ಸಕ್ಸಸ್ಫುಲ್ ಜನರ 7 ಹವ್ಯಾಸಗಳು!

Written by Anand raj

Published on:

1)ಸಕ್ಸಸ್ಫುಲ್ ವ್ಯಕ್ತಿಗಳು ಸ್ವತಃ ತಮ್ಮ ಮೇಲೆ ನಂಬಿಕೆ ಇಡುತ್ತಾರೆ:ಯಾವ ಜನರು ಸ್ವತಃ ತಮ್ಮ ಮೇಲೆ ವಿಶ್ವಾಸ ಇಡುತ್ತಾರೋ ಅವರು ಪೂರ್ತಿ ಆತ್ಮವಿಶ್ವಾಸದಿಂದ ತಮ್ಮ ಕಾರ್ಯ ಮಾಡ್ತಾರೆ.ಅವರು ಯಾವ ಕೆಲ್ಸ ಮಾಡ್ತಾರೊ ಅದನ್ನು ಪೂರ್ತಿ ಮನಸ್ಸಿನಿಂದ ಮಾಡುತ್ತಾರೆ.ಯಾವುದೇ ನೆಗೆಟಿವ್ ತಿಂಕಿಂಗ್ ಅವರ ಮೈಂಡ್ನಲ್ಲಿ ಬರುವುದಿಲ್ಲ.ಸ್ವಂತ ತಮ್ಮ ಮೇಲೆ ವಿಶ್ವಾಸ ಇರುವ ಕಾರಣದಿಂದಲೇ ಇಂಥ ಜನರು ತುಂಬಾ ದೊಡ್ಡ ಕಾರ್ಯಗಳನ್ನು ಸಹ ತುಂಬಾ ಸಿಂಪಲ್ ಮಾರ್ಗದಲ್ಲಿ ಕಂಪ್ಲೀಟ್ ಮಾಡುತ್ತಾರೆ. ಸಕ್ಸಸ್ಫುಲ್ ವ್ಯಕ್ತಿಯ ಈ ಹ್ಯಾಬಿಟ್ ಯಾವಾಗ್ಲೂ ಅವನಿಗೆ ಮುಂದೆ ಸಾಗುವುದಕ್ಕೆ ಮೋಟಿವೇಟ್ ಮಾಡುತ್ತದೆ.

2)ಸಕ್ಸಸ್ಫುಲ್ ವ್ಯಕ್ತಿಗಳಿಗೆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಅಂತ ಗೊತ್ತು:ಸಕ್ಸಸ್ಫುಲ್ ವ್ಯಕ್ತಿಗಳು ಪ್ರಾಬ್ಲಮ್ಸ್ ಸಾಲ್ವರ್ಸ್ ಆಗಿರ್ತಾರೆ. ಪ್ರತಿಯೊಂದು ಬರುವ ಸಮಸ್ಯೆಯನ್ನು ಅವರು ಫೀಲ್ ಮಾಡುತ್ತಾರೆ ಸಮಸ್ಯೆಯನ್ನು ಪರಿಹರಿಸುವುದು ಅವರಿಗೆ ತುಂಬಾ ಚೆನ್ನಾ ಗೊತ್ತಿರುತ್ತದೆ. ಯಾವುದೇ ಪ್ರಾಬ್ಲಮ್ ಅನ್ನು ಅವರು ಭಾರ ಅಂತ ತಿಳಿಯುವುದಿಲ್ಲ ಬದಲಿಗೆ ಅವರು ಅಂದುಕೊಳ್ತಾರೆ ಪ್ರಾಬ್ಲೆಮ್ಸ್ ಗಳು ನಮಗೆ ಏನಾದರೂ ಹೊಸದಾಗಿ ಕಲಿಸುವುದಕ್ಕೆ ಬರುತ್ತವೆ. ಪ್ರತಿಯೊಂದು ಸಮಸ್ಯೆಯನ್ನು ಸಾಲ್ವ್ ಮಾಡುವುದನ್ನು ಅವರು ಕಲಿತಾರೆ.ಪ್ರಾಬ್ಲಮ್ಸ್ ಗೆ ಹೆದರಬೇಡಿ ಬದಲಿಗೆ ಪ್ರಾಬ್ಲಂ ಸಾಲ್ವರ್ ಆಗಿ.

3 )ಸಕ್ಸಸ್ಫುಲ್ ವ್ಯಕ್ತಿಗಳು ಯಾವತ್ತೂ ಸೋಲನ್ನು ಒಪ್ಪುವುದಿಲ್ಲ:ಸಕ್ಸಸ್ಫುಲ್ ವ್ಯಕ್ತಿಗಳು ಎಲ್ಲಕ್ಕಿಂತ ಬೆಸ್ಟ್ ಹ್ಯಾಬಿಟ್ ಅಂದ್ರೆ ಅವರು ಯಾವತ್ತೂ ಬಿಟ್ಟುಕೊಡುವುದಿಲ್ಲ.ಸಕ್ಸಸ್ಫುಲ್ ವ್ಯಕ್ತಿಗಳು ಯಾವಾಗಲೂ ಗೆಲ್ತಾನೆ ಇರ್ತಾರೆ ಅಥವಾ ಒಂದೇ ಪ್ರಯತ್ನದಲ್ಲಿ ಅವರಿಗೆ ಸಕ್ಸಸ್ ಸಿಗುತ್ತೆ ಅಂತಲ್ಲ.ಅವರು ಕೂಡ ತುಂಬಾ ಕಾರ್ಯಗಳಲ್ಲಿ ಅಸಫಲರಾಗುತ್ತಾರೆ ,ಫೇಲ್ ಆಗ್ತಾರೆ ಸಕ್ಸಸ್ ಪಡೆಯುವುದಕ್ಕಾಗಿ ಅವರಿಗೂ ಕೂಡ ತುಂಬಾ ಸೋಲನ್ನು ಅನುಭವಿಸಬೇಕಾಗುತ್ತದೆ ಆದ್ರೆ ಕೊನೆಗೆ ಅವರು ಸಕ್ಸಸ್ ಆಗಿಯೇ ಬಿಡುತ್ತಾರೆ.ಯಾಕೆಂದರೆ ಅವರು ಸಕ್ಸಸ್ ಗೋಸ್ಕರ ಪ್ರಯತ್ನ ಮಾಡುವುದನ್ನು ಬಿಡುವುದಿಲ್ಲ. ಇಂಥ ಜನರು ಯಾವತ್ತೂ ಸೋಲಲ್ಲ ಎಷ್ಟೇ ಸಮಸ್ಯೆ ಇದ್ದರು ಅವರು ತಮ್ಮ ಹಾದಿಯಲ್ಲಿ ನಡೀತಾರೆ. ಅವರು ಯಾವತ್ತೂ ಸೋಲನ್ನು ಒಪ್ಪುವುದೇ ಇಲ್ಲ ಅವರ ಈ ಹ್ಯಾಬಿಟ್ ಅವರನ್ನು ಯಶಸ್ವಿ ಮಾಡುತ್ತದೆ.

4)ಸಕ್ಸಸ್ಫುಲ್ ವ್ಯಕ್ತಿಗಳು ತಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಚಾಲೆಂಜನ್ನು ಒಂದು ಅಪಾರ್ಚುನಿಟಿ ರೂಪದಲ್ಲಿ ನೋಡುತ್ತಾರೆ. ಇಂಥವರು ಯಾವಾಗ ತಮ್ಮ ಮುಂದೆ ಯಾವುದೇ ಒಂದು ಚಾಲೆಂಜನ್ನು ನೋಡ್ತಾರೆ ಅವರು ಅದಕ್ಕೆ ಹೆದರುವುದಿಲ್ಲ ಬದಲಿಗೆ ಆ ಚಾಲೆಂಜನ್ನು ಅಸೆಪ್ಟ್ ಮಾಡಿ ಅದನ್ನು ಅವಕಾಶದ ರೂಪದಲ್ಲಿ ತಿಳ್ಕೊಂಡು ಅದನ್ನು ಎದುರಿಸುತ್ತಾರೆ.ಆ ಚಾಲೆಂಜನ್ನು ಅವರು ಎದುರಿಸಿ ಅದನ್ನು ಸಕ್ಸಸ್ಫುಲ್ ಆಗಿ ಕಂಪ್ಲೀಟ್ ಕೂಡ ಮಾಡುತ್ತಾರೆ ಮತ್ತು ಅದರಿಂದ ಅವರು ಏನಾದ್ರೂ ಒಳ್ಳೇದು ಕಲಿಯುತ್ತಾರೆ ಮತ್ತು ಅವರ ಲಾಭಾನೂ ಪಡೀತಾರೆ.

5 )ಸಕ್ಸಸ್ಫುಲ್ ವ್ಯಕ್ತಿಗಳು ಓಪನ್ ಮೈಂಡಡ್ ಇರುತ್ತಾರೆ:ಒಳ್ಳೆಯ ವಿಚಾರಗಳನ್ನು ಅಸೆಪ್ಟ್ ಮಾಡುವುದಕ್ಕಾಗಿ ಅವರ ಮೈಂಡ್ ಯಾವಾಗಲೂ ರೆಡಿ ಇರುತ್ತದೆ.ಇಂತ ಜನರು ಯಾವಾಗಲೂ ಕೆಟ್ಟ ವಿಚಾರಗಳನ್ನು ತಮ್ಮ ಒಳಗಡೆ ಬರುವುದಕ್ಕೆ ಬಿಡಲ್ಲ ಒಂದು ವೇಳೆ ಕೆಟ್ಟ ವಿಚಾರ ಬಂದ್ರು ಕೂಡ ಅವರು ಅದನ್ನು ಇಮ್ಮಿಡಿಯಟ್ಲಿ ನೆಗ್ಲೆಕ್ಟ್ ಮಾಡ್ತಾರೆ.ಸಕ್ಸಸ್ಫುಲ್ ವ್ಯಕ್ತಿಗಳು ಯಾವಾಗಲೂ ಎಲ್ಲರ ಪ್ರಾಫಿಟ್ ಬಗ್ಗೆ ಯೋಚನೆ ಮಾಡ್ತಾರೆ ಅವರು ಯಾವತ್ತೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸಲ್ಲ.ಅವಶ್ಯಕತೆ ಇದ್ದಾಗ ಅವರು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಯಾವಾಗಲೂ ರೆಡಿ ಇರುತ್ತಾರೆ.ಜೀವನದ ಪ್ರತಿಯೊಂದು ಕಾರ್ಯವನ್ನು ಓಪನ್ ಮೈಂಡ್ ಇಂದಾನೆ ಮಾಡುತ್ತಾರೆ.

6 )ಸಕ್ಸಸ್ ಫುಲ್ ವ್ಯಕ್ತಿಗಳು ಪ್ರತಿದಿನ ಏನಾದರೂ ಹೊಸ ಬದಲಾವಣೆ ತರುವುದಕ್ಕೆ ನೋಡ್ತಾರೆ:ಸಕ್ಸಸ್ಫುಲ್ ವ್ಯಕ್ತಿಗಳು ಪ್ರತಿದಿನ ಹೊಸದಾಗಿ ಪ್ರಯತ್ನ ಮಾಡ್ತಾರೆ ಮತ್ತು ಅವರು ಈ ಹೊಸ ಪ್ರಯತ್ನಗಳೇ ಒಂದು ಒಳ್ಳೆ ಪರಿವರ್ತನೆ ತರುತ್ತದೆ.ಈ ಜಗತ್ತು ಬದಲಾಗುತ್ತಿದೆ ಮತ್ತು ಸಕ್ಸಸ್ಫುಲ್ ವ್ಯಕ್ತಿಗಳು ಈ ಬದಲಾಗುವ ಜಗತ್ತಿನಲ್ಲಿ ಒಂದು ಹೊಸ ಬದಲಾವಣೆ ತರುತ್ತಾರೆ.ಹೊಸ ಬದಲಾವಣೆ ಅಥವಾ ಹೊಸ ಪರಿವರ್ತನೆ ಹವಾ ಇಂಥ ಜನರನ್ನು ಸಕ್ಸಸ್ಫುಲ್ ವ್ಯಕ್ತಿಯಾಗಿ ಮಾಡುತ್ತದೆ.

7)ಸಕ್ಸಸ್ ಫುಲ್ ವ್ಯಕ್ತಿಗಳು ಸೆಲ್ಫ್ ಮೋಟಿವೇಟ್ ಮಾಡುತ್ತಾರೆ.:ಅವರು ಸ್ವತಃ ತಾವು ಮಾಡುವ ಕಾರ್ಯಗಳಿಂದಲೇ ಮೋಟಿವೇಶನ್ ಪಡೆಯುತ್ತಾರೆ. ತಮ್ಮ ಚಿಕ್ಕ ಚಿಕ್ಕ ಕೆಲಸಗಳಿಂದ ಇಂಥ ಜನರು ದೊಡ್ಡ ಯಶಸ್ವಿ ಗೋಸ್ಕರ ಪ್ರೇರಣೆ ಪಡೆಯುತ್ತಾರೆ.ಅವರು ಹೊರಗಡೆ ಯನ್ನು ಮೋಟಿವೇಷನ್ ಪಡೆಯುವುದಿಲ್ಲ ಅಂತಲ್ಲ ಅವರು ಹೊರಗಡೆಯಿಂದ ಪಡೆಯುತ್ತಾರೆ. ಆದರೆ ಹೊರಗಡೆ ಸಿಗುವ ಮೋಟಿವೇಷನ್ ಮೇಲೆ ಅವರು ಡಿಫೆಂಡ್ ಆಗಲ್ಲ ಬದಲಿಗೆ ಸೆಲ್ಫ್ ಮೋಟಿವೇಟಡ್ ಇರುತ್ತಾರೆ.

ನಿಮ್ಮ ಪ್ರಕಾರ ಸಕ್ಷಸ್ ಆಗುವುದಕ್ಕೆ ಟಿಪ್ಸ್ ತಿಳಿಸಿ.ಧನ್ಯವಾದಗಳು.

Related Post

Leave a Comment