ನಮ್ಮ ನಿಮ್ಮೆಲ್ಲರ ಪುಟ್ಟ ಜ್ಯೋತಿಷಿ ಅಭಿಗ್ಯಾ ಆನಂದ್ ಅವರ ಭವಿಷ್ಯದ ನುಡಿಗಳ ಬಗ್ಗೆ ಎಲ್ಲರಿಗೂ ಗೊತ್ತು.ಇನ್ನು ಜೂನ್ 30ರ ನಂತರ ಭೂಮಿಗೆ ಬಹಳ ಭಯಾನಕ ಅದ್ಭುತ ನಡೆಯಲಿದೆ ಎಂದು ಅಭಿಗ್ಯ ತಿಳಿಸಿದ್ದಾರೆ.ಈ 30 ಜೂನ್ 2020 ಮತ್ತು 2021 ಕ್ಕೆ ಅನ್ವಯಿಸುತ್ತದೆ. ಇನ್ನು ಜೂನ್ 30ರ ನಂತರ ಈಗಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗಲಿವೆ
ಎಂದು ತಜ್ಞರು ,ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.ಇನ್ನೂ ಗ್ರಹಗತಿಗಳ ಬದಲಾವಣೆ ಯಿಂದ ಈ ರೀತಿಯ ಸಂಕಷ್ಟಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಅಭಿಗ್ಯ ಆನಂದ್ ಈ ಮುಂಚೆ ತಿಳಿಸಿದ್ದರು.
ಇನ್ನೂ ಇದುವರೆಗೂ ಅಭಿಜಿ ಹೇಳಿರುವ ಪ್ರತಿಯೊಂದು ಭವಿಷ್ಯವು ನಿಜವಾಗುತ್ತಾ ಬಂದಿದೆ.ಅವುಗಳಲ್ಲಿ ಕೆಲವನ್ನು ನಾವು ನೋಡುವುದಾದರೆ ವಿಮಾನ ಹಾರಾಟ ನಿಲ್ಲುವ ಬಗ್ಗೆ , ಪ್ರಪಂಚವೆಲ್ಲ ಸಂಕಷ್ಟ ಎದುರಿಸುವ ಬಗ್ಗೆ ,ದೇಶದ ಆರ್ಥಿಕತೆ ಬಗ್ಗೆ ,ಹೋದ ವರ್ಷ ಕರೋನಾ ಮುಗಿದ ಬೆನ್ನಲ್ಲೇ ಮಿಡಿತೆಗಳ ಕಾಟ ಎದುರಾಗುವ ಬಗ್ಗೆ ಹಾಗೂ ಪ್ರಕೃತಿಗೆ ನಾವೆಲ್ಲರೂ ಬಲಿಯಾಗುವ ಬಗ್ಗೆ , ಈ ಪ್ರಕೃತಿಯ ವಿಕೋಪ ನಮ್ಮ ಮರಣಕ್ಕೆ ಸಾಕ್ಷಿಯಾಗುತ್ತದೆ ಎಂದು ಜ್ಯೋತಿಷಿ ಅಭಿಗ್ಯ ಆನಂದ್ ನುಡಿದಿದ್ದರು.
ಇನ್ನು ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ ಹೊರತು ವಾಪಸ್ಸಾಗಿ ನಾವು ಪ್ರಕೃತಿಗೆ ಏನನ್ನೂ ನೀಡುತ್ತಿಲ್ಲ
ಹಾಗಾಗಿ ಪ್ರಕೃತಿಗೆ ನಾವೇನಾದರೂ ನೀಡಬೇಕು,ಕೇವಲ ಪ್ರಕೃತಿಯನ್ನು ಉಪಯೋಗಿಸಿಕೊಳ್ಳದೆ ಪ್ರಕೃತಿಗಾಗಿ ನಮ್ಮ ಕೈಲಾದಷ್ಟು ಏನನ್ನಾದರೂ ಮಾಡಬೇಕುಅಂದರೆ ಸಕಾರಾತ್ಮಕ ಚಿಂತನೆಗಳನ್ನು ,ಭಾವನೆಗಳನ್ನು ನಾವು ಪ್ರಕೃತಿಗೆ ನೀಡಬೇಕು.ಅದೆಷ್ಟೋ ದೊಡ್ಡ ಮರಗಳನ್ನು ಕಡಿಯುತ್ತೇವೆ ಆದರೆ ಇಂದು ಅದೇ ಮರಗಳು ಇದ್ದಿದ್ದರೆ ಆಕ್ಸಿಜನ್ ಕೊರತೆ ಉಂಟಾಗುತ್ತಿರಲಿಲ್ಲ ಹಾಗೂ ನೀರನ್ನು ಕಲುಷಿತಗೊಳಿಸಿದ್ದೇವೆ ಆದರೆ ಈಗ ನೀರನ್ನು ದುಡ್ಡಿಗೆ ಕೊಂಡು ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂಬ ಮಾತುಗಳನ್ನು ಅಭಿಗ್ಯ ಆನಂದ್ ಮೊದಲೇ ತಿಳಿಸಿದ್ದರು.
ಇನ್ನು ಕೊರೊನಾ ಸಂಕಷ್ಟದ ಸಮಯದಲ್ಲಿ ಕಷಾಯವನ್ನು ಹೇಗೆ ತಯಾರಿಸಿಕೊಂಡು ಕುಡಿಯಬೇಕು ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಸಹ ಅಭಿಗ್ಯ ತಿಳಿಸಿದ್ದರು.ಇನ್ನು ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಬೇರೆ ದೇಶಗಳಲ್ಲಿ ಕೊರೊನಾ ಕಡಿಮೆಯಾಗುತ್ತಾ ಬರುತ್ತಿದೆ ಆದರೆ ನಮ್ಮ ದೇಶದಲ್ಲಿ ಮಾತ್ರ ಯಾಕೆ ಇಷ್ಟೊಂದು ಭೀಕರತೆ ಉಂಟಾಗುತ್ತಿದೆ ಎಂಬುದರ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದು ಬರುವ ವಿಷಯವೇನೆಂದರೆ ಕೊರೊನಾದ ತೀವ್ರತೆಯನ್ನು ನಾವು ಕಡೆಗಣಿಸುತ್ತಿದ್ದೇವೆ,ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ ,ಸರಿಯಾಗಿ ಸಾನಿಟೈಸರ್ ಬಳಸುತ್ತಿಲ್ಲ ,ಮಾಸ್ಕ್ ಅಂತೂ ಹಾಕಿಕೊಳ್ಳುವುದೇ ಪ್ಯಾಷನ್,ಹಾಗೂ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಜನಜಂಗುಳಿ ಸೇರುವ ಕಡೆ ಹೆಚ್ಚು ಓಡಾಡುತ್ತೇವೆ ಹೀಗಾಗಿ ಕರೋನದ ಭೀಕರತೆ ಹೆಚ್ಚಾಗುತ್ತಿದೆ ಹಾಗೂ ಮುಖ್ಯವಾಗಿ ನಮ್ಮ ನಿರ್ಲಕ್ಷ್ಯತೆಯಿಂದ ಕೊರೋನ ಇನ್ನೂ ಹೆಚ್ಚಾಗುತ್ತಿದೆ ಎನ್ನಬಹುದು.
ಇನ್ನು ಶಾರ್ವರಿ ನಾಮ ಸಂವತ್ಸರ ದಿಂದ ಪ್ಲವನಾಮ ಸಂವತ್ಸರದ ಕಾಲಿಟ್ಟಿದ್ದೇವೆ.ಶಾರ್ವರಿನಾಮ ಸಂವತ್ಸರದ ಅರ್ಥ ಕತ್ತಲು ಹಾಗೂ ಪ್ಲವನಾಮ ಸಂವತ್ಸರದ ಅರ್ಥ ಬೆಳಕು.ಇನ್ನು ಶಾರ್ವರಿ ನಾಮ ಮತ್ತು ಪ್ಲವ ನಾಮ ಸಂವತ್ಸರದ ಮದ್ಯಭಾಗದಲ್ಲಿ ಈಗ ನಾವು ಇದ್ದೇವೆ.ಇನ್ನೂ ಶಾರ್ವರಿನಾಮ ಮತ್ತು ಪ್ಲವನಾಮ ಸಂವತ್ಸರದ ಎರಡರ ಮದ್ಯದಿಂದ ನಾವು ಬೆಳಕಿನಡೆಗೆ ಜೂನ್ 30 ರ ಹೋಗುತ್ತೇವೆ.
ಇನ್ನು ಜೂನ್ 30ರ ನಂತರ ಕೊರೊನಾದ ತೀವ್ರತೆ ಕಡಿಮೆಯಾಗಲಿದೆ ,ನೆಮ್ಮದಿ ಸಿಗಲಿದೆ.ಇನ್ನೂ ಈ ಮಹಾಮಾರಿ ನಾಶವಾಗುವ ತನಕ ನಾವು ಜವಾಬ್ದಾರಿಯುತವಾಗಿ ಸುರಕ್ಷಿತವಾಗಿ ಇರಬೇಕಾಗಿರುವುದು ನಮ್ಮ ಹೊಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಹಣ್ಣು ಹಂಪಲು ತರಕಾರಿಗಳನ್ನು ಹೆಚ್ಚು ಸೇವಿಸಿ ಇದರಿಂದ ಎಂಥದೇ ಕಾಯಿಲೆಯಾಗಲಿ ನಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದು ಅಭಿಗ್ಯ ಆನಂದ್ ಭವಿಷ್ಯ ನುಡಿದಿದ್ದಾರೆ.
ಧನ್ಯವಾದಗಳು.