ಶಿವನ ಮುಂದಿನ ನಂದಿ ಯಾರು ಗೊತ್ತಾ? ಇದು ನೀವರಿಯದ ಮಾಹಿತಿ!

Written by Anand raj

Published on:

ಸ್ನೇಹಿತರೆ ಎಲ್ಲ ಶಿವಾಲಯಗಳಲ್ಲಿಯು ಶಿವನ ಮುಂದೆ ಕುಳಿತ ನಂದಿ ವಿಗ್ರಹವನ್ನು ನೀವು ನೋಡಿರುತ್ತೀರಿ.ಹಾಗೆನೋಡಿದರೆ ನಂದಿ ಇಲ್ಲದ ಶಿವನ ಮಂದಿರವನ್ನು ನೀವು ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಶಿವ ಹಾಗೂ ನಂದಿಯ ನಡುವಿನ ಅವಿನಾಭಾವ ಸಂಬಂಧವಿದೆ. ಮಹರ್ಷಿಯೊಬ್ಬರ ಮಗನಾಗಿದ್ದ ಈ ನಂದಿ ಶಿವನ ವಾಹನವಾಗಿದ್ದು ಹೇಗೆ ಎಂಬುದರ ಬಗ್ಗೆ ಶಿವಪುರಾಣದಲ್ಲಿ ಒಂದು ಆಸಕ್ತಿಕರ ಕಥೆಯಿದೆ. ಅಲ್ಪಾಯುಶಿ ಆಗಿದ್ದ ಈ ಋಷಿಪುತ್ರ ತನ್ನ ತಪೋಶಕ್ತಿಯಿಂದ ಶಿವಗಣದ ಪ್ರಮುಖನಾಗುವ ಅವಕಾಶವನ್ನು ಪಡೆಯುತ್ತಾನೆ. ಇಷ್ಟಕ್ಕೂ ಈ ನಂದಿ ಹುಟ್ಟಿನ ಹಿಂದಿರುವ ಕಥೆಯನ್ನು ನೋಡೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂದಿಯ ತಂದೆಯ ಹೆಸರು ಶೀಲಾದಮಹರ್ಷಿ ಆತನು ಮಹಾನ್ ತಪಸ್ವಿ ಆದರೆ ತನಗೆ ಮಕ್ಕಳಿಲ್ಲವೆಂಬ ಆ ಒಂದು ಕೊರಗು ಮಾತ್ರ ಮಹರ್ಷಿಯನ್ನು ತುಂಬಾ ಕಾಡುತ್ತಿತ್ತು. ಇದೇ ಕಾರಣಕ್ಕೆ ಮುನಿಯು ಶಿವನನ್ನು ಕುರಿತು ಸುದೀರ್ಘ ತಪಸ್ಸು ಆರಂಭಿಸಿದ. ಕೊನೆಗೊಂದು ದಿನ ಶಿಲಾದನ ಮುಂದೆ ಪ್ರತ್ಯಕ್ಷಗೊಂಡ ಶಿವ ಶೀಘ್ರವೇ ನಿನಗೊಂದು ಮಗು ಪ್ರಾಪ್ತವಾಗುತ್ತದೆ ಎಂದು ಹೇಳಿ ಮಾಯವಾದ. ಹೀಗಿರುವಾಗ ಅದೊಂದು ದಿನ ಕೃಷಿ ಕಾರ್ಯದಲ್ಲಿ ತೊಡಗಿದ್ದ ಶಿಲಾದ ಮುನಿಗೆ ಅಚ್ಚರಿಯೊಂದು ಕಾದಿತ್ತು.

ನೆಲವನ್ನು ಉಳುಮೆ ಮಾಡುತ್ತಿದ್ದ ಶಿಲಾದ ಮುನಿಗೆ ನೆಲದಡಿ ಅದೇನೋ ಸಿಲುಕಿದಂತೆ ಭಾಸವಾಗಿ ನೇಗಿಲನ್ನು ಮೇಲೆತ್ತುತ್ತಾನೆ. ಅದೇನು ಆಶ್ಚರ್ಯ ನೇಗಿಲ ಮೋನೆಗೆ ಸಿಕ್ಕಿದ ಪೆಟ್ಟಿಗೆ ಒಂದು ಮೇಲೆದ್ದು ಬಂದಿತ್ತು. ಅದನ್ನು ತೆರೆದು ನೋಡಿದ ಶಿಲಾದ ಮುನಿಯ ಆನಂದಕ್ಕೆ ಪಾರವೇ ಇರಲಿಲ್ಲ. ಪೆಟ್ಟಿಗೆಯೊಳಗಿನ ಸುಂದರ ಮಗು ಶಿಲಾದನನ್ನ ನೋಡಿ ಕಿಲಕಿಲ ನಗಲಾರಂಭಿಸಿತು. ಈ ಹಿಂದೆ ಶಿವ ತನಗೆ ಕೊಟ್ಟ ವರವನ್ನು ನೆನಪುಮಾಡಿಕೊಂಡು ಶಿಲಾದ ಮುನಿ ಇದು ಸಾಕ್ಷಾತ್ ಶಿವನೇ ಕೊಟ್ಟ ವರ ಎಂದು ಭಾವಿಸಿ ಆ ಮಗುವನ್ನು ಪ್ರೀತಿಯಿಂದ ಸಾಕಲಾರಂಭಿಸುತ್ತಾನೆ. ಹೀಗಿರುವಾಗ ಅದೊಂದು ದಿನ ಮಿತ್ರ ವರುಣ ಎಂಬ ಋಷಿಮುನಿಗಳಿಬ್ಬರು ಶಿಲಾದ ಮುನಿಯ ಆಶ್ರಮಕ್ಕೆ ಬರುತ್ತಾರೆ.

ಅವರಿಬ್ಬರನ್ನು ಪ್ರೀತಿಯಿಂದ ಬರಮಾಡಿಕೊಂಡ ಶಿಲಾದ ಮುನಿ ಅವರನ್ನು ಸತ್ಕರಿಸುತ್ತಾನೆ. ಕೆಲವೊತ್ತು ಲೋಕಾಭಿರಾಮವಾಗಿ ಮಾತನಾಡಿದ ಆ ಋಷಿಮುನಿಗಳಿಬ್ಬರು ಹೊರಡಲು ಸಿದ್ಧರಾದಾಗ ಶೀಲಾದಮುನಿ ಅವರ ಕಾಲಿಗೆರಗಿ ನಮಸ್ಕರಿಸುತ್ತಾನೆ. ಆಗ ಋಷಿಮುನಿಗಳು ದೀರ್ಘಾಯುಷಿಯಾಗಿ ಬಾಳು ನಿನ್ನ ಬದುಕು ಆನಂದ ಮಯವಾಗಲಿ ಎಂದು ಹಾರೈಸಿದ ಮಿತ್ರ- ವರುಣರು ಶಿಲಾದಮುನಿಯ ಮಗ ನಂದಿ ಕಾಲಿಗೆರಗಿದಾಗ ಗಂಭೀರವದನನರಾಗಿ ಬಿಡುತ್ತಾರೆ. ಅವರ ಮುಖದಲ್ಲಿ ನೋವಿನ ಛಾಯೆಯೊಂದು ಮಿಂಚಿ ಮರೆಯಾಗುತ್ತದೆ. ಇದನ್ನು ಗಮನಿಸಿದ ಶಿಲಾದ ಮುನಿ ಅವರನ್ನು ಬೀಳ್ಕೊಡುವ ನೆಪದಲ್ಲಿ ಆಶ್ರಮದಿಂದ ಸ್ವಲ್ಪ ದೂರ ಅವರೊಂದಿಗೆ ನಡೆದುಕೊಂಡು ಬರುತ್ತಾರೆ.

ಬಳಿಕ ತನ್ನ ಮಗನನ್ನು ಆಶೀರ್ವದಿಸುವ ಸಂದರ್ಭದಲ್ಲಿ ಮುನಿಗಳು ಗಂಭೀರವದನರಾಗಿದ್ದು ಯಾಕೆ ಎಂದು ವಿಚಾರಿಸುತ್ತಾನೆ. ಆಗ ಮಿತ್ರ- ವರುಣ ರು ನಿನ್ನ ಮಗ ಅಲ್ಪಾಯುಷಿ, ಹೀಗಿದ್ದು ನಾವು ನೀನು ದೀರ್ಘಾಯುಷಿ ಆಗಿ ಬಾಳು ಎಂದು ಹೇಗೆ ತಾನೆ ಆತನನ್ನು ಹಾರೈಸಲು ಸಾಧ್ಯ ಎನ್ನುತ್ತಾರೆ. ಶಿವನ ವರಪ್ರಸಾದದಿಂದ ಪಡೆದ ಮಗ ನಂದಿ ಅಲ್ಪಾಯುಶಿ ಎಂದು ತಿಳಿದ ಶಿಲಾದ ಮನಿ ತೀವ್ರವಾಗಿ ನೊಂದುಕೊಳ್ಳುತ್ತಾನೆ. ಇಷ್ಟಕ್ಕೂ ಆ ಪರಶಿವ ನನಗೆ ಯಾಕೆ ಅಲ್ಪಾಯುಷಿ ಮಗನನ್ನು ಕರುಣಿಸಿದ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಮುನಿಗಳಿಬ್ಬರನ್ನು ಬೀಳ್ಕೊಟ್ಟು ಬಂದ ಶಿಲಾದ ಮುನಿ ಚಿಂತಾ ಮಗ್ನನಾಗಿದ್ದ. ಆತನ ವೇದನೆಯನ್ನು ಗಮನಿಸಿದ ನಂದಿ ನಿಮ್ಮ ಈ ನೋವಿಗೆ ಕಾರಣವೇನೆಂದು ತಂದೆಯನ್ನು ಕೇಳುತ್ತಾನೆ.

ಮಿತ್ರ – ವರುಣ ರನ್ನು ಸತ್ಕರಿಸುವ ವಿಚಾರದಲ್ಲಿ ನಾನೇನಾದರೂ ತಪ್ಪು ಮಾಡಿದಿನ ಎನ್ನುತ್ತಾನೆ. ಹಾಗೇನಿಲ್ಲ ಮಗು ನೀನು ಅಲ್ಪಾಯುಷಿಯಂತೆ ಬಹುಕಾಲ ಹಂಬಲಿಸಿ ಹಂಬಲಿಸಿ ಹರನಿಂದ ವರವನ್ನು ಪಡೆದ ಏಕೈಕ ಮಗನು ಅಲ್ಪಾಯುಷಿ ಆದನಲ್ಲ ಎಂಬ ನೋವು ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಏನು ಮಾಡಲಿ? ಆ ವಿಧಿಬರಹದ ಹಣೆಬರಹವೇ ವಿಚಿತ್ರ ಎಂದು ತನ್ನ ನೋವನ್ನು ತೋಡಿಕೊಳ್ಳುತ್ತಾನೆ ಶಿಲಾದ ಮುನಿ. ಆದರೆ ತಾನು ಅಲ್ಪಾಯುಷಿ ಎಂಬ ವಿಚಾರ ತಿಳಿದರು ಸ್ವಲ್ಪವೂ ವಿಚಲಿತನಾಗದೆ ನಂದಿ ಮುಗುಳ್ನಗುತ್ತಾನೆ.

ಅಲ್ಪಾಯುಶಿ ಎಂಬ ವಿಚಾರವನ್ನು ತಿಳಿದು ನಂದಿ ಹೆದರಿ ಹೋಗುತ್ತಾನೆ ಎಂದು ಭಾವಿಸಿದ ಶಿಲಾದ ಮುನಿ ಮಗನ ಈ ವಿಚಿತ್ರ ನಡುವಳಿಕೆಯನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ಗಂಭೀರವದನರಾಗಿ ನಿರ್ವಿಕಾರಭಾವದಿಂದ ಮಗನ ಮುಖವನ್ನೊಮ್ಮೆ ದಿಟ್ಟಿಸುತ್ತಾನೆ. ಆಗ ನಂದಿ ನನ್ನ ಹುಟ್ಟಿಗೆ ಕಾರಣನಾದ ಆ ಶಿವ ನನ್ನ ಹಣೆ ಬರಹವನ್ನು ಬದಲಿಸಲಾರನೆ ಆತನ ಮೊರೆ ಹೋದರೆ ಕಂಡಿತ ನಾನು ದೀರ್ಘಾಯುಷ್ಯ ವಂಥನಾಗುತ್ತೇನೆ ಚಿಂತಿಸದಿರು ಎಂದು ತಂದೆಯನ್ನು ಸಮಾಧಾನ ಮಾಡುತ್ತಾನೆ. ಸ್ವಲ್ಪ ದಿನಗಳ ನಂತರ ಆಶ್ರಮ ತೊರೆದ ನಂದಿ ಭುವನ ಎಂಬ ನದಿ ತೀರದಲ್ಲಿ ಶಿವನನ್ನು ಕುರಿತು ಸುದೀರ್ಘ ತಪಸ್ಸನ್ನು ಆರಂಭಿಸುತ್ತಾನೆ.

ನಂದಿಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವ ನಿನಗೇನು ವರಬೇಕೆಂದು ಕೇಳುತ್ತಾನೆ. ಆಗ ತನಗೆ ದೀರ್ಘಾಯುಷ್ಯವನ್ನು ನೀಡು ಎಂಬುದನ್ನು ಕೇಳಲು ಮರೆತ ನಂದಿ ನಾನು ಸದಾ ನಿನ್ನ ಜೊತೆಗೆ ಇರುವ ಅವಕಾಶವನ್ನು ನೀಡಿ ಎಂದು ಕೇಳುತ್ತಾನೆ. ನಂದಿಯ ಈ ಪರಮ ಭಕ್ತಿಗೆ ಮೆಚ್ಚಿದ ಶಿವ ನೀನು ನನ್ನ ವಾಹನವಾಗಿ ಸದಾ ನನ್ನೊಂದಿಗೆ ಇರಿ ಎಂದು ಆಶೀರ್ವದಿಸುತ್ತಾನೆ. ಅಷ್ಟೇ ಅಲ್ಲ ಕೈಲಾಸದ ದ್ವಾರಪಾಲಕ ನಾಗಿ ಶಿವಗಣದ ಅಧಿಪತಿ ಯಾಗುವ ಅವಕಾಶವನ್ನು ನಂದಿಗೆ ನೀಡುತ್ತಾನೆ.ಸ್ನೇಹಿತರೆ ಇದು ಅಲ್ಪಾಯುಷಿಯಾಗಿದ್ದ ನಂದಿ ಶಿವನ ವಾಹನವಾದ ಕಥೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment