಯ ಔಷಧೀಯ ಗುಣಗಳನ್ನು ಅರಿಶಿನ ಹೊಂದಿದೆ.ಹಾಗಾಗಿ ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ಅರಿಶಿಣದ ಬಳಕೆ ಹೇರಳವಾಗಿದೆ. ಇನ್ನು ಕೆಲವರು ಅರಿಶಿಣಕ್ಕಿಂತಲು ಮಿಗಿಲಾದ ಬೇರೆ ಯಾವುದಾದರು ನೈಸರ್ಗಿಕ ಪದಾರ್ಥವಿದ್ದರೆ ತಿಳಿಸಿ ಎಂದು ಕೇಳುತ್ತ ಇರುತ್ತಾರೆ. ಅದರಲ್ಲೂ ಮುಖದ ಮೇಲಿನ ಮೊಡವೆಗಳು, ಕಲೆಗಳು, ಗುಳ್ಳೆಗಳು, ಸುಕ್ಕುಗಗಳು, ಗೆರೆಗಳು ನಿವಾರಣೆಯಾಗಬೇಕು.
ಆದಷ್ಟು ಬೇಗನೆ ಇತರರಂತೆ ಹೆಚ್ಚು ಸುಂದರವಾಗಿ ಕಾಣಬೇಕು ಎಂದು ಅಂದುಕೊಳ್ಳುತ್ತಾರೆ.ಹಾಗಾಗಿ ಅವರಿಗಾಗಿ ಅರಿಶಿಣಕ್ಕಿಂತಲೂ ಸುಮಾರು 10 ಪಟ್ಟು ಶಕ್ತಿಯುತವಾದ ಒಂದು ವಸ್ತುವೆಂದರೆ ಅದೇ ಕಸ್ತೂರಿ ಅರಿಶಿನ.ಮುಖದಲ್ಲಿ ಇರುವ ಕೂದಲನ್ನು ಹೋಗಲಾಡಿಸುತ್ತದೆ.ಸೌಂದರ್ಯ ವೃದ್ಧಿಗಾಗಿ ಬಳಕೆ ಮಾಡುವ ಮಾಮೂಲಿ ಅರಿಶಿನಕ್ಕಿಂತ ಕಸ್ತೂರಿ ಅರಿಶಿನ ತುಂಬಾ ಶಕ್ತಿಯುತ.ಉತ್ತರ ಭಾರತದ ಕೇಲವೊಂದು ಹಳ್ಳಿಗಳಲ್ಲಿ ಈಗಲೂ ಕೂಡ ಪ್ರತಿದಿನ ಸ್ನಾನ ಮಾಡುವ ಸಂದರ್ಭದಲ್ಲಿ ಕಸ್ತೂರಿ ಅರಿಶಿಣ ಪೇಸ್ಟ್ ಅನ್ನು ತಯಾರಿಸಿಕೊಂಡು ಮುಖಕ್ಕೆ ಹಾಗೂ ಮೈ,ಕೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ.ಇದರಿಂದ ಸೌಂದರ್ಯ ವೃದ್ಧಿಯಾಗುವುದರ ಜೊತೆಗೆ ಈ ರೀತಿ ಕಸ್ತೂರಿ ಅರಿಶಿಣದ ಬಳಕೆ ಮಾಡುವುದರಿಂದ ಅನಗತ್ಯ ಕೂದಲನ್ನು ಕೂಡ ತಡೆಯಬಹುದು.ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಯಾವುದೋ ಕಾರಣದಿಂದ ಮುಖದಲ್ಲಿ ಅಲ್ಲಲ್ಲಿ ಗುಳ್ಳೆಗಳು ಅಥವಾ ಮೊಡವೆಗಳು ಉಂಟಾಗಿ ನಂತರದ ದಿನಗಳಲ್ಲಿ ಅವುಗಳ ಕಲೆಗಳು ನಿಮ್ಮ ಮುಖದ ಮೇಲೆ ಹಾಗೆ ಉಳಿದುಕೊಂಡು ಬಿಡುತ್ತದೆ. ನಿಮ್ಮ ಸೌಂದರ್ಯವನ್ನು ಕೂಡ ಇದು ಹಾಳು ಮಾಡುತ್ತದೆ.
ಕಸ್ತೂರಿ ಅರಿಶಿಣವನ್ನು ಹಾಲಿನೊಂದಿಗೆ ಅಥವಾ ಮೋಸರಿನೊಂದಿಗೆ ಮಿಶ್ರಣ ಮಾಡಿ ಕಲೆಗಳು ಹೆಚ್ಚಾಗಿರುವ ಭಾಗಕ್ಕೆ ನಯವಾಗಿ ಮಸಾಜ್ ಮಾಡಿ 10 ನಿಮಿಷ ಹಾಗೆ ಬಿಟ್ಟು ನಂತರ ನೀರಿನಲ್ಲಿ ತೊಳೆಯಿರಿ.ಈ ರೀತಿ ಮಾಡುತ್ತ ಬಂದರೆ ಮುಖದ ಕಲೆಗಳು ನಿವಾರಣೆ ಆಗುತ್ತದೆ. ಮೊಡವೆದಿಂದ ಸಂಪೂರ್ಣ ಮುಕ್ತಿ ದೊರೆಯುತ್ತದೆ.ನಿಮಗೆಲ್ಲ ಗೊತ್ತಿರುವ ಹಾಗೆ ಅರಿಶಿಣದಲ್ಲಿ ಕಾರ್ಕುಮಿನ್ ಎಂಬ ಅಂಶ ಇರುತ್ತದೆ.ಇದು ಅಂಟಿಬ್ಯಾಕ್ಟರಿಯಲ್ ಗುಣಲಕ್ಷಣಗಳನ್ನು ಹೊಂದಿರುವಂತಹ ಅಂಶ. ಇದರಿಂದಲೇ ಮೊಡವೆಗಳು ಬೇಗನೆ ನಿವಾರಣೆಯಾಗುತ್ತದೆ. ಕಸ್ತೂರಿ ಅರಿಶಿಣದ ಪುಡಿಯನ್ನು ತುಳಸಿ ರಸ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಬರೀ ನೀರಿನಲ್ಲಿ ತೊಳೆಯಿರಿ.ಹೀಗೆ ಮಾಡುತ್ತ ಬಂದರೆ ಚರ್ಮದ ಮೇಲಿನ ಮೊಡವೆಗಳು ಬೇಗನೆ ನಿವಾರಣೆ ಆಗುತ್ತದೆ.ನೆರಿಗೆಗಳನ್ನು ಹೋಗಲಾಡಿಸಲು ಸಹಕಾರ ಮಾಡುತ್ತದೆ.
ಮುಖದ ಮೇಲಿನ ನೆರಿಗೆಗಳು, ಸುಕ್ಕುಗಳನ್ನು, ಗೆರೆಗಳನ್ನು ಆದಷ್ಟು ಬೇಗನೆ ನಿವಾರಣೆ ಮಾಡಿಕೊಳ್ಳಲು ತಡಮಾಡದೇ ಕಸ್ತೂರಿ ಅರಿಶಿಣದ ಬಳಕೆ ಮಾಡಿ.ಇದರಿಂದ ಕೇವಲ ನಿಮ್ಮ ಆರೋಗ್ಯಕರ ಚರ್ಮ ನಿಮ್ಮದಾಗುವುದಲ್ಲದೆ ನಿಮ್ಮ ಮುಖ ಸದಾ ಹೊಳಪಿನಿಂದ ಕೂಡಿ ತ್ವಚೆ ಕಾಂತಿ ಕೂಡ ಹೆಚ್ಚಾಗುತ್ತದೆ.ನೆರಿಗೆಗಳನ್ನು ಹೋಗಲಾಡಿಸಲು ಹೇಗೆ ಬಳಕೆ ಮಾಡಬೇಕೆಂದರೆ ಹಾಲಿಗೆ ಕಸ್ತೂರಿ ಅರಿಶಿಣವನ್ನು ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಸ್ಟೇಚ್ ಮಾರ್ಕ್ಸ್ ಅನ್ನು ಹೋಗಲಾಡಿಸುತ್ತದೆ : ಗರ್ಭ ವ್ಯವಸ್ಥೆಯ ದಿನಗಳನ್ನು ಕಳೆಯುತ್ತಿರುವ ಮಹಿಳೆಯರು ಕಸ್ತೂರಿ ಅರಿಶಿಣದ ಪೇಸ್ಟ್ ಅನ್ನು ತಯಾರಿಸಿ ತಮ್ಮ ಕೆಳ ಹೊಟ್ಟೆಯ ಭಾಗದಲ್ಲಿ ಹಚ್ಚಿಕೊಂಡು ಮಸಾಜ್ ಮಾಡುತ್ತ ಬಂದರೆ ಸ್ಟ್ರೆಚ್ ಮಾರ್ಕ್ಸ್ ದೂರವಾಗುತ್ತದೆ.
ಡಾರ್ಕ್ ಸರ್ಕಲ್ ಗೆ ಉತ್ತಮ :ಕಸ್ತೂರಿ ಅರಿಶಿಣವನ್ನು ಸ್ವಲ್ಪ ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಪ್ರತಿದಿನ ಹಚ್ಚುತ್ತ ಬಂದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.ಕಸ್ತೂರಿ ಅಂಶ ಬಳಕೆ ಮಾಡುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಕಸ್ತೂರಿ ಅರಿಶಿಣ ಬಳಕೆ ಮೊದಲು ಪ್ಯಾಚ್ ಟೆಸ್ಟ್ ಮೂಲಕ ನಿಮ್ಮ ಚರ್ಮಕ್ಕೆ ಹೊಂದುತ್ತದೆ ಎಂಬುದನ್ನು ಕಂಡುಕೊಳ್ಳಿ.
ಯಾವುದೇ ಕಾರಣಕ್ಕೂ ಬರೀ ಅರಿಶಿಣವನ್ನು ಬಳಸಬೇಡಿ.ಕಸ್ತೂರಿ ಅರಿಶಿಣದ ಜೊತೆಗೆ ಮೋಸರು, ಜೇನುತುಪ್ಪ, ಕಡಲೆಯಿಟ್ಟು, ರೋಸ್ ವಾಟರ್ ಮಾದಲಾದವುಗಳಲ್ಲಿ ಒಂದು ಉತ್ಪನ್ನವಾದರೂ ಬೆರೆಸಿ ಬಳಸಿ.ಆದಷ್ಟು ಆರ್ಗಾನಿಕ್ ಕಸ್ತೂರಿ ಅರಿಶಿಣವನ್ನು ಬಳಸಿ.ಇನ್ನು ಕಸ್ತೂರಿ ಅರಿಶಿಣ ಅಯುರ್ವೇದಿಕ್ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ.ಎಲ್ಲಾ ಸ್ಕಿನ್ ಟೈಪ್ ಅವರು ಕಸ್ತೂರಿ ಅರಿಶಿಣವನ್ನು ಬಳಕೆ ಮಾಡಬಹುದು