ಪ್ರಥಮ ಪೂಜೆ ಸ್ವೀಕರಿಸುವ ಹಲವು ಪ್ರಥಮಗಳ ಸರದಾರ ಮಹಾಗಣಪತಿಗೆ ಅತ್ಯಂತ ಪ್ರಿಯವಾದ ಪೂಜನೀಯ ಸಾಮಗ್ರಿ ಗರಿಕೆ ಅಥವಾ ದೂರ್ವೆ.ಗಣೇಶನಿಗೆ ಅರ್ಪಿಸುವ ಒಂದು ಪೂಜನೀಯ ದಿವ್ಯವಾದ ವಸ್ತು ಎಂದರೆ ಅದು ಗರಿಕೆ .ಗರಿಕೆಯನ್ನು ಆಹಾರವಾಗಿ ಮತ್ತು ಔಷಧ ಆಹಾರವಾಗಿ ಬಳಸಬಹುದಾಗಿದೆ.ಪ್ರತಿ ವರ್ಷ ಅನೇಕರ ಮನೆಯಲ್ಲಿ ಗಣೇಶನಿಗೆ ಗರಿಕೆ ಅರ್ಪಿಸಿ ಪೂಜಿಸುತ್ತಾರೆ ಹಾಗೂ ನಂತರ ಅದನ್ನು ಬಿಸಾಕಿಬಿಡುತ್ತಾರೆ ಆದರೆ ಹಾಗೆ ಮಾಡಬಾರದು ಬದಲಾಗಿ ಗರಿಕೆಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ಲಾಭಾಗಳಿವೆ.
ಗರಿಕೆಯ ಲಾಭಗಳು :
- ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.
- ದೇಹಕ್ಕೆ ಶಕ್ತಿ ದೊರೆಯುತ್ತದೆ.
- ವೈರಸ್ ರೋಗದ ವಿರುದ್ಧ ಹೋರಾಡುತ್ತದೆ.
ನಮ್ಮ ಪೂರ್ವಜರು ಗರಿಕೆಯ ವಿಶೇಷ ಗುಣಗಳನ್ನು ಅರಿತುಕೊಂಡು ಅದನ್ನು ತಮ್ಮ ದೈನಂದಿನ ಜೀವನ ಬಳಸುತ್ತಿದ್ದರು.
ಇನ್ನು ಪ್ರತಿ ನಿತ್ಯ ಒಂದು ಗ್ಲಾಸ್ ಗರಿಕೆ ರಸವನ್ನು ಕುಡಿಯುವುದರಿಂದ ಅದರಲ್ಲೂ ಜೋನಿ ಬೆಲ್ಲ ಬೆರೆಸಿ ಅಥವಾ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಹೃದಯದ ತೊಂದರೆಗಳನ್ನು ನಾವು ವಾಸಿ ಮಾಡಿಕೊಳ್ಳಬಹುದು.ಗರಿಕೆಯಲ್ಲಿ ಕ್ಲೋರೋಫಿಲ್ ಇದೆ ,ಈ ಕ್ಲೋರೋಫಿಲ್ ಅಂಶವು ತುಂಬಾ ಜೀವ ಶಕ್ತಿಯಿಂದ ಕೂಡಿದೆ ಆದ್ದರಿಂದ ದೇಹದ ಯಾವುದೇ ಭಾಗದಲ್ಲಿ ಕೊಳೆತ ಪ್ರಾರಂಭವಾಗಿದ್ದರೆ ಅಂದರೆ ಯಾವುದೇ ಇನ್ಫೆಕ್ಷನ್ ಇದ್ದರೆ ಹ ಕ್ಲೋರೋಫಿಲ್ ಅದನ್ನು ತಡೆದು ಶಾರೀರಿಕ ಸ್ವಾಸ್ಥ್ಯವನ್ನು ನಮ್ಮ ದೇಹಕ್ಕೆ ಅಂಗಗಳಿಗೆ ಜೀವಕೋಶಕ್ಕೆ ನೀಡುತ್ತದೆ ಹಾಗೂ ಅವುಗಳ ಪುನರುಜ್ಜೀವನಕ್ಕೆ ಸಹಾಯಕವಾಗುತ್ತದೆ.ಹೀಗೆ ಹೇಳಿದವರು ನ್ಯೂಯಾರ್ಕಿನ ಡಾ ಹಾರ್ವರ್ಡ್,ವೇಸ್ಟ್ ಕಾಕ್ .ಅವರ ಸಂಶೋಧನೆ ಇಂದ ಈ ಮೇಲೆ ತಿಳಿಸಿರುವ ಅಂಶ ರುಜುವಾತಾಗಿದೆ.ಗರಿಕೆ ಹುಲ್ಲಿನ 7.3 ಪಾಯಿಂಟ್ ಪಿಎಚ್ ಇದು ನಮ್ಮ ದೇಹದಲ್ಲಿನ ಪಿಎಚ್ ಗೆ ಸಮ.ಹಾಗಾಗಿ ಇದನ್ನು ನಾವು ಹಸಿರು ರಕ್ತ ಎಂದು ಹೇಳಬಹುದು.
ಇನ್ನು ಶೀತ , ನೆಗಡಿ , ಸೀನು , ಕೆಮ್ಮು , ಚರ್ಮದ ವಿವಿಧ ಅಲರ್ಜಿಗಳು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪ್ರತಿನಿತ್ಯ ಗರಿಕೆ ಹುಲ್ಲಿನ ರಸವನ್ನು ಕುಡಿಯುವುದರಿಂದ ಎಲ್ಲಾ ಅಲರ್ಜಿಗಳು ದೂರ ಆಗುತ್ತದೆ.ಇದರ ಫಲಿತಾಂಶ ಗೊತ್ತಾಗಬೇಕಾದರೆ ಕನಿಷ್ಠ 3 ತಿಂಗಳು ಸೇವನೆ ಮಾಡಬೇಕು.
ಇನ್ನು ಗರಿಕೆಯನ್ನು ಚೆನ್ನಾಗಿ ತೊಳೆದು ಅಥವಾ ಬಿಸಿ ನೀರಿಗೆ ಒಂದು ಸ್ಪೂನ್ ಉಪ್ಪನ್ನು ಹಾಕಿ ಅದರೊಳಗೆ ಗರಿಕೆಯನ್ನು ನೆನೆಸಿಟ್ಟು ತೊಳೆದು ನಂತರ ಅದನ್ನು ಭಕ್ತಿಯಿಂದ ಶ್ರದ್ಧೆಯಿಂದ ದೇವರಿಗೆ ಅರ್ಪಿಸಿ ನಂತರ ಅದನ್ನು ಪ್ರಸಾದ ರೂಪದಲ್ಲಿ ಮಾಡಿಕೊಂಡು ಅಥವಾ ಮಿಕ್ಸಿ ಜಾರಿಗೆ ಹಾಕಿಕೊಂಡು ಪೇಸ್ಟ್ ರೀತಿ ಮಾಡಿಕೊಂಡು ನಂತರ ಸ್ವಲ್ಪ ಜೋನಿ ಬೆಲ್ಲವನ್ನು ಅಥವಾ ಹಾಕಿ ಮತ್ತೊಮ್ಮೆ ರುಬ್ಬಿಕೊಂಡರೆ ಹಸಿರು ಜ್ಯೂಸ್ ರೆಡಿಯಾಗುತ್ತದೆ. ( ಮಧುಮೇಹಿಗಳು ಬೆಲ್ಲವನ್ನು ಹಾಕಬಾರದು)
ಈ ಹಸಿರು ಜ್ಯೂಸನ್ನು ಸೇವಿಸುವುದರಿಂದ
- ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
- ನರಗಳ ನಿಶ್ಯಕ್ತಿ ನಿವಾರಣೆಯಾಗುತ್ತದೆ.
- ನರಗಳ ದೌರ್ಬಲ್ಯ ನಿವಾರಣೆಯಾಗುತ್ತದೆ.
- ಹೃದಯದ ಆರೋಗ್ಯಕ್ಕೆ ಒಳ್ಳೆಯದು.
- ಮೂತ್ರ ಕೋಶಗಳಿಗೂ ಒಳ್ಳೆಯದು.
- ಸ್ತ್ರೀಯರ ಮಾಸಿಕ ತೊಂದರೆಗಳಿಗೆ ಪ್ರತಿ ತಿಂಗಳು ಮುಟ್ಟಾಗದಿರುವುದು ದ, ರಕ್ತ ಜಾಸ್ತಿ ಹೋಗುವುದು , ಸರಿಯಾಗಿ ಹೋಗುವುದಿಲ್ಲ , ಪಿಸಿಓಡಿ , ಹೀಗೆ ಅನೇಕ ತೊಂದರೆಗಳಿಗೆ ಗರಿಕೆಯ ಹಸಿರು ಜ್ಯೂಸನ್ನು 3 ತಿಂಗಳವರೆಗೆ ಸೇವಿಸುತ್ತಾ ಬಂದರೆ ವ್ಯತ್ಯಾಸ ನೀವೇ ಕಾಣುತ್ತೀರಿ.
- ತೂಕವನ್ನು ಇಳಿಸುತ್ತದೆ ,ಹಿಮೋಗ್ಲೋಬಿನನ್ನು ಹೆಚ್ಚು ಮಾಡುತ್ತದೆ ,ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ,
ಜೀರ್ಣ ಕಾರಿಗೆ ಸಹಕಾರಿಯಾಗಿದೆ. - ಗರಿಕೆಯ ಬಗ್ಗೆ ಇನ್ನು ಹೆಚ್ಚು ಮಾಹಿತಿ ತಿಳಿಯಲು ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.