4 ಶ್ರಾವಣ ಶುಕ್ರವಾರ ಮಾಡುವ ಮಂಗಳಗೌರಿ ವ್ರತ ಪೂಜಾ ವಿಧಾನ/ಮುತೈದೆಯರಿಗೆ ಕುಂಕುಮ ಕೊಡುವ ಸರಿಯಾದ ವಿಧಾನ!

Written by Anand raj

Published on:

ಮಂಗಳಗೌರಿ ಪೂಜೆಯಲ್ಲಿ ತಂಬಿಟ್ಟು ಆರತಿ ಮತ್ತು ಕಾಡಿಗೆ ಇಡಿಯೋದು ತುಂಬಾನೇ ಮುಖ್ಯವಾದದ್ದು.ತಂಬಿಟ್ಟು ದೀಪರಾಧನೆ ಮಾಡುವ ವಿಧಾನ:ಈ ಆರತಿ ಮಾಡುವುದಕ್ಕೆ ಗೋಧಿ ಹಿಟ್ಟು ಬೇಕು.ಈ ಬಾರಿ ಬಂದಿರುವ ಮಂಗಳಗೌರಿ ನಾಗರ ಪಂಚಮಿ ಹಬ್ಬದ ದಿನ ಪ್ರಾರಂಭವಾಗಿದೆ. 4 ವಾರಗಳು ಈ ಮಂಗಳಗೌರಿ ಪೂಜೆ ಮಾಡಲು ಸಿಗುತ್ತದೆ. ಇದನ್ನು ಮದುವೆ ಆದವರು ಮಾಡಬೇಕು. ಗಂಡ ಹೆಂಡತಿ ಇಬ್ಬರು ಸೇರಿಕೊಂಡು ಪೂಜೆಯನ್ನು ಮಾಡಬೇಕು. ಗೋಧಿ ಹಿಟ್ಟಿಗೆ ಬೆಲ್ಲ ಮತ್ತು ತುಪ್ಪ, ಹಸಿ ಹಾಲು ಹಾಕಿ ಮಿಕ್ಸ್ ಮಾಡಿಕೊಂಡು 16 ದೀಪಗಳನ್ನು ತಯಾರಿಸಿ.ಈ ದೀಪರಾಧನೆಗೆ ತುಪ್ಪವನ್ನೇ ಬಳಸಬೇಕಾಗುತ್ತದೆ. ದೀಪರಾಧನೆ ಮುಗಿದ ಮೇಲೆ ಮನೆಗೆ ಬರುವ ಮುತೈದೆಯರಿಗೆ ಕುಂಕುಮ ಜೊತೆ ಇದನ್ನು ಕೊಡಬೇಕಾಗುತ್ತದೆ.

ಮಂಗಳಗೌರಿ ವ್ರತದ ಪೂರ್ವ ಸಿದ್ಧತೆ :ಇನ್ನು ಮುತೈದೆಯರಿಗೆ ಮಡಿಲಕ್ಕಿ ಅನ್ನು ಕೊಡಬೇಕು. ಮೊದಲು ಒಂದು ಬ್ಲೌಸ್ ಪೀಸ್ ಮತ್ತು ಎರಡು ವೀಳ್ಯದೆಲೆ ಆಡಿಕೆ, ದಕ್ಷಿಣೆ, ಅರಿಶಿಣ ಕುಂಕುಮ, ಬಳೆ, ಕಡಲೆ ಕಾಳು, ಬಾಳೆಹಣ್ಣು ಇಟ್ಟು ತಯಾರಿ ಮಾಡಿಕೊಳ್ಳಬೇಕು. ಇದೆ ರೀತಿ 5 ಜೋಡಿಗಳನ್ನು ಮಾಡಿಕೊಳ್ಳಬೇಕು.ಇನ್ನು 16 ಎಳೆ ಗೆಜ್ಜೆ ವಸ್ತ್ರ, ಒಂದು ಡಜನ್ ಬಳೆ,32 ಆಡಿಕೆ, ಅರ್ಧ ಒಣ ಕೊಬ್ಬರಿ, ಅರಿಶಿಣ ಕುಂಕುಮ,ಬೆಲ್ಲ,32 ವೀಳ್ಯದೆಲೆ ಜೋಡಣೆ ಮಾಡಿ ಇಟ್ಟುಕೊಳ್ಳಬೇಕು. ಮುಖ್ಯವಾಗಿ ಮಂಗಳಗೌರಿ ಪೂಜೆ ಮಾಡುವವರು ಮಂಗಳಗೌರಿ ವ್ರತದ ಬುಕ್ ಅನ್ನು ತೆಗೆದುಕೊಂಡು ಬಂದು ಓದಬೇಕು.

ಮಂಗಳಗೌರಿ ಕಥೆ : ಒಬ್ಬಳು ಪತ್ನಿ ತನ್ನ ಪತಿಯೂ ಅಲ್ಪ ಆಯಸ್ಸು ಆಗಿರುತ್ತನೇ. ಅವಳು ಅವನನ್ನು ದೀರ್ಘಯುಷ್ಯವಾಗಿ ಬದುಕಿಸಿಕೊಳ್ಳುತ್ತಾಳೆ.ಗೌರಿ ಪೂಜೆ ಮಾಡುವ ಮೊದಲು ಅರಿಶಿಣದಿಂದ ಗೌರಿಯನ್ನು ರೆಡಿ ಮಾಡಿಕೊಳ್ಳಬೇಕು. ಅರಿಶಿಣಕ್ಕೆ ತುಪ್ಪ ಹಸಿ ಹಾಲು ಹಾಕಿ ಗೌರಿಯನ್ನು ತಯಾರಿಸಿಕೊಳ್ಳಬೇಕು. ನಂತರ ಪೀಠವನ್ನು ರೆಡಿ ಮಾಡಿಕೊಳ್ಳಬೇಕು. ಮೊದಲು ರಂಗೋಲಿ ಹಾಕಿ ಮಣೆ ಇಟ್ಟು ಬ್ಲೌಸ್ ಪೀಸ್ ಹಾಕಬೇಕು. ನಂತರ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ನಂತರ ಅರಿಶಿಣದಿಂದ ಅಕ್ಕಿಯ ಮೇಲೆ ರಂಗೋಲಿ ಹಾಕಬೇಕು. ನಂತರ ಎರಡು ವೀಳ್ಯದೆಲೆ ಇಟ್ಟು ಅರಿಶಿಣ ಕುಂಕುಮ ಅಕ್ಷತೆ ಹಾಕಿ ಕಳಸವನ್ನು ಪ್ರತಿಷ್ಟಪಾನೇ ಮಾಡಿಕೊಳ್ಳಬೇಕು.

ಕಳಸದ ಒಳಗೆ ಅರಿಶಿಣ ಕುಂಕುಮ ಕಾಯಿನ್ ಹಾಕಿ 5 ವೀಳ್ಯದೆಲೆ ಇಟ್ಟು ಕಾಯಿಯನ್ನು ಪ್ರತಿಷ್ಟಪಾನೇ ಮಾಡಬೇಕು. ನಂತರ ಕಳಸಕ್ಕೆ ಕಂಕಣ ಕಟ್ಟಿ ಅರಿಶಿಣ ಕೊಂಬನ್ನು ಕಟ್ಟಬೇಕು. ಬ್ಲೌಸ್ ಪೀಸ್ ಅನ್ನು ಹಾಕಬೇಕು. ನಂತರ ಮಾಂಗಲ್ಯ ರೀತಿ ಅರಿಶಿಣ ಕೊಂಬನ್ನು ಅಥವಾ ಬೆಳ್ಳಿ ಬಂಗಾರದ ಮಂಗಲ್ಯಾವನ್ನು ಹಾಕಬೇಕು. ಗೌರಿ ಮುಖ ಪದ್ಮ ಇದ್ದರೆ ಇಟ್ಟು ಅರಿಶಿಣ ಕುಂಕುಮವನ್ನು ಹಚ್ಚಬೇಕು. ನಂತರ 16 ಎಳೆ ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಗೌರಿ ಹತ್ತಿರ ಬಳೆ, ಬ್ಲೌಸ್ ಪೀಸ್, ಒಣ ಕೊಬರಿ,32 ಆಡಿಕೆ,,16 ಜೋಡಿ ವೀಳ್ಯದೆಲೆ,ಬೆಲ್ಲ, ಭಾಗಿನ ಸಾಮಾನು ಇಡಬೇಕು.

ಇಷ್ಟು ಸಿದ್ಧತೆ ಅದಬಳಿಕ ಮೊದಲು ಗಣೇಶನ ಪೂಜೆಯನ್ನು ಮಾಡಿಕೊಳ್ಳಬೇಕು. ನಂತರ ಅರಿಶಿಣ ಗೌರಿಯನ್ನು ಹೂವಿನಿಂದ ಅಲಂಕಾರ ಮಾಡಬೇಕು. 16 ತಂಬಿಟ್ಟಿನ ಆರತಿ, ದೃಷ್ಟಿ ತೆಗೆಯುವುದಕ್ಕೆ ಕೆಂಪು ಆರತಿ ಅನ್ನು ತಯಾರಿ ಮಾಡಿ ಇಟ್ಟುಕೊಳ್ಳಬೇಕು.ಗೌರಿ ಫೋಟೋ ಹಿಂದೆ ಶಿವ ಪಾರ್ವತಿ ಫೋಟೋ ಹಾಗು ಎರಡು ದೀಪ, ಬಾಳೆ ಕಂಬವನ್ನು ಸಹ ಇಡಬೇಕು.ಇದಿಷ್ಟು ಮಂಗಳ ಗೌರಿ ಪೂಜೆ ಮಾಡುವ ಸಂದರ್ಭದಲ್ಲಿ ಮಾಡಬೇಕಾದ ಪೂರ್ವ ಸಿದ್ಧತೆ.

ಪ್ರತಿ ಮಂಗಳವಾರ ಶ್ರಾವಣ ಮಾಸ ಮುಗಿಯುವವರೆಗೂ ಕೂಡ ಈ ಪೂಜೆಯನ್ನು ಮಾಡಬಹುದು.ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೂವಿನಿಂದ ಅಲಂಕಾರ ಮಾಡಿ. ಮದುವೆ ಆಗಿ ಮೊದಲು 5 ವರ್ಷ ಮಾಡಿ ಉದ್ಯಪನೆ ಮಾಡಬೇಕು. ಇದಿಷ್ಟು ಆದ ಬಳಿಕ ಊದುಬತ್ತಿ ಬೆಳಗಬೇಕು ಮತ್ತು ದೂಪವನ್ನು ಬೆಳಗಿ ಮಂಗಳಗೌರಿ ಬುಕ್ ಅನ್ನು ಓದಬೇಕು. ಇದರಲ್ಲಿ ಇರುವುದನ್ನು ತಪ್ಪದೆ ಬಾಯಿ ಬಿಟ್ಟು ಮನೆಯವರಿಗೆ ಕೇಳುವ ರೀತಿ ಓದಬೇಕು.

ಅಮ್ಮನವರಿಗೆ ಮೊಸರನ್ನ ಎಂದರೆ ಗೌರಮ್ಮನಿಗೆ ತುಂಬಾನೇ ಪ್ರೀತಿ. ಹಾಗಾಗಿ ಅವತ್ತಿನ ದಿನ ಮೊಸರು ಅನ್ನ ಹೆಸರು ಬೆಳೆ ಕೋಸಂಬರಿ ಪಾನಕ ಸಕ್ಕರೆ ಪೊಂಗಲ್ ಈ ರೀತಿಯಾಗಿ ನೈವೈದ್ಯವನ್ನು ಮಾಡಿ. ಮಂಗಳಗೌರಿ ವ್ರತ ಓದಿದ ನಂತರ ತಂಬಿಟ್ಟಿನ ಆರತಿ ಮಾಡಬೇಕು. ಊದುಬತ್ತಿ ಯಿಂದ ಅಷ್ಟು ದೀಪವನ್ನು ಹಚ್ಚಿಕೊಳ್ಳಬೇಕು. ನಂತರ ಗೌರಮ್ಮನಿಗೆ ಬೆಳಗಬೇಕು. ನೀವು ಏನನ್ನು ಬೇಡಿಕೊಂಡು ಇರುತ್ತಿರೋ ಅದು ಈಡೇರುತ್ತದೆ. ನಂತರ ಕಾಡಿಗೆಯನ್ನು ಶೇಖರಣೆ ಮಾಡಬೇಕು. ಒಂದು ಚಮಚ ತೆಗೆದುಕೊಂಡು ತಂಬಿಟ್ಟಿನ ಆರತಿ ಮೇಲೆ ಇಟ್ಟು ಕಾಡಿಗೆಯನ್ನು ಶೇಕರಣೆ ಮಾಡಬೇಕು.ನಂತರ ಕಾಡಿಗೆಯನ್ನು ಅಮ್ಮನವರಿಗೆ ಹಾಗು ನೀವು ಕೂಡ ಹಚ್ಚಿಕೊಳ್ಳಬೇಕು. ನಂತರ ಕಾಯಿ ಒಡೆದು ಮಂಗಳರಾತಿ ಮಾಡಬೇಕು. ಮಂಗಳಾರತಿ ಮಾಡಿದ ತಕ್ಷಣ ಮುತೈದೆಯರಿಗೆ ಅರಿಶಿಣ ಕುಂಕುಮ ಭಾಗಿನವನ್ನು ಕೊಡಬೇಕು.

ಮುತೈದೆಯರಿಗೆ ಯಾವ ರೀತಿ ಕುಂಕುಮ ಕೊಡಬೇಕು ಎಂದರೆ :ಕಾಡಿಗೆ ಅನ್ನು ಒಂದು ವೀಳ್ಯದೆಲೆ ಅಲ್ಲಿ ಹಾಕಿ ಅರಿಶಿಣ ಕುಂಕುಮ ಹೂವು ಹಾಗು ಬ್ಲೌಸ್ ಪೀಸ್ ವೀಳ್ಯದೆಲೆ ಬಾಳೆಹಣ್ಣು, ಹೂವು ಅನ್ನು ಕೊಡಬೇಕು ಹಾಗು ತಂಬಿಟ್ಟಿನ ಆರತಿಯನ್ನು ಒಂದೊಂದು ಕೊಡಬೇಕು. ಮೊದಲು ಹೂವು ಕೊಟ್ಟು ಅರಿಶಿಣ ಕುಂಕುಮವನ್ನು ಕೊಡಿ. ನಂತರ ಕಾಡಿಗೆ ಕೊಡಬೇಕು.ನಂತರ ತಾಂಬೂಲ ಜೊತೆ ತಂಬಿಟ್ಟಿನ ಆರತಿ ಅನ್ನು ಕೊಡಬೇಕು. ನಂತರ ಅವರ ಹತ್ತಿರ ಅಕ್ಷತೆ ಕೊಟ್ಟು ನೀವು ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಮಂಗಳಗೌರಿ ಪೂಜೆ ಮಾಡುವವರು ಇದನ್ನು ಅನುಸರಿಸಾಲೆಬೇಕು. ಉಳಿದ ತಂಬಿಟ್ಟು ಅನ್ನು ಹಸುವಿಗೆ ಕೊಡಬೇಕು. ನಂತರ ಕೋನೇಯಲ್ಲಿ ರಾತ್ರಿ ಸಮಯದಲ್ಲಿ ಕೆಂಪು ಆರತಿ ಮಾಡಬೇಕು ಮತ್ತು ಸ್ವಲ್ಪ ಕಳಸವನ್ನು ಕದಲಿಸಿ ಹಾಗೆ ಇಟ್ಟು ಬಿಡಿ. ಇನ್ನು 32 ಆಡಿಕೆ ಎಲೆಯನ್ನು ಬಂದಿರುವ ಮುತೈದೆಯರಿಗೆ ಕೊಡಬಹುದು. ಇದೆ ರೀತಿ 5 ವರ್ಷ ಮಾಡಬೇಕು ಹಾಗು ಕೋನೇ ವರ್ಷ 8 ಭಾಗಿನ ಕೊಟ್ಟು ಉದ್ಯಪನೆ ಮಾಡಬೇಕು.

Related Post

Leave a Comment