ಪ್ರತಿಯೊಬ್ಬರಿಗೂ ತಮ್ಮ ರಾಶಿಯ ಬಗ್ಗೆ ಬಹಳಷ್ಟು ಕುತೂಹಲ ಇರುತ್ತದೆ. ಬಹಳಷ್ಟು ಮಂದಿ ತಮ್ಮ ಪ್ರೀತಿ ಪಾತ್ರದವರ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಕಾತುರ ಪಡುತ್ತಾರೆ. ಕುಂಭ ರಾಶಿಯ ಮಹಿಳೆಯರು ವಿಶೇಷತೆ ಏನೆಂದರೆ, ಈ ರಾಶಿಯಲ್ಲಿ ಜನಿಸಿದ ಮಹಿಳೆಯರು ಬಹಳಷ್ಟು ವಿಶೇಷತೆಗಳನ್ನು ಹೊಂದಿರುತ್ತಾರೆ.ಈ ರಾಶಿಯವರ ಜೀವನವು ಸಹ ಬೇರೆ ಮಹಿಳೆಯರಿಗಿಂತ ವಿಭಿನ್ನವಾಗಿರುತ್ತದೆ.
ಕುಂಭ ರಾಶಿಯಲ್ಲಿ ಹುಟ್ಟಿರುವಂತಹ ಮಹಿಳೆಯರು ಯಾವಾಗಲೂ ಸಹ ತಮ್ಮ ಜೀವನವನ್ನು ಅವರ ಇಚ್ಛೆಯಂತೆ ಬದುಕಲು ಇಷ್ಟಪಡುತ್ತಾರೆ.ಯಾವುದೇ ರೀತಿಯ ಕಟ್ಟುಪಾಡು ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ.ಬೇರೆಯವರು ಏನು ಯೋಚಿಸುತ್ತಾರೆ ಎಂಬುದನ್ನು ಇವರು ಯೋಚನೆ ಮಾಡುವುದಿಲ್ಲ.ಕುಂಭ ರಾಶಿಯವರು ಅವರಿಗೆ ಏನು ಇಷ್ಟವೋ ಅದನ್ನೇ ಮಾಡುತ್ತಾರೆ.ಕುಂಭ ರಾಶಿಯವರು ಯಾವಾಗಲು ತಮ್ಮ ಜೀವನ ಹೀಗೆ ಇರಬೇಕು, ಹೀಗೆ ಬಾಳಬೇಕು ಅಂತ ಅಂದುಕೊಳ್ಳುತ್ತಾರೆ ಹಾಗೆ ಅಂದುಕೊಂಡ ಹಾಗೆ ಬಾಳುತ್ತಾರೆ. ಕುಂಭ ರಾಶಿಯಲ್ಲಿ ಹುಟ್ಟಿರುವಂತಹ ಮಹಿಳೆಯರು ತುಂಬಾ ಬುದ್ಧಿವಂತರು. ಏನೇ ಆದರೂ ಸಹ ನೇರ, ನಿಷ್ಠೆ, ನಿರಂತರ ಅನ್ನುವ ಹಾಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಯಾವತ್ತಿಗೂ ಮೋಸ ಮಾಡುವವರನ್ನು ಸಹಿಸುವುದಿಲ್ಲ. ಈ ರಾಶಿಯವರ ಸುತ್ತಮುತ್ತ ಇರುವ ಜನರು ಕೆಟ್ಟ ದಾರಿಯಲ್ಲಿ ಹೋಗುತ್ತಿದ್ದರೆ ಅವರನ್ನು ಸರಿಯಾದ ದಾರಿಗೆ ತರುವುದಕ್ಕೆ ಪ್ರಯತ್ನ ಮಾಡುತ್ತಾರೆ.
ಕುಂಭ ರಾಶಿಯ ದೇವರು ಎಂದರೆ ಶನಿದೇವ. ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಈ ರಾಶಿಯವರು ಕೂಡ ಯಾವುದೇ ರೀತಿಯ ಮೋಸ ವಂಚನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.ಅಷ್ಟೇ ಅಲ್ಲದೆ ಇವರು ಕಲಾ ಪ್ರೇಮಿಗಳು ಆಗಿರುತ್ತಾರೆ ಹಾಗೂ ಅವರ ಹವ್ಯಾಸವೂ ಕೂಡ ಕಲೆಯ ಜೊತೆ ಕೂಡಿರುತ್ತದೆ. ಕುಂಭ ರಾಶಿಯ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವದವರಾಗಿರುತ್ತಾರೆ.ಇವರು ಯಾವಾಗಲೂ ಸಹ ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ.
ದುಡ್ಡಿನ ವಿಚಾರಕ್ಕೆ ಬಂದರೆ ಕುಂಭ ರಾಶಿಯ ಮಹಿಳೆಯರು ಬಹಳಷ್ಟು ಅದೃಷ್ಟವಂತರು. ದುಡ್ಡಿನ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಇವರ ಹತ್ತಿರ ಯಾವಾಗಲೂ ಇದ್ದೇ ಇರುತ್ತದೆ.ಇನ್ನು ವಿವಾಹ ಜೀವನಕ್ಕೆ ಬಂದರೆ ಅವರು ಬಹಳ ಒಳ್ಳೆಯ ವ್ಯಕ್ತಿಯನ್ನು ತಮ್ಮ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಮತ್ತು ಈ ರಾಶಿಯ ಹೆಣ್ಣು ಮಕ್ಕಳು ತುಂಬಾ ಧೈರ್ಯವಂತರು. ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಅವರಲ್ಲಿರುತ್ತದೆ.