ಭಾರತದಲ್ಲಿ ಸೋಶಿಯಲ್ ಮೀಡಿಯಾಗಳ ದೈ ತ್ಯರು ಎನಿಸಿರುವ ಟ್ವಿಟರ್, ಫೇಸ್ ಬುಕ್ ಹಾಗೂ ವಾಟ್ಸಾಪ್, ಇನ್ಸ್ಟಾಗ್ರಾಂ ನಿ ಷೇ ಧವಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಏಕೆಂದರೆ ಭಾರತ ಸರ್ಕಾರವು ಈ ಸೋಶಿಯಲ್ ಮೀಡಿಯಾಗಳ ನೂತನವಾದ ಮಧ್ಯವರ್ತಿ ಮಾರ್ಗಸೂಚಿಯನ್ನು ಪರಿಶೀಲನೆ ಮಾಡಲಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ಪರಿಶೀಲನೆಯಲ್ಲಿ ಯಾವುದೇ ಜಾಲತಾಣ ಪ್ಲಾಟ್ ಫಾರಂ ಮಾರ್ಗಸೂಚಿಯ ನಿಯಮಗಳನ್ನು ಅನುಸರಿಸಿಲ್ಲವೆಂದು ಕಂಡು ಬಂದಲ್ಲಿ ಅದರ ಮೇಲೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಸರ್ಕಾರ ನೀಡಿದ್ದ ಮಾರ್ಗಸೂಚಿಗಳ ಪಾಲನೆಗೆ ಮೇ 25 ಕೊನೆಯ ದಿನಾಂಕ ವಾಗಿತ್ತು ಎನ್ನಲಾಗಿದೆ.
ಭಾರತೀಯ ಮಾದ್ಯಮವಾಗಿರುವ ಕೂ ಮಾತ್ರ ಸರ್ಕಾರ ನೀಡಿದ ನಿಯಮಗಳನ್ನು ಅಳವಡಿಸಿಕೊಂಡು ಅನುಸರಿಸುತ್ತಿದೆ ಎನ್ನಲಾಗಿದೆ. ಇನ್ನು ಬೇರೆ ಬೇರೆ ಸಾಮಾಜಿಕ ಮಾದ್ಯಮಗಳು ಈ ಮಾರ್ಗಸೂಚಿ ಯಲ್ಲಿನ ನಿಯಮಗಳನ್ನು ಅಳವಡಿಸಿಕೊಂಡಿಲ್ಲವಾದರೆ ಯಾವ ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನುವ ವಿಚಾರವು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಅನುಷ್ಠಾನವಿಲ್ಲದೇ ಬೇರೆ ಯಾವುದೇ ತಪಾಸಣೆ ಬಾಕಿ ಇರುವುದಿಲ್ಲ ಎನ್ನುವ ವಿಚಾರವನ್ನು ತಜ್ಞರು ತಿಳಿಸಿದ್ದಾರೆ. ಈ ನಿಯಮಗಳು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿದ್ದರೂ ಕೂಡಾ ನೀತಿ ಸುರಕ್ಷತೆಗಳಿಲ್ಲದೆ ನಾಗರಿಕರ ಡೇಟಾವನ್ನು ಈ ಸಾಮಾಜಿಕ ಜಾಲತಾಣಗಳು ಹೇಗೆ ಬಳಸುತ್ತಿದ್ದಾರೆ ಎನ್ನುವ ವಿಷಯದ ಕುರಿತಾಗಿ ಅವರು ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.
ಇನ್ನು ಈ ವಿಚಾರವಾಗಿ ಫೇಸ್ ಬುಕ್ ತಾನು ಐಟಿ ನಿಬಂಧನೆಗಳನ್ನು ಅನುಸರಿಸುತ್ತಿರುವ ಗುರಿಯನ್ನು ಹೊಂದಿದ್ದೇವೆ ಎಂದು, ಅಗತ್ಯವಿರುವ ಕೆಲವು ವಿಚಾರಗಳ ಕುರಿತಾಗಿ ಸರ್ಕಾರದ ಜೊತೆಗೆ ಚರ್ಚೆಯನ್ನು ಮುಂದುವರೆಸುವುದಾಗಿ ಹೇಳಿದೆ. ಐಟಿ ನಿಯಮಗಳ ಪ್ರಕಾರ ತಮ್ಮ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಕಾರ್ಯಗತ ಗೊಳಿಸಲು ಮತ್ತು ಕಾರ್ಯ ದಕ್ಷತೆಯನ್ನು ಸುಧಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.
ಫೇಸ್ ಬುಕ್ ಜನರು ಮುಕ್ತವಾಗಿ ಹಾಗೂ ಸುರಕ್ಷಿತವಾಗಿ ತಮ್ಮ ಭಾವನೆಗಳು ವ್ಯಕ್ತಪಡಿಸುವ ಸಾಮರ್ಥ್ಯಕ್ಕೆ ಬದ್ಧವಾಗಿದೆ ಎಂದು ಹೇಳಿದರು.