ನಿಮ್ಮ ರಾಶಿಯ ಅನುಸಾರ ನಿಮ್ಮ ದುರ್ಭಲತೆ ಏನು ಗೋತ್ತಾ?

Written by Anand raj

Published on:

ಜ್ಯೋತಿಷ್ಯ ಶಾಸ್ತ್ರದಲ್ಲಿ,ವ್ಯಕ್ತಿತ್ವಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಪರಿಹಾರ ಸೂಚಿಸಲಾಗಿದೆ.ಕೆಲವು ಸಂದರ್ಭಗಳಲ್ಲಿ,ಒಬ್ಬರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅವನ ರಾಶಿಚಕ್ರವನ್ನು ತಿಳಿದುಕೊಳ್ಳುವುದು ಅವಶ್ಯಕಯಾವುದೇ ಓರ್ವ ವ್ಯಕ್ತಿಯ ನಡುವಳಿಕೆ ಒಂದೆಡೆ ಆತನ ಶಕ್ತಿಯಾದರೆ ಇನ್ನೊಂದೆಡೆ ಆ ವ್ಯಕ್ತಿಯ ದುರ್ಬಲ್ಯ ಕೂಡ ಆಗಿರುತ್ತದೆ.ಜೀವನದಲ್ಲಿ ಮುಂದುವರೆಯಲು ನಮ್ಮಲ್ಲಿರುವ ಶಕ್ತಿಯ ಜೊತೆಗೆ ನಮ್ಮಲ್ಲಿರುವ ದೌರ್ಬಲ್ಯದ ಜ್ಞಾನವೂ ನಮಗಿರಬೇಕು.ನಮ್ಮಲ್ಲಿರುವ ದೌರ್ಬಲ್ಯಗಳ ಮೇಲೆ ನಿಯಂತ್ರಣ ಸಾಧಿಸಿ ಜೀವನದ ಪ್ರಗತಿಯ ಹಾದಿಯಲ್ಲಿ ಮುಂದುವರೆಯಬಹುದು ಎಂದು ಹಿರಿಯರು ಹೇಳುತ್ತಾರೆ. 

ಮೇಷ ರಾಶಿ,ಇವರಿಗೆ ಧೈರ್ಯ ಕಡಿಮೆ. ಇವರು ಯಾವಾಗಲು ಅನಾವಶ್ಯಕ ಜಗಳದಲ್ಲಿ ಸಿಲುಕಿಕೊಳ್ಳುತ್ತಾರೆ ಹಾಗೂ ತಮ್ಮಲ್ಲಿರುವ ಅಧೈರ್ಯದ ಕಾರಣ ತಮ್ಮ ಆಯ್ಕೆಗಳನ್ನು ಸೀಮಿತಗೊಳಿಸುತ್ತಾರೆ.ವೃಷಭ ರಾಶಿ,ಈ ರಾಶಿಯ ಜನರ ವ್ಯವಹಾರ ಕೆಲವೊಮ್ಮೆ ಹಟವಾಗಿ ಪರಿಣಮಿಸುತ್ತದೆ.ಇವರ ಸ್ವಭಾವದಲ್ಲಿನ ಸರಳತೆ ಇವರ ವೀಕ್ ನೆಸ್.ಇವರು ಆಪ್ತರ ಮೇಲೆ ಆವಷ್ಯಕತೆಗೂ ಹೆಚ್ಚು ಹಕ್ಕು ಚಲಾಯಿಸುತ್ತಾರೆ.ಮಿಥುನ ರಾಶಿ.ಏಕಕಾಲಕ್ಕೆ ಇವರು ತಮ್ಮ ಶಕ್ತಿಯನ್ನು ಹಲವು ಕೆಲಸಗಳಲ್ಲಿ ವಿನಿಯೋಗಿಸುತ್ತಾರೆ.ಹೀಗಾಗಿ ಹಲವು ಬಾರಿ ಅಸಫಲತೆ ಇವರ ಪಾಲಿಗೆ ಬಂದು ನಿಲ್ಲುತ್ತದೆ. 

ಕರ್ಕ ರಾಶಿ:ಮಾತುಗಳ ಮೂಲಕ ತಮ್ಮ ಕೆಲಸವನ್ನು ಸಾಧಿಸುವುದು ಕೆಲವರ ಶಕ್ತಿಯಾದರೆ,ಕರ್ಕ ರಾಶಿಯ ಜನರ ಪಾಲಿಗೆ ಇದು ದೌರ್ಬಲ್ಯ ಸಾಬೀತಾಗುತ್ತದೆ.ಇದೇ ಕಾರಣದಿಂದ ಇವರು ಅನಾವಶ್ಯಕ ವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ.ಹೇರಾಫೇರಿ ನಡೆಸುವುದರಲ್ಲಿ ಇವರು ಮುಂದಿರುತ್ತಾರೆ.ಇವರು ತಮ್ಮ ಅತೀತದಲ್ಲಿ ಸಿಲುಕಿಕೊಂಡಿರುತ್ತಾರೆ ಹಾಗೂ ಯಾವಾಗಲು ಅಸುರಕ್ಷಿತತೆ ಮನೋಭಾವ ಹೊಂದಿರುತ್ತಾರೆ.ಸಿಂಹ ರಾಶಿ ಇವರ ಅಭಿಮಾನ ಇವರ ದೌರ್ಬಲ್ಯ.ಇವರು ಸ್ವಭಾವತಃ ಹಟವಾದಿಗಳು.ತಮ್ಮಲ್ಲಿರುವ ಸದೃಢತೆಯ ಕಾರಣ ಇವರು ತಾವೇ ಮಾಡಿರುವ ನಿಯಮಗಳಲ್ಲಿ ಸಿಲುಕಿಕೊಳ್ಳುತ್ತಾರೆ.ಸ್ವಲ್ಪ ಸೋಮಾರಿಯಾಗಿರುವ ಇವರು ಸೆಲ್ಫ್ ಸೆಂಟ್ರಿಕ್ ಆಗಿರುತ್ತಾರೆ.ಕನ್ಯಾ ರಾಶಿ ಇವರು ಅನಾವಶ್ಯಕವಾಗಿ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ.ಇವರು ತಮ್ಮಕೆಲಸಗಳಲ್ಲಿ ಯಾವ ಪರಿ ಸಿಲುಕಿಕೊಳ್ಳುತ್ತಾರೆ ಎಂದರೆ.ಮನರಂಜನೆ ಇವರ ಪಾಲಿಗೆ ಮರೀಚಿಕೆಯಾಗುತ್ತದೆ.

ವೃಶ್ಚಿಕ ರಾಶಿ ಬೇಗನೆ ಯಾರ ಮೇಲೂ ಕೂಡ ಇವರು ನಂಬಿಕೆ ಇಡುವುದಿಲ್ಲ.ಆದರೆ,ಒಂದು ವೇಳೆ ಇವರು ಯಾರನ್ನಾದರು ನಂಬಿದರೆ..ಕಣ್ಣು ಮುಚ್ಚಿ ಅವರ ಎಲ್ಲ ಮಾತುಗಳನ್ನು ಕೇಳುತ್ತಾರೆ.ಎಲ್ಲರ ಮಾತನ್ನು ಕೇಳಿದರೂ ಕೂಡ ತಮಗೆ ತೋಚಿದ್ದನ್ನೆ ಇವರು ಮಾಡುತ್ತಾರೆ.ಹೀಗಾಗಿ ಹಲವು ಬಾರಿ ಇವರು ಸಂಕಷ್ಟಕ್ಕೆ ಸಿಲುಕುತ್ತಾರೆ.ಧನು ರಾಶಿ ಇವರು ತಮಗೆ ಅನಿಸಿದ್ದನ್ನು ಹೇಳಿಬಿಡುತ್ತಾರೆ.ವಚನ ಕೂಡ ನೀಡುತ್ತಾರೆ.ನಿಭಾಯಿಸುವ ವಿಚಾರದಲ್ಲಿ ಇವರು ಹಿಂದೆ ಬೀಳುತ್ತಾರೆ.ತುಲಾ ರಾಶಿ:ಯಾವುದೇ ನಿರ್ಣಯ ತಕ್ಷಣದಲ್ಲಿ ತೆಗೆದುಕೊಳ್ಳುವುದು ಇವರಿಂದಾಗದ ಮಾತು.ಯಾವುದೇ ಓರ್ವ ವ್ಯಕ್ತಿಯ ಕುರಿತು ತಮ್ಮ ಅನಿಸಿಕೆಯನ್ನು ಇವರು ತುಂಬಾ ಬೇಗ ನಡೆಸುತ್ತಾರೆ ಹಾಗೂ ಅದೇ ಲೆಕ್ಕಾಚಾರದಲ್ಲಿ ಮುಂದುವರೆಯುತ್ತಾರೆ.ಇವರು ಘರ್ಷಣೆಯ ಸ್ಥಿತಿಯಿಂದ ದೂರ ಉಳಿಯಲು ಯತ್ನಿಸುತ್ತಾರೆ ಹಾಗೂ ತಮ್ಮ ಮೇಲೆ ತಾವೇ ದೆಯೇ ತೋರುತ್ತಾರೆ.

ಮಕರ ರಾಶಿ:ಇವರು ತಮ್ಮಷ್ಟಕ್ಕೆ ತಾವು ಸಕಲ ಜ್ಞಾನಿಗಳೆಂದು ಭಾವಿಸುತ್ತಾರೆ.ಇವರು ಅಷ್ಟೊಂದು ಬೇಗ ಯಾರನ್ನೂ ಕೂಡ ಕ್ಷಮಿಸುವುದಿಲ್ಲ.ಕುಂಭ ರಾಶಿ ಈ ಜನರು ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.ಇವರು ತಮ್ಮ ಭಾವನೆಗಳನ್ನು ತೋರ್ಪಡಿಸುವುದಿಲ್ಲ.ಇವರು ತುಂಬಾ ಮೂಡಿ ಜನರು.ಮೀನ ರಾಶಿ ಇವರು ಇತರರನ್ನು ತುಂಬಾ ಶೀಘ್ರವೆ ನಂಬುತ್ತಾರೆ.ಅವಶ್ಯಕತೆಗಿಂತ ಹೆಚ್ಚು ವಿಶ್ವಾಸವಿಡುತ್ತಾರೆ.ವಾಸ್ತವಿಕತೆಯಿಂದ ದೂರವಿರುತ್ತಾರೆ.ಇವರು ಬೇಗ ದುಃಖಿಗಳಾಗುತ್ತಾರೆ.ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ದೌರ್ಬಲ್ಯಗಳನ್ನು ಪರಿಹರಿಸುವ ಮೂಲಕ ತಮ್ಮ ನಡವಳಿಕೆಯನ್ನು ಬದಲಾಯಿಸಬಹುದು.ಇದು ಅವರ ಜೀವನಕ್ಕೆ ಹೊಸ ನಿರ್ದೇಶನವನ್ನು ನೀಡುತ್ತದೆ ಮತ್ತು ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

Related Post

Leave a Comment