ಮಹಾಭಾರತದ ಅಶ್ವತ್ಥಾಮ ಇನ್ನು ಜೀವಂತವಾಗಿದ್ದಾರ?ರಕ್ತ ಸೋರುತ್ತಿರುವ ದೇಹದೊಂದಿಗೆ ಸುತ್ತಾಡ್ತಾ ಇದ್ದಾರ?
ಅಲ್ಲಲ್ಲಿ ಜನ ನಾವು ಅಶ್ವತ್ಥಾಮನನ್ನು ನೋಡಿದ್ದೇವೆ ಅಂತ ಹೇಳೊದ್ಯಾಕೆ ? ಕರ್ನಾಟಕಕ್ಕೂ ಬಂದಿದ್ರ ಅಶ್ವತ್ಥಾಮ ?
ಕೃಷ್ಣ ಅಶ್ವತ್ಥಾಮ ನಿಗೆ ನೀಡಿದ ಶಾಪವೇನು?ಇವೆಲ್ಲದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಮಹಾಭಾರತದ ಅಶ್ವತ್ಥಾಮ ನಿಮಗೆಲ್ಲಾ ಗೊತ್ತೇ ಇದೆ. ಗುರು ದ್ರೋಣರ ಮಗ , ದುರ್ಯೋಧನನ ಜೊತೆ ಸೇರಿಕೊಂಡು ಕೌರವರ ಜೊತೆ ಗೆಳೆತನ ಮಾಡಿ ಮಹಾಭಾರತದಲ್ಲೂ ಕೌರವರ ಪರವಾಗಿ ಹೊರಾಡ್ತಾನೆ.ತಂದೆ ಗುರು ದ್ರೋಣ ಕೂಡ ಕೌರವರ ಜೊತೆ ಯುದ್ಧ ಮಾಡುವಂತೆ ಮಾಡ್ತಾನೆ.ಅಶ್ವತ್ಥಾಮನ ಹಣೆಯಲ್ಲಿ ಒಂದು ಮಣಿ ಇರುತ್ತದೆ ಆ ಮಣಿ ಅಶ್ವತ್ಥಾಮನ ಪೂರ್ವಜರಿಂದ ಸಿಕ್ಕ ಸಂಜೀವಿನಿ ಆಗಿರುತ್ತೆ.ಅದು ಇರುವಾಗ ಅನಾರೋಗ್ಯವೇ ಕಾಡ್ತಾ ಇರಲಿಲ್ಲ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕೃಷ್ಣನ ಶಾಪಕ್ಕೆ ತುತ್ತಾದ ಅಶ್ವತ್ಥಾಮ
ಮಹಾಭಾರತ ಯುದ್ಧ ಮುಗಿದು ಕೊನೆಯ ಹಂತಕ್ಕೆ ತಲುಪಿರುತ್ತದೆ.ಭೀಮ ದುರ್ಯೋಧನನ ತೊಡೆ ಮುರಿದು ಹಾಕಿರುತ್ತಾನೆ ಇದರಿಂದ ಸಾವಿಗೆ ಹತ್ತಿರವಾಗಿದ್ದ ದುರ್ಯೋಧನ ಅಶ್ವತ್ಥಾಮನನ್ನು ಕರೆದು ಪಾಂಡವರ ತಲೆಗಳನ್ನು ತಂದುಕೊಡುವಂತೆ ಹೇಳ್ತಾನೆ. ಆಗ ಕತ್ತಲಲ್ಲಿ ಪಾಂಡವರ ಕುಟೀರಕ್ಕೆ ಹೋದ ಅಶ್ವತ್ಥಾಮ ಪಾಂಡವರ ಬದಲಾಗಿ ನಿದ್ದೆ ಮಾಡುತ್ತಿದ್ದ ಅವರ 5 ಪುತ್ರರ ತಲೆ ಕಡಿದು ತಂದು ದುರ್ಯೋಧನನಿಗೆ ನೀಡ್ತಾರೆ. ವಿಷಯ ತಿಳಿದ ಪಾಂಡವರು ಅಶ್ವತ್ಥಾಮನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗ್ತಾರೆ ಆಗ ಕೃಷ್ಣ ಕೂಡ ಅಲ್ಲಿಗೆ ಬರ್ತಾರೆ ಆದ್ರೆ ಕೌರವರ ಜೊತೆ ಸೇರಿ ದುಷ್ಟ ಬುದ್ಧಿ ಕಲಿತುಕೊಂಡಿದ್ದ ಅಶ್ವತ್ಥಾಮ ಅಭಿಮನ್ಯು ಪತ್ನಿ ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ ಆದರೆ ಆ ಬ್ರಹ್ಮಾಸ್ತ್ರದಿಂದ ಉತ್ತರೆಯನ್ನು ಕೃಷ್ಣ ರಕ್ಷಿಸುತ್ತಾನೆ ಆದರೆ ಅದೇ ಕೋಪದಲ್ಲಿ ಅಶ್ವತ್ಥಾಮನ ಹಣೆಯಲ್ಲಿದ್ದ ಆ ಮಣಿಯನ್ನು ಕಿತ್ತು ಒಂದು ಭಯಾನಕ ಶಾಪ ಕೊಡ್ತಾನೆ ಶ್ರೀಕೃಷ್ಣ.
“ಕಲಿಯುಗದ ಅಂತ್ಯದವರೆಗೂ ನಿನಗೆ ಸಾವೇ ಸಂಭವಿಸಬಾರದು ,ನಿನ್ನ ಹಣೆ ಮತ್ತು ರೋಮರೋಮದಲ್ಲೂ ಕೊನೆಯವರೆಗೂ ರಕ್ತ ಸುರಿಯುತ್ತಿರುತ್ತದೆ ಅನ್ನ ನೀರಿಲ್ಲದೆ ನಿನ್ನ ದೇಹದ ಗಾಯಕ್ಕೆ ಚಿಕಿತ್ಸೆಯೂ ಇಲ್ಲದೇ ಪರಿತಪಿಸುತ್ತಿಯಿ ಆದರೆ ನಿನಗೆ ಯಾರೂ ಸಹಾಯ ಮಾಡಿಲ್ಲ , ಕಲಿಯುಗದ ಅಂತ್ಯದವರೆಗೂ ನೀನು ಹೀಗೆ ನರಳಾಡುತ್ತ ಬದುಕುತ್ತಿಯ” ಅಂತ ಶಾಪ ಕೊಡ್ತಾನೆ.
ಹಾಗಾದ್ರೆ ಅಶ್ವತ್ಥಾಮ ಈಗಲೂ ಬದುಕಿದ್ದಾನ ?
ಇದಕ್ಕೆ ಉತ್ತರ ಹೌದು.ಇದು ಹಲವರಿಗೆ ಈ ಬಗ್ಗೆ ಅನುಭವವಾಗಿದೆ,ಹಲವರು ನೋಡಿದ್ದಾರೆ , ಇನ್ನು ಅಶ್ವತ್ಥಾಮ ಕೆಲವರ ಬಳಿ ಮನೆಗೆ ಬಂದು ಔಷಧ ಕೇಳಿದ್ದನಂತೆ.
ಹಾಗಾದ್ರೆ ಯಾರು ನೋಡಿದ್ದಾರೆ ?ಎಲ್ಲೆಲ್ಲಿ ಕಾಣಿಸಿಕೊಂಡಿದ್ದ ಅಶ್ವತ್ಥಾಮ ತಿಳಿಯೋಣ ಮುಂದೆ ಓದಿ..
ಮಧ್ಯಪ್ರದೇಶದ ಡಾಕ್ಟರ್ ಮನೆಗೆ ಬಂದಿದ್ದನಂತೆ ಅಶ್ವತ್ಥಾಮ
ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ಡಾಕ್ಟರ್ ಮನೆ ಬಾಗಿಲು ಬಡಿದಿದ್ದ ,ಬಾಗಿಲು ತೆಗೆದು ನೋಡಿದ್ರೆ ಎತ್ತರದ ಕಪ್ಪು ಬಣ್ಣದ ಓರ್ವ ವ್ಯಕ್ತಿ ನಿಂತಿದ್ದ ಆತನ ಹಣೆ ಮತ್ತು ದೇಹದ ಹಲವೆಡೆ ರಕ್ತ ಮತ್ತು ಕೀವು ಇಳಿಯುತಿತ್ತು.ವೈದ್ಯರು ಆತನನ್ನು ಒಳಗೆ ಕರೆದೊಯ್ದು ರಕ್ತ ನಿಲ್ಲಿಸಲು ತುಂಬಾ ಪ್ರಯತ್ನ ಪಟ್ಟರು ಆದರೆ ಅದು ಸಾಧ್ಯವೇ ಆಗಲಿಲ್ಲ ಈ ವೇಳೆ ವೈದ್ಯರು ಔಷಧ ತರಲು ಒಳಗೆ ಹೋಗ್ತಾರೆ
ಹಾಗೆ ಹೋಗುವಾಗ “ಏನೋ ಮಾರಾಯ ಇದೆಂಥ ಗಾಯ ನಿಂದು ರಕ್ತ ನಿಲ್ಲುತ್ತಲೇ ಇಲ್ಲ ನೀನೇನು ಮಹಾಭಾರತದ ಅಶ್ವತ್ಥಾಮನಾ? ಅಲ್ಲ ತಾನೇ??” ಅಂತ ತಮಾಷೆಯಾಗಿ ಕೇಳಿದರು ನಂತರ ವೈದ್ಯರು ವಾಪಸ್ ಬಂದು ನೋಡುವಾಗ ಅಲ್ಲಿ ಗಾಯಗೊಂಡಿದ್ದ ವ್ಯಕ್ತಿ ಇರಲೇ ಇಲ್ಲ .ಇನ್ನೊಂದು ವಿಷ್ಯ ಅಂದ್ರೆ ವೈದ್ಯರು ಒಳಗಿನಿಂದ ಲಾಕ್ ಮಾಡಿದ್ದು ಕೂಡ ಹಾಗೇ ಇತ್ತು.
ಉತ್ತರ ಪ್ರದೇಶದಲ್ಲಿ ಅಶ್ವತ್ಥಾಮ ನಿಂದ ಶಿವಪೂಜೆ
ಉತ್ತರ ಪ್ರದೇಶದ ಲಖೀಮ್ಪುರದಲ್ಲಿ ಬಾಬಾ ಲೀಲಾಟಿನ ದೇವಸ್ಥಾನವಿದೆ. ಅದರಲ್ಲಿ ಒಂದು ಶಿವ ಲಿಂಗವಿದೆ.ಪ್ರತಿದಿನ ರಾತ್ರಿ ದೇವಸ್ಥಾನದ ಪೂಜಾರಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗ್ತಾರೆ ಆದ್ರೆ ಬೆಳಗ್ಗೆ ಬಂದು ನೋಡುವಾಗ ಶಿವಲಿಂಗದ ಮೇಲೆ ಯಾರೋ ನೀರು ಹಾಕಿ ಜಲಾಭಿಷೇಕ ಮಾಡ್ತಾ ಇದ್ರು ಆದ್ರೆ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮಾತ್ರ ಹಾಗೇ ಇರುತ್ತೆ. ಈ ಘಟನೆ ಪ್ರತಿದಿನವೂ ನಡೆಸಲಾರಂಭಿಸಿದಾಗ ದೇವಸ್ಥಾನದ ಪೂಜಾರಿ ಈ ವಿಚಾರವನ್ನು ಮೀಡಿಯಾದವರಿಗೆ ಹೇಳಿದ್ರು , ಅದೇ ರೀತಿ ಒಂದಿನ ಮಾಧ್ಯಮಗಳ ಮುಂದೆಯೇ ಬಾಗಿಲು ಹಾಕಿ ಮಾಧ್ಯಮದವರ ಮುಂದೆಯೇ ಬಾಗಿಲು ತೆರೆಯಲಾಗಿತ್ತು,
ಆಗ ಪೂಜಾರಿ ಹೇಳಿದ್ದು ನಿಜವಾಗಿತ್ತು.ಬೆಳಿಗ್ಗೆ ಇವರು ಬಾಗಿಲು ತೆರೆಯುವ ಮುನ್ನವೇ ಯಾರೋ ಬಂದು ಜಲಾಭಿಷೇಕ ಮಾಡಿ ಹೋಗಿದ್ದರು.ಶಿವಲಿಂಗಕ್ಕೆ ಬಂದು ಪೂಜೆ ಮಾಡುವುದು ಬೇರೆ ಯಾರೋ ಅಲ್ಲ ಅದು ಅಶ್ವತ್ಥಾಮ ಎನ್ನುವುದು ಜನರ ನಂಬಿಕೆ.
ಮಧ್ಯಪ್ರದೇಶದ ಅಸೀರ್ ಗಢದ ಕೋಟೆಯಲ್ಲಿ ವಾಸ
ಮಧ್ಯಪ್ರದೇಶದ ಅಸೀರ್ ಗಢದಲ್ಲಿ ಒಂದು ಕೋಟೆ ಇದೆ , ಅಲ್ಲಿ ಒಂದು ಶಿವಲಿಂಗ ಕೂಡ ಇದೆಆ ಶಿವಲಿಂಗಕ್ಕೆ ಪ್ರತಿದಿನವೂ ಯಾರೊ ಹೂವಿಟ್ಟು ಪೂಜೆ ಮಾಡ್ತಾರೆಆದರೆ ಅದು ಯಾರು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.ಇಲ್ಲಿ ಒಂದು ಕೊಳ ಇದೆ ದ್ವಾಪರ ಯುಗದಲ್ಲಿ ಇದೇ ಕೊಳದಲ್ಲಿ ಅಶ್ವತ್ಥಾಮ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಮಾಡ್ತಿದ್ರು. ಹೀಗಾಗಿಯೇ ಈಗಲೂ ಇದನ್ನು ಮುಂದುವರಿಸಿದ್ದಾರೆ ಅನ್ನುವುದು ಇಲ್ಲಿನ ಜನರ ನಂಬಿಕೆ.
ಅಶ್ವತ್ಥಾಮ ದೇಶದ 5 ಶಿವನ ದೇವಸ್ಥಾನಗಳಿಗೆ ಹೋಗ್ತಾರೆ. ಅದರಲ್ಲಿ ಇದೂ ಕೂಡ ಒಂದು ಅಂತ ಜನ ಮಾತಾನಾಡ್ತಾರೆ.ಇಲ್ಲೂ ಸಹ ಮಾಧ್ಯಮಗಳು ರಿಯಾಲಿಟಿ ಚೆಕ್ ನಡೆಸಿದರೂ ಕೂಡ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ ಅಲ್ಲದೇ ಈ ಗ್ರಾಮದಲ್ಲಿ ಆಗಾಗ ಉದ್ದಕ್ಕೆ ಇರುವ ಓರ್ವ ವ್ಯಕ್ತಿ ಬಂದು “ನನ್ನ ಹಣೆಗೆ ಗಾಯವಾಗಿದೆ ಹಳದಿ ಕೊಡಿ” ಅಂತ ಕೇಳುತ್ತಾರಂತೆ.ಅದು ಅಶ್ವತ್ಥಾಮನೆ ಅನ್ನೋದು ಜನರ ನಂಬಿಕೆ.
ಕರ್ನಾಟಕಕ್ಕೂ ಬಂದಿದ್ರ ಅಶ್ವತ್ಥಾಮ
ಇದು ಸ್ವಲ್ಪ ಹಳೆಯ ಘಟನೆ. ಕರ್ನಾಟಕದ ನಾರಾಯಣ ಎಂಬ ಸಂತ ಅಶ್ವತ್ಥಾಮನನ್ನು ಗುರುತು ಹಿಡಿದಿದ್ದರು
ಅಲ್ಲದೆ ಮನೆಗೆ ಕರೆದೊಯ್ದು ಮಹಾಭಾರತದ ಕಥೆ ಹೇಳುವಂತೆ ಪಟ್ಟು ಹಿಡಿದರು. ಆಗ ಅಶ್ವತ್ಥಾಮ ಒಂದು ಕಂಡಿಷನ್ ಹಾಕಿದರು.”ನನ್ನ ಬಳಿ ಇದ್ದ ಬಟ್ಟೆಯನ್ನು ಒದ್ದೆ ಮಾಡಿ ಒಣಗಿ ಹಾಕುತ್ತೇನೆ ಪ್ರತಿ ದಿನ ಆ ಬಟ್ಟೆ ಒಣಗುವಷ್ಟು ಸಮಯ ಎಷ್ಟು ಆಗುತ್ತೊ ಅಷ್ಟು ಕಥೆ ಹೇಳುತ್ತೇನೆ” ಅಂದ್ರು ಅದಕ್ಕೆ ನಾರಾಯಣ ಸಂತರು ಒಪ್ಪಿದ್ರು , ಪ್ರತಿ ದಿನ ಅಶ್ವಥಾಮ ಬಂದು ಬಟ್ಟೆ ಒದ್ದೆ ಮಾಡಿ ಒಣ ಹಾಕಿ ಮಹಾಭಾರತದ ಕಥೆ ಹೇಳ್ತಾ ಇದ್ದರು ಆದ್ರೆ ಒಂದಿನ ಅಶ್ವತ್ಥಾಮ ದುರ್ಯೋಧನನ ಕತೆ ಹೇಳುವಾಗ ಜೋರಾಗಿ ಅತ್ತು ಬಿಟ್ಟ , ಅದೇ ಸಮಯದಲ್ಲಿ ತಾನು ಒಣಗಿಹಾಕಿದ್ದ ಬಟ್ಟೆ ಒಣಗಿದ್ದರಿಂದ ಅಲ್ಲಿಂದ ಹೊರಟು ಹೋದ್ರು. ಅಶ್ವತ್ಥಾಮನ ವರ್ತನೆಯಿಂದ ಹೆದರಿದ ನಾರಾಯಣ ಸಂತರು ಈ ವಿಚಾರವನ್ನು ತಮ್ಮ ಪತ್ನಿಗೆ ಹೇಳಿದ್ರು.
ಈ ವಿಚಾರ ತಿಳಿದ ಅಶ್ವಥಾಮ ಬರುವುದನ್ನೇ ಬಿಟ್ಟುಬಿಟ್ಟ.ಇದೇ ಕಾರಣಕ್ಕೆ ನಾರಾಯಣ ಸಂತರು ಬರೆದ ಮಹಾಭಾರತ ಅರ್ಧದಷ್ಟು ಮಾತ್ರವೇ ಇದೆ , ಸಂಪೂರ್ಣ ಇಲ್ಲ ಅನ್ನೋ ನಂಬಿಕೆ ಕೂಡ ಇದೆ.ಇದು ಅಶ್ವತ್ಥಾಮ ಬದುಕಿದ್ದಾನೆ ಅನ್ನೋದಕ್ಕೆ ಇರುವ ಕುರುಹುಗಳು , ನಂಬಿಕೆಗಳು.
ಧನ್ಯವಾದಗಳು.