ಒಬ್ಬ ವ್ಯಕ್ತಿ ಬುದ್ಧನ ತಾಳ್ಮೆ ಎಂತಹದ್ದು ಪರೀಕ್ಷೆ ಮಾಡಬೇಕು ಎಂಬ ಉದ್ದೇಶದಿಂದ ಬುದ್ಧನು ಹೋಗುವ ದಾರಿಗೆ ಅಡ್ಡ ಬಂದು ಬಯ್ಯುತ್ತಾನೆನೀನೊಬ್ಬ ಅಯೋಗ್ಯ , ನೀನೊಬ್ಬ ಹೇಡಿ ಮತ್ತು ಇನ್ನಿತರವಾಗಿ ಅವಹೇಳನ ಮಾಡುತ್ತಾನೆಆದರೆ ಬುದ್ಧ ಯಾವುದೇ ರೀತಿಯ ಉತ್ತರ ನೀಡುವುದಿಲ್ಲ.ಆಗ ಮತ್ತೆ ಆ ವ್ಯಕ್ತಿ ನೀನು ಒಬ್ಬ ಕಳ್ಳ ಸ್ವಾಮೀಜಿ , ನೀನು ಕೆಲಸ ಇಲ್ಲದೆ ಊರೂರು ಅಲೆಯುತ್ತಿದ್ದೀಯಾ ಎಂದು ಬಯ್ಯುತ್ತಾನೆ.
ಆದರೆ ಬುದ್ಧ ಆಗಲೂ ಸಹ ಯಾವುದೇ ರೀತಿಯ ಉತ್ತರ ನೀಡುವುದಿಲ್ಲ ಬದಲಾಗಿ ಮುಗುಳ್ನಕ್ಕು ಸುಮ್ಮನಾಗುತ್ತಾರೆ.ಆದರೆ ಆ ವ್ಯಕ್ತಿ ಮತ್ತೆ ಬಾಯಿಗೆ ಬಂದ ಹಾಗೆ ಬೈಯುತ್ತಾನೆ ಕೊನೆಗೆ
ತನ್ನ ಬಾಯಿ ನೋವು ಬಂದು ಬುದ್ಧನಲ್ಲಿ ಹೀಗೆಂದು ಕ್ಷಮೆ ಕೇಳುತ್ತಾನೆ.
ನಾನು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದೆ ,ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಆ ವ್ಯಕ್ತಿ ಕ್ಷಮೆ ಯಾಚಿಸುತ್ತಾನೆ.ಇದನ್ನೆಲ್ಲಾ ನೋಡುತ್ತಿದ್ದ ಶಿಷ್ಯರು ಬುದ್ಧನಲ್ಲಿ ಹೀಗೆ ಕೇಳುತ್ತಾರೆ ಗುರುಗಳೇ ಆ ವ್ಯಕ್ತಿ ನಿಮ್ಮನ್ನು ಅಷ್ಟು ಹೀಯಾಳಿಸಿದರೂ ನೀವು ಏಕೆ ಅವನಿಗೆ ಉತ್ತರ ನೀಡಲಿಲ್ಲ?
ಎಂದು ಕೇಳುತ್ತಾರೆ.
ಆಗ ಬುದ್ಧ
— ಜೀವನದಲ್ಲಿ ನಿಮಗೆ ಯಾರಾದರೂ ಬೇಡವಾದ ವಸ್ತುವನ್ನು ತಂದು ಕೊಡಲು ಬಂದಾಗ
ನೀವು ಆ ವಸ್ತುವನ್ನು ನಿರಾಕರಿಸಿದರೆ ಅದನ್ನು ವಾಪಸ್ ತೆಗೆದುಕೊಂಡು ಹೋಗುತ್ತಾರೆ
ಹಾಗೂ ಅದು ಅವರ ಬಳಿಯೇ ಇರುತ್ತದೆ ಹಾಗೂ ಅದಕ್ಕೆ ಅವರೇ ವಾರಸುದಾರರಾಗುತ್ತಾರೆ.
ಹೀಗಾಗಿ ಅದೇ ರೀತಿ ಅವನು ಏನೇ ಬೈದರು ನಾನು ಏನನ್ನು ಸ್ವೀಕರಿಸಲೇ ಇಲ್ಲ ,ಅದು ಅವನಿಗೆ ವಾಪಸ್ಸಾಯಿತು ಅಷ್ಟೆ ಅದಕ್ಕೆ ವಾರಸುದಾರನು ಅವನೇ ಆದ.ಅದೇ ರೀತಿ ನಕಾರಾತ್ಮಕ ಯೋಚನೆಗಳು ಕೂಡ ಅದು ಯಾವುದೋ ಮೂಲಗಳಿಂದ ನಮ್ಮಲ್ಲಿ ಗೆ ಬಂದಾಗ ಅದಕ್ಕೆ ಮನಸ್ಸೆಂಬ ಮನೆಯಲ್ಲಿ ಜಾಗ ಕೊಟ್ಟು ಉಳಿಸಿಕೊಳ್ಳುವುದಕ್ಕೆ ಹೋಗಬಾರದು ಮತ್ತು ಒಳ್ಳೆ ಸಕಾರಾತ್ಮಕ ಜೀವನವನ್ನು ಜೀವಿಸಬೇಕು.
ಧನ್ಯವಾದಗಳು.