APL,BPL ಯಾವುದೇ ರೇಷನ್ ಕಾರ್ಡ್ ಇದ್ದರೂ ಈ ವಿಡಿಯೋ ತಪ್ಪದೇ ನೋಡಿ!

Written by Anand raj

Published on:

ಕಳೆದ ಎರಡು ಮೂರು ವಾರಗಳಿಂದ ಬಿಪಿಎಲ್ ಕಾರ್ಡ್ ಇದ್ದವರಿಗೆ ಕೆಲವು ಸಿಹಿಸುದ್ದಿಗಳ ಜೊತೆಗೆ ಕೆಲವು ಶಾಕಿಂಗ್ ಸುದ್ದಿಗಳು ಕೂಡ ಬರುತ್ತಿದೆ. ಕೆಲವು ಕಡೆ ಇನ್ಮುಂದೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ಸಿಗುವುದಿಲ್ಲ. ಮತ್ತೊಂದು ಕಡೆ ಹಾಗೇನು ಆಗುವುದಿಲ್ಲ ಉಚಿತ ಅಕ್ಕಿ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ ಇನ್ಮುಂದೆ ರೇಷನ್ ಕಾರ್ಡ್ ಕೂಡ ಬಂದ್ ಆಗುತ್ತದೆ ಎನ್ನುವ ಸುದ್ದಿಗಳು ಬರುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಕೊಡುತ್ತಿರುವ ಅಕ್ಕಿ ಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಮುಂದೆ ಉಚಿತವಾಗಿ ಅಕ್ಕಿ ಕೊಡಬಾರದು ಎಂದು ಕೆಜಿ ಅಕ್ಕಿಗೆ 2-3 ರೂಪಾಯಿ ಚಾರ್ಜ್ ವಿಧಿಸಬೇಕು ಅಂತ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.ಇನ್ನು ಈಗ ಕೊಡುತ್ತಿರುವ ಅಕ್ಕಿಯಿಂದ ಯಾವುದೇ ಪ್ರಯೋಜನವಿಲ್ಲ ಹೀಗಾಗಿ ಪೌಷ್ಟಿಕಾಂಶ ಇರುವ ಅಕ್ಕಿಯನ್ನು ಇನ್ಮುಂದೆ ಕೊಡಲಾಗುತ್ತದೆ ಎಂದು ಗುಡ್ ನ್ಯೂಸ್ ಕೂಡ ಬಂದಿದೆ.

ಇದೀಗ ಇನ್ಮುಂದೆ ಅಕ್ಕಿಯನ್ನು ಮಾತ್ರ ಕೊಡುವುದಿಲ್ಲ, ಅಕ್ಕಿಯ ಜೊತೆಗೆ ಎಣ್ಣೆ, ಸಕ್ಕರೆ, ಗೋಧಿ ಮತ್ತು ಕೋಳಿ ಮೊಟ್ಟೆಯನ್ನು ಕೂಡ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಇದೆಲ್ಲಾ ನಿಜಕ್ಕೂ ಒಳ್ಳೆಯ ನಿರ್ಧಾರಗಳೇ. ಇದರಿಂದ ಬಡವರಿಗೆ ನಿಜಕ್ಕೂ ಒಳ್ಳೆಯದಾಗುತ್ತದೆ ಆದರೇ ಇದೆಲ್ಲದರ ನಡುವೆ ಅಕ್ರಮವಾಗಿ ರೇಶನ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಶಾಕ್ ಕೊಟ್ಟಿರುವ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಪಡೆದಿದ್ದ ಸುಮಾರು 1247151 ರೇಷನ್ ಕಾರ್ಡ್ ಗಳನ್ನು ಇದೀಗ ಆಹಾರ ಇಲಾಖೆ ರದ್ದುಗೊಳಿಸಿದೆ.

ರಾಜ್ಯಾದ್ಯಂತ ಬರೀ 12 ಲಕ್ಷಕ್ಕೂ ಹೆಚ್ಚು ಅಕ್ರಮ ರೇಷನ್ ಕಾರ್ಡ್ ಮಾತ್ರ ಅಲ್ಲ ಇನ್ನು ಸುಮಾರು ಜನರು ರೇಷನ್ ಕಾರ್ಡ್ ಹೊಂದಿದ್ದು ಕೂಡಲೇ ಒಂದು ವೇಳೆ ಈ ಹಿಂದೆ ನಕಲಿ ದಾಖಲೆ ಪತ್ರಗಳನ್ನು ನೀಡಿ ಆರ್ಥಿಕ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ ಸ್ವಯಂ ಪ್ರೇರಿತರಾಗಿ ತಾವೇ ತಾಲೂಕು ಕಚೇರಿಗಳಿಗೆ ಕಾರ್ಡ್ ಗಳನ್ನು ಹಿಂತಿರುಗಿಸಬೇಕು.

ಒಂದುವೇಳೆ ಕಾರ್ಡ್ ವಾಪಸ್ ನೀಡದಿದ್ದಲ್ಲಿ ಸರ್ಕಾರ ಪತ್ತೆ ಮಾಡಲಿದ್ದು ಸಿಕ್ಕಿ ಹಾಕಿಕೊಂಡವರಿಗೆ ಪಡಿತರ ಪಡೆದ ದಿನದಿಂದ ಇಲ್ಲಿಯವರೆಗೆ ಎಷ್ಟು ಕೆಜಿ ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕಹಾಕಿ ಕೆಜಿಗೆ 35 ರೂಪಾಯಿ ವಸೂಲಿ ಮಾಡುವುದರ ಜೊತೆಗೆ ಕ್ರಿಮಿನಲ್ ಕೇಸ್ ಬೀಳಲಿದೆ. ಹೀಗಾಗಿ ನೀವು ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದ್ದಾರೆ ಕೂಡಲೇ ಹಿಂತಿರುಗಿಸಿ ಕೇಸ್ ನಿಂದ ಬಚಾವ್ ಆಗಿರಿ ಇಲ್ಲವಾದರೆ ಶಿಕ್ಷೆ ಬೀಳುವುದು ಖಚಿತ.

Related Post

Leave a Comment