ಹುಟ್ಟಿದ್ದು ತಮಿಳುನಾಡು ಆದರೆ ಇವತ್ತು ಪ್ರಪಂಚವೇ ಹೆಮ್ಮೆ ಪಡುವ ವ್ಯಕ್ತಿ!

Written by Anand raj

Published on:

ಸುಂದರ್ ಪಿಚೈ ಗೂಗಲ್ ಹಾಗೂ ಆಲ್ಫಾಬೆಟ್ ಇಂಕ್ ನ ಸದ್ಯದ ಸಿಇಒ.ಭಾರತೀಯ ಮೂಲದ 48ವರ್ಷ ಪ್ರಾಯದ ಇವರು ಸಣ್ಣ ಮಿಡಲ್ ಕ್ಲಾಸ್ ಕುಟುಂಬದಿಂದ ಗೂಗಲ್ ವರೆಗೆ ಬೆಳೆದು ಬಂದದ್ದೇ ಒಂದು ರೋಚಕ ಯಾನ.2019ರ ಅಂಕಿ ಅಂಶಗಳ ಪ್ರಕಾರ ಸುಂದರ್ ಪಿಚೈ ಅವರ ಒಂದು ದಿನದ ಗಳಿಕೆ 5 ಕೋಟಿ 87 ಲಕ್ಷ ರೂಪಾಯಿ.ಈ ವ್ಯಕ್ತಿಯ ಮೊಬೈಲ್ ಫೋನಲ್ಲಿ ಒಂದೇ ಒಂದು ಕಾಂಟ್ಯಾಕ್ಟ್ ನಂಬರಿಲ್ಲ ಯಾಕೆಂದರೆ ಆತ ಇದುವರೆಗೂ ಮೊಬೈಲ್ ನಲ್ಲಿ ಡಯಲ್ ಮಾಡಿದ ನಂಬರ್ಗಳು ಸೇವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಲ್ಲ ಆತನ ತಲೆಯಲ್ಲಿ.ಇಂತಹ ವಿಶಿಷ್ಟ ವ್ಯಕ್ತಿಯ ಬಗ್ಗೆ ಒಂದಷ್ಟು ಸ್ವಾರಸ್ಯಕರ ಅಂಶಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಸುಂದರ್ ಪಿಚೈ ಮೂಲತಃ ತಮಿಳುನಾಡಿನವರು. 10 ಜೂನ್ 1972 ರಂದು ತಮಿಳುನಾಡಿನ ಮದುರೈನಲ್ಲಿ ಲಕ್ಷ್ಮಿ ಹಾಗೂ ರಘುನಾಥ್ ಪಿಚೈ ದಂಪತಿಗಳಿಗೆ ಜನಿಸಿದರು.ಅವರ ಇಬ್ಬರು ಮಕ್ಕಳಲ್ಲಿ ಸುಂದರ್ ಪಿಚೈ ಒಬ್ಬರು.ಅವರದ್ದು ಸಣ್ಣ ಹಳ್ಳಿಯೊಂದರಲ್ಲಿದ್ದ ಒಂದು ಬಡ ಕುಟುಂಬ.ಸುಂದರ್ ಪಿಚೈ ಅವರ ತಾಯಿ ಸ್ಟೆನೋಗ್ರಾಫರ್ ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದು ಮನೆ ಕಾರ್ಯದಲ್ಲಿ ತೊಡಗಿಕೊಂಡರು.ತಂದೆ ರಘುನಾಥ್ ಪಿಚೈ ಓರ್ವ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು.ಅವರದ್ದೆ ಚಿಕ್ಕ ಪುಟ್ಟದಾದ ಕೆಲ ಎಲೆಕ್ಟ್ರಿಕ್ ಉಪಕರಣಗಳ ತಯಾರಿಕಾ ಘಟಕವಿತ್ತು.ತಂದೆಯ ಈ ಕೆಲಸಗಳಿಂದಲೇ ಪ್ರಭಾವಿತನಾದ ಈ ಹುಡುಗ ಸುಂದರ್ ಪಿಚೈ ಆರಂಭದಿಂದಲೇ ಎಲೆಕ್ಟ್ರಿಕ್ ಉಪಕರಣಗಳ ಕಾರ್ಯ ವಿಧಾನಗಳು ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.

ಅಲ್ಲದೆ ಸುಂದರ್ ಪಿಚೈ ಬಾಲ್ಯದಿಂದಲೇ ಅಗಾಧ ಬುದ್ಧಿ ಶಕ್ತಿ ಹಾಗೂ ಸ್ಮರಣ ಶಕ್ತಿ ಹೊಂದಿದ ಬಾಲಕ.ಅವರ ಮನೆಯಲ್ಲಿ ಒಂದು ಟೆಲಿಫೋನ್ ಇತ್ತು ಸುಂದರ್ ಟೆಲಿಫೋನ್ ಡೈರಿಯ ಹಾಗೆ ಎಲ್ಲಾ ಟೆಲಿಫೋನ್ ಸಂಖ್ಯೆಗಳನ್ನು ಸಹ ನೆನಪಲ್ಲಿಟ್ಟುಕೊಂಡು ಬಾಯಿಪಾಠ ಮಾಡಿಕೊಂಡಿದ್ದರು.ಈ ಹುಡುಗ ಆರಂಭದಿಂದಲೂ ಪ್ರತಿಭಾವಂತನಾಗಿದ್ದರಿಂದ ಅವನ ವಿದ್ಯೆಗೆ ಅವರ ಬಡತನ ಅಡ್ಡಿ ಎನಿಸಲಿಲ್ಲ.ತನ್ನ ಹೈಸ್ಕೂಲ್ ಹಾಗೂ 12ನೇ ತರಗತಿಯ ಶಿಕ್ಷಣಗಳೆರಡನ್ನೂ ಮದ್ರಾಸ್ನಲ್ಲಿ ಪೂರೈಸಿದ ಪಿಚೈ ,ಖಾರಗ್ ಪುರದ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಲೋಹ ಶಾಸ್ತ್ರೀಯ ವಿಭಾಗದ ಎಂಜಿನಿಯರಿಂಗ್ ಪದವಿ ಪಡೆದರು.ಓದಿನಲ್ಲಿ ಅತೀವ ಆಸಕ್ತಿ ಇದ್ದ ಪಿಚೈ ಮುಂದೆ ಅಮೆರಿಕದ ಸ್ಟಾನ್ಫೋರ್ಡ್ ವಿವಿಯಲ್ಲಿ ಮೆಟೀರಿಯಲ್ ಸೈನ್ಸ್ ವಿಭಾಗ ಹಾಗೂ ಅಭಿಯಂತ್ರಿಕೆಯಲ್ಲಿ ಎಂಎಸ್ ಪದವಿ ಪಡೆದರು.

ಆ ಬಳಿಕ 2002ರಲ್ಲಿ ಅಲ್ಲಿನ ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್ನ ವಿವಿಯಲ್ಲಿ ಎಂಬಿಎ ಪದವಿ ಪೂರೈಸಿದರು.ಸುಂದರ್ ಪಿಚೈ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರಿಂದ ಸೈಬೆಲ್ಸ್ ಸ್ಕಾಲರ್ ಎಂಬ ಬಿರುದಿಗೆ ಅಲ್ಲಿ ಪಾತ್ರರಾದರು.ಆಯ್ಕೆಯಾದ ಟಾಪ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಗೌರವ ಸಲ್ಲಿಕೆ ಅವಕಾಶವಿದೆ.ಇದಾದ ಬಳಿಕ ಮಿಕೆನ್ಸಿ ಕಂಪನಿಯಲ್ಲಿ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಶುರು ಮಾಡಿದ ಪಿಚೈ ಒಂದು ವರ್ಷದ ಬಳಿಕ ಅಂದರೆ 2004ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಆಯ್ಕೆಯಾದರು.ಇಲ್ಲಿ ಆರಂಭದಲ್ಲಿ ಫಸ್ಟ್ ಲೆವೆಲ್ ವರ್ಕರ್ ಆಗಿ ಕೆಲಸ ಶುರು ಮಾಡಿದ ಸುಂದರ್
ಗೂಗಲ್ನ ಸರ್ಚ್ ಟೋಲ್ ಬಾರ್ನ ತಾಂತ್ರಿಕ ವಿಭಾಗದಲ್ಲಿ ಸಣ್ಣ ತಂಡದೊಂದಿಗೆ ಕೆಲಸ ಶುರು ಮಾಡಿದರು.

ಆಗ ಸಾಮಾನ್ಯವಾಗಿ ಬಳಕೆಯಲ್ಲಿದ್ದ ಒಂದೆ ಸರ್ಚ್ ಇಂಜಿನ್ ಅಂದರೆ ಅದು ಇಂಟರ್ನೆಟ್ ಎಕ್ಸ್ ಪ್ಲೋರರ್ ಮಾತ್ರ ಅದರ ಮೂಲಕವೇ ಯಾಹೂ ,ಗೂಗಲ್ ಗಳನ್ನು ಸರ್ಚ್ ಮಾಡಬೇಕಿತ್ತು.ಗೂಗಲ್ನ ಸರ್ಚ್ ಟೋಲ್ ಬಾರ್ ನಲ್ಲಿ ಕೆಲಸ ಮಾಡ್ತಾ ಇದ್ದಂತಹ ಸುಂದರ್ ಗೆ ಅದಾಗಲೇ ಒಂದು ಹೊಸ ಐಡಿಯಾ ತಲೆಗೆ ಹೊಕ್ಕಿತ್ತು.ಗೂಗಲ್ ಸರ್ಚ್ನ ಟೋಲ್ ಬಾರನ್ನೇ ಇನ್ನಷ್ಟು ಅಭಿವೃದ್ಧಿ ಗೊಳಿಸಿ ,ಗೂಗಲ್ ನಲ್ಲಿಯೇ ಒಂದು ಸರ್ಚ್ ಎಂಜಿನ್ ಅಭಿವೃದ್ಧಿ ಮಾಡಿದರೆ ಹೇಗೆ ಅಂತ ಯೋಚಿಸಿದರು.

ಇದನ್ನೇ ಆತ ತನ್ನ ತಂಡದೊಂದಿಗೆ ಚರ್ಚಿಸಿದಾಗ ಆಗಿನ ಸಿಇಒ ಆಗಿದ್ದ ಎರಿಕ್ ಸ್ಕಿಮೀಡ್ಟ ಗೂಗಲ್ ಸರ್ಚ್ ಇಂಜಿನ್ ಆಗಿ ಅಭಿವೃದ್ಧಿಪಡಿಸುವುದು ವಿಪರೀತ ಖರ್ಚಿನ ಕಾರ್ಯ ಎಂದು ಸುಂದರ್ ಸಲಹೆಯನ್ನು ತಿರಸ್ಕರಿಸಿದರು.ಆಗ ಸರ್ಚ್ ಬಾರ್ ನಲ್ಲಿ ಕೆಲ ಸುಧಾರಣೆ ತರಲು ಯತ್ನಿಸಿದ ಸುಂದರ್ ಪಿಚೈ ಹಾಗೂ ತಂಡದ ಶ್ರಮದ ಫಲವಾಗಿ ಇಂಟರ್ನೆಟ್ ಎಕ್ಸ್ ಪ್ಲೋರರ್ ನ ಮೂಲಕ ಬಳಕೆದಾರರಿಗೆ ಗೂಗಲ್ ಹಾಗೂ ಅದರ ಉಪ ವಿಭಾಗದ ಫೈರ್ಫಾಕ್ಸ್ ನ ಶೋಧಕ್ಕೆ ಸುಲಭ ಆಕ್ಸಿಸ್ ಸಿಗುವಂತಾಯಿತು.ಸುಂದರ್ ಗೆ ಇದ್ದ ಹಂಬಲವೊಂದೆ ಇತರೆ ಸರ್ಚ್ ಇಂಜಿನ್ ಗಳ ಮೂಲಕ ಗೂಗಲ್ ಹುಡುಕಾಟದ ಬದಲು ಗೂಗಲ್ ನ್ನೇ ಒಂದು ಶಸಕ್ತ ಸರ್ಚ್ ಇಂಜಿನ್ನಾಗಿ ಹೊರ ತರಬೇಕೆನ್ನುವುದು.

ಅದಕ್ಕಾಗಿ ಕ್ರೋಮ್ ಓಎಸ್ ಅನ್ನು ಸುಂದರ್ ಅಭಿವೃದ್ಧಿ ಪಡಿಸಲು ಆರಂಭಿಸಿದರು.ಈ ಹಿಂದೆ ಈ ಐಡಿಯಾ ಬಹಳ ದುಬಾರಿಯಾದದೆಂದು ಆಗಿನ ಸಿಇಒ ಆಗಿದ್ದ ಎರಿಕ್ ಸ್ಕಿಮೀಡ್ಟ್ ಅಸಮ್ಮತಿ ತೋರಿದ್ರು ಆದ್ರೆ ಗೂಗಲ್ನ ಸಹ ಸಂಸ್ಥಾಪಕರಾಗಿದ್ದ ಲಾರಿ ಪೇಜ್ ಹಾಗೂ ಸರ್ಜಿ ಬ್ರಿನ್ ಅನ್ನು ಸಂಪರ್ಕಿಸಿದ ಪಿಚೈ ತನ್ನ ಯೋಜನೆಯನ್ನು ಅವರಿಗೆ ತಿಳಿಸಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು.ಅವರ ಸಹಕಾರದಿಂದಾಗಿ ಇದೇ ದಿಕ್ಕಲ್ಲಿ ಹಗಲು ರಾತ್ರಿ ದುಡಿದ ಸುಂದರ್ ನ ಆಶಯವೂ ಸನ್ನಿಹಿತವಾಗುವ ಕಾಲ ಹತ್ತಿರವಾಯ್ತು.2008 ರಲ್ಲಿ ಸುಂದರ್ ಪಿಚೈ ಅಭಿವೃದ್ಧಿ ಪಡಿಸಿದ ಗೂಗಲ್ ಕ್ರೋಮ್ ಮೊಟ್ಟ ಮೊದಲ ಬಾರಿಗೆ ಲಾಂಚ್ ಆಯಿತು.

2010ರ ವೇಳೆಗೆ ಈ ಹೊಸ ಬ್ರೌಸರ್ ಇಂಟರ್ನೆಟ್ ಎಕ್ಸ್ ಫ್ಲೋರರ್ ನ ಹಿಂದಿಕ್ಕಿ ನಂಬರ್ ಒನ್ ಬ್ರೌಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಈ ಮೂಲಕ ಇದರ ಸ್ಥಾಪಕರಲ್ಲಿ ಪ್ರಮುಖ ವ್ಯಕ್ತಿಯಾದ ಸುಂದರ್ ಪಿಚೈ. ವಿಶ್ವವಿಖ್ಯಾತ ವ್ಯಕ್ತಿಯಾಗಿ ಹೋದರು ,ಎಲ್ಲೆಡೆಯೂ ಅವರದೇ ಮಾತು.ಅನೇಕ ಜಾಗತಿಕ ಗೂಗಲ್ ಪ್ರಸೆಂಟೇಷನ್ ಮೀಟ್ಗಳಲ್ಲಿ ಕಾಣಿಸಿಕೊಂಡ ಪಿಚೈ ತಾವು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಲಾರಂಭಿಸಿ ಹೊಸ ಉದ್ಯೋಗಿಗಳಿಗೆ ಸ್ಫೂರ್ತಿಯನ್ನು ತುಂಬಿದರು.ಇದರ ಬಳಿಕ ಕ್ರೋಮ್ ಓಎಸ್ ,ಕ್ರೋಮ್ ಕಾಸ್ಟ್ ಹಾಗೂ ಡ್ರೈವ್ಗಳನ್ನು ಸಹ ಸುಧಾರಿಸಿದ ಸುಂದರ್ ಅವರ ಶ್ರಮದಿಂದ ಇಂದು ಫೈರ್ ಫಾಕ್ಸ್ ಹಾಗೂ ಕ್ರೋಮ್ ಗಳು ವಿಶ್ವವಿಖ್ಯಾತ ಸರ್ಚ್ ಇಂಜಿನ್ ಗಳಾಗಿ ಹೊರಹೊಮ್ಮಿವೆ.

2015ರಲ್ಲಿ ಸುಂದರ್ ಪಿಚೈ ಗೂಗಲ್ ನ ನೂತನ ಸಿಇಒ ಆಗಿ ಆಯ್ಕೆಯಾದರು ಜೊತೆಗೆ ಗೂಗಲ್ನ ಹಿಡುವಳಿ ಸಂಸ್ಥೆಯಾದ ಆಲ್ಫಬೆಟ್ ಇಂಕ್ ನ ಬೋರ್ಡ್ ಮೆಂಬರ್ ಸಹ ಆದರು ಇದೇ ಸಮಯದಲ್ಲಿ ಇವರಿಗೆ ವಿಶ್ವವಿಖ್ಯಾತ ಕಂಪನಿಗಳಾದ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳು ಸಹ ಆಹ್ವಾನವಿತ್ತವಾದರೂ ಸುಂದರ್ ನಯವಾಗಿ ಅವುಗಳನ್ನು ತಿರಸ್ಕರಿಸಿ ಗೂಗಲಿಗೆ ತಮ್ಮ ನಿಷ್ಠೆಯನ್ನು ತೋರಿಸಿದರು.

ಕ್ರೋಮ್ ಬ್ರೌಸರ್ ಜನಪ್ರಿಯತೆ ಗೊಂಡಂತೆ ಅದರ ಸಂಸ್ಥಾಪಕರಾದ ಪಿಚೈ ನ ಟರ್ನೋವರ್ ಸಹ 200 ಮಿಲಿಯನ್ ದಾಟಿ ಕೆಲವೇ ಸಮಯ ಅಂತರದಲ್ಲಿ ಅವರು ಭಾರತೀಯ ಮೂಲದ ವಿದೇಶಿ ಮಿಲಿಯನ್ನೇರಾಗಿ ಹೋದರು.ಇವತ್ತು ಗೂಗಲ್ ವಲಯದಲ್ಲಿ ಸುಂದರ್ ಪಿಚೈ ನ ಹೆಸರು ಪ್ರಮುಖವಾದದ್ದು.ಅಸಂಖ್ಯಾತ ಸಮ್ಮಿಟ್ ಗಳಲ್ಲಿ ಭಾಗವಹಿಸುತ್ತಾ ಬಂದಿರುವ ಸುಂದರ್ ಪಿಚೈ ತಮ್ಮ ಈ ಯಶೋಗಾಥೆಯ ಮೂಲಕ ಮುಂಬರುವ ಪೀಳಿಗೆಗೆ ಉತ್ಸಾಹ ಹಾಗೂ ಸ್ಫೂರ್ತಿ ತುಂಬುತ್ತಿದ್ದಾರೆ.ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ವರ್ಗದ ಒಬ್ಬ ಸಾಧಾರಣ ಹುಡುಗ ತನ್ನ ಅಸಾಧಾರಣ ಬುದ್ಧಿ ಶಕ್ತಿಯಿಂದ ಇವತ್ತು ವಿಶ್ವಕ್ಕೆ ಬೇಕಾದ ಒಬ್ಬ ಸ್ಕಾಲರ್ ಆಗಿ ಬೆಳೆದು ಬಂದದ್ದು ಆತನ ವಿದ್ಯೆ ಹಾಗೂ ಪಾಂಡಿತ್ಯಕ್ಕೆ ಜ್ವಲಂತ ಸಾಕ್ಷಿ ಎನ್ನಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನ್ಯವಾದಗಳು.

Related Post

Leave a Comment