ಹೃದಯಾಘಾತ ಮುನ್ಸೂಚನೆ ಈ ಲಕ್ಷ ಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ!

Written by Anand raj

Published on:

ಇಂದಿನ ವೇಗದ ಜೀವನದಲ್ಲಿ ಹೃದಯಾಘಾತ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ,ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಲೇ ಇದೆ .ಈ ಲೇಖನದಲ್ಲಿ ಭಾರತೀಯ ಆರೋಗ್ಯ ಸಂಸ್ಥೆ ಪ್ರಕಾರ ಹೃದಯಾಘಾತ ಎಂದರೆ ಏನು, ಮನುಷ್ಯನಿಗೆ ಹೃದಯಾಘಾತದ ಸಮಯದಲ್ಲಿ ಏನೆಲ್ಲಾ ಮುನ್ಸೂಚನೆಗಳು ಸಿಗುತ್ತವೆ ಎಂದು ತಿಳಿಸಿಕೊದುತ್ತೇವೆ.

ಮೊದಲು ಭಾರತೀಯ ಆರೋಗ್ಯ ಸಂಸ್ಥೆ ಪ್ರಕಾರ ಹೃದಯಾಘಾತ ಎಂದರೆ ಏನು ಎಂದು ಸುಲಭವಾಗಿ ಮೊದಲು ಅರ್ಥ ಮಾಡಿಕೊಳ್ಳೋಣ.

ಮನುಷ್ಯನ ಹೃದಯ ಆರೋಗ್ಯಕರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಆಮ್ಲಜನಕ ಸಮೃದ್ಧವಾಗಿರುವ ರಕ್ತದ ಪೂರೈಕೆ ಅವಶ್ಯಕವಾಗಿ ಬೇಕಾಗಿರುತ್ತದೆ .ಎಲ್ಲರಿಗೂ ತಿಳಿದಿರುವಂತೆ ಎದೆಯ ಮಧ್ಯ ಭಾಗದ ಸ್ವಲ್ಪ ಎಡಭಾಗಕ್ಕೆ ಮನುಷ್ಯನಿಗೆ ಹೃದಯ ಕಂಡುಬರುತ್ತದೆ .ಹಾಗೆ ಪ್ರತಿ ಸಾರಿ ಹೃದಯದ ಬಡಿತ ಆದಾಗಲೂ ಮನುಷ್ಯನ ದೇಹಕ್ಕೆ ಬೇಕಾಗಿರುವ ಅವಶ್ಯಕವಾಗಿರುವ ರಕ್ತವನ್ನು ಹೃದಯ ತನ್ನ ಮೂಲಕವೇ ಹೊರಹಾಕುತ್ತದೆ.ದೇಹದ ಎಲ್ಲ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಹೇಗೆ ರಕ್ತದ ಅವಶ್ಯಕತೆ ಇದೆಯೋ ಅದೇ ರೀತಿ ಹೃದಯಕ್ಕೂ ಸಹ ರಕ್ತದ ಅವಶ್ಯಕತೆ ಇದೆ.

ಆರೋಗ್ಯವಂತ ಮನುಷ್ಯನಲ್ಲಿ ಹೃದಯ ಬಡಿತ ವಯಸ್ಸಿಗೆ ತಕ್ಕಂತೆ ಆರೋಗ್ಯಕ್ಕೆ ತಕ್ಕಂತೆ ಬದಲಾಗುತ್ತದೆ .ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆರೋಗ್ಯವಂತ ಮನುಷ್ಯನ ಹೃದಯ ಸುಮಾರು 60 ರಿಂದ 100 ಬಾರಿ ಬಡಿದುಕೊಳ್ಳುತ್ತದೆ,ಅಂದರೆ ದಿನದ ಲೆಕ್ಕದಲ್ಲಿ ಹೃದಯ 1 ಲಕ್ಷಕ್ಕೂ ಹೆಚ್ಚು ಬಾರಿ ಆರೋಗ್ಯವಂತ ಮನುಷ್ಯರಲ್ಲಿ ಬಡಿತ ಉಂಟು ಮಾಡುತ್ತದೆ.

ಸರಾಸರಿ ಹೃದಯ ನಿಮಿಷಕ್ಕೆ 72 ಬಾರಿ ಬಡಿದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.ಹೃದಯದ ಲೆಕ್ಕಾಚಾರ ಆಗಲೇ ಹೇಳುವಂತೆ ವಯಸ್ಸು ಆರೋಗ್ಯದ ಮೇಲೆ 60 ರಿಂದ 100 ಒಳಗೆ ಬಡಿದುಕೊಳ್ಳುತ್ತದೆ.ಇದೇ ರೀತಿ ಪ್ರತಿ ಸಾರಿ ಹೃದಯ ಬಡಿದುಕೊಂಡಾಗಲು ಮನುಷ್ಯನ ದೇಹದ ಬೇರೆ ಅಂಗಗಳಿಗೆ ಬೇಕಾದ ರಕ್ತವನ್ನು ಹೃದಯದ ಮೂಲಕವೇ ಪಂಪ್ ಮಾಡುತ್ತದೆ
ಅಥವಾ ಹೊರ ಹಾಕುತ್ತದೆ.

ಸರಳವಾಗಿ ಅತಿ ಹೃದಯಾಘಾತ ಎಂದರೆ ಏನು

ಅಂದರೆ ಯಾವಾಗ ಮನುಷ್ಯನ ಹೃದಯ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಹಕ್ಕೆ ಅಗತ್ಯವಿರುವ ರಕ್ತವನ್ನು ತನ್ನ ಮೂಲಕ ಹೊರಹಾಕಲು ವಿಫಲವಾಗುತ್ತದೋ ಅಂತಹ ಪ್ರಕ್ರಿಯೆಯನ್ನು ಹೃದಯ ವೈಫಲ್ಯ ಎನ್ನುತ್ತಾರೆ
ಹಾಗೂ ಅದರಿಂದ ಮಾನವನ ಮೇಲೆ ಉಂಟಾಗುವ ಆರೋಗ್ಯದ ಕೆಟ್ಟ ಪರಿಣಾಮವನ್ನು ಹೃದಯಾಘಾತ ಎಂದು ಕರೆಯುತ್ತಾರೆ .

ಹೃದಯಾಘಾತದ ಲಕ್ಷಣಗಳು ಅಥವಾ ಮುನ್ಸೂಚನೆಗಳು

ಭಾರತೀಯ ಆರೋಗ್ಯ ಸಂಸ್ಥೆ ಪ್ರಕಾರ ಮುಂದೆ ಹೇಳಲಾಗಿರುವ ಎಲ್ಲಾ ಸಮಸ್ಯೆಗಳು ಸಹ ಹೃದಯಾಘಾತದ ಮುನ್ಸೂಚನೆಗಳಿವೆ.ಎದೆಯ ಭಾಗದಲ್ಲಿ ಒತ್ತಡ , ಎದೆ ಅಥವಾ ಹೃದಯ ಭಾಗದಲ್ಲಿ ಬಿಗಿಯಾಗಿ ಹಿಡಿದು ಕೊಂಡಂತಹ ಅನುಭವ , ಯಾವುದೇ ರೀತಿಯ ಎದೆನೋವು, ಹೃದಯ ಹಿಸುಕುವಂತಹ ಅನುಭವ , ಎದೆಯ ಮಧ್ಯಭಾಗದಲ್ಲಿ ಕಾಣುವಂತ ಈ ಮೇಲಿನ ನೋವಿನ ಅನುಭವ ನಿಧಾನವಾಗಿ ಕುತ್ತಿಗೆ ಹಿಂಭಾಗ ಮತ್ತು ಕೈಗಳಿಗೆ ಹರಡುತ್ತದೆ.ಇದು ಹೃದಯಾಘಾತದ ದೊಡ್ಡ ಹಾಗೂ ಪ್ರಮುಖ ಮುನ್ಸೂಚನೆ. ಇವುಗಳ ಜೊತೆಗೆ ಇನ್ನಷ್ಟು ಮುನ್ಸೂಚನೆಗಳು ಇವೆ

ಹೃದಯಘಾತದಿಂದ ಉಂಟಾಗುವ ನೋವು ಎರಡು ಕೈಗಳು , ಹಲ್ಲಿನ ದವಡೆ ಹಾಗೂ ತಲೆ , ಕುತ್ತಿಗೆ ಹಿಂಭಾಗದ ಕಡೆಗೆ ಹರಡುತ್ತದೆ
ಆದರೆ ಕೆಲವರಲ್ಲಿ ಹೃದಯದ ನೋವೇ ಬರದೆ ಕೈಗಳು ಹಲ್ಲಿನ ದವಡೆ ಹಾಗೂ ತಲೆ ಮತ್ತು ಕುತ್ತಿಗೆ ಹಿಂಭಾಗದ ನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಹೆಚ್ಚಾಗಿ ಸುಸ್ತು

ಯಾವುದೇ ನಿರ್ದಿಷ್ಟ ಅಥವಾ ಪ್ರಮುಖ ಕಾರಣವಿಲ್ಲದೆ ನಿಶ್ಶಕ್ತಿ ಅಥವಾ ಹೆಚ್ಚಾಗಿ ಸುಸ್ತು ಕಂಡು ಬಂದರೆ ಅದನ್ನು ಸಹ ಹೃದಯಾಘಾತದ ಲಕ್ಷಣ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಈ ಅನುಭವ ಹೃದಯಾಘಾತ ಕ್ಕಿಂತ ಕೆಲವು ದಿನಗಳು ಮುಂಚೆಯೇ ಮನುಷ್ಯರಲ್ಲಿ ಕಾಣುತ್ತದೆ. ಇಂತಹ ಅನುಭವ ಆಗುತ್ತಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಒಳ್ಳೆಯದು.ದೇಹದಲ್ಲಿ ಊತ ಹೃದಯವು ಸಹಜವಾಗಿ ರಕ್ತವನ್ನು ಹೊರ ಹಾಕದಿದ್ದರೆ ಮನುಷ್ಯನ ಕಾಲಿನ ಪಾದಗಳು , ಕೈ ಹಾಗೂ ಹೊಟ್ಟೆ ಇನ್ನಿತರ ಭಾಗಗಳಲ್ಲಿ ಊತ ಕಂಡು ಬರುತ್ತದೆ. ಇದು ಕೂಡ ಹೃದಯಾಘಾತದ ಲಕ್ಷಣ ಕೂಡಲೇ ವೈದ್ಯರನ್ನು ಭೇಟಿ ಮಾಡಿ .

ನಿಲ್ಲದ ಶೀತ

ಹೃದಯಕ್ಕೆ ಸರಿಯಾಗಿ ಆಮ್ಲಜನಕದ ಪೂರೈಕೆ ಆಗದೇ ಇದ್ದರೆ ಶೀತ ನಿಲ್ಲುವುದಿಲ್ಲ, ದೀರ್ಘಕಾಲದಿಂದ ಶೀತ ನಿಲ್ಲುತ್ತಿಲ್ಲ ಎಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.ಉಸಿರು ಕಟ್ಟುವುದು ತಲೆ ಸುತ್ತುವುದು ಹಾಗೂ ವಾಕರಿಕೆ ಯಾವುದೇ ಕಾರಣವಿಲ್ಲದೆ ಉಂಟಾಗುತ್ತಿದ್ದರೆ ಅದು ಕೂಡ ಹೃದಯ ಸಮಸ್ಯೆ ಆಗಿರಬಹುದು ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಧನ್ಯವಾದಗಳು.

Related Post

Leave a Comment