ಪ್ರತಿಯೊಬ್ಬ ಪಾರ್ಲೆಜಿ ಬಿಸ್ಕೆಟ್ ಪ್ರಿಯರು ಓದಲೇಬೇಕು!

Written by Anand raj

Published on:

ನಮ್ಮ ಭಾರತ ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪಾರ್ಲೇಜಿ ಬಿಸ್ಕೆಟ್ಟಿನ ರುಚಿಯನ್ನು ಸವಿಯದೆ ಇರುವವರನ್ನು ಹುಡುಕೋದು ತುಂಬಾ ಕಷ್ಟ.ಅಷ್ಟು ಪ್ರತಿ ಮನೆಗೂ ಆವರಿಸಿದೆ ಈ ಬಿಸ್ಕೆಟ್.ಕೆಲವರಿಗೆ ಪ್ರತಿ ದಿನ ಕಾಫಿ ಟೀ ಜೊತೆ ಈ ಬಿಸ್ಕೆಟ್ ಇರಲೆಬೇಕು. ಈ ರೀತಿ ಈ ಪ್ರಪಂಚಾದ್ಯಂತ ಎಲ್ಲರನ್ನು ಕೂಡ ಆವರಿಸಿರುವ ಈ ಬಿಸ್ಕೆಟ್ಟಿನ ಕಥೆಯನ್ನು ನೀವು ತಿಳಿದುಕೊಳ್ಳಲೆಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಪಾರ್ಲೇಜಿ ಬಿಸ್ಕೆಟ್ ನಿನ್ನೆ ಮೊನ್ನೆಯದಲ್ಲ ಇದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಮುಂಚೆ ಇಂದಲೂ ದೇಶದಲ್ಲಿ ಉತ್ಪತ್ತಿ ಆಗುತ್ತಿದೆ.1929ರಲ್ಲಿ ಮೋಹನ್ ಲಾಲ್ ಚೌಹಾನ್ ಎಂಬುವರು ಪಾರ್ಲೇಜಿ ಬಿಸ್ಕೆಟ್ ಅನ್ನು ತಯಾರು ಮಾಡುವುದಕ್ಕೆ ಶುರು ಮಾಡ್ತಾರೆ ಅದಕ್ಕಿಂತ ಮುಂಚೆ ಅವರು ಕ್ಯಾಂಡಿ ಮತ್ತು ಟಾಫಿಗಳನ್ನು ತಯಾರು ಮಾಡುತ್ತಿದ್ರೂ.ಆ ಬ್ಯುಸಿನೆಸ್ ಕೂಡ ತುಂಬಾ ಜೋರಾಗಿ ನಡೆಯುತ್ತಿರುತ್ತದೆ.ಆಗಿನ ಕಾಲಕ್ಕೆ ಸುಮಾರು ಒಂದು ವರ್ಷಕ್ಕೆ 60,000/- ರೂಪಾಯಿಯವರೆಗೂ ಅವರ ವ್ಯಾಪಾರದ ವಹಿವಾಟು ನಡೆಯುತ್ತಯಿತ್ತು ಆದರೆ ಬರಬರುತ್ತಾ ಟಾಫಿ ತಯಾರು ಮಾಡಲು ಬೇಕಿರುವ ಸಾಮಗ್ರಿಗಳ ಬೆಲೆ ಹೆಚ್ಚಾದಾಗ ಆ ವ್ಯಾಪರದಲ್ಲಿ ಲಾಸ್ ಕಾಣ್ತಾರೆ ಆದರೆ ಆಗ್ತಾನೆ ಶುರು ಮಾಡಿದ ಈ ಪಾರ್ಲೇ ಬಿಸ್ಕೆಟ್ ಅದು ಸುಮಾರು 4,000/- ರಿಂದ 5,000/- ಲಾಭ ಮಾಡಿರುತ್ತದೆ.

ಆಗ ಆ ಫ್ಯಾಕ್ಟರೀನಾ ಮಾರಬೇಕು ಅಂತ ನಿರ್ಧಾರ ಮಾಡಿದ ಅವರು ಈ ಬಿಸ್ಕೆಟ್ ನಲ್ಲಿ ಬಂದ ಲಾಭವನ್ನು ನೋಡಿದ ಅವರು ಆ ಪ್ಯಾಕ್ಟರಿಯನ್ನು ನಿರ್ಧಾರವನ್ನು ಕೈ ಬಿಡ್ತಾರೆ.ಆಗ ಅವರಿಗೆ ಜನರಿಗೆ ಈ ಬಿಸ್ಕೆಟ್ ನ ಅವಶ್ಯಕತೆ ಎಷ್ಟಿದೆ ಅಂತ ಗೊತ್ತಾಗುತ್ತೆ .ಆಗ ಹುಟ್ಟುಕೊಂಡಿದ್ದೆ ಈ ಪಾರ್ಲೆಜಿ ಬಿಸ್ಕೆಟ್-ನಂತರ ಮೋಹನ್ ಲಾಲ್ ಅವರು ಇಂಗ್ಲೆಂಡ್ ಹೋಗಿ ಅಲ್ಲಿ ಬಿಸ್ಕೆಟ್ನ ಯಾವ ರೀತಿ ತಯಾರು ಮಾಡೋದು ? ಹೇಗೆ ಏನು ಎನ್ನುವುದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಅಧ್ಯಯನ ಮಾಡಿ ಅದಕ್ಕೆ ಬೇಕಾಗಿರುವ ಮಿಷನ್ ಗಳನ್ನು ತಗೊಂಡು ಭಾರತಕ್ಕೆ ಬರ್ತಾರೆ.

ಕಡಿಮೆ ಬೆಲೆಗೆ ತುಂಬಾ ಒಳ್ಳೆ ರುಚೀನಾ ಕೊಡ್ತಾ ಇದ್ದಂತಹ ಈ ಬಿಸ್ಕೆಟ್ ದಿನಗಳು ಕಳೆದಂತೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತೆ.ಮೊದಲಿಗೆ ಈ ಬಿಸ್ಕೆಟ್ ನ ಹೆಸರು ಪಾರ್ಲೆ ಗ್ಲುಕೋ ಅಂತ ಇತ್ತು ನಂತರ 1980 ರಲ್ಲಿ ಆ ಹೆಸರನ್ನು ಪಾರ್ಲೆಜಿ ಅಂತ ಬದಲಾಯಿಸುತ್ತಾರೆ ಅಂದ್ರೆ ಜಿ ಅಂದ್ರೆ ಮೊದಲು ಗ್ಲುಕೋಸ್ ಅಂತ ಅರ್ಥ ಇತ್ತು ನಂತರ ಅದನ್ನು ಪಾರ್ಲೇಜಿ ಅಂತ ಹೆಸರಿಟ್ಟ ಮೇಲೆ ಆ ಜೀ ಯನ್ನು ಜೀನಿಯಸ್ ಅಂತ ಬದಲಾಯಿಸಲಾಗುತ್ತೆ.ಇನ್ನು ಅವರು ಈ ಫ್ಯಾಕ್ಟರಿಯನ್ನು ಶುರು ಮಾಡಿದಾಗ ಅದಕ್ಕೆ ಹಾಕಿದ ಬಂಡವಾಳ ಸುಮಾರು 2 ಲಕ್ಷ ರೂಪಾಯಿ ಆದರೆ ಇವತ್ತು ಆ ಒಂದು ಬಿಸ್ಕೆಟ್ ಫ್ಯಾಕ್ಟರಿ ಸುಮಾರು 5,000/- ಸಾವಿರ ಕೋಟಿಗೆ ಬೆಲೆಬಾಳುತ್ತದೆ.

ಮತ್ತು ಒಂದು ದಿನಕ್ಕೆ ಸುಮಾರು 450 ಬಿಲಿಯನ್ ಪಾರ್ಲೆಜಿ ಬಿಸ್ಕೆಟ್ಗಳು ತಯಾರಾಗುತ್ತಕ್ದೆಯಂತೆ.ಈ ಬಿಸ್ಕೆಟ್ಗೆ ಪೈಪೋಟಿ ಕೊಡುವುದಕ್ಕೆ ನೂರಾರು ವಿದೇಶಿ ಕಂಪೆನಿಗಳು ಹುಟ್ಟಿಕೊಂಡವು ಆದರೆ ಯಾವುದೇ ಒಂದು ಬಿಸ್ಕೆಟ್ ಕಂಪನಿಗಳು ಕೂಡ ಪಾರ್ಲೆಜಿನ ಟಚ್ ಮಾದುವುದಕ್ಕೂ ಸಹ ಆಗ್ಲಿಲ್ಲ .ಇನ್ನು ನಾವೆಲ್ಲರೂ ಕೂಡ ಪಾರ್ಲೆಜಿ ಬಿಸ್ಕೆಟನ್ನು ಹೇಗೆ ಕಂಡುಹಿಡಿತೀವಿ ಅಂದ್ರೆ ಬಿಸ್ಕೆಟ್ ಪ್ಯಾಕ್ನ ಮೇಲಿರುವ ಆ ಹುಡುಗಿಯ ಚಿತ್ರ.ಮತ್ತೆ ಕೆಲವು ತಿಂಗಳುಗಳ ಹಿಂದೆ ಪಾರ್ಲೆಜಿ ಬಿಸ್ಕೆಟ್ ಪ್ಯಾಕ್ ನಲ್ಲಿರುವ ಈ ಹುಡುಗಿ ಯಾರು ಗೊತ್ತ ಅಂತ ಯಾರದ್ದೋ ಫೋಟೋಗಳನ್ನು ಹಾಕ್ಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಿದರು.

ಕೆಲವರು ನಾಗ್ಪುರದ ನಿರ್ದೇಶ್ ಪಾಂಡೆ ಅಂತ ಹೇಳಿದರು , ಇನ್ನು ಕೆಲವರು ಸುಧಾ ಮೂರ್ತಿ ಅಂತ ಹೇಳಿದರು , ಇನ್ನು ಕೆಲವರು ಯಾರದ್ದೋ ಸಿನಿಮಾ ನಾಯಕಿಯರ ಫೋಟೋಗಳನ್ನು ಹಾಕ್ಕೊಂಡು ಇದೇ ಹುಡುಗಿ ಸುಳ್ಳು ಸುದ್ದಿ ಅಂತ ಹಬ್ಬಿಸಿದರು.ಆದರೆ ಸತ್ಯ ಏನಂದ್ರೆ 1960 ರಲ್ಲಿ ಒಬ್ಬ ಚಿತ್ರ ಕಲಾವಿದ ಆ ಕಂಪನಿಗಾಗಿ ಬಿಡಿಸಿದ್ದ , ಹಾಗಾಗಿ ಇದು ಒಬ್ಬ ಚಿತ್ರಕಲಾವಿದನ ಕೈಯಲ್ಲಿ ಮೂಡಿಬಂದ ಚಿತ್ರವೇ ಹೊರತು ಯಾರ ಫೋಟೋವೂ ಅಲ್ಲ.

2003 ರಲ್ಲಿ ಈ ಪ್ರಪಂಚದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕೆಟ್ ಎನ್ನುವ ಒಂದು ಹೆಸರಿಗೆ ಪಾರ್ಲೇಜಿ ಬಿಸ್ಕೆಟ್ ಪಾತ್ರವಾಗಿತ್ತು.ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬಿಸ್ಕೆಟ್ ಗಳಲ್ಲಿ ಪಾರ್ಲೇಜಿ ಕೂಡ ಅಗ್ರಸ್ಥಾನದಲ್ಲಿದೆ.ಪಾರ್ಲೇಜಿಯಲ್ಲಿ 5/- ರೂಪಾಯಿಯಿಂದ ಸುಮಾರು 100/- ರೂಪಾಯಿ ವರೆಗೂ ವಿಧವಿಧದ ಪಾಕೆಟ್ಗಳಲ್ಲಿ ಬಿಸ್ಕೆಟ್ಗಳು ಸಿಗುತ್ತದೆ.ಅತಿ ಹೆಚ್ಚು ಸೇಲ್ ಆಗುವ ಬಿಸ್ಕೆಟ್ ಅಂದರೆ ಅದು 5 ರೂಪಾಯಿಯ ಪ್ಯಾಕ್ ಬಿಸ್ಕೆಟ್.ಈ ರೀತಿ ಸ್ವಾತಂತ್ರ್ಯ ಪೂರ್ವದಿಂದ ಇವತ್ತಿನವರೆಗೂ ಕೂಡ ತನ್ನ ನಾಗಾಲೋಟವನ್ನು ನಿಲ್ಲಿಸದೆ ಮುನ್ನುಜಿಗುತ್ತಿದೆ ಪಾರ್ಲೇಜಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment