ನಮ್ಮ ರೈತರು ಯಾವುದರಲ್ಲೂ ಕಡಿಮೆ ಇಲ್ಲ ಅನ್ನುವುದನ್ನು ಪದೇಪದೇ ಸಾಬೀತು ಮಾಡುತ್ತಿದ್ದಾರೆ.ಅಲ್ಲಿ ಒಬ್ಬ ರೈತ ಹೂ ತೊಟಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದ್ದು ರಾತ್ರಿಯಾದರೆ ಸಾಕು ಈ ರೈತನ ತೋಟ ತುಂಬಾ ಚೆನ್ನಾಗಿ ಕಾಣಿಸುತ್ತದೆ ಮತ್ತು ನೋಡುಗರ ಕಣ್ಮನ ಸೆಳೆಯುತ್ತದೆ.
ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟದ ಪಟ್ರೇನಹಳ್ಳಿ ರೈತ ಗಿರೀಶ್ ಸೇವಂತಿ ಗಿಡ ಬೆಳೆಯಲು ಈ ಸ್ಮಾರ್ಟ್ ಐಡಿಯಾ ಮಾಡಿದ್ದು ತುಂಬಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗಿರೀಶ್ ಅವರು ಜಿಲ್ಲಾಡಳಿತ ಭವನದ ಎದುರು ಇರುವ ಎರಡುವರೆ ಎಕ್ಕರೆ ಜಮೀನಿಗೆ ಸೇವಂತಿ ಗಿಡಗಳನ್ನು ಹಾಕಿದ್ದು.ಹೂ ತೋಟಕ್ಕೆ ಜಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಿ ನೋಡುಗರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.ಈ ರೀತಿ ಲೈಟಿಂಗ್ ಮಾಡಿರುವುದು ಅಲಂಕಾರಕ್ಕಾಗಿ ಅಲ್ಲ ಬದಲಾಗಿ ಸೇವಂತಿ ಹೂವಿನ ಭರ್ಜರಿ ಇಳುವರಿಗಾಗಿ ರೈತ ಗಿರೀಶ್ ಮಾಡಿರುವ ಸ್ಮಾರ್ಟ್ ಐಡಿಯಾ ಇದು.
ಎರಡುವರೆ ಎಕರೆ ಪ್ರದೇಶದಲ್ಲಿ ಸೇವಂತಿ ಗಿಡ ನಾಟಿ ಮಾಡಿರುವ ರೈತ ಚಳಿಗಾಲ ಸಂದರ್ಭದಲ್ಲಿ ಸೂರ್ಯನ ಶಾಖ ಕಡಿಮೆ ಇರುತ್ತದೆ ಹೀಗಾಗಿ ಗಿಡದ ಬೆಳವಣಿಗೆ ಕಡಿಮೆಯಾಗದಂತೆ ಗಿಡಗಳಿಗೆ ಶಾಖ ಇರಲಿ ಎಂದು 500-600 ವಿದ್ಯುದ್ದೀಪಗಳನ್ನು ಅಳವಡಿಸಿದ್ದಾರೆ.
ರೈತನ ಈ ಐಡಿಯಾದಿಂದ ಈಗ ಸೇವಂತಿ ಗಿಡದಲ್ಲಿ ಹುಟ್ಟಿರುವ ಹೂವುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಬಂಪರ್ ಬೆಲೆಯೂ ಸಿಗುತ್ತಿದೆ.ಅಷ್ಟೇ ಅಲ್ಲದೆ ಅಕ್ಕ-ಪಕ್ಕದ ರೈತರು ಸಹ ಲೈಟಿಂಗ್ ಐಡಿಯಾ ಮಾಡಲು ಇವರಿಂದ ಪ್ರೇರಣೆ ಪಡೆದಿದ್ದಾರೆ.ಲೈಟಿಂಗ್ ವ್ಯವಸ್ಥೆಗೆ ಪ್ರತ್ಯೇಕವಾದ ಪವರ್ ಕನೆಕ್ಷನ್ ಪಡೆದಿದ್ದು ತಿಂಗಳಿಗೆ ಅಂದಾಜು 10000 ಕರೆಂಟ್ ಬಿಲ್ ಬರುತ್ತದೆ ಎಂದು ರೈತ ಗಿರೀಶ್ ಹೇಳಿದ್ದಾರೆ.