ಮುಳುಗಿರುವ ಟೈಟಾನಿಕ್ ಹಡಗನ್ನು ಯಾಕೆ ಸಮುದ್ರದಿಂದ ಇಲ್ಲಿಯವರೆಗೆ ತೆಗೆದು ಹಾಕಲಿಲ್ಲ?

Written by Anand raj

Published on:

ನಿಮಗೆಲ್ಲ ಟೈಟಾನಿಕ್ ಹಡಗು ದುರಂತದ ಬಗ್ಗೆ ಗೊತ್ತಿರಬಹುದು.ಈ ದುರಂತದ ಬಗ್ಗೆ ಬಂದ ಹಾಲಿವುಡ್ ಸಿನಿಮಾವನ್ನು ಜಗತ್ತಿನ ಬಹುತೇಕ ಜನ ನೋಡಿದ್ದಾರೆ..ನೀವು ಆಸ್ಕರ್ ಗೆದ್ದ ಈ ಚಿತ್ರವನ್ನು ನೋಡದೆ ಇದ್ರೆ ದಯವಿಟ್ಟು ಒಮ್ಮೆ ನೋಡಿ.

1911ರಲ್ಲಿ ಟೈಟಾನಿಕ್ ದುರಂತ ಸಂಭವಿಸಿತು ,ನಂತರ ಹಡಗು ಏನಾಯ್ತು ಅಂತ ಪತ್ತೆ ಹಚ್ಚುವುದಕ್ಕೆ ಹಲವಾರು ವರ್ಷಗಳೇ ಬೇಕಾಯ್ತು.ಈ ದುರಂತದ ಹಿಂದಿನ ಮಿಸ್ಟ್ರೀಯನ್ನು ಪತ್ತೆ ಹಚ್ಚುವುದಕ್ಕೆ ಅದೆಷ್ಟೊ ಪ್ರಯತ್ನಗಳೇ ನಡೆದವು ಆದರೆ ಅದ್ಯಾವ ಪ್ರಯತ್ನ ಕೂಡ ಟೈಟಾನಿಕ್ ದುರಂತಕ್ಕೆ ಕಾರಣ ಏನು ? ಮುಳುಗಿ ಹೋದ ಟೈಟಾನಿಕ್ ಹಡಗು ಎಲ್ಲಿದೆ ?ಅನ್ನೋ ಪ್ರಶ್ನೆಗೆ ಉತ್ತರ ಕೊಡ್ಲೆ ಇಲ್ಲ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹೀಗೆ 77 ವರ್ಷಗಳು ಕಳೆದು ಹೋಗುತ್ತೆ.1980 ರಲ್ಲಿ ಅಮೆರಿಕದ ನೇವಿ ಆಫೀಸರ್ ರೋಬಾಟ್ ಬಲಾರ್ಡ್ ಎಂಬಾತ ಸಾಗರದ ಗರ್ಭದಲ್ಲಿ ಹುದುಗಿದ್ದ ವಿಶ್ವದ ದೈತ್ಯ ಹಡಗನ್ನು ಪತ್ತೆ ಹಚ್ಚುತ್ತಾರೆ..ಟೈಟಾನಿಕ್ ನ ಅವಶೇಷಗಳು ನ್ಯೂ ಪೌಂಡ್ ಲೆಂಡ್ ನ ಸಮೀಪ ಸಿಕ್ಕಿತ್ತು.ಟೈಟಾನಿಕ್ನ ಈ ಅವಶೇಷಗಳು ಇತಿಹಾಸದ ಗರ್ಭದಲ್ಲಿ ಅಡಗಿರುವ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.

ಎರಡು ಭಾಗವಾಗಿ ತುಂಡಾಗಿದ್ದ ಈ ಹಡಗು 12,500 ಪೀಟ್ ಆಳ ಅಂದ್ರೆ ಸಮುದ್ರದಿಂದ 4 ಕಿಲೋ ಮೀಟರ್ ಕೆಳಗೆ ಪತ್ತೆಯಾಗಿತ್ತು.ಟೈಟಾನಿಕ್ ಹಡಗು ಎರಡು ತುಂಡಾಗಿದ್ದು ಹೇಗೆ ಅನ್ನುವ ಬಗ್ಗೆ ಹಲವು ವಾದಗಳಿವೆ.ಸಾಮಾನ್ಯವಾಗಿ ಗೊತ್ತಿರುವ ಪ್ರಕಾರ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಈ ಹಡಗು ಎರಡು ತುಂಡಾಗಿತ್ತು ಎನ್ನಲಾಗುತ್ತದೆ.ಆದರೆ ಟೈಟಾನಿಕ್ ಡಿ ನ್ಯೂ ಎವಿಡೆನ್ಸ್ ಡಾಕುಮೆಂಟರಿ ಪ್ರಕಾರ ಹಡಗಿನಲ್ಲಿ ಸಂಭವಿಸಿದ ಬೆಂಕಿಯಿಂದ ಟೈಟಾನಿಕ್ ಎರಡು ಭಾಗವಾಯಿತು ಎನ್ನಲಾಗುತ್ತದೆ.

ಯಾವಾಗ ಟೈಟಾನಿಕ್ ಸಿಗುತ್ತೋ ಆ ಸಂದರ್ಭದಲ್ಲಿ ಆ ಹಡಗಿನಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹೊರತೆಗೆಯಲಾಗುತ್ತದೆ
ಆದ್ರೆ ಟೈಟಾನಿಕ್ ಹಡಗನ್ನು ಮಾತ್ರ ಮೇಲೆಕ್ಕೆತ್ತುವ ಪ್ರಯತ್ನ ನಡೆಯಲಿಲ್ಲ.ಇಲ್ಲಿಯವರೆಗೂ ಟೈಟಾನಿಕ್ ಹಡಗನ್ನು ಹೊರತೆಗೆಯಲು ಸಾಧ್ಯವೇ ಆಗಿಲ್ಲ.ಒಂದುವೇಳೆ ಟೈಟಾನಿಕನ್ನು ಹೊರತೆಗೆದು ಸಂಶೋಧನೆ ಮಾಡಿದ್ದಿದ್ರೆ ಟೈಟಾನಿಕ್ ದುರಂತದ ಹಿಂದಿನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ತಾ ಇತ್ತೋ ಏನೋ .

ಅಷ್ಟಕ್ಕೂ ಇಷ್ಟೊಂದು ತಂತ್ರಜ್ಞಾನಗಳಿದ್ದರೂ ಟೈಟಾನಿಕ್ ಹಡಗನ್ನು ಇನ್ನೂ ಯಾಕೆ ಮೇಲೆತ್ತಲು ಸಾಧ್ಯವಾಗಿಲ್ಲ ಅನ್ನುವ ಪ್ರಶ್ನೆಗೆ ನಾವು ಉತ್ತರ ಹೇಳ್ತೀವಿ ಕೇಳಿ..ಟೈಟಾನಿಕ ನ್ನು ಹೊರತೆಗೆಯಲು ತುಂಬಾನೇ ಪ್ರಯತ್ನಗಳು ನಡೆದಿದೆ.ಟೈಟಾನಿಕ್ ಹಡಗು ತುಂಬಾ ವರ್ಷಗಳ ಕಾಲ ಸಮುದ್ರದ ಆಳದಲ್ಲಿ ಇತ್ತು.ಹೀಗಾಗಿ ಅದರ ಮೇಲೆ ಪಾಚಿಗಳು ಬೆಳೆದಿದ್ದವು ತುಕ್ಕು ಕೂಡ ಹಿಡಿದಿತ್ತು.
ಒಂದು ವೇಳೆ ಯಾವುದೇ ಕೇಬಲ್ ನಿಂದ ಅಥವಾ ಬೇರೆ ಯಾವುದೇ ತಂತ್ರಜ್ಞಾನ ಬಳಸಿ ಮೇಲೆತ್ತುವುದು ಅಷ್ಟೊಂದು ಸುಲಭವಾಗಿರಲಿಲ್ಲ ಇದೊಂಥರ ಹೇಗಾಗ್ತಿತ್ತು ಅಂದ್ರೆ ನೀವು ಚಹಾದಲ್ಲಿ ಬಿದ್ದ ಬಿಸ್ಕೆಟ್ಟನ್ನು ಮೇಲೆತ್ತಲು ಪ್ರಯತ್ನ ಮಾಡಿದಂತೆ.

ನಂತರ ಸಬ್ ಮೆರಿನ್ ಹಾಗೂ ಮ್ಯಾಗ್ನೆಟ್ ಸಹಾಯದಿಂದ ಮೇಲೆಕ್ಕೆತ್ತುವ ಪ್ರಯತ್ನ ಮಾಡಬಹುದು ಅನ್ನೋ ಸಲಹೆಗಳು ಕೂಡ ಕೇಳಿಬಂತು. ಆದ್ರೆ ಕಾರ್ಯಾಚರಣೆಗೆ ಕೆಲವೊಂದು ಅಡ್ಡಿಗಳು ಕೂಡ ಇದ್ವು ಅದರಲ್ಲಿ ಮೊದಲನೆಯದು ಈ ಹಡಗಿನ ತೂಕ .ಟೈಟಾನಿಕ್ ಹಡಗಿನ ತೂಕ ಬರೋಬ್ಬರಿ 1,43,000 ಟನ್ ಇತ್ತು ಅದರ ಮೇಲೆ ನೀರಿನ ಒತ್ತಡ ಕೂಡ ಇತ್ತು.ಟೈಟಾನಿಕ್ ನೀರಿನ ಆಳದಲ್ಲಿ ಇರುವುದರಿಂದ ಅಷ್ಟೊಂದು ಆಳದಲ್ಲಿ ನೀರಿನ ಒತ್ತಡ ತುಂಬಾ ಇರುತ್ತೆ.ಹೀಗಾಗಿ ಇದು ಅಸಾಧ್ಯದ ಕೆಲಸವಾಗಿತ್ತು
ನಂತರ 21ನೇ ಶತಮಾನದ ಆರಂಭದಲ್ಲಿ ವಿಜ್ಞಾನಿಗಳಿಗೆ ಒಂದ ಐಡಿಯಾ ಹೊಳೆಯುತ್ತೆ.

ಅದೇನಪ್ಪಾ ಅಂದ್ರೆ ಪಿಂಗ್ ಪಾಂಗ್ ಬಾಲ್ ಗಳ ಸಹಾಯದಿಂದ ಈ ಹಡಗನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬಹುದು ಅನ್ನೋದು ಆಶ್ಚರ್ಯ ಆದರೂ ಇದು ಸತ್ಯ.ಲೈಟ್ ವೇಯ್ಟ್ ಇರುವ ಪಿಂಗ್ ಪಾಂಗ್ ಬಾಲ್ ಗಳನ್ನು ಈ ಹಡಗಿನೊಳಗೆ ತುಂಬಿದರೆ ಸುಲಭದಿಂದ ಮೇಲಕ್ಕೆತ್ತಬಹುದು ಅನ್ನೋದು ವಿಜ್ಞಾನಿಗಳ ವಾದವಾಗಿತ್ತು.ಈ ಬಾಲ್ಗಳು ಅಷ್ಟೊಂದು ಆಳಕ್ಕೆ ಹೋಗುವ ಮುನ್ನವೇ ಒಡೆದು ಹೋಗುತ್ತೆ ಅನ್ನೋದರ ಬಗ್ಗೆ ವಿಜ್ಞಾನಿಗಳು ಯೋಚನೆ ಮಾಡಲಿಲ್ಲ ನಂತರ ಬಲೂನ್ ಸಹಾಯದಿಂದ ಈ ಹಡಗನ್ನು ಮೇಲೆತ್ತಬಹುದು ಅನ್ನೋ ಐಡಿಯಾ ಕೂಡ ಹೊಳೆಯುತ್ತೆ , ಹೀಲಿಯಂ ಬಲೂನುಗಳನ್ನು ಟೈಟಾನಿಕ್ ಗೆ ಕಟ್ಟಿ ನಂತರ ದೊಡ್ಡ ಬಲೂನ್ಗಳು ಮೇಲೆತ್ತಬಹುದು ಅಂತ ಅಂದಾಜಿಸಲಾಗಿತ್ತುಆದರೆ ಯೋಚನೆ ಮಾಡೋದು ತುಂಬಾನೇ ಸುಲಭ
ನಾವು ಅಂದುಕೊಂಡಂತೆ ಆಗಬೇಕಲ್ವಾ…ಈ ಬಲೂನ್ಗಳನ್ನು ನೀರಿನ ಒಳಗೆ ಹೇಗೆ ತೆಗೆದುಕೊಂಡು ಹೋಗುವುದು ಹಲವು ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ ನಂತರ ಇನ್ನೊಂದು ಐಡಿಯಾ ಬರುತ್ತೆ ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ,ನೀವು ನೋಡಿರಬಹುದು ನೀರಿನಲ್ಲಿ ಮಂಜುಗಡ್ಡೆ ಹಾಕಿದ್ರೆ ಮಂಜುಗಡ್ಡೆ ತೇಲುತ್ತದೆ

ಇದೇ ಐಡಿಯಾ ಹಿಡ್ಕೊಂಡು ಅರ್ಥೂರ್ ಹೆಕ್ಕಿ ಎಂಬಾತ ಟೈಟಾನಿಕನ್ನು ಒಂದು ಮಂಜುಗಡ್ಡೆಯಾಗಿ ಪರಿವರ್ತನೆ ಮಾಡಲು ಯೋಜನೆ ರೂಪಿಸುತ್ತಾನೆ ಆದ್ರೆ ಅದು ಸಾಧ್ಯವಾಗೋದಿಲ್ಲ ಅಮೆರಿಕದ ಎಂಜಿನಿಯರ್ ಜಾನ್ ಪಿಯರ್ ಎಂಬಾತ ಇಂಥದ್ದೇ ಒಂದು ಉಪಾಯ ಮಾಡುತ್ತಾನೆ ಅದಕ್ಕಾಗಿ ಆ ತಾಲಿಪ್ ಕಿಟ್ ನೈಟ್ರೋ ಜನನ್ನು ಉಪಯೋಗಿಸಲು ಮುಂದಾಗ್ತಾನೆ.ಈ ಹಡಗು ಮೇಲಕ್ಕೆತ್ತಬೇಕು ಅಂದ್ರೆ ಬರೋಬ್ಬರಿ ಅರ್ಧ ಮಿಲಿಯನ್ ಲಿಕ್ವಿಡ್ ನೈಟ್ರೋಜನ್ ಅವಶ್ಯಕತೆ ಇತ್ತು. ಇಷ್ಟೊಂದು ಪ್ರಮಾಣದ ಲಿಕ್ವಿಡ್ ನೈಟ್ರೋಜನ್ ಅನ್ನು ಸಮುದ್ರದಾಳಕ್ಕೆ ತಲುಪಿಸಲು ಸಾಧ್ಯವೇ ಇಲ್ಲ.ಹೀಗಾಗಿ ಈ ಐಡಿಯಾ ಕೂಡ ಫೇಲ್ ಆಗುತ್ತೆ ನಂತರ
ಹಡಗು ನಿರ್ಮಾಣದ ದಿಗ್ಗಜ ಮಿಕಿಲ್ ರಿಬ್ಲಿಕ್ಸಿ ಒಂದು ಸಲಹೆ ನೀಡುತ್ತಾರೆ.ಮಿಕಿಲ್ ಸಬ್ಮೆರಿನ್ ನಿರ್ಮಾಣದಲ್ಲಿ ಹೆಸರುವಾಸಿಯಾಗಿದ್ದರು.ಅವರು ನಿರ್ಮಿಸಿದ್ದ ಸಬ್ಮೆರಿನ್ಗಳು ವಿಶ್ವಯುದ್ಧದ ಸಂದರ್ಭದಲ್ಲಿ ಉಪಯೋಗಿಸಲಾಗಿತ್ತು.ಇವರ ಪ್ರಕಾರ ಈ ಹಡಗನ್ನು ಮೇಲಕ್ಕೆತ್ತಬೇಕು ಅಂದ್ರೆ ಮೊದಲು ಅದನ್ನು ಕ್ಲೀನ್ ಮಾಡಬೇಕಿತ್ತು ಅದಕ್ಕಾಗಿ ಪವರ್ ಫುಲ್ ಹೈಡ್ರೋ ಇನ್ಸುಲೇಷನ್ ನ ಅವಶ್ಯಕತೆ ಇತ್ತು ಇದರ ಸ್ವಚ್ಛತೆ ನಂತರ ಕೇಬಲ್ ಸಹಾಯದಿಂದ ಟೈಟಾನಿಕ್ ನ್ನು ಖಾಲಿ ಪಾರ್ಟೋನ್ ಬೋಟ್ಗೆ ಅಟ್ಯಾಚ್ ಮಾಡಲು ನಿರ್ಧರಿಸಲಾಗಿತ್ತು.

ಇದೆಲ್ಲ ಕೆಲಸವನ್ನು ಮಿಷನ್ ಗಳೇ ಮಾಡುತ್ತಿದ್ವು..ನಂತರ ಅದಕ್ಕೆ ಬೇಕಾದ ಸಬ್ ಮೆರಿನ್ ನಿರ್ಮಿಸಲು ಪ್ಲಾನ್ ಮಾಡಲಾಗಿತ್ತು.
ಅದರ ಟ್ಯಾಂಕ್ಗಳಲ್ಲಿ ಗ್ಯಾಸ್ ಹಾಕಲು ನಿರ್ಧರಿಸಲಾಗಿತ್ತು.ಈ ಕಾರ್ಯಾಚರಣೆಗೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ನ ಅವಶ್ಯಕತೆಯಿತ್ತು.ಮಿಕೀಲ್ ಅವರ ಪ್ರಕಾರ ಬರೋಬ್ಬರಿ 20 ಮಿಲಿಯನ್ ಕಿಲೋ ವ್ಯಾಟ್ ವಿದ್ಯುತ್ ಈ ಯೋಜನೆಗೆ ಬೇಕಾಗಿತ್ತು.
ಅಂದ್ರೆ ಪವರ್ ಪ್ಲಾಂಟ್ ಇದಕ್ಕೆ ಅಂತಾನೇ ಬೇಕಾಗುತ್ತೆ , ಇಂಥದ್ದೊಂದು ಪವರ್ ಪ್ಲಾಂಟನ್ನು ನೀರಿನ ಆಳದಲ್ಲಿ ಮಾಡಬಹುದಿತ್ತು ಆದರೆ ಭವಿಷ್ಯದ ದೃಷ್ಟಿಯಿಂದ ಅದು ಉಪಯೋಗಕ್ಕೆ ಬರ್ತಾ ಇರಲಿಲ್ಲ..

ಅಷ್ಟಕ್ಕೂ ಯಾವುದೇ ಕಂಪನಿ ಆದ್ರೂ ಮೊದಲು ಲಾಭ ನೋಡ್ತಾರೆ ಲಾಭ ಇಲ್ಲದೇ ಇದ್ರೆ ಸುಮ್ನೆ ಅಷ್ಟೊಂದು ಖರ್ಚು ಮಾಡಿ ಪ್ರಯೋಜನವೇನು..ಟೈಟಾನಿಕ್ ಹೇಗೆ ಮೇಲಕ್ಕೆತ್ತುವುದು ಅನ್ನೋಕ್ಕಿಂತ ಯಾಕೆ ಮೇಲಕ್ಕೆತ್ತಬೇಕು ಅನ್ನೋ ಪ್ರಶ್ನೆಗಳು ಮೂಡಿದವು..ಅತ್ಯಮೂಲ್ಯ ವಸ್ತುಗಳನ್ನು ಆಗಲೇ ಮೇಲಕ್ಕೆತ್ತಲಾಗಿದೆ ಉಳಿದಿರೋದು ಅವಶೇಷ ಮಾತ್ರ .ಒಂದುವೇಳೆ ಕೋಟಿಗಟ್ಟಲೆ ಖರ್ಚು ಮಾಡಿ ಮೇಲಕ್ಕೆತ್ತಿ ಟೈಟಾನಿಕ್ ಮ್ಯೂಸಿಯಂ ಮಾಡಿದ್ರೂ ಹಾಕಿದ ಹಣ ವಾಪಸ್ ಬರಬೇಕು ಅಂದ್ರೆ ನೂರಾರು ವರ್ಷಗಳು ಬೇಕಾಗುತ್ತದೆ ಹೀಗಾಗಿ ಯಾರೂ ಕೂಡ ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲ.

ಟೈಟಾನಿಕ್ ಸಾಗರದಾಳದಲ್ಲಿ ಹುದುಗಿ ನೂರು ವರ್ಷಗಳು ಕಳೆದುಹೋಗಿವೆ.ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಹಡಗನ್ನು ತಿನ್ನುತ್ತಿವೆ.ಒಂದು ಸಂಶೋಧನೆಯ ಪ್ರಕಾರ ಕೆಲವೇ ಕೆಲವು ವರ್ಷಗಳಲ್ಲಿ ಈ ಬ್ಯಾಕ್ಟೀರಿಯಾಗಳು ಹಡಗನ್ನು ತಿಂದು ತೇಗುತ್ತವೆಯಂತೆ.

ಯುನೆಸ್ಕೋ ಕೂಡ ಈ ಹಡಗನ್ನು 2001ರಲ್ಲಿ ನೀರಿನಲ್ಲಿರುವ ಪಾರಂಪರಿಕ ತಾಣ ಅಂತ ಹೇಳಿದೆ .ಈ ಹಡಗನ್ನು ಮೇಲೆಕ್ಕೆತ್ತಲು ಖರ್ಚು ಮಾಡುವ ಬದಲು ಅದೇ ಹಣವನ್ನು ಉಪಯೋಗಿಸಿ ಟೈಟಾನಿಕ್ ಗಿಂತ ದೊಡ್ಡ ಹಡಗನ್ನು ನಿರ್ಮಿಸಬಹುದು ,ಹೀಗಾಗಿ ಈ ಹಡಗನ್ನು ನೀರಿನಿಂದ ಮೇಲಕ್ಕೆತ್ತಲಿಲ್ಲ ,ಇನ್ನು ಮುಂದೆಯೂ ಎತ್ತಲ್ಲ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment