ಮನೆಯ ಕರೆಂಟ್ ಬಿಲ್ ಕಡಿಮೆ ಮಾಡಲು ಇಲ್ಲಿವೆ ಸರಳ ಟೀಪ್ಸ್!

Written by Anand raj

Published on:

ಪ್ರತಿ ತಿಂಗಳು ವಿದ್ಯುತ್ ಬಿಲ್ ಏಕೆ ಹೆಚ್ಚು ಬರುತ್ತದೆ, ವಿದ್ಯುತ್ ಬಿಲ್ ಕಳುಹಿಸುವವರಿಗೂ ಈ ವಸ್ತುನಿಷ್ಠ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಆದ್ದರಿಂದ ವಿದ್ಯುತ್ ಬಿಲ್ ಬರದಂತೆ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಅದು ಸಾಧ್ಯವೇ?ಕರೆಂಟ್ ಬಿಲ್ಕಳೆದ ತಿಂಗಳಿಗಿಂತ ಈ ತಿಂಗಳು ಕರೆಂಟ್ ಬಿಲ್ ಜಾಸ್ತಿ ಬಂದರೆ ತುಂಬಾ ಮಂದಿ ಬೆಚ್ಚಿ ಬೀಳುತ್ತಾರೆ. ಬಿಲ್ ಜಾಸ್ತಿ ಬಂದರೆ ಏನು ಮಾಡ್ತೀವಿ. ಇನ್ನೇನು ವಿಧಿಯಿಲ್ಲದೆ ಕಟ್ಟೇಕಟ್ತೀವಿ. ಹಾಗಿದ್ದರೆ ಬಿಲ್ ಯಾಕೆ ಜಾಸ್ತಿ ಬಂತು? ಎಂದು ಆಳವಾಗಿ ಯಾರೂ ತಲೆಕೆಡಿಸಿಕೊಳ್ಳಲ್ಲ. ಪರಿಶೀಲಿಸಿದರೆ ನಿಮಗೇ ಗೊತ್ತಾಗುತ್ತದೆ. ಬಳಸಿದ್ದಾಕ್ಕಾಗಿ ಬಂತಾ.? ಇನ್ಯಾವುದಾದರೂ ಕಾರಣಕ್ಕಾಗಿ ಬಂತಾ..? ಎಂದು ಗೊತ್ತಾಗುತ್ತದೆ. ಅದಕ್ಕಾಗಿ ಏನು ಮಾಡಬೇಕೆಂದರೆ.ಕಳೆದ ತಿಂಗಳಿಗಿಂತ ಈ ತಿಂಗಳು ಬಿಲ್ ಹೆಚ್ಚಾಗಿ ಬಂತು ಎಂದು ಭಾವಿಸಿದರೆ ಕೆಳಗೆ ಕೊಟ್ಟ ಕೆಲವು ಸೂಚನೆಗಳನ್ನು ಪಾಲಿಸಿ. ಆಗ ಬಿಲ್ಲು ನಿಜವಾಗಿ ಬಳಸಿದ ಕಾರಣ ಬಂತೇ, ಅಥವಾ ಬೇರೆ ಇನ್ನೇನಾದರೂ ಸಮಸ್ಯೆಯಿಂದ ಬಿಲ್ ಹೆಚ್ಚಾಗಿಯಿತಾ, ಎಂದು ಸುಲಭವಾಗಿ ಗೊತ್ತಾಗುತ್ತದೆ.

ಮೊದಲು ನೀವು ಮಾಡಬೇಕಾಗಿರುವುದು ಮನೆಯಲ್ಲಿ ಎಷ್ಟೆಲ್ಲಾ ವಿದ್ಯುತ್ ಉಪಕರಣಗಳಿವೆಯೋ, ಅಷ್ಟೇ ವಿದ್ಯುತ್ ಸಾಮರ್ಥ್ಯ, ಅಷ್ಟೇ ಉಪಕರಣಗಳುಳ್ಳ ಇನ್ನೊಂದು ಮನೆಯ ಕರೆಂಟ್ ಬಿಲ್ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಿ. ನಿಮಗೆ ಗೊತ್ತಿರುವವರು, ಅಕ್ಕಪಕ್ಕ, ಸ್ನೇಹಿತರು, ಬಂಧುಗಳಿದ್ದರೆ ಅವರೂ ನಿಮ್ಮಷ್ಟೇ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದರೆ ಅವರ ಬಿಲ್ಲನ್ನು ಒಮ್ಮೆ ಚೆಕ್ ಮಾಡಿ. ಅವರಿಗೆ ಎಷ್ಟು ಯೂನಿಟ್ ಖರ್ಚಾಗಿದೆ, ನಿಮ್ಮಗೆ ಎಷ್ಟು ಯೂನಿಕ್ ಖರ್ಚಾಗಿದೆ, ಅವರಿಗೆ ಬಂದ ಬಿಲ್, ನಿಮಗೆ ಬಂದ ಬಿಲ್ಲು ಒಮ್ಮೆ ಪರಿಶೀಲಿಸಿದರೆ ಬಿಲ್ ಹೆಚ್ಚಾಗಿ ಬಂದಿರುವುದು, ಇಲ್ಲದಿರುವುದು ಗೊತ್ತಾಗುತ್ತದೆ.ಮೇಲೆ ಹೇಳಿದ ವಿಧವಾಗಿ ನೋಡಿದರೆ ಇತರರೊಂದಿಗೆ ಸಮಾನವಾಗಿ, ಯಾವುದೇ ವ್ಯತ್ಯಾಸ ಇಲ್ಲದಂತೆ ಬಿಲ್ ಬಂದರೆ ಓಕೆ, ಇಲ್ಲದಿದ್ದರೆ ಕೆಳಗೆ ಕೊಟ್ಟ ಮತ್ತಷ್ಟು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.

ಒಂದು ವೇಳೆ ನಿಮಗೆ ಬಿಲ್ ಜಾಸ್ತಿ ಬಂದಿದೆ ಎಂದು ಅನ್ನಿಸಿದರೆ ಅದು ಎರಡು ವಿಧಗಳಲ್ಲಿ ಆಗಿರಬಹುದು. ಒಂದು ಯೂನಿಟ್‌ಗಳು ಹೆಚ್ಚಾಗಿ ಖರ್ಚಾಗಿರುವುದು. ಎರಡು ವಿದ್ಯುತ್ ಚಾರ್ಜ್‌ಗಳು. ವಿದ್ಯುತ್ ಚಾರ್ಜ್‌ಗಳು ಏರಿಕೆಯಾಗದಿದ್ದರೆ ಹೆಚ್ಚು ಯೂನಿಟ್ ವಿದ್ಯುತ್ ಖರ್ಚಾದ ಕಾರಣ ಬಿಲ್ ಜಾಸ್ತಿ ಬಂದಿರಬಹುದು. ಅಥವಾ ಯೂನಿಟ್ ಹೆಚ್ಚಳವಾಗಿದ್ದರೆ ಆಗ ಪರಿಶೀಲಿಸಬೇಕಾದದ್ದು ಮನೆಯಲ್ಲಿನ ಉಪಕರಣಗಳನ್ನು. ಕಳೆದ ತಿಂಗಳು ನಿಮ್ಮ ಮನೆಯಲ್ಲಿ ಉಪಕರಣಗಳು ಏನಾದರೂ ಹೆಚ್ಚಾಗಿದ್ದಾವಾ..? ಅಥವಾ ಅವುಗಳ ಬಳಕೆ ಹೆಚ್ಚಾಗಿದೆಯೇ? ಹಾಗೇನು ಆಗಿಲ್ಲದಿದ್ದರೆ ವಿದ್ಯುತ್ ಉಪಕರಣಗಳು ಅಥವಾ ವೈರಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಎಲಕ್ಟ್ರಿಷಿಯನ್ ಬಳಿ ಚೆಕ್ ಮಾಡಿಸಿದರೆ ಸಮಸ್ಯೆ ಗೊತ್ತಾಗುತ್ತದೆ. ವೈರ್‌ನಲ್ಲಿ ಏನೂ ಸಮಸ್ಯೆ ಇಲ್ಲ ಅನ್ನಿಸಿದರೆ ಆಗ ಉಪಕರಣಗಳಲ್ಲಿದೆ ಎಂದು ಗೊತ್ತಾಗುತ್ತದೆ. ಆಗ ಒಂದೊಂದು ವಿದ್ಯುತ್ ಉಪಕರಣವನ್ನೂ ಚೆಕ್ ಮಾಡುತ್ತಾ ಹೋಗಬೇಕು. ಅದಕ್ಕೆ ಈ ರೀತಿ ಮಾಡಬೇಕು.

ಮೀಟರನ್ನು ಆನ್‌ನಲ್ಲಿ ಇಟ್ಟು ಮೇಯಿನ್ ಮಾತ್ರ ಆಫ್ ಮಾಡಬೇಕು. ಆಗ ಮೀಟರ್ ರೀಡಿಂಗ್ ನೋಡಬೇಕು. ಕೆಲವು ಗಂಟೆಗಳ ಕಾಲ ಮೇಯಿನ್ ಹಾಗೆಯೇ ಅಫ್ ಮಾಡಿ ಮತ್ತೆ ಮೀಟರ್ ರೀಡಿಂಗ್ ನೋಡಬೇಕು. ಒಂದು ವೇಳೆ ಯೂನಿಟ್‌ಗಳು ಖರ್ಚಾಗಿದ್ದರೆ ಸಮಸ್ಯೆ ಮೀಟರ್‌ನಲ್ಲಿದೆ ಎಂದರ್ಥ. ಆಗ ಮೀಟರನ್ನು ಬದಲಾಯಿಸಬೇಕು. ಒಂದು ವೇಳೆ ಮೀಟರ್‌ನಲ್ಲಿ ಸಮಸ್ಯೆ ಇಲ್ಲ ಎಂದರೆ ವಿದ್ಯುತ್ ಉಪಕರಣದಲ್ಲಿದೆ ಎಂದರ್ಥ. ಆಗ ಮೇಯಿನ್ ಆನ್ ಮಾಡಿ ಎಲ್ಲಾ ಉಪಕರಣಗಳನ್ನೂ ಆಫ್ ಮಾಡಬೇಕು. ಈಗ ಒಂದೊಂದು ಉಪಕರಣವನ್ನೂ ಆನ್, ಆಫ್ ಮಾಡುತ್ತಾ ಮೀಟರ್ ರೀಡಿಂಗ್ ಎರಡು ಸಲ ನೋಡಬೇಕು. ಉದಾಹರಣೆಗೆ 100 ವ್ಯಾಟ್‌ಗಳ ಫ್ಯಾನ್ ಇದೆ ಎಂದುಕೊಳ್ಳೋಣ. ಆಗ ಫ್ಯಾನ್ನನ್ನು ಆನ್ ಮಾಡಿ 1,2 ಗಂಟೆಗಳವರೆಗೂ ತಿರುಗಿಸಿ ಮತ್ತೆ ಅದನ್ನು ಆಫ್ ಮಾಡಬೇಕು. ಆಗ ಕೂಡಲೆ ರೀಡಿಂಗ್ ದಾಖಲಿಸಿಕೊಳ್ಳಬೇಕು. ಹೀಗೆ ಒಂದೊಂದು ಉಪಕರಣಕ್ಕೆ ಎಷ್ಟು ರೀಡಿಂಗ್ ಆಗುತ್ತದೆ ಎಂಬುದನ್ನು ಎಚ್ಚರಿಕೆಯಿಂದ, ಬಿಡಿಬಿಡಿಯಾಗಿ ನಮೂದಿಸಿಕೊಳ್ಳಬೇಕು.

ಆ ರೀತಿ ನಮೂದಿಸಿಕೊಂಡ ರೀಡಿಂಗ್‌ಗಳನ್ನು ಗಮನಿಸಿದರೆ ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಸರಿಯಾಗಿ ವಿದ್ಯುತ್ ಬಳಸುತ್ತಿವೆಯೇ ಇಲ್ಲವೇ ಎಂಬುದು ಅಥವಾ ಹೆಚ್ಚಾಗಿ ಬಳಸುತ್ತಿವೆಯೇ ಎಂಬುದು ಗೊತ್ತಾಗುತ್ತದೆ. ಯಾವುದೇ ಉಪಕರಣ ಹೆಚ್ಚಾಗಿ ವಿದ್ಯುತ್ ಬಳಸುತ್ತಿದೆ ಎಂಬುದು ಹೇಗೆ ಗೊತ್ತಾಗುತ್ತದೆಂದರೆ ಮೊದಲು ನಾವು ಒಂದು ಉಪಕರಣ ಸಾಮಾನ್ಯವಾಗಿ ಎಷ್ಟು ವಿದ್ಯುತ್ ಖರ್ಚಾಗುತ್ತದೋ ತಿಳಿದುಕೊಳ್ಳಬೇಕು. ಅದೇಗೆಂದರೆ ವಿದ್ಯುತ್ ಯೂನಿಟನ್ನು ಕಿಲೋವ್ಯಾಟ್ ಅವರ್ (KWh)ನಲ್ಲಿ ಅಳೆಯುತ್ತಾರೆ. ಅಂದರೆ ಒಂದು ಗಂಟೆಗೆ ಒಂದು ಕಿಲೋವ್ಯಾಟ್ (ಸಾವಿರ ವ್ಯಾಟ್) ಕರಂಟ್ ಬಳಕೆಯಾದರೆ ಆಗ ಒಂದು ಯೂನಿಟ್ ವಿದ್ಯುತ್ ಖರ್ಚಾದಂತೆ ಲೆಕ್ಕ.

100 ವ್ಯಾಟ್‌ಗಳ ಫ್ಯಾನ್ 10 ಗಂಟೆಗಳ ಕಾಲ ಓಡಿದರೆ ಆಗ 1 ಯೂನಿಟ್ ವಿದ್ಯುತ್ ಖರ್ಚಾದಂತೆ ಲೆಕ್ಕ. ಯಾವುದೇ ವಿದ್ಯುತ್ ಉಪಕರಣವಾದರೂ ಇದೇ ಲೆಕ್ಕಾಚಾರದಲ್ಲಿ ವಿದ್ಯುತ್ ಬಳಸಿಕೊಳ್ಳುತ್ತದೆ. ಅದಕ್ಕೆ ತಕ್ಕಂತೆ ವಿದ್ಯುತ್ ಖರ್ಚಾಗುತ್ತದೆ. ಈಗ ಕೊಟ್ಟ ಉದಾಹರಣೆ ಪ್ರಕಾರ ಮೇಲಿನ ರೀಡಿಂಗನ್ನು ಒಮ್ಮೆ ತಾಳೆ ನೋಡಿಕೊಳ್ಳಿ. 100 ವ್ಯಾಟ್ ಸಾಮರ್ಥ್ಯದ ಫ್ಯಾನ್ 2 ಗಂಟೆಗಳ ಕಾಲ ಓಡಿಸಿದರೆ ಎಷ್ಟು ವಿದ್ಯುತ್ ಖರ್ಚಾಗುತ್ತದೆ. ಮೇಲಿನ ಲೆಕ್ಕದ ಪ್ರಕಾರ, 100 ವ್ಯಾಟ್ ಫ್ಯಾನ್ 10 ಗಂಟೆ ಓಡಿದರೆ 1 ಯೂನಿಟ್ ಖರ್ಚಾಗುತ್ತದೆ. ಆ ಪ್ರಕಾರ 2 ಗಂಟೆಗೆ 0.2 ಯೂನಿಟ್ ಖರ್ಚಾಗುತ್ತದೆ. ಒಂದೊಂದು ಉಪಕರಣಕ್ಕೂ ಒಂದೊಂದು ರೀತಿ ಖರ್ಚಾಗುತ್ತದೆ. ಅದೇ ರೀತಿ ಎಲ್ಲಾ ಉಪಕರಣಗಳಿಗೂ ಚೆಕ್ ಮಾಡಬೇಕು. ವ್ಯತ್ಯಾಸ ಕಾಣಿಸಿದರೆ ಆ ಉಪಕರಣದಲ್ಲಿ ಲೋಪ ಇದೆ ಎಂದರ್ಥ. ಆಗ ಆ ಉಪಕರಣ ಬಳಸದೆ ಇದ್ದರೆ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಬಹುದು.

ಇನ್ನೊಂದು ಗಮನಿಸಬೇಕಾದ ಸಂಗತಿ ಏನೆಂದರೆ ವೈಯಕ್ತಿಕ ಮನೆಗಳ ಸಂಗತಿ ಪಕ್ಕಕ್ಕಿಟ್ಟರೆ ಅಪಾರ್ಟ್‌ಮೆಂಟ್‌ಗಳಲ್ಲಿನ ಮೀಟರ್‌ಗಳೆಲ್ಲಾ ಸಾಮಾನ್ಯವಾಗಿ ಒಂದೇ ಹತ್ತಿರ ಇರುತ್ತವೆ. ಯಾರಾದರೂ ನಿಮ್ಮ ಮೀಟರ್‌ನಿಂದ ಅಕ್ರಮವಾಗಿ ಕನೆಕ್ಷನ್ ತೆಗೆದುಕೊಂಡಿದ್ದರೆ ಅದರಿಂದ ಅವರ ಮನೆಗೆ ವೈರ್ ಹೋಗಿರುತ್ತದೆ. ಇದರಿಂದಲೂ ನಿಮ್ಮ ಮೀಟರ್ ರೀಡಿಂಗ್‌ನಲ್ಲಿ ಬದಲಾವಣೆ ಬರುತ್ತದೆ. ಎಲಕ್ಟ್ರಿಷಿಯನ್ ಸಹಾಯದಿಂದ ಆ ರೀತಿ ಏನಾದರೂ ಸಮಸ್ಯೆ ಇದೆಯಾ ಎಂಬುದನ್ನು ಚೆಕ್ ಮಾಡಿಸಬೇಕು.

ಮೇಲೆ ತಿಳಿಸಿದ ಸೂಚನೆಗಳನ್ನು ಪಾಲಿಸಿದರೆ ಬಿಲ್ ಯಾಕೆ ಜಾಸ್ತಿ ಬಂದಿದೆ ಎಂಬುದು ಗೊತ್ತಾಗುತ್ತದೆ. ಆದರೆ ವಿದ್ಯುತ್ ಉಳಿತಾಯ ಮಾಡಲು ಕೆಳಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ. ಇದರಿಂದ ಕರೆಂಟ್ ಬಿಲ್ ಸಹ ಕಡಿಮೆ ಬರುತ್ತದೆ. ಟ್ಯೂಬ್‌ಲೈಟ್, ಫಿಲಮೆಂಟ್ ಬಲ್ಬ್‌ಗಳ ಸ್ಥಾನದಲ್ಲಿ ಎಲ್‌ಇಡಿ ಲೈಟ್‌ಗಳನ್ನು ಬಳಸುವುದರಿಂದ ಗಣನೀಯವಾಗಿ ಉಳಿತಾಯ ಸಾಧ್ಯ. ದೊಡ್ಡದಾದ ಕೊಠಡಿಗಳಿಗಾದರೆ 14 ವ್ಯಾಟ್ ಬಲ್ಬ್ ಸಾಕು. ಅದೇ ಸ್ವಲ್ಪ ಚಿಕ್ಕದಾಗಿ ಅಥವಾ ಸಾಧಾರಣ ಸೈಜ್ ಇದ್ದರೆ 9, 10 ವ್ಯಾಟ್ ಎಲ್‍ಇಡಿ ಬಲ್ಬ್ ಸಾಕು.

ಅದೇ ಬಾತ್ ರೂಂ, ದೇವರಕೋಣೆಗೆ 1, 2 ವ್ಯಾಟ್ ಎಲ್‍ಇಡಿ ಬಲ್ಬಗಳು ಸಾಕು.ಲೋಕಲ್ ಬ್ರ್ಯಾಂಡ್ ಸೀಲಿಂಗ್ ಫ್ಯಾನ್‌ಗಳಲ್ಲದೆ ಬ್ರಾಂಡೆಡ್ ಸೀಲಿಂಗ್ ಫ್ಯಾನ್‌ಗಳನ್ನು ಬಳಸಿದರೆ ವಿದ್ಯುತ್ ಚೆನ್ನಾಗಿ ಉಳಿತಾಯ ಆಗುತ್ತದೆ. ಯಾಕೆಂದರೆ ಲೋಕಲ್ ಫ್ಯಾನ್‌ಗಳಾದರೆ ಅವು 75, 90, 100 ವ್ಯಾಟ್ ಸಾಮರ್ಥ್ಯ ಇರುತ್ತವೆ. ಅದೇ ಬ್ರಾಂಡೆಡ್ ಫ್ಯಾನ್‌ಗಳಾದರೆ 40, 50 ವ್ಯಾಟ್ ಪವರ್ ಮಾತ್ರವೇ ಬಳಸಿಕೊಳ್ಳುತ್ತವೆ.ಫ್ಯಾನ್‌ಗಳು, ಫ್ರಿಡ್ಜ್‌ಗಳು, ಎಸಿಗಳು, ಐರನ್ ಬಾಕ್ಸ್‌ಗಳು ಪವರ್ ಸ್ಟಾರ್ ರೇಟಿಂಗ್‌ನಲ್ಲಿ ಲಭಿಸುತ್ತಿವೆ. ಅವುಗಳಲ್ಲಿ 5 ಸ್ಟಾರ್ ರೇಟಿಂಗ್ ಉಳ್ಳ ವಸ್ತುಗಳನ್ನು ಖರೀದಿಸಿ ಬಳಸಿದರೆ ವಿದ್ಯುತ್ ಬಹಳ ಕಡಿಮೆ ಬಳಸುತ್ತವೆ. ಇನ್ವರ್ಟರ್ ಟೆಕ್ನಾಲಜಿ ಇರುವ ಎಸಿಗಳು ಬಹಳ ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ.

ರಿಮೋಟ್‌ನಿಂದ ಓಡುವ ಎಸಿಗಳು, ಟಿವಿಗಳು, ಹೋಮ್ ಥಿಯೇಟರ್ ನಂತಹವುಗಳಿಗೆ ರಿಮೋಟ್ ಆಫ್ ಮಾಡುತ್ತಾರೆ ಆದರೆ ಸ್ವಿಚ್ ಆಫ್ ಮಾಡಲ್ಲ. ಇದರಿಂದ ಸಹ ಪವರ್ ಖರ್ಚಾಗುತ್ತದೆ. ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿದರೆ ಮಾತ್ರ ಪವರ್ ಉಳಿತಾಯ ಆಗುತ್ತದೆ.ಡಿಷ್ ವಾಷರ್‌ಗಳು, ವಾಷಿಂಗ್ ಮೆಷಿನ್‍ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಪಾತ್ರೆಗಳು ಅಥವಾ ಬಟ್ಟೆಗಳಿದ್ದರೂ ಅವುಗಳನ್ನು ಮೆಷಿನ್‌ನಲ್ಲಿ ಹಾಕಿ ತೊಳೆಯುವುದು, ಒಗೆಯುವುದನ್ನು ಮಾಡುತ್ತಾರೆ.

ಆದರೆ ಆಯಾ ಮೆಷಿನ್‌ಗಳ ಸಾಮರ್ಥ್ಯಕ್ಕೆ ತಕ್ಕಂತೆ ಪೂರ್ತಿಯಾಗಿ ಲೋಡ್ ಇಲ್ಲದಿದ್ದರೆ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಪಾತ್ರೆ, ಬಟ್ಟೆ ಇದ್ದರೆ ಮೆಷಿನ್‌ ಬಳಸದಿರುವುದೇ ಉತ್ತಮ. ಇದರಿಂದ ಕರೆಂಟ್ ಖರ್ಚಾಗಲ್ಲ. ತುಂಬಾ ಹಳೆಯದಾದ ಎಲಕ್ಟ್ರಿಕ್ ವಸ್ತುಗಳನ್ನು ಬಳಸಬೇಡಿ, ಉದಾಹರಣೆಗೆ ಸೀಲಿಂಗ್ ಫ್ಯಾನ್, ಅದನ್ನು 8 ವರ್ಷಗಳಿಗಿಂತ ಹೆಚ್ಚಾಗಿ ಬಳಸಿದರೆ ವಿದ್ಯುತ್ ಹೆಚ್ಚಾಗಿ ಖರ್ಚಾಗುತ್ತದೆ. ಇದನ್ನು ಕೆಲವರು ಪ್ರಾಯೋಗಿಕವಾಗಿ ಸಹ ನಿರೂಪಿಸಿದ್ದಾರೆ. ಆದಕಾರಣ ತುಂಬಾ ಹಳೆಯದಾದ ಎಲಕ್ಟ್ರಿಕ್ ವಸ್ತುಗಳನ್ನು ಬಳಸದಿರುವುದೇ ಉತ್ತಮ.

Related Post

Leave a Comment