ಉಪ್ಪು ಇಲ್ಲದೇ ಹೋದರೆ ಯಾವುದೇ ಆಹಾರವೇ ಆದರೂ ಅಪೂರ್ಣವೆನಿಸುತ್ತದೆ. ಆಹಾರ ಪದಾರ್ಥಗಳಲ್ಲಿ ಉಪ್ಪು ಇಲ್ಲದೆ ಹೋದರೆ ಅವುಗಳ ರುಚಿಯನ್ನು ತಿಳಿಯುವುದು ಕೂಡಾ ಸಾಧ್ಯವಿಲ್ಲ. ಎಷ್ಟೇ ರುಚಿಯಾದ ಆಹಾರವನ್ನು ತಯಾರಿಸಿದರೂ ಉಪ್ಪು ಅದಕ್ಕೆ ಬೀಳದೇ ಹೋದರೆ ಅವುಗಳ ರುಚಿ ನಾಲಿಗೆಗೆ ಗೊತ್ತಾಗುವುದಿಲ್ಲ. ಆದ್ದರಿಂದಲೇ ಆಹಾರ ಪದಾರ್ಥಗಳ ರುಚಿಯ ವಿಷಯ ಬಂದಾಗ ಉಪ್ಪಿನ ಮೌಲ್ಯ ಏನು ಎಂದು ಗೊತ್ತಾಗುತ್ತದೆ.
ಆದರೆ ವಾಸ್ತವದಲ್ಲಿ ಸಹಾ ಉಪ್ಪಿನ ಮೌಲ್ಯ ಅಥವಾ ಅದರ ಬೆಲೆ ಬಹಳ ಹೆಚ್ಚು ಎನ್ನುವ ವಿಷಯ ನಿಮಗೆ ಗೊತ್ತಿದೆಯೇ? ಇಲ್ಲ ಎನ್ನುವುದಾದರೆ, ವಿಶ್ವದಲ್ಲಿ ಒಂದು ವಿಶೇಷ ಉಪ್ಪು ಇದ್ದು, ಈ ಉಪ್ಪಿನ ಬೆಲೆ ಬಹಳ ದುಬಾರಿಯೆಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಅಲ್ಲದೇ ಭಾರತದಂತಹ ದೇಶದಲ್ಲಿ ಬಹುಸಂಖ್ಯಾತ ಜನರು ಈ ಉಪ್ಪನ್ನು ಖರೀದಿ ಮಾಡಲು ಬಯಸಿದರೆ ಖಂಡಿತ ಸಾಲವನ್ನು ಮಾಡಬೇಕಾಗಬಹುದು. ಹಾಗಿದ್ದರೆ ಯಾವುದದು ವಿಶೇಷ ಉಪ್ಪು? ಏನಿದರ ಮಹತ್ವ? ತಿಳಿಯೋಣ ಬನ್ನಿ
ವಿಶ್ವದ ಅತ್ಯಂತ ದುಬಾರಿ ಬೆಲೆಯ ಉಪ್ಪು ಎಂದರೆ ಅದು ಐಸ್ಲ್ಯಾಂಡಿಕ್ ಸಾಲ್ಟ್. ಈ ಉಪ್ಪಿನ ಬೆಲೆ ದುಬಾರಿಯಾದರೂ, ವಿಶ್ವದ ಅನೇಕ ಜನಪ್ರಿಯ ಶೆಫ್ ಗಳ ಫೇವರಿಟ್ ಉಪ್ಪಾಗಿದೆ. ಈ ಉಪ್ಪಿನ 90 ಗ್ರಾಂ ಬೆಲೆ 11 ಡಾಲರ್ ಗಳು. ಅಂದರೆ ಭಾರತೀಯ ರೂಪಾಯಿಗಳಲ್ಲಿ 90 ಗ್ರಾಂ ಉಪ್ಪನ್ನು ಕೊಳ್ಳಲು ಸುಮಾರು 803 ರೂಪಾಯಿಗಳನ್ನು ನೀಡಬೇಕಾಗುವುದು. ಒಂದುವೇಳೆ ನಿಮಗೆ 1 ಕೆಜಿ ಐಸ್ಲ್ಯಾಂಡಿಕ್ ಹೋಗಬೇಕಾದರೆ 8 ಲಕ್ಷ 30 ಸಾವಿರ ರೂಪಾಯಿಗಳನ್ನು ತೆರಬೇಕಾಗುತ್ತದೆ. ಐಸ್ಲ್ಯಾಂಡಿಕ್ ಉಪ್ಪಿನ ಬೆಲೆ ಯಾವುದೇ ಐಶಾರಾಮೀ ವಸ್ತುವಿನ ಬೆಲೆ ಗಿಂತ ಕಡಿಮೆ ಏನಿಲ್ಲ.
ಈ ಉಪ್ಪನ್ನು ಕೆಲವು ವರ್ಷಗಳ ಹಿಂದೆಯಷ್ಟೇ ಕಂಡುಹಿಡಿಯಲಾಗಿದೆ. ಇದನ್ನು ಐಸ್ ಲ್ಯಾಂಡ್ ನ ವಾಯುವ್ಯ ಭಾಗದ ವೆಸ್ಟ್ ಪೋರ್ಟ್ ನಲ್ಲಿರುವ ಸಾಲ್ಟ್ ವರ್ಕ್ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಈ ಉಪ್ಪನ್ನು ತಯಾರಿಸಲು ಬಹಳಷ್ಟು ಶ್ರಮವನ್ನು ವಹಿಸಲಾಗುತ್ತದೆ. ಈ ಉಪ್ಪನ್ನು ಕೈಯಿಂದಲೇ ಉತ್ಪಾದನೆ ಮಾಡುವುದು ವಿಶೇಷವಾಗಿದೆ. ಈ ಪ್ರದೇಶವು ಗುಡ್ಡಗಾಡು ಪ್ರದೇಶದಲ್ಲಿ ಇದ್ದು, ತೀವ್ರವಾದ ಹಿಮಪಾತದಿಂದ ವರ್ಷದ ಬಹಳಷ್ಟು ದಿನಗಳು ಮುಚ್ಚಲ್ಪಟ್ಟಿರುತ್ತದೆ.ಆದರೆ 1996 ರಲ್ಲಿ ರಸ್ತೆ ಸುರಂಗವನ್ನು ನಿರ್ಮಾಣ ಮಾಡಿದ ಮೇಲೆ ಪರಿಸ್ಥಿತಿಗಳು ಸ್ವಲ್ಪ ಚೇತರಿಸಿಕೊಂಡಿವೆ. ವರ್ಷವೊಂದಕ್ಕೆ ಇಲ್ಲಿ 10 ಮೆಟ್ರಿಕ್ ಟನ್ ಉಪ್ಪನ್ನು ಬಹಳ ಶ್ರಮದಿಂದ ಉತ್ಪಾದಿಸಲಾಗುತ್ತದೆ.
ಕೈಯಿಂದಲೇ ಉಪ್ಪನ್ನು ತಯಾರಿಸುವುದರಿಂದ ಉಪ್ಪಿನ ತಯಾರಿಕೆಗೆ ಹೆಚ್ಚು ಸಮಯ ಹಿಡಿಯುತ್ತದೆ. ಸಮುದ್ರದ ನೀರನ್ನು ಉಪ್ಪು ತಯಾರಿಸುವ ಸ್ಥಳಕ್ಕೆ ತರಲಾಗುತ್ತದೆ, ನಂತರ ಅದನ್ನು ದೊಡ್ಡ ದೊಡ್ಡ ಪೈಪುಗಳ ಮೂಲಕ ಕಟ್ಟಡಗೊಳಗೆ ಹರಿಸಲಾಗುತ್ತದೆ. ಕಾರ್ಖಾನೆಯ ಒಳಗೆ ಅನೇಕ ಕೊಳಗಳಿದ್ದು, ಎಲ್ಲಾ ಕೊಳಗಳಲ್ಲಿ ರೇಡಿಯೇಟರ್ ಗಳು ಇರುತ್ತವೆ. ಕೊಳಗಳಲ್ಲಿ ನೀರು ಸಂಗ್ರಹ ವಾದಮೇಲೆ ರೇಡಿಯೇಟರ್ ಗಳು ನೀರನ್ನು ಕಾಯಿಸಲು ಆರಂಭಿಸುತ್ತವೆ. ನೀರು ಕಾದು ಆವಿಯಾಗಲು ಪ್ರಾರಂಭಿಸಿದಾಗ ಒಂದು ನಿರ್ದಿಷ್ಟ ಸ್ಥಳದಲ್ಲಿ ಉಪ್ಪಿನ ಸಂಗ್ರಹವಾಗಲು ಆರಂಭಿಸುತ್ತದೆ. ಇಲ್ಲಿ ಟ್ಯಾಂಕ್ ಗಳಿಂದ ಹಿಡಿದು ಪ್ಯಾನ್‌ಗಳು ಮತ್ತು ಡ್ರಾಯಿಂಗ್ ರೂಮ್‌ಗಳವರೆಗೆ ಎಲ್ಲವು ಬಿಸಿ ನೀರನ್ನು ಹೊಂದಿರುತ್ತವೆ. ಐಸ್ಲ್ಯಾಂಡಿಕ್ ಉಪ್ಪು ತಿಳಿ ಹಸಿರು ಬಣ್ಣದಲ್ಲಿರುತ್ತದೆ.